MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Life
  • Travel
  • ಕೃಷ್ಣನ ದ್ವಾರಕಾ ಮಾತ್ರವಲ್ಲ… ವಿಶ್ವದ ಈ 5 ಶ್ರೀಮಂತ ನಗರಗಳು ಇಂದು ಸಮುದ್ರ ಗರ್ಭ ಸೇರಿವೆ!

ಕೃಷ್ಣನ ದ್ವಾರಕಾ ಮಾತ್ರವಲ್ಲ… ವಿಶ್ವದ ಈ 5 ಶ್ರೀಮಂತ ನಗರಗಳು ಇಂದು ಸಮುದ್ರ ಗರ್ಭ ಸೇರಿವೆ!

ಗಾಂಧಾರಿಯ ಶಾಪದಿಂದ ಶ್ರೀ ಕೃಷ್ಣನ ದ್ವಾರಕಾ ನಗರ ಸಮುದ್ರದಲ್ಲಿ ಮುಳುಗಿತು ಅನ್ನೋದು ನಿಮಗೂ ಗೊತ್ತಿದೆ. ದ್ವಾರಕಾದಂತೆ, ವಿಶ್ವದ ಇತರ ನಗರಗಳು ಸಹ ಸಮುದ್ರದಲ್ಲಿ ಮುಳುಗಿವೆ. ಜಲಾವೃತವಾದ ಈ ನಗರಗಳ ನಿಗೂಢ ಕಥೆಗಳ ಬಗ್ಗೆ ತಿಳಿಯೋಣ.  

2 Min read
Pavna Das
Published : Jul 19 2024, 04:52 PM IST
Share this Photo Gallery
  • FB
  • TW
  • Linkdin
  • Whatsapp
17

ಗಾಂಧಾರಿ ಶಾಪದಿಂದಾಗಿ ಶ್ರೀ ಕೃಷ್ಣನ ನಗರವಾದ ದ್ವಾರಕಾ ಮುಳುಗಿತು ಅನ್ನೋದು ನಿಮಗೆ ಗೊತ್ತಿದೆ. ಪುರಾಣಗಳ ಪ್ರಕಾರ, ಈ ನಗರಕ್ಕೆ ಮೊದಲು ಕುಶಾಸ್ಥಲಿ ಎನ್ನುವ ಹೆಸರು ಇತ್ತಂತೆ. ಯುಗಯುಗಗಳು ಕಳೆದಂತೆ ಪ್ರವಾಹದಿಂದಾಗಿ ಕುಶಾಸ್ಥಲಿ ನಗರವು ನಾಶವಾದಾಗ, ವಿಶ್ವಾಮಿತ್ರ ಮತ್ತು ಮಾಯಾಸುರರು ಗುಜರಾತಿಗೆ ಬಂದು ಸಮುದ್ರ ತೀರದಲ್ಲಿ ಭವ್ಯವಾದ ಅರಮನೆ ಮತ್ತು ನಗರವನ್ನು ನಿರ್ಮಿಸಿದರು, ಅದಕ್ಕೆ ದ್ವಾರಕಾ ಎಂದು ಹೆಸರಿಸಲಾಯಿತು. 
 

27

ಇದೆಲ್ಲಾ ಆದ ಬಳಿಕ ಮಹಾಭಾರತದ ಘಟನೆಗಳು ನಡೆದವು, ಕುರುಕ್ಷೇತ್ರ ಯುದ್ಧದಲ್ಲಿ ಕೌರವರ ನಾಶದ ನಂತರ, ಗಾಂಧಾರಿ ಶಾಪದ ಪರಿಣಾಮವು ಕಾಣಿಸಿಕೊಳ್ಳಲು ಪ್ರಾರಂಭಿಸಿತು ಮತ್ತು ಕೆಲವು ಅಹಿತಕರ ಘಟನೆಗಳು ಸಂಭವಿಸಿದವು. ಶ್ರೀ ಕೃಷ್ಣನು (Shree Krishna) ವೈಕುಂಠಕ್ಕೆ ತೆರಳಿದ ನಂತರ, ದ್ವಾರಕಾ ನಗರವೂ ಕಣ್ಮರೆಯಾಯಿತು. ಅದು ಜಲಗರ್ಭದಲ್ಲಿ ಸೇರಿ ಹೋಗಿದೆ ಎನ್ನಲಾಗುತ್ತದೆ. ದ್ವಾರಕಾ ಹೊರತುಪಡಿಸಿ, ವಿಶ್ವದ ಅಂತಹ 4 ನಗರಗಳು ನೀರಿನಲ್ಲಿ ಮುಳುಗಿವೆ. ಬನ್ನಿ, ಆ ನಗರಗಳ ಬಗ್ಗೆ ತಿಳಿಯೋಣ. 
 

37

ದ್ವಾರಕಾ ನಗರ (Dwarka Nagar)
ಭಗವಾನ್ ಕೃಷ್ಣನ ನಗರವಾದ ದ್ವಾರಕಾ ಭಾರತದ ಏಳು ಅತ್ಯಂತ ಪ್ರಾಚೀನ ನಗರಗಳಲ್ಲೊಂದು. ಪುರಾತತ್ವ ಇಲಾಖೆಯ ಸಮೀಕ್ಷೆಯಲ್ಲಿಯೂ ದ್ವಾರಕಾ ಅಸ್ತಿತ್ವದ ಪುರಾವೆಗಳಿವೆ. ದ್ವಾರಕಾದ ಬಗ್ಗೆ ಪೌರಾಣಿಕ ಕಥೆಗಳಲ್ಲಿ ಮಾತ್ರ ಉಲ್ಲೇಖಿಸಲಾಗಿಲ್ಲ, ಆದರೆ ಅದರ ಪುರಾವೆಗಳು ಗುಜರಾತಿನ ಕ್ಯಾಂಬೆ ಕೊಲ್ಲಿಯಲ್ಲಿ ಕಂಡುಬಂದಿವೆ. ಭಗವಾನ್ ಕೃಷ್ಣನ ಮರಣದ ನಂತರ, ಗೋಮತಿ ನದಿ ದಡದಲ್ಲಿರುವ ಈ ನಗರ ಸಮುದ್ರದಲ್ಲಿ ಮುಳುಗಿತು ಎಂದು ಪುರಾಣದಲ್ಲಿ ಹೇಳಲಾಗಿದೆ. ದ್ವಾರಕಾ ಶ್ರೀಕೃಷ್ಣನ ವಾಸಸ್ಥಾನವಾಗಿತ್ತು. ಈ ನಗರ ಸಮೃದ್ಧಿ ಮತ್ತು ವೈಭವಕ್ಕೆ ಹೆಸರುವಾಸಿಯಾದ ರಾಜ್ಯವಾಗಿತ್ತು.
 

47

ಕ್ಲಿಯೋಪಾತ್ರಾ, ಅಲೆಕ್ಸಾಂಡ್ರಿಯಾ, ಈಜಿಪ್ಟ್ (Cleopatra Alexandrea Egypt)
1600 ವರ್ಷಗಳ ಹಿಂದೆ ಮುಳುಗಿದ ಕ್ಲಿಯೋಪಾತ್ರ ನಗರವನ್ನು 1998 ರಲ್ಲಿ ಸಾಗರ ಪುರಾತತ್ವಶಾಸ್ತ್ರಜ್ಞರು ಕಂಡುಹಿಡಿದರು. ಈ ನಗರವನ್ನು ಈಜಿಪ್ಟಿನ ಆಡಳಿತಗಾರ ಅಲೆಕ್ಸಾಂಡರ್ ದಿ ಗ್ರೇಟ್ ನಿರ್ಮಿಸಿದನು. ಪ್ರಸಿದ್ಧ ಈಜಿಪ್ಟಿನ ರಾಣಿ ಕ್ಲಿಯೋಪಾತ್ರಳ ನೆನಪಿಗಾಗಿ ಅವನು ಈ ನಗರವನ್ನು ನಿರ್ಮಿಸಿದನು. ಕ್ಲಿಯೋಪಾತ್ರಾ ತನ್ನ ಸೌಂದರ್ಯ ಮತ್ತು ಆಳ್ವಿಕೆಗೆ ಹೆಸರುವಾಸಿಯಾಗಿದ್ದಳು. ಕ್ಲಿಯೋಪಾತ್ರಾ ಈ ನಗರದಲ್ಲಿ ದೇವಿಯ ರೂಪದಲ್ಲಿ ಕಾಣಿಸಿಕೊಂಡಿದ್ದಳಂತೆ, ಆದರೆ ಈಜಿಪ್ಟಿನ ಕಥೆಗಳ ಪ್ರಕಾರ, ಕ್ಲಿಯೋಪಾತ್ರಾಗೆ ದ್ರೋಹ ಬಗೆದ ಜನರನ್ನು ಪಟ್ಟಣದ ಜನರು ಗೌರವಿಸುತ್ತಿದ್ದರಂತೆ, ಹಾಗಾಗಿ ಕ್ಲಿಯೋಪಾತ್ರಾಳ ಕೋಪಕ್ಕೆ ತುತ್ತಾಗಿ ಇಡೀ ನಗರವೇ ನೀರಿನಡಿ ಲೀನವಾಯ್ತು ಎನ್ನಲಾಗುತ್ತದೆ. 
 

57

ಪಾವ್ಲೋಪ್ಟ್ರೀ, ಗ್ರೀಕ್ (Pavlopetri Greece)
ಗ್ರೀಸ್ ನಲ್ಲಿರುವ ಪಾವ್ಲೊಪೆಟ್ರಿ ನಗರ ಸುಮಾರು ಕ್ರಿ.ಪೂ 1000 ರಲ್ಲಿ ಭೂಕಂಪದಿಂದಾಗಿ ಮುಳುಗಿತು. ಈ ನಗರವು ವಿಶ್ವದ ಅತ್ಯಂತ ಹಳೆಯ ನೀರೊಳಗಿನ ನಗರಗಳಲ್ಲಿ ಒಂದಾಗಿದೆ. ಪಾವ್ಲೋಪೆಟ್ರಿಯ ಅವಶೇಷಗಳು ತುಂಬಾ ಹಳೆಯದಾಗಿದ್ದು, ಅವುಗಳನ್ನು ಗುರುತಿಸುವುದು ಕಷ್ಟ. ಆದರೆ ಈ ಅವಶೇಷಗಳು ಈ ನಗರವನ್ನು ಬಹಳ ವ್ಯವಸ್ಥಿತ ರೀತಿಯಲ್ಲಿ ನಿರ್ಮಿಸಲಾಗಿದೆ ಎಂದು ತೋರಿಸುತ್ತವೆ. ರಸ್ತೆಗಳು, ಕಟ್ಟಡಗಳು ಮತ್ತು ಸ್ಮಶಾನಗಳು ಸಹ ಇದ್ದವು. ಅದರ ಅವಶೇಷಗಳನ್ನು ನೋಡಿದಾಗ, ಅದು ಮಾನವ ನಿರ್ಮಿತ ಎಂದು ಕಂಡುಹಿಡಿಯುವುದು ಕಷ್ಟವಾಗುತ್ತದೆ. ಇಂದಿಗೂ ಪಾವ್ಲೋಪ್ಟ್ರೀಯನ್ನು ವಿಶ್ವದ ಪ್ರಮುಖ ಪುರಾತತ್ವ ತಾಣಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ.

67

ಪೋರ್ಟ್ ರಾಯಲ್, ಜಮೈಕಾ (Port Royal Jamaica)
ಒಂದು ಕಾಲದಲ್ಲಿ ಯುರೋಪಿನ ಅತಿದೊಡ್ಡ ನಗರಗಳಲ್ಲಿ ಒಂದೆಂದು ಪರಿಗಣಿಸಲ್ಪಟ್ಟಿದ್ದ ಜಮೈಕಾದ ಪೋರ್ಟ್ ರಾಯಲ್ ನಗರವು ಜೂನ್ 1962 ರಲ್ಲಿ ಮುಳುಗಿತು. ಈ ಘಟನೆಯಲ್ಲಿ 2000 ಜನರು ಸಾವನ್ನಪ್ಪಿದ್ದರು. ಪೋರ್ಟ್ ರಾಯಲ್ ತನ್ನ ಉತ್ತಮ ವೈನ್ ಮತ್ತು ಮನರಂಜನೆಗೆ ಹೆಸರುವಾಸಿಯಾಗಿತ್ತು. ದೇಶ ವಿದೇಶಗಳಿಂದ ರಾಜರು ಮತ್ತು ಮಹಾರಾಜರು ತಮ್ಮ ಮನರಂಜನೆಗಾಗಿ ಇಲ್ಲಿಗೆ ಬರುತ್ತಿದ್ದರು. ಗುಲಾಮಗಿರಿ ಇಲ್ಲಿ ಉತ್ತುಂಗದಲ್ಲಿತ್ತು. ಇಂತಹ ಲೈಂಗಿಕ ಅಪರಾಧಗಳ ಹೆಚ್ಚಳದಿಂದ, ನಕಾರಾತ್ಮಕ ಶಕ್ತಿಯು ಇಲ್ಲಿ ಹರಡಲು ಪ್ರಾರಂಭಿಸಿತು ಮತ್ತು ನಗರವು ನಾಶವಾಯಿತು ಎಂದೂಜನ ಮಾತನಾಡಿಕೊಳ್ತಾರೆ. 

77

ಚೀನಾದ ಕಿಯಾಂಡಾವೊ ಸರೋವರದ ಲಯನ್ ಸಿಟಿ (Lion City China)
ಕಿಯಾಂಡಾವೊ ಸರೋವರದಲ್ಲಿ ಮುಳುಗಿರುವ 'ಲಯನ್ ಸಿಟಿ' ಚೀನಾದ ಪ್ರಾಚೀನ ಮತ್ತು ಭವ್ಯ ನಗರವಾಗಿತ್ತು. ಅದು ಇಂದಿಗೂ ತನ್ನ ರಹಸ್ಯಗಳಿಗೆ ಹೆಸರುವಾಸಿ. ಇತರ ಪ್ರಪಂಚಕ್ಕೆ ಸಂಬಂಧಿಸಿದ ಜನರು ಸಹ ಈ ನಗರಕ್ಕೆ ಬಂದು ನೆಲೆಸಿದ್ದರು ಎನ್ನಲಾಗುತ್ತಿತ್ತು. ಇಲ್ಲಿ ವಾಸಿಸುವ ಇತರ ಪ್ರಪಂಚದ ಜನರ ಬಗ್ಗೆ ಅನೇಕ ಕಥೆಗಳಿವೆ. ಪೂರ್ವ ಹಾನ್ ರಾಜವಂಶದ ಅವಧಿಯಲ್ಲಿ ಕಿಯಾಂಡಾವೊ ರೂಪುಗೊಂಡಿತು. ಕ್ವಾಂಡಾವೊ 62 ಫುಟ್ಬಾಲ್ ಮೈದಾನಗಳಷ್ಟು ವಿಶಾಲವಾಗಿತ್ತು. ನಗರವು ನೀರಿನ ಮೇಲ್ಮೈಯಿಂದ 85 ರಿಂದ 131 ಅಡಿ ಆಳದಲ್ಲಿ ಮುಳುಗಿದೆ.

About the Author

PD
Pavna Das
ಮೂಲತಃ ಮಂಗಳೂರಿನವಳು. ಮಂಗಳೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮದ ಸ್ನಾತಕೋತ್ತರ ಪದವಿ . ಕಳೆದ 12 ವರ್ಷಗಳಿಂದ ಪತ್ರಿಕೆ ಹಾಗೂ ಡಿಜಿಟಲ್ ಮಾಧ್ಯಮಗಳಲ್ಲಿ ಕೆಲಸ . ಸುದ್ದಿ ಬಿಡುಗಡೆ, ಗಲ್ಫ್ ಕನ್ನಡಿಗ, ಈ ಟಿವಿ ಭಾರತ್, ಕನ್ನಡ ನ್ಯೂಸ್ ನೌ, ವಿಜಯಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ. ಈಗ ಏಷ್ಯಾನೆಟ್ ಸುವರ್ಣದಲ್ಲಿ ಫ್ರೀಲಾನ್ಸರ್ . ಮನೋರಂಜನೆ, ಲೈಫ್ ಸ್ಟೈಲ್, ಟ್ರಾವೆಲ್ ಬರವಣಿಗೆ ಇಷ್ಟ.
ಪ್ರವಾಸ
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved