ಇತ್ತ ಪತಿಯನ್ನು ಕೊಂದು, ಅತ್ತ ಸಿಂಗಪುರಕ್ಕೆ ಹಾರಿದ Brahmagantu Serial ಸೌಂದರ್ಯ
ಬ್ರಹ್ಮಗಂಟು ಸೀರಿಯಲ್‌ನ ಖಳನಾಯಕಿ 'ಸೌಂದರ್ಯ' ಪಾತ್ರಧಾರಿ ಪ್ರೀತಿ ಶ್ರೀನಿವಾಸ್, ತಮ್ಮ ನಿಜ ಜೀವನದಲ್ಲಿ ಪತಿ ಮತ್ತು ಮಗನೊಂದಿಗೆ ಸಿಂಗಪುರಕ್ಕೆ ಪ್ರವಾಸ ಕೈಗೊಂಡಿದ್ದಾರೆ. ಅಲ್ಲಿನ ಯುನಿವರ್ಸಲ್ ಸ್ಟುಡಿಯೋಸ್, ಲಿಟಲ್ ಇಂಡಿಯಾಕ್ಕೆ ಭೇಟಿ ನೀಡಿ, ತಮ್ಮ ಅದ್ಭುತ ಅನುಭವಗಳನ್ನು ಹಂಚಿಕೊಂಡಿದ್ದಾರೆ.

ವಿಲನ್ ಸೌಂದರ್ಯ
ಜೀ ಕನ್ನಡದ ಬ್ರಹ್ಮಗಂಟು ಸೀರಿಯಲ್ (Brahmagantu Serial)ನಲ್ಲಿ, ಸದ್ಯ ಸೌಂದರ್ಯಳ ಮುಖವಾಡ ಬಯಲು ಆಗಬೇಕಿದೆ. ಇದಾಗಲೇ ತನ್ನ ರಹಸ್ಯ ಅರಿತಿರುವ ಪತಿಯ ಸಾವಿಗೆ ಒಂದರ್ಥದಲ್ಲಿ ಸೌಂದರ್ಯಳೇ ಕಾರಣ ಆಗಿದ್ದಾಳೆ. ಆತ ಕಾಲು ಜಾರಿ ಬಿದ್ದರೂ, ಅವನ ಸಾವಿನಿಂದ ಸೌಂದರ್ಯ ಖುಷಿಯಾಗಿದ್ದು, ಇದರ ಬಗ್ಗೆ ಚಿರುಗೆ ಎಲ್ಲಾ ತಿಳಿಯಬೇಕಿದೆಯಷ್ಟೇ.
ಫ್ಯಾಮಿಲಿ ಜೊತೆ ಸಿಂಗಪುರ
ಇದು ಬ್ರಹ್ಮಗಂಟು ಸೀರಿಯಲ್ ಸ್ಟೋರಿ ಆದ್ರೆ, ನಿಜ ಜೀವನದಲ್ಲಿ ಸೌಂದರ್ಯ ಅರ್ಥಾತ್ ಪ್ರೀತಿ ಶ್ರೀನಿವಾಸ್ ಅವರು ರಿಯಲ್ ಲೈಫ್ ಗಂಡ ಮತ್ತು ಮಗನ ಜೊತೆ ಸಿಂಗಪುರದಲ್ಲಿ ಹಾರಿದ್ದು, ಅಲ್ಲಿಯ ಅನುಭವವನ್ನು ಈಗ ಶೇರ್ ಮಾಡಿಕೊಳ್ಳುತ್ತಿದ್ದಾರೆ.
ಬೇಸಿಗೆ ರಜೆ
ಮಗನಿಗೆ ಬೇಸಿಗೆ ರಜೆ ಇದ್ದುದರಿಂದ ಗಂಡ ಮತ್ತು ಮಗನ ಜೊತೆ ಇದೇ ಮೊದಲ ಬಾರಿಗೆ ಸಿಂಗಪುರಕ್ಕೆ ಹೋಗಿರುವುದಾಗಿ ಹೇಳಿರುವ ನಟಿ, ವರ್ಷಕ್ಕೆ ಎರಡು ಬಾರಿಯಾದರೂ ಫ್ಯಾಮಿಲಿ ಟ್ರಿಪ್ ನಾವು ಹೋಗಿಯೇ ಹೋಗ್ತೀವಿ. ಈ ಬಾರಿ ಸಿಂಗಪುರ ಆರಿಸಿಕೊಂಡಿದ್ದು, ಇದು ಮಕ್ಕಳ ಕಲಿಕೆಗೂ ತುಂಬಾ ಚೆನ್ನಾಗಿರುತ್ತೆ ಎಂದಿದ್ದಾರೆ.
ಅದ್ಭುತ ಅನುಭವ
ಸಿಂಗಪುರದಲ್ಲಿ ತಾವು ನೋಡಿದ್ದ ಸ್ಥಳಗಳ ಬಗ್ಗೆ ವಿವರಿಸಿದ ನಟಿ, ಅಲ್ಲಿ ಮರೀನಾ ಬೇ ಸ್ಯಾಂಡ್ಸ್‌ನ 57ನೇ ಫ್ಲೋರ್‌ಗೆ ಹೋಗಿದ್ವಿ. ಸಂಪೂರ್ಣ ನಗರದ ವ್ಯೂವ್ ಅದಲ್ಲಿ ಕಾಣಿಸುತ್ತದೆ. ಅದೊಂದು ಅದ್ಭುತ ಅನುಭವ. ಅಲ್ಲಿಯೇ ಇದ್ದ ಇಟಾಲಿಯನ್ ರೆಸ್ಟೋರೆಂಟ್‌ನಲ್ಲಿ ಡಿನ್ನರ್ ಮಾಡಿದ್ವಿ. ಅಲ್ಲಿಂದ ಇಡೀ ಊರು ಸುತ್ತಿದ್ವಿ ಎಂದಿದ್ದಾರೆ ಪ್ರೀತಿ.
ಕ್ಲೀನ್ ಮತ್ತು ಗ್ರೀನ್
ಸಿಂಗಪುರ ತುಂಬಾ ಕ್ಲೀನ್ ಮತ್ತು ಗ್ರೀನ್ ಆಗಿರುವುದನ್ನು ನೋಡಿ ಖುಷಿ ಆಯ್ತು. ಅಲ್ಲಿ ಜುರಾಸಿಕ್ ವರ್ಲ್ಡ್, ಗ್ರೀನ್ ಹೌಸ್, ಯುನಿವರ್ಸಲ್ ಸ್ಟುಡಿಯೋಸ್, ಸೆಂಟೋಸಾ ಐಲ್ಯಾಂಡ್, ನೈಟ್ ಸಫಾರಿ ಮತ್ತು ಓಷನ್ ಏರಿಯಂ ಹೀಗೆ ಹಲವಾರು ಸ್ಥಳಗಳನ್ನು ನೋಡಿದ್ವಿ. ಆದರೆ ತುಂಬಾ ನಡೆಯಬೇಕು, ಅದಕ್ಕಾಗಿ ತುಂಬಾ ಶಕ್ತಿನೂ ಬೇಕು ಎಂದಿದ್ದಾರೆ ನಟಿ ಪ್ರೀತಿ.
ಲಿಟ್ಲ್ ಇಂಡಿಯಾ
ಸಿಂಗಪುರದ ಸೆರಂಗೂನ್ ರಸ್ತೆಯಲ್ಲಿ ಹೋದರೆ ಭಾರತದಲ್ಲಿಯೇ ಇದ್ದ ಹಾಗೆ ಅನ್ನಿಸತ್ತೆ. ಅಲ್ಲಿ ಇಂಡಿಯನ್ಸ್ ತುಂಬಾ ಮಂದಿ ಇದ್ದಾರೆ. ಸೋ ಅದನ್ನು ಲಿಟ್ಲ್ ಇಂಡಿಯಾ ಅಂತಾನೇ ಕರೆಯೋದು ಎಂದಿರುವ ನಟಿ, ಚೈನಾಟೌನ್‌ನಿಂದ ಮತ್ತು ಕಂಪಾಂಗ್ ಗ್ಲಾಮ್‌ನ ಉತ್ತರಕ್ಕೆ ಅಡ್ಡಲಾಗಿರುವ ಈ ''ಲಿಟಲ್ ಇಂಡಿಯಾ''ದಲ್ಲಿ ಇರುವ ಬಹುತೇಕ ಭಾರತೀಯರು ಶಿಸ್ತನ್ನು ರೂಢಿಸಿಕೊಂಡಿದ್ದಾರೆ, ತುಂಬಾ ಶಿಸ್ತಿನ ಮಂದಿ ಎಂದು ಸಿಂಗಪುರದ ಅನುಭವ ಶೇರ್ ಮಾಡಿಕೊಂಡಿದ್ದಾರೆ.
ನಟಿಯ ಕುರಿತು
ಇನ್ನು ನಟಿಯ ಕುರಿತು ಹೇಳುವುದಾದರೆ, ಪ್ರೀತಿ ಶ್ರೀನಿವಾಸ್ ಅವರು, ಬ್ರಹ್ಮಗಂಟುವಿನಲ್ಲಿ ನೆಗೆಟಿವ್ ಶೇಡ್ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದಕ್ಕೂ ಮುನ್ನ ಸ್ಟಾರ್ ಸುವರ್ಣದಲ್ಲಿ ಪ್ರಸಾರವಾದ ''ವರಲಕ್ಷ್ಮಿ ಸ್ಟೋರ್ಸ್''ನಲ್ಲಿ ಕಾಣಿಸಿಕೊಂಡ ಪ್ರೀತಿ ತೆಲುಗಿನಲ್ಲಿಯೂ ಹಲವು ಸೀರಿಯಲ್ ಮಾಡಿದ್ದಾರೆ. . ಆಂಧ್ರದಲ್ಲಿ ಇವರ ''ಪದಮತಿ ಸಂಧ್ಯಾ ರಾಗ'' ತುಂಬಾ ಫೇಮಸ್ ಸೀರಿಯಲ್. ಈ ಧಾರಾವಾಹಿ ನಂತರ ಕನ್ನಡಕ್ಕೆ ''ಸಂಧ್ಯಾರಾಗ'' ಎಂಬ ಟೈಟಲ್‌ನಲ್ಲಿ ಡಬ್ ಕೂಡಾ ಆಗಿತ್ತು
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.
