Top 5 Forest Districts: ಕರ್ನಾಟಕದಲ್ಲಿ ಅತಿ ಹೆಚ್ಚು ಅರಣ್ಯ ಇರೋದೆಲ್ಲಿ? ಇಲ್ಲೂ ದಕ್ಷಿಣವೇ ಮುಂದು
ಕರ್ನಾಟಕದ ಈ ಜಿಲ್ಲೆಯಲ್ಲಿ ಬರೋಬ್ಬರಿ 80% ದಷ್ಟು ಅರಣ್ಯಗಳೇ ತುಂಬಿದೆ , ಆ ಜಿಲ್ಲೆ ಯಾವುದು ಅನ್ನೋದು ನಿಮಗೆ ಗೊತ್ತಾ?

ಕರ್ನಾಟಕದಲ್ಲಿ ಅರಣ್ಯ ಪ್ರದೇಶಗಳು ಹೆಚ್ಚಿನ ಪ್ರಮಾಣದಾಲ್ಲಿ ಇರುವಂತಹ ಜಿಲ್ಲೆಗಳು ತುಂಬಾನೆ ಕಡಿಮೆ. ಇಲ್ಲಿ ಟಾಪ್ 5 ಅತಿ ಹೆಚ್ಚು ಅರಣ್ಯಗಳನ್ನು ಹೊಂದಿರುವ ಜಿಲ್ಲೆಗಳ (districts with highest forest) ಕುರಿತು ಮಾಹಿತಿ ನೀಡಲಾಗಿದೆ. ಹೆಚ್ಚು ಅರಣ್ಯಗಳಿರುವ ಸುಂದರವಾದ ಜಿಲ್ಲೆಗಳಲ್ಲಿ ನಿಮ್ಮ ಜಿಲ್ಲೆಯೂ ಇದೆಯೇ? ಚೆಕ್ ಮಾಡಿ ನೋಡಿ.
ಕೊಡಗು
ಅತಿ ಹೆಚ್ಚು ಅರಣ್ಯಗಳು ಇರುವ ಜಿಲ್ಲೆಗಳು ಲಿಸ್ಟ್ ನಲ್ಲಿ ಟಾಪ್ 5ನೇ ಸ್ಥಾನದಲ್ಲಿ ಕೊಡಗು ಜಿಲ್ಲೆ ಇದೆ. ಈ ಜಿಲ್ಲೆಯಲ್ಲಿ 3234 ಸ್ಕ್ವೇರ್ ಕಿ. ಮೀ ವಿಸ್ತೀರ್ಣದಲ್ಲಿ ಅರಣ್ಯಗಳು ವಿಸ್ತರಿಸಿದೆ. ಅರಣ್ಯ ಪ್ರದೇಶಗಳು, ಗುಡ್ಡಗಾಡುಗಳು ಹೆಚ್ಚಾಗಿ ಇರೋದರಿಂದಲೇ ಈ ಜಿಲ್ಲೆ ನೋಡೋದಕ್ಕೂ ಸುಂದರವಾಗಿದೆ.
ದಕ್ಷಿಣ ಕನ್ನಡ ಜಿಲ್ಲೆ
ದಕ್ಷಿಣ ಕನ್ನಡ ಜಿಲ್ಲೆ (Dakshina Kannada) ಅತಿ ಹೆಚ್ಚು ಅರಣ್ಯಗಳನ್ನು ಹೊಂದಿರುವ ಜಿಲ್ಲೆಗಳ ಲಿಸ್ಟ್ ನಲ್ಲಿ 4ನೇ ಸ್ಥಾನದಲ್ಲಿದೆ. ಈ ಜಿಲ್ಲೆಯಲ್ಲಿ ಕಾಡುಗಳು ಸುಮಾರು 3301 ಸ್ಕ್ವೇರ್ ಕಿ. ಮೀ ನಷ್ಟು ಹರಡಿವೆ. ಮತ್ತೊಂದು ಕಡೆ ಸಮುದ್ರವೂ ಇದೆ. ಎರಡೂ ಸೇರಿದ ಸುಂದರವಾದ ತಾಣ ಇದಾಗಿದೆ.
ಚಿಕ್ಕಮಗಳೂರು
ಮೂರನೇ ಸ್ಥಾನದಲ್ಲಿರೋದು ಬೆಟ್ಟ ಗುಡ್ಡಗಳು, ಗಿರಿ ಶಿಖರಗಳಿಂದಲೇ ಕೂಡಿರುವ ಸುಂದರವಾದ ಪ್ರವಾಸಿ ತಾಣವಾಗಿರುವ ಚಿಕ್ಕಮಗಳೂರು (Chikmagaluru) ಜಿಲ್ಲೆ. ಈ ಜಿಲ್ಲೆಯಲ್ಲಿ ಬರೋಬ್ಬರಿ 4057 ಸ್ಕ್ವೇರ್ ಕಿ. ಮೀನಷ್ಟು ಅರಣ್ಯ ಪ್ರದೇಶ ಹರಡಿಕೊಂಡಿದೆ.
ಶಿವಮೊಗ್ಗ
ಮಲೆನಾಡಿನ ಹೆಚ್ಚಾಗಿಲು ಎಂದೇ ಕರೆಯಲ್ಪಡುವ ಗಿರಿ, ತೊರೆಗಳಿರುವ ಜಿಲ್ಲೆ ಶಿವಮೊಗ್ಗ ಅತ್ಯಂತ ಹೆಚ್ಚಿನ ಅರಣ್ಯಗಳನ್ನು ಹೊಂದಿರುವ ಜಿಲ್ಲೆಗಳ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಇಲ್ಲಿ ಸುಮಾರು 4291 ಸ್ಕ್ವೇರ್ ಕಿ. ಮೀ ವಿಸ್ತೀರ್ಣದಲ್ಲಿ ಕಾಡುಗಳು ಈ ಪ್ರದೇಶದಲ್ಲಿದೆ.
ಉತ್ತರ ಕನ್ನಡ ಜಿಲ್ಲೆ
ರಾಜ್ಯದಲ್ಲಿ ಅತಿ ಹೆಚ್ಚು ಅರಣ್ಯಗಳನ್ನು ಹೊಂದಿರುವ ಜಿಲ್ಲೆ ಅಂದ್ರೆ ಅದು ಉತ್ತರ ಕನ್ನಡ (Uttara Kannada) ಜಿಲ್ಲೆ. ಈ ಜಿಲ್ಲೆಯಲ್ಲಿ ಬರೋಬ್ಬರಿ 80% ದಷ್ಟು ಭಾಗ ಅರಣ್ಯಗಳಿಂದ ಆವೃತವಾಗಿದೆ. ಸುಂದರವಾದ ಪ್ರಕೃತಿ, ಜಲಪಾತಗಳು, ಅರಣ್ಯಗಳನ್ನು ನೋಡಲು ಉತ್ತರ ಕನ್ನಡ ಜಿಲ್ಲೆಗೆ ಹೋಗಬಹುದು. ಇಲ್ಲಿ ಬರೋಬ್ಬರು 8143 ಸ್ಕ್ವೇರ್ ಕಿ. ಮೀ ಉದ್ದಕ್ಕೂ ಅರಣ್ಯ ಪ್ರದೇಶ ಹರಡಿದೆ.