MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • Travel
  • Indian Railway fine: ರೈಲಿನ ಮಹಿಳಾ ಬೋಗಿಯಲ್ಲಿ ಪುರುಷರ ಪ್ರಯಾಣ; ಟ್ರಾಫಿಕ್ ಫೈನ್‌ಗಿಂತ ಹೆಚ್ಚಾಯ್ತು ದಂಡದ ಮೊತ್ತ!

Indian Railway fine: ರೈಲಿನ ಮಹಿಳಾ ಬೋಗಿಯಲ್ಲಿ ಪುರುಷರ ಪ್ರಯಾಣ; ಟ್ರಾಫಿಕ್ ಫೈನ್‌ಗಿಂತ ಹೆಚ್ಚಾಯ್ತು ದಂಡದ ಮೊತ್ತ!

ಭಾರತೀಯ ರೈಲ್ವೆಯು 'ಜನ್ ವಿಶ್ವಾಸ್ ಕಾಯ್ದೆ, 2026' ಅಡಿಯಲ್ಲಿ, ಮಹಿಳಾ ಬೋಗಿಗಳಿಗೆ ಅಕ್ರಮವಾಗಿ ಪ್ರವೇಶಿಸುವ ಪುರುಷರಿಗೆ ವಿಧಿಸುವ ದಂಡವನ್ನು ₹2,500ಕ್ಕೆ ಹೆಚ್ಚಿಸಿದೆ. ಈ ಕಠಿಣ ಕ್ರಮವು ಮಹಿಳಾ ಪ್ರಯಾಣಿಕರ ಸುರಕ್ಷತೆ ಮತ್ತು ಆರಾಮದಾಯಕ ಪ್ರಯಾಣವನ್ನು ಖಚಿತಪಡಿಸುವ ಗುರಿಯನ್ನು ಹೊಂದಿದೆ.

2 Min read
Author : Sathish Kumar KH
Published : Jun 22 2026, 04:56 PM IST
Share this Photo Gallery
  • FB
  • TW
  • Linkdin
  • Whatsapp
16
Image Credit : our own

ರೈಲಿನಲ್ಲಿ ಮಹಿಳೆಯರಿಗಾಗಿಯೇ ಮೀಸಲಿಟ್ಟಿರುವ ಕೋಚ್‌ ಮತ್ತು ಸೀಟ್‌ಗಳಿಗೆ ಅಕ್ರಮವಾಗಿ ನುಗ್ಗುವ ಪುರುಷ ಪ್ರಯಾಣಿಕರ ವಿರುದ್ಧ ಭಾರತೀಯ ರೈಲ್ವೆ ಕಠಿಣ ಕ್ರಮಕ್ಕೆ ಮುಂದಾಗಿದೆ. 'ಜನ್ ವಿಶ್ವಾಸ್ ಕಾಯ್ದೆ, 2026'ರ ಅಡಿಯಲ್ಲಿ, ಮಹಿಳಾ ಬೋಗಿಗೆ ಅತಿಕ್ರಮ ಪ್ರವೇಶ ಮಾಡುವವರಿಗೆ ವಿಧಿಸುವ ದಂಡವನ್ನು 500 ರೂಪಾಯಿಯಿಂದ 2,500 ರೂಪಾಯಿಗೆ ಏರಿಸಲಾಗಿದೆ ಎಂದು ರೈಲ್ವೆ ಸಚಿವಾಲಯ ಸ್ಪಷ್ಟಪಡಿಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
Image Credit : google

ರೈಲ್ವೆ ಅಧಿಕಾರಿಗಳ ಪ್ರಕಾರ, ಸಾಮಾನ್ಯ ಬೋಗಿಗಳಲ್ಲಿ ಪ್ರಯಾಣಿಕರಿಗೆ ಸಾಕಷ್ಟು ಸ್ಥಳಾವಕಾಶ ಇರುತ್ತದೆ. ಹೀಗಿರುವಾಗ ಪುರುಷರು ಮಹಿಳೆಯರ ಕೋಚ್ ಅಥವಾ ಸೀಟ್‌ಗಳನ್ನು ಆಕ್ರಮಿಸಿಕೊಳ್ಳುವ ಅಗತ್ಯವೇ ಇಲ್ಲ. ಆದರೂ ಇಂತಹ ನಿಯಮ ಉಲ್ಲಂಘನೆಗಳು ಪದೇ ಪದೇ ನಡೆಯುತ್ತಿರುವುದರಿಂದ ದಂಡದ ಮೊತ್ತವನ್ನು భారీಯಾಗಿ ಹೆಚ್ಚಿಸಲು ನಿರ್ಧರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Related Articles

Related image1
ಶೀಘ್ರದಲ್ಲಿಯೇ ವಿಜಯಪುರ–ತಿರುಪತಿ ನಡುವೆ ನೇರ ರೈಲು ಸೇವೆ : ಟ್ರೈನ್ ರೂಟ್ ಯಾವುದು?
Related image2
ಪುತ್ತೂರು-ಸುಬ್ರಹ್ಮಣ್ಯ 3 ಹೊಸ ರೈಲ್ವೆ ಓವರ್‌ಬ್ರಿಜ್ ಗೆ ₹18 ಕೋಟಿ, ದ.ಕನ್ನಡ ರಸ್ತೆ ಅಭಿವೃದ್ಧಿಗೆ 57 ಕೋಟಿ ಅನುದಾನ!
36
Image Credit : our own

2026ರ ಜೂನ್ 19ರಂದು ಭಾರತೀಯ ಗೆಜೆಟ್‌ನಲ್ಲಿ ರೈಲ್ವೆ ಸಚಿವಾಲಯ ಒಂದು ಅಧಿಸೂಚನೆ ಹೊರಡಿಸಿದೆ. ಇದರ ಪ್ರಕಾರ, ಯಾವುದೇ ಪುರುಷ ಪ್ರಯಾಣಿಕ ಉದ್ದೇಶಪೂರ್ವಕವಾಗಿ ಮಹಿಳಾ ಬೋಗಿ ಪ್ರವೇಶಿಸಿದರೆ, ಅಥವಾ ಮಹಿಳೆಯರ ಸೀಟಿನಲ್ಲಿ ಕುಳಿತು ಪ್ರಯಾಣ ಮುಂದುವರಿಸಿದರೆ, ಅದನ್ನು ಕಾನೂನು ಪ್ರಕಾರ ಅಪರಾಧ ಎಂದು ಪರಿಗಣಿಸಲಾಗುತ್ತದೆ. ಇದು ರೈಲ್ವೆ ಕಾಯ್ದೆಯ ಸೆಕ್ಷನ್ 162ರ ಉಲ್ಲಂಘನೆಯಾಗುತ್ತದೆ.

46
Image Credit : Gemini AI

ನಿಯಮ ಮುರಿದ ಪ್ರಯಾಣಿಕನಿಗೆ 2,500 ರೂ. ದಂಡ ವಿಧಿಸುವುದಲ್ಲದೆ, ಅವರ ಟಿಕೆಟ್ ರದ್ದುಪಡಿಸಬಹುದು ಅಥವಾ ಮುಟ್ಟುಗೋಲು ಹಾಕಿಕೊಳ್ಳಬಹುದು. ಅಷ್ಟೇ ಅಲ್ಲ, ಆ ಪ್ರಯಾಣಿಕನನ್ನು ರೈಲಿನಿಂದ ಕೆಳಗಿಳಿಸುವಂತೆ ಸೂಚಿಸುವ ಅಧಿಕಾರ ರೈಲ್ವೆ ಸಿಬ್ಬಂದಿಗೆ ಇರುತ್ತದೆ. ಒಂದು ವೇಳೆ ಪ್ರಯಾಣಿಕ ದಂಡ ಕಟ್ಟಲು ನಿರಾಕರಿಸಿದರೆ, ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತದೆ. ಆಗ ದಂಡದ ಮೊತ್ತ 5,000 ರೂಪಾಯಿವರೆಗೂ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಅಧಿಸೂಚನೆಯಲ್ಲಿ ಎಚ್ಚರಿಸಲಾಗಿದೆ.

56
Image Credit : Twitter

ಈ ಅಪರಾಧಕ್ಕೆ ಕನಿಷ್ಠ 2,500 ರೂ. ದಂಡ ವಿಧಿಸಬೇಕೆಂದು ಕಾನೂನು ಹೇಳುತ್ತದೆ. ಒಂದು ವೇಳೆ ವಿಶೇಷ ಸಂದರ್ಭಗಳಲ್ಲಿ ಇದಕ್ಕಿಂತ ಕಡಿಮೆ ದಂಡ ವಿಧಿಸುವುದಾದರೆ, ಅದಕ್ಕೆ ಸೂಕ್ತ ಕಾರಣವನ್ನು ನ್ಯಾಯಾಲಯ ತನ್ನ ತೀರ್ಪಿನಲ್ಲಿ ಸ್ಪಷ್ಟವಾಗಿ ನಮೂದಿಸಬೇಕು. ಆದರೆ, ಈ ನಿಯಮವು ತೃತೀಯಲಿಂಗಿಗಳಿಗೆ ಅನ್ವಯಿಸುವುದಿಲ್ಲ. 'ತೃತೀಯಲಿಂಗಿ ವ್ಯಕ್ತಿಗಳ ಹಕ್ಕುಗಳ ಸಂರಕ್ಷಣಾ ಕಾಯ್ದೆ'ಯ ಅಡಿ ಬರುವ ವ್ಯಕ್ತಿಗಳಿಗೆ ಈ ನಿಯಮದಿಂದ ವಿನಾಯಿತಿ ನೀಡಲಾಗಿದೆ.

66
Image Credit : Asianet News

ಮಹಿಳೆಯರ ಸುರಕ್ಷತೆ ಮತ್ತು ಆರಾಮದಾಯಕ ಪ್ರಯಾಣವನ್ನು ಖಚಿತಪಡಿಸಿಕೊಳ್ಳಲು ಭಾರತೀಯ ರೈಲ್ವೆ ಈ ಹೊಸ ಕ್ರಮ ಕೈಗೊಂಡಿದೆ. ಮಹಿಳಾ ಬೋಗಿಗಳ ದುರ್ಬಳಕೆ ತಡೆಯುವುದು ಮತ್ತು ಮಹಿಳಾ ಪ್ರಯಾಣಿಕರಿಗೆ ಹೆಚ್ಚು ಸುರಕ್ಷಿತ ವಾತಾವರಣವನ್ನು ಸೃಷ್ಟಿಸುವುದು ಈ ಕಠಿಣ ನಿಯಮದ ಮುಖ್ಯ ಉದ್ದೇಶವಾಗಿದೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

SK
Sathish Kumar KH
ವಿಜಯನಗರ ಜಿಲ್ಲೆ ಕಂದಗಲ್‌ಪುರ ಗ್ರಾಮದವನು ಮೂಲತಃ ಶಿಕ್ಷಕ. ಆದರೆ, ಆಕರ್ಷಿಸಿದ್ದು ಪತ್ರಿಕೋದ್ಯಮ. ಎಂಟು ವರ್ಷಗಳಿಂದ ಪ್ರಜಾವಾಣಿ, ವಿಜಯವಾಣಿ ನಂತರ ಇದೀಗ ಏಷ್ಯಾನೆಟ್ ಕನ್ನಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಕರ್ನಾಟಕ ರಾಜಕಾರಣ ನೆಚ್ಚಿನ ಕ್ಷೇತ್ರ. ಡಿಜಿಟಲ್ ಮಾಧ್ಯಮಕ್ಕನುಗುಣವಾಗಿ ಶಿಕ್ಷಣ, ಆರೋಗ್ಯ, ಸಿನಿಮಾ ಸುದ್ದಿಗಳನ್ನೂ ಬರೆಯುತ್ತೇನೆ. ಕ್ರಿಕೆಟ್, ಕೃಷಿ ಇಷ್ಟ. ಓದು ನೆಚ್ಚಿನ ಹವ್ಯಾಸ.
ಭಾರತೀಯ ರೈಲ್ವೆ
ರೈಲು
ಪ್ರವಾಸ

Latest Videos
Recommended Stories
Recommended image1
ಬಿಎಂಟಿಎಸಿ, ಕೆಎಸ್​ಆರ್​ಟಿಸಿ ಟಿಕೆಟ್​ ದರ ಮತ್ತಷ್ಟು ಏರಿಕೆ? ಹಿಂದಿಗಿಂತಲೂ ದುಬಾರಿ? ಎಷ್ಟಾಗಲಿದೆ ರೇಟ್​
Recommended image2
ಹನಿಮೂನ್‌ಗೆ ಪ್ಲ್ಯಾನ್ ಮಾಡ್ತಿದ್ದೀರಾ? 5 ರೊಮ್ಯಾಂಟಿಕ್ ಪ್ಲೇಸ್ ಮಿಸ್ ಮಾಡ್ಕೋಬೇಡಿ!
Recommended image3
Mahindra: SUV ಮಾರುಕಟ್ಟೆಯಲ್ಲಿ ಮಹೀಂದ್ರಾ ಸುನಾಮಿ! ಥಾರ್ ನ್ಯೂ ವರ್ಷನ್ ಸೇರಿ 8 ಹೊಸ ಕಾರುಗಳ ಎಂಟ್ರಿ
Related Stories
Recommended image1
ಶೀಘ್ರದಲ್ಲಿಯೇ ವಿಜಯಪುರ–ತಿರುಪತಿ ನಡುವೆ ನೇರ ರೈಲು ಸೇವೆ : ಟ್ರೈನ್ ರೂಟ್ ಯಾವುದು?
Recommended image2
ಪುತ್ತೂರು-ಸುಬ್ರಹ್ಮಣ್ಯ 3 ಹೊಸ ರೈಲ್ವೆ ಓವರ್‌ಬ್ರಿಜ್ ಗೆ ₹18 ಕೋಟಿ, ದ.ಕನ್ನಡ ರಸ್ತೆ ಅಭಿವೃದ್ಧಿಗೆ 57 ಕೋಟಿ ಅನುದಾನ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved