MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • Travel
  • ಡಾ.ಬ್ರೋ, ಗ್ಲೋಬಲ್ ಕನ್ನಡಿಗ ಲೆಕ್ಕಕ್ಕಿಲ್ಲ, ಇವರೇ ನೋಡಿ ಅಸಲಿ 'ಟ್ರಾವೆಲ್ ಇನ್ ಫ್ಲೂಯೆನ್ಸರ್'! 245 ದೇಶಗಳ ಪ್ರವಾಸ!

ಡಾ.ಬ್ರೋ, ಗ್ಲೋಬಲ್ ಕನ್ನಡಿಗ ಲೆಕ್ಕಕ್ಕಿಲ್ಲ, ಇವರೇ ನೋಡಿ ಅಸಲಿ 'ಟ್ರಾವೆಲ್ ಇನ್ ಫ್ಲೂಯೆನ್ಸರ್'! 245 ದೇಶಗಳ ಪ್ರವಾಸ!

ಬೆಂಗಳೂರು ಮೂಲದ ಸಂಗೀತಗಾರ ಬೆನ್ನಿ ಪ್ರಸಾದ್, ಕೇವಲ 6 ವರ್ಷಗಳಲ್ಲಿ 245 ದೇಶಗಳನ್ನು ಸುತ್ತಿ ವಿಶ್ವ ದಾಖಲೆ ಬರೆದಿದ್ದಾರೆ. ಬಾಲ್ಯದಲ್ಲಿ ತೀವ್ರ ಅನಾರೋಗ್ಯ ಮತ್ತು ಖಿನ್ನತೆಯಿಂದ ಬಳಲುತ್ತಿದ್ದ ಅವರು, ಸಂಗೀತದ ಮೂಲಕ ತಮ್ಮ ಬದುಕನ್ನು ಬದಲಿಸಿಕೊಂಡು ಇಡೀ ಜಗತ್ತಿಗೆ ಸ್ಫೂರ್ತಿಯಾಗಿದ್ದಾರೆ.

2 Min read
Author : Sathish Kumar KH
Published : Jun 25 2026, 04:20 PM IST
Share this Photo Gallery
  • FB
  • TW
  • Linkdin
  • Whatsapp
16
Image Credit : Instagram

ಕನ್ನಡಿಗರಿಗೆ ವಿವಿಧ ದೇಶಗಳನ್ನು ಪರಿಚಯ ಮಾಡಿಕೊಡುವ ಡಾ.ಬ್ರೋ ಅಲಿಯಾಸ್ ಗಗನ್ ಶ್ರೀನಿವಾಸ್, ಫ್ಲೈಯಿಂಗ್ ಪಾಸ್‌ಪೋರ್ಟ್ ಖ್ಯಾತಿಯ ಆಶಾ ಅಂಡ್ ಕಿರಣ್, ಗ್ಲೋಬಲ್ ಕನ್ನಡಿಗ ಖ್ಯಾತಿಯ ಮಹಾಬಲ ರಾಮ್ ಸೇರಿದಂತೆ ಹಲವರು ಸೋಶಿಯಲ್ ಮೀಡಿಯಾ ಇನ್ಫ್ಯೂಯೆನ್ಸರ್‌ಗಳು ದೇಶಗಳನ್ನು ಸುತ್ತಾಡುತ್ತಾ ವ್ಲಾಗ್‌ಗಳನ್ನು ಮಾಡುತ್ತಾರೆ. ಇವರೆಲ್ಲರೂ ಬಹುಶಃ ಸುಮಾರು 50 ರಿಂದ 100 ದೇಶಗಳನ್ನು ಸುತ್ತಾಡಿರಬಹದು. ಆದರೆ, ಇಲ್ಲೊಬ್ಬ ಬೆಂಗಳೂರಿನ ಸಂಗೀತ ಕಲಾವಿದ ಬರೋಬ್ಬರಿ 245 ದೇಶಗಳನ್ನು ಸುತ್ತಾಡಿದ್ದಾರೆ. ಯಾರಿವರು? ಇವರ ಹಿನ್ನೆಲೆಯೇನು ಇಲ್ಲಿ ತಿಳಿದುಕೊಳ್ಳೋಣ ಬನ್ನಿ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
Image Credit : Instagram

ಇಂದಿನ ಕಾಲದಲ್ಲಿ ಒಂದೆರಡು ದೇಶ ಸುತ್ತುವುದೆಂದರೆ ದೊಡ್ಡ ಮಾತು. ಆದರೆ ಬೆಂಗಳೂರಿನ ಸಂಗೀತಗಾರರೊಬ್ಬರು ಇಡೀ ವಿಶ್ವವನ್ನೇ ಸುತ್ತಿ ಮುಗಿಸಿದ್ದಾರೆ ಎಂದರೆ ನೀವು ನಂಬಲೇಬೇಕು. ಹೌದು, ಬೆಂಗಳೂರು ಮೂಲದ ಬೆನ್ನಿ ಪ್ರಸಾದ್ (Benny Prasad) ಅವರು ಕೇವಲ 6 ವರ್ಷ, 6 ತಿಂಗಳು ಮತ್ತು 22 ದಿನಗಳಲ್ಲಿ ಅಂಟಾರ್ಕ್ಟಿಕಾ ಸೇರಿದಂತೆ ವಿಶ್ವದ 245 ದೇಶ ಹಾಗೂ ಪ್ರಾಂತ್ಯಗಳಿಗೆ ಭೇಟಿ ನೀಡುವ ಮೂಲಕ ಅತಿ ವೇಗವಾಗಿ ಜಗತ್ತನ್ನು ಸುತ್ತಿದ ವ್ಯಕ್ತಿ ಎಂಬ ವಿಶ್ವ ದಾಖಲೆ ಬರೆದಿದ್ದಾರೆ.

Related Articles

Related image1
ವಿದೇಶ ಸುತ್ತಿ ಮನೆಗೆ ಬಂದಾಗ ಮೊದಲೇನು ತಿಂತಾರೆ ಡಾ. ಬ್ರೋ? ಕಂಟೆಂಟ್ ಕ್ರಿಯೇಟರ್ಸ್ ಗೆ ಟಿಪ್ಸ್ ನೀಡಿದ ಗಗನ್
Related image2
ಬೆಂಗಳೂರಿನಿಂದ ರಾಮೇಶ್ವರ, ಮಧುರೈ, ಕನ್ಯಾಕುಮಾರಿಗೆ IRCTC ಟೂರ್ ಪ್ಯಾಕೇಜ್; ₹10 ಸಾವಿರಕ್ಕೆ 5 ದಿನದ ಪ್ರವಾಸ!
36
Image Credit : Instagram

ವೈರಲ್ ಆದ 16 ಪಾಸ್‌ಪೋರ್ಟ್‌ಗಳು:

ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಬೆನ್ನಿ ಪ್ರಸಾದ್ ಅವರ ವಿಡಿಯೋವೊಂದು ಸಖತ್ ವೈರಲ್ ಆಗುತ್ತಿದೆ. ಅದರಲ್ಲಿ ಅವರು ವೀಸಾ ಮತ್ತು ಇಮಿಗ್ರೇಷನ್ ಸ್ಟ್ಯಾಂಪ್‌ಗಳಿಂದ ತುಂಬಿ ಹೋಗಿರುವ ತಮ್ಮ 16 ಪಾಸ್‌ಪೋರ್ಟ್‌ಗಳನ್ನು ತೋರಿಸುತ್ತಿದ್ದಾರೆ. ಭಾರತದಂತಹ 'ವೀಸಾ ನಿರ್ಬಂಧ' ಹೆಚ್ಚಿರುವ ಪಾಸ್‌ಪೋರ್ಟ್ ಇಟ್ಟುಕೊಂಡು ಇಷ್ಟೊಂದು ದೇಶಗಳನ್ನು ಸುತ್ತುವುದು ಸುಲಭದ ಮಾತಲ್ಲ. ಇದನ್ನೇ ನೆಟ್ಟಿಗರು 'ರಿಯಲ್ ಒಜಿ ಟ್ರಾವೆಲ್ ಇನ್ ಫ್ಲೂಯೆನ್ಸರ್' (OG Travel Influencer) ಎಂದು ಕೊಂಡಾಡುತ್ತಿದ್ದಾರೆ. ಸೋಷಿಯಲ್ ಮೀಡಿಯಾ ಕ್ರೇಜ್ ಆರಂಭವಾಗುವ ಮೊದಲೇ ಬೆನ್ನಿ ಇಡೀ ಜಗತ್ತನ್ನು ಅಂಗೈಯಲ್ಲಿ ಇಟ್ಟುಕೊಂಡಿದ್ದರು.

46
Image Credit : Instagram

ಸಾವಿನ ಅಂಚಿನಿಂದ ಸಾಧನೆಯ ಶಿಖರಕ್ಕೆ:

ಬೆನ್ನಿ ಪ್ರಸಾದ್ ಅವರ ಈ ಸಾಧನೆಯ ಹಿಂದೆ ನೋವಿನ ಕಥೆಯಿದೆ. 1975ರಲ್ಲಿ ಬೆಂಗಳೂರಿನಲ್ಲಿ ಜನಿಸಿದ ಬೆನ್ನಿ, ಬಾಲ್ಯದಲ್ಲಿ ತೀವ್ರವಾದ ಅಸ್ತಮಾದಿಂದ ಬಳಲುತ್ತಿದ್ದರು. ಅತಿಯಾದ ಸ್ಟಿರಾಯ್ಡ್ ಚಿಕಿತ್ಸೆಯಿಂದಾಗಿ ಅವರ ಶ್ವಾಸಕೋಶ ಶೇ. 60ರಷ್ಟು ಹಾನಿಗೊಳಗಾಗಿತ್ತು ಮತ್ತು ಅವರಿಗೆ ಸಂಧಿವಾತ (Rheumatoid Arthritis) ಕಾಣಿಸಿಕೊಂಡಿತ್ತು. ಇದರಿಂದಾಗಿ ಅವರ ರೋಗನಿರೋಧಕ ಶಕ್ತಿ ಸಂಪೂರ್ಣ ಕುಸಿದಿತ್ತು.

56
Image Credit : Instagram

ಬಾಲ್ಯದಲ್ಲಿ ಅನುಭವಿಸಿದ ದೈಹಿಕ ಯಾತನೆ ಮತ್ತು ಸಮಾಜದ ಒತ್ತಡದಿಂದಾಗಿ ಬೆನ್ನಿ 16ನೇ ವಯಸ್ಸಿನಲ್ಲಿ ತೀವ್ರ ಖಿನ್ನತೆಗೆ ಒಳಗಾಗಿದ್ದರು. ಒಂದು ಹಂತದಲ್ಲಿ ಅವರು ಆತ್ಮಹತ್ಯೆ ಮಾಡಿಕೊಳ್ಳುವ ಆಲೋಚನೆಯನ್ನೂ ಮಾಡಿದ್ದರು. ಆದರೆ, ಅವರ ಬದುಕಿನ ತಿರುವು ಆರಂಭವಾಗಿದ್ದೇ ಸಂಗೀತದಿಂದ. ಗಿಟಾರ್ ಹಿಡಿದ ಬೆನ್ನಿ, ತಮ್ಮ ನೋವನ್ನೆಲ್ಲ ಸಂಗೀತದ ಮೂಲಕ ಮರೆತರು. ಅವರ ಪ್ರತಿಭೆಯೇ ಅವರನ್ನು ಇಡೀ ವಿಶ್ವ ಸುತ್ತುವಂತೆ ಮಾಡಿತು.

66
Image Credit : Instagram

ಬಡತನವಲ್ಲ, ಪ್ರತಿಭೆಯೇ ಬಂಡವಾಳ:

ಬೆನ್ನಿ ಪ್ರಸಾದ್ ಅವರು ಶ್ರೀಮಂತ ಕುಟುಂಬದಿಂದ ಬಂದವರಲ್ಲ. ಆದರೆ ತಮ್ಮ ಅದ್ಭುತ ಗಿಟಾರ್ ವಾದನ ಮತ್ತು ಮೋಟಿವೇಶನಲ್ ಸ್ಪೀಚ್ ಮೂಲಕ ಅವರು ಜಗತ್ತಿನ ಮೂಲೆ ಮೂಲೆಗೆ ಆಹ್ವಾನ ಪಡೆದರು. ಸಂಗೀತ ಕಾರ್ಯಕ್ರಮಗಳನ್ನು ನೀಡುತ್ತಾ ಜಗತ್ತಿನ ಪ್ರತಿ ದೇಶವನ್ನೂ ಸಂದರ್ಶಿಸಿದರು. 'ನಿಮ್ಮಲ್ಲಿ ಛಲವಿದ್ದರೆ ದೈಹಿಕ ನ್ಯೂನತೆ ಅಥವಾ ಹಣದ ಕೊರತೆ ನಿಮ್ಮನ್ನು ತಡೆಯಲು ಸಾಧ್ಯವಿಲ್ಲ' ಎಂಬುದಕ್ಕೆ ಬೆನ್ನಿ ಪ್ರಸಾದ್ ಜೀವಂತ ಉದಾಹರಣೆ. ಇಂದು ಸಾವಿರಾರು ಪ್ರಯಾಣಿಕರಿಗೆ ಸ್ಫೂರ್ತಿಯಾಗಿರುವ ಬೆನ್ನಿ ಪ್ರಸಾದ್, ಕನ್ನಡಿಗರ ಸಾಧನೆಯ ಹಾದಿ ಎಷ್ಟು ದೊಡ್ಡದು ಎಂಬುದನ್ನು ಜಗತ್ತಿಗೆ ಸಾರಿದ್ದಾರೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

SK
Sathish Kumar KH
ವಿಜಯನಗರ ಜಿಲ್ಲೆ ಕಂದಗಲ್‌ಪುರ ಗ್ರಾಮದವನು ಮೂಲತಃ ಶಿಕ್ಷಕ. ಆದರೆ, ಆಕರ್ಷಿಸಿದ್ದು ಪತ್ರಿಕೋದ್ಯಮ. ಎಂಟು ವರ್ಷಗಳಿಂದ ಪ್ರಜಾವಾಣಿ, ವಿಜಯವಾಣಿ ನಂತರ ಇದೀಗ ಏಷ್ಯಾನೆಟ್ ಕನ್ನಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಕರ್ನಾಟಕ ರಾಜಕಾರಣ ನೆಚ್ಚಿನ ಕ್ಷೇತ್ರ. ಡಿಜಿಟಲ್ ಮಾಧ್ಯಮಕ್ಕನುಗುಣವಾಗಿ ಶಿಕ್ಷಣ, ಆರೋಗ್ಯ, ಸಿನಿಮಾ ಸುದ್ದಿಗಳನ್ನೂ ಬರೆಯುತ್ತೇನೆ. ಕ್ರಿಕೆಟ್, ಕೃಷಿ ಇಷ್ಟ. ಓದು ನೆಚ್ಚಿನ ಹವ್ಯಾಸ.
ಪ್ರವಾಸ
ಸಾಮಾಜಿಕ ಜಾಲತಾಣ ಪ್ರಭಾವಿ
ಸಾಮಾಜಿಕ ಮಾಧ್ಯಮ

Latest Videos
Recommended Stories
Recommended image1
ಇತ್ತ ಪತಿಯನ್ನು ಕೊಂದು, ಅತ್ತ ಸಿಂಗಪುರಕ್ಕೆ ಹಾರಿದ Brahmagantu Serial ಸೌಂದರ್ಯ
Recommended image2
ಅಂದು ಜೀವಂತ ಸಮಾಧಿ, ಇಂದು ಭೀಕರ ಹತ್ಯೆ! ಕೇತನ್ ಕೊಲೆ ಬೆನ್ನಲ್ಲೇ ಮತ್ತೆ ಮುನ್ನೆಲೆಗೆ ಬಂತು ಲೋಹಗಢ ಕೋಟೆ ರಹಸ್ಯ
Recommended image3
Indian Railway fine: ರೈಲಿನ ಮಹಿಳಾ ಬೋಗಿಯಲ್ಲಿ ಪುರುಷರ ಪ್ರಯಾಣ; ಟ್ರಾಫಿಕ್ ಫೈನ್‌ಗಿಂತ ಹೆಚ್ಚಾಯ್ತು ದಂಡದ ಮೊತ್ತ!
Related Stories
Recommended image1
ವಿದೇಶ ಸುತ್ತಿ ಮನೆಗೆ ಬಂದಾಗ ಮೊದಲೇನು ತಿಂತಾರೆ ಡಾ. ಬ್ರೋ? ಕಂಟೆಂಟ್ ಕ್ರಿಯೇಟರ್ಸ್ ಗೆ ಟಿಪ್ಸ್ ನೀಡಿದ ಗಗನ್
Recommended image2
ಬೆಂಗಳೂರಿನಿಂದ ರಾಮೇಶ್ವರ, ಮಧುರೈ, ಕನ್ಯಾಕುಮಾರಿಗೆ IRCTC ಟೂರ್ ಪ್ಯಾಕೇಜ್; ₹10 ಸಾವಿರಕ್ಕೆ 5 ದಿನದ ಪ್ರವಾಸ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved