ಸಮುದ್ರದ ಮಧ್ಯದಲ್ಲಿರುವ ಈ ದೇಗುಲಕ್ಕೆ ಹೋಗಲು ಸಮುದ್ರವೇ ದಾರಿ ಬಿಟ್ಟು ಕೊಡುತ್ತೆ!
ಸ್ತಂಭೇಶ್ವರ ಮಹಾದೇವ್ ದೇವಾಲಯವು ಗುಜರಾತ್ ನ ರಾಜಧಾನಿ ಗಾಂಧಿನಗರದಿಂದ ಸುಮಾರು 175 ಕಿ.ಮೀ ದೂರದಲ್ಲಿರುವ ಜಂಬುಸರ್ ನ ಕವಿ ಕಾಂಬೋಯಿ ಗ್ರಾಮದಲ್ಲಿದೆ. ಈ ಶಿವ ದೇವಾಲಯವು ಬಹಳ ವಿಶಿಷ್ಟವಾಗಿದೆ ಏಕೆಂದರೆ ಇದು ಸಮುದ್ರದ ಮಡಿಲಲ್ಲಿ ಲೀನವಾಗುತ್ತದೆ.
ನೀವು ಅನೇಕ ವಿಶಿಷ್ಟ ದೇವಾಲಯಗಳ ಬಗ್ಗೆ ಕೇಳಿರಬಹುದು. ಇಂದು ನಾವು ಅಂತಹ ಒಂದು ವಿಶಿಷ್ಟ ದೇವಾಲಯದ ಬಗ್ಗೆ ನಿಮಗೆ ಹೇಳುತ್ತೇವೆ. ಈ ದೇವಾಲಯವು 150 ವರ್ಷಗಳಷ್ಟು ಹಳೆಯದಾಗಿದ್ದು, ಅರಬ್ಬಿ ಸಮುದ್ರ ಮತ್ತು ಖಂಬತ್ ಕೊಲ್ಲಿಯಿಂದ (Khambat Bay) ಸುತ್ತುವರೆದಿದೆ. ಈ ದೇವಾಲಯದ ವೈಭವವನ್ನು ನೋಡಲು ಜನರು ಬೆಳಿಗ್ಗೆಯಿಂದ ರಾತ್ರಿಯವರೆಗೆ ಇಲ್ಲಿಯೇ ಇರುತ್ತಾರೆ. ಈ ದೇವಾಲಯವು ಏಕೆ ವಿಶೇಷವಾಗಿದೆ ಗೊತ್ತಾ?
ಸ್ತಂಭೇಶ್ವರ ಮಹಾದೇವ್ ದೇವಾಲಯದ ಹಿಂದಿನ ಕಥೆ ಏನು?
ಶಿವ ಪುರಾಣದ ಪ್ರಕಾರ, ತಾಡಕಾಸುರ ಎಂಬ ರಾಕ್ಷಸನು ಶಿವನನ್ನು ತನ್ನ ತಪಸ್ಸಿನಿಂದ ಸಂತೋಷಪಡಿಸಿದ್ದನು, ಇದಕ್ಕೆ ಪ್ರತಿಯಾಗಿ, ಶಿವನು ಅವನಿಗೆ ಅಪೇಕ್ಷಿತ ವರವನ್ನು ನೀಡಿದನು. ಶಿವನ ಮಗನನ್ನು ಹೊರತುಪಡಿಸಿ ಯಾರೂ ಆ ರಾಕ್ಷಸನನ್ನು ಕೊಲ್ಲಲು (to kill demon) ಸಾಧ್ಯವಿಲ್ಲ ಮತ್ತು ಮಗನಿಗೂ 6 ದಿನಗಳ ವಯಸ್ಸಾಗಿರಬೇಕು ಎಂಬುದು ವರವಾಗಿತ್ತು.
ವರವನ್ನು ಪಡೆದ ನಂತರ, ತಾಡಕಾಸುರ ಎಲ್ಲೆಡೆ ಜನರಿಗೆ ಕಿರುಕುಳ ನೀಡಲು ಮತ್ತು ಕೊಲ್ಲಲು ಪ್ರಾರಂಭಿಸಿದನು ಮತ್ತು ಇದೆಲ್ಲವನ್ನೂ ನೋಡಿದ ದೇವತೆಗಳು ಮತ್ತು ಋಷಿ ಮುನಿಗಳು ಅವನನ್ನು ಕೊಲ್ಲುವಂತೆ ಶಿವನನ್ನು ಪ್ರಾರ್ಥಿಸಿದರು. ಅವರ ಪ್ರಾರ್ಥನೆಯನ್ನು ಕೇಳಿದ ನಂತರ, ಕಾರ್ತಿಕೇಯ ಬಿಳಿ ಪರ್ವತ ಕೊಳದಿಂದ ಜನಿಸಿದನು. ಆರು ದಿನಗಳ ಕಾರ್ತಿಕೇಯನು ರಾಕ್ಷಸನನ್ನು ಕೊಂದನು, ಆದರೆ ರಾಕ್ಷಸ ಶಿವಭಕ್ತನೆಂದು ತಿಳಿದಾಗ ಕಾರ್ತಿಕೇಯನಿಗೆ ದುಃಖವಾಯಿತು.
ಕಾರ್ತಿಕೇಯನು ಇದನ್ನು ಅರಿತುಕೊಂಡಾಗ, ವಿಷ್ಣುವು ಅದಕ್ಕೆ ಪ್ರಾಯಶ್ಚಿತ್ತ ಪಡೆಯಲು ಅವನಿಗೆ ಅವಕಾಶ ನೀಡಿದನು. ಅಸುರರನ್ನು ಕೊಂದ ಪಾಪ ತೊಳೆಯಲು ಶಿವಲಿಂಗವನ್ನು ಸ್ಥಾಪಿಸಲು ವಿಷ್ಣುವು ಸಲಹೆ ನೀಡಿದನು. ಕಾರ್ತಿಕೇಯನು ಸಮುದ್ರದ ಮಧ್ಯೆ ಶಿವಲಿಂಗ ಸ್ಥಾಪಿಸಿದರು. ಈ ರೀತಿಯಾಗಿ ಈ ದೇವಾಲಯವನ್ನು ನಂತರ ಸ್ತಂಭೇಶ್ವರ ದೇವಾಲಯ (Stambheshwar Temple) ಎಂದು ಕರೆಯಲಾಯಿತು.
ಸಮುದ್ರದ ಮಡಿಲಲ್ಲಿದೆ ಶಿವ ದೇವಾಲಯ
ಈ ದೇವಾಲಯವು ಸಂಪೂರ್ಣವಾಗಿ ನೀರಿನಲ್ಲಿ ಮುಳುಗಿದೆ. ಸಮುದ್ರ ಮಟ್ಟವು ದಿನವಿಡೀ ತುಂಬಾ ಏರುತ್ತದೆ, ಹಾಗಾಗಿ ದೇವಾಲಯವು ಸಂಪೂರ್ಣವಾಗಿ ಮುಳುಗಿರುತ್ತದೆ .ದಿನದ ಒಂದು ಸಮಯ ನಂತರ ನೀರಿನ ಮಟ್ಟ ಕಡಿಮೆಯಾದ ನಂತರ ಈ ದೇವಾಲಯವು ಮತ್ತೆ ಕಾಣಿಸಿಕೊಳ್ಳಲು ಪ್ರಾರಂಭಿಸುತ್ತದೆ.
ಹೌದು, ಇಲ್ಲಿ ಶಿವನ ದರ್ಶನ ಪಡೆಯಲು ಸಮುದ್ರವೇ ದಾರಿ ನೀಡುತ್ತದೆ. ಇದು ಬೆಳಿಗ್ಗೆ ಮತ್ತು ಸಂಜೆ ಎರಡು ಬಾರಿ ಸಂಭವಿಸುತ್ತದೆ. ಈ ಸಮಯದಲ್ಲಿ ಜನರು ಸಮುದ್ರದ ಮಧ್ಯಕ್ಕೆ ನಡೆದುಕೊಂಡು ಹೋಗಿ ಶಿವನಿಗೆ ಪೂಜೆ ಸಲ್ಲಿಸುತ್ತಾರೆ. ಶಿವನನ್ನು ನೋಡಲು ಪ್ರತಿವರ್ಷ ಲಕ್ಷಾಂತರ ಭಕ್ತರು ಈ ದೇವಾಲಯಕ್ಕೆ ಬರುತ್ತಾರೆ.