Indian Railways: ರೈಲಲ್ಲಿ ಬ್ಯಾಗ್, ಫೋನ್ ಮರೆತು ಹೋಯ್ತಾ? ಈ ನಂಬರ್‌ಗೆ ಕಾಲ್ ಮಾಡಿದ್ರೆ ಸಾಕು!
ರೈಲಿನಲ್ಲಿ ಲಗೇಜ್ ಮರೆತು ಆತಂಕಪಡುತ್ತಿದ್ದೀರಾ? 'ರೈಲ್ ಮದದ್' ಆ್ಯಪ್ ಮತ್ತು 139 ಸಹಾಯವಾಣಿ ಮೂಲಕ ಕಳೆದುಹೋದ ವಸ್ತುಗಳನ್ನು ಸುಲಭವಾಗಿ ಮರಳಿ ಪಡೆಯುವುದು ಹೇಗೆ ಎಂದು ಇಲ್ಲಿ ತಿಳಿಯಿರಿ.

ಇನ್ನು ಮುಂದೆ ರೈಲಿನಲ್ಲಿ ಬ್ಯಾಗ್‌ಗಳು ಕಳೆದುಹೋದರೂ ಟೆನ್ಷನ್ ಇಲ್ಲ.. ಭಾರತೀಯ ರೈಲ್ವೆಯಿಂದ ಗುಡ್ ನ್ಯೂಸ್

ರೈಲ್ ಮದದ್ ಆ್ಯಪ್: ನಿಮ್ಮ ಲಗೇಜ್ ಹುಡುಕಿಕೊಡುವ ಡಿಜಿಟಲ್ ಫ್ರೆಂಡ್
ರೈಲಿನಲ್ಲಿ ವಸ್ತುಗಳನ್ನು ಕಳೆದುಕೊಂಡ ಪ್ರಯಾಣಿಕರಿಗಾಗಿ ಭಾರತೀಯ ರೈಲ್ವೆ 'ರೈಲ್ ಮದದ್' (Rail Madad) ಎಂಬ ಅದ್ಭುತ ವೇದಿಕೆಯನ್ನು ತಂದಿದೆ. ಇದು 24x7 ಲಭ್ಯವಿರುವ ಕೇಂದ್ರೀಕೃತ ದೂರು ವ್ಯವಸ್ಥೆ.
ರೈಲಿನಲ್ಲಿ ಮಿಸ್ ಆದ ವಸ್ತುಗಳನ್ನು ಪಡೆಯೋದು ಹೇಗೆ?
• ಮೊದಲು ನಿಮ್ಮ ಮೊಬೈಲ್‌ನಲ್ಲಿ ಪ್ಲೇ ಸ್ಟೋರ್ ಅಥವಾ ಆ್ಯಪ್ ಸ್ಟೋರ್‌ನಿಂದ 'Rail Madad' ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.
• ನಿಮ್ಮ ಹೆಸರು, ಮೊಬೈಲ್ ಸಂಖ್ಯೆ ನೀಡಿ ನೋಂದಾಯಿಸಿಕೊಂಡು, ಲಾಗಿನ್ ಆಗಿ. • ಅಲ್ಲಿ 'Grievance' ಆಯ್ಕೆಗೆ ಹೋಗಿ, ನಿಮ್ಮ ಟಿಕೆಟ್ ಮೇಲಿರುವ PNR ಸಂಖ್ಯೆಯನ್ನು ನಮೂದಿಸಿ.
• ನೀವು ಕಳೆದುಕೊಂಡ ವಸ್ತುವಿನ ವಿವರ ಅಂದರೆ ಬ್ಯಾಗ್ ಬಣ್ಣ, ಗಾತ್ರ, ಒಳಗೆ ಏನಿದೆ, ನಿಮ್ಮ ಕೋಚ್, ಸೀಟ್ ಸಂಖ್ಯೆಯಂತಹ ವಿವರಗಳನ್ನು ಸ್ಪಷ್ಟವಾಗಿ ಬರೆಯಿರಿ. ಸಾಧ್ಯವಾದರೆ ಆ ಲಗೇಜ್ ಫೋಟೋ ಅಪ್‌ಲೋಡ್ ಮಾಡಿ.
• ಸಬ್ಮಿಟ್ ಮಾಡಿದ ತಕ್ಷಣ ನಿಮಗೆ 'ಗ್ರೀವೆನ್ಸ್ ಐಡಿ' ಸಿಗುತ್ತದೆ. ಇದರ ಮೂಲಕ ನಿಮ್ಮ ದೂರಿನ ಸ್ಟೇಟಸ್ ಎಲ್ಲಿದೆ ಎಂದು ಲೈವ್ ಆಗಿ ಟ್ರ್ಯಾಕ್ ಮಾಡಬಹುದು.
ವೆಬ್‌ಸೈಟ್, ಸಹಾಯವಾಣಿಯ ಸ್ಮಾರ್ಟ್ ಆಯ್ಕೆಗಳು
ಆಪರೇಷನ್ ಅಮಾನತ್, ಆರ್‌ಪಿಎಫ್ ರಕ್ಷಣೆ
ತಕ್ಷಣದ ಸ್ಪಂದನೆ; ಅರ್ಧ ಟೆನ್ಷನ್ ಖಾಲಿ!
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

