MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • Travel
  • ತುಮಕೂರು-ಯಶವಂತಪುರ ಮೆಮು ರೈಲು ಸಮಯ ಬದಲಾವಣೆ ಸಾಧ್ಯತೆ: KSRಗೆ ವಿಸ್ತರಣೆ ಆಗುತ್ತಾ?

ತುಮಕೂರು-ಯಶವಂತಪುರ ಮೆಮು ರೈಲು ಸಮಯ ಬದಲಾವಣೆ ಸಾಧ್ಯತೆ: KSRಗೆ ವಿಸ್ತರಣೆ ಆಗುತ್ತಾ?

ಉದ್ಯೋಗಿಗಳಿಗೆ ಅನುಕೂಲವಾಗಲು ತುಮಕೂರು-ಯಶವಂತಪುರ ಮೆಮು ರೈಲಿನ ಸಮಯವನ್ನು ಬದಲಾಯಿಸುವಂತೆ ಮಾಡಿದ ಮನವಿಗೆ ನೈಋತ್ಯ ರೈಲ್ವೆ ಸಕಾರಾತ್ಮಕವಾಗಿ ಸ್ಪಂದಿಸಿದೆ. ಸಮಯ ಬದಲಾವಣೆ, ಹೊಸ ನಿಲುಗಡೆ ಹಾಗೂ ಮತ್ತೊಂದು ರೈಲಿನ ವೇಳಾಪಟ್ಟಿ ಪರಿಶೀಲಿಸುವ ಭರವಸೆಯನ್ನು ಅಧಿಕಾರಿಗಳು ನೀಡಿದ್ದಾರೆ.

2 Min read
Author : Kannadaprabha News
Published : May 21 2026, 02:10 PM IST
Share this Photo Gallery
  • FB
  • TW
  • Linkdin
  • Whatsapp
15
ತುಮಕೂರು ಯಶವಂತಪುರ ಮೆಮು ರೈಲು
Image Credit : x

ತುಮಕೂರು-ಯಶವಂತಪುರ ಮೆಮು ರೈಲು

ಉದ್ಯೋಗಿ ಪ್ರಯಾಣಿಕರು ಮೆಜೆಸ್ಟಿಕ್ ತಲುಪಲು ಅನುಕೂಲವಾಗುಬಂತೆ ನಗರದಿಂದ ಬೆಳಗ್ಗೆ 8 ‌ಕ್ಕೆ ಹೊರಡುವ ತುಮಕೂರು-ಯಶವಂತಪುರ ಮೆಮು ರೈಲು ಹೊರಡುವ ಸಮಯವನ್ನು ಬೆಳಗ್ಗೆ 7.45 ಕ್ಕೆ ಬದಲಾಯಿಸುವ ಸಾಧ್ಯತೆಗಳ ಬಗ್ಗೆ ಪರಿಶೀಲಿಸಲಾಗುವುದು ಎಂದು ನೈಋತ್ಯ ರೈಲ್ವೆ ಬೆಂಗಳೂರು ವಿಭಾಗದ ಪ್ರಧಾನ ವ್ಯವಸ್ಥಾಪಕ ಅಶುತೋಶ್ ಕೆ.‌ಸಿಂಗ್ ಭರವಸೆ ನೀಡಿದರು.

ಬುಧವಾರ ಬೆಂಗಳೂರಿನಲ್ಲಿ ನಡೆದ ನೈಋತ್ಯ ರೈಲ್ವೆ ವಲಯದ ಬೆಂಗಳೂರು ವಿಭಾಗದ ರೈಲು ಪ್ರಯಾಣಿಕರ ಸಲಹಾ ಸಮಿತಿ ಸಭೆಯಲ್ಲಿ ಸಮಿತಿ ಸದಸ್ಯ ಹಾಗೂ ತುಮಕೂರು ಜಿಲ್ಲಾ ರೈಲ್ವೆ ಪ್ರಯಾಣಿಕರ‌ ವೇದಿಕೆ ಅಧ್ಯಕ್ಷ ಕರಣಂ ರಮೇಶ್ ಅವರ ಮನವಿಗೆ ಸ್ಪಂದಿಸಿ ಮಾತನಾಡಿದರು.

Add Asianetnews Kannada as a Preferred SourcegooglePreferred
25
ಉದ್ಯೋಗಿ ಪ್ರಯಾಣಿಕರಿಗೆ ತೊಂದರೆ
Image Credit : x

ಉದ್ಯೋಗಿ ಪ್ರಯಾಣಿಕರಿಗೆ ತೊಂದರೆ

ಉದ್ಯೋಗಿ ಪ್ರಯಾಣಿಕರಿಗಾಗಿಯೇ ಆರಂಭಿಸಿದ ಸದರಿ ಮೆಮು ರೈಲು ಆರಂಭದಿಂದಲೂ ಕೆಎಸ್ಆರ್ ವರೆಗೆ ಸಾಗುತ್ತಿತ್ತು. ಆದರೆ ಶಿವಮೊಗ್ಗ ಜನಶತಾಬ್ಧಿ ರೈಲಿಗೆ ದಾರಿ ಮಾಡಿಕೊಡಲು‌ ಮೆಮು ರೈಲನ್ನು ಯಶವಂತಪುರಕ್ಕೆ ಸೀಮಿತಗೊಳಿಸಲಾಯಿತು. ಇದರಿಂದ ಸಾವಿರಕ್ಕೂ ಹೆಚ್ಚು ಉದ್ಯೋಗಿ ಪ್ರಯಾಣಿಕರಿಗೆ ತೊಂದರೆಯಾಗಿದೆ. ಆರ್ಥಿಕವಾಗಿಯೂ ಹೊರೆಯಾಗುತ್ತಿದೆ. 

ವಿಳಂಬದಿಂದ ಹಲವರು ಉದ್ಯೋಗ ಕಳೆದುಕೊಳ್ಳುವಂತಾಗಿದೆ ಎಂದು ಪ್ರಯಾಣಿಕರ ಸಮಸ್ಯೆಯನ್ನು ವಿವರಿಸಿ ಮೆಮು ರೈಲನ್ನು ಕೆಎಸ್ಆರ್ ವರೆಗೆ ವಿಸ್ತರಿಸಬೇಕೆಂದು ಮನವಿ ಮಾಡಿದರು.

Related Articles

Related image1
ಯಶವಂತಪುರ -ವಿಜಯಪುರ-ಸಿಂಧನೂರು ​ರೈಲಿಗೆ ಜರ್ಮನ್ ತಂತ್ರಜ್ಞಾನ ; ಈಗ ಮತ್ತಷ್ಟು ಆರಾಮದಾಯಕ ಪ್ರಯಾಣ
Related image2
ಯಶವಂತಪುರ-ಗದಗ ಬೈಪಾಸ್-ವಿಜಯಪುರ ರೈಲಿಗೆ ವಿರೋಧ; 500 ರೂಪಾಯಿ ಯಾರ್ ಕೊಡ್ತಾರೆ ಸ್ವಾಮಿ?
35
 ಮೆಮು ವಿಸ್ತರಣೆ
Image Credit : x

ಮೆಮು ವಿಸ್ತರಣೆ

ಇದಕ್ಕೆ ಉತ್ತರಿಸಿದ ಡಿ ಆರ್ ಎಂ, ಕೆಎಸ್ಆರ್ ನಲ್ಲಿ ಪ್ಲಾಟ್ ಫಾರಂಗಳ ತೀವ್ರ ತೊಂದರೆ‌ಯಿದ್ದು ಮೆಮು ವಿಸ್ತರಣೆ ಸಾಧ್ಯವಿಲ್ಲ ಎಂದರಲ್ಲದೆ, ನಿಮ್ಮ ಸಲಹೆಯಂತೆ ಸಮಯ ಬದಲಾವಣೆ ಮಾಡಿ ಯಶವಂತಪುರದಲ್ಲಿ ಕೋಲಾರ-ಬೆಂಗಳೂರು ರೈಲಿಗೆ ಸಂಪರ್ಕ ಕಲ್ಪಿಸುವ ಬಗ್ಗೆ ಸಕಾರಾತ್ಮಕವಾಗಿ ಪರಿಶೀಲಿಸಿ ಸೂಕ್ತ ಕ್ರ‌ಮ ಕೈಗೊಳ್ಳಲಾಗುವುದು ಎಂದರು.

ಬೆಂಗಳೂರು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಿಲ್ದಾಣದಲ್ಲಿ ಪ್ಲಾಟ್ ಫಾರಂಗಳ ಕೊರತೆ ಹಿನ್ನಲೆಯಲ್ಲಿ ಸದರಿ ನಿಲ್ದಾಣವನ್ನು ಪಾಸಿಂಗ್ ಥ್ರೂ ನಿಲ್ದಾಣವನ್ನಾಗಿಸಿದರೆ‌ ಹೆಚ್ಚು ರೈಲುಗಳನ್ನು ಬೆಂಗಳೂರಿನವರೆಗೆ ವಿಸ್ತರಿಸಬಹುದಾಗಿದೆ. ಈ ಬಗ್ಗೆ ಗಮನ ಹರಿಸಬೇಕೆಂದು‌ ಕರಣಂ ರಮೇಶ್ ಸಲಹೆ ನೀಡಿದರು

45
 ಮೆಮು ರೈಲು
Image Credit : x

ಮೆಮು ರೈಲು

ಯಶವಂತಪುರ ತುಮಕೂರು ನಡುವೆ ಸಂಚರಿಸುವ ಮೆಮು ರೈಲುಗಳಿಗೆ ಭೈರನಾಯಕನಹಳ್ಳಿ, ಮುದ್ದಲಿಂಗನಗಳ್ಳಿ, ನಿಡುವಂದ ನಿಲ್ದಾಣಗಳಲ್ಲಿ ನಿಲುಗಡೆ ಕಲ್ಪಿಸಬೇಕೆಂಬ ಮನವಿಗೆ ಉತ್ತರಿಸಿದ ಡಿ ಆರ್ ಎಂ, ಎಲ್ಲ ಮೆಮು ರೈಲುಗಳಿಗೆ ಎಲ್ಲ‌ ನಿಲ್ದಾಣಗಳಲ್ಲಿ ನಿಲುಗಡೆ ಕಲ್ಪಿಸಲು ಸಾಧ್ಯವಾಗದು. ಅದರೆ ಮುದ್ದನಾಯಕನಹಳ್ಳಿಯಲ್ಲಿ ನಿಲುಗಡೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

55
ಚಾಮರಾಜನಗರ ತುಮಕೂರಿಗೆ ಬರುವ ರೈಲು ಸಂಚಾರ
Image Credit : x

ಚಾಮರಾಜನಗರ ತುಮಕೂರಿಗೆ ಬರುವ ರೈಲು ಸಂಚಾರ

ಚಾಮರಾಜನಗರ ತುಮಕೂರಿಗೆ ಬರುವ ರೈಲು ಸಂಚಾರವನ್ನು ಮಧ್ಯಾಹ್ನಕ್ಕೆ ಬದಲಾಗಿ ಸಂಜೆ 4.30 ಕ್ಕೆ ಬೆಂಗಳೂರಿನಿಂದ ಹೊರಡುವಂತೆ ಮಾಡಬೇಕು. ಇದರಿಂದ ಬೆಂಗಳೂರಿನಿಂದ ಶಿವಮೊಗ್ಗಕ್ಕೆ ನೇರ ರೈಲು ಸಂಪರ್ಕ ಕಲ್ಪಿಸಿದಂತಾಗುತ್ತದೆ. ಅಲ್ಲದೆ, ವಿದ್ಯಾರ್ಥಿಗಳು, ಉದ್ಯೋಗಿಗಳು, ಶಿಕ್ಷಕರು ಮತ್ತು ಉಪನ್ಯಾಸಕರು ಹಾಗೂವ ಸರ್ವಂಜನಿಕರಿಗೆ ಹೆಚ್ಚು ಅನುಕೂಲವಾಗಲಿದೆ ಎಂದು ಕರಣಂ ರಮೇಶ್ ಮಾಡಿದ ಮನವಿಗೆ ಉತ್ತರಿಸಿದ ಡಿ ಆರ್ ಎಂ ಅಶುತೋಷ್ ಕೆ.‌ ಸಿಂಗ್ ಅವರು ಓ ಬಗ್ಗೆ ಪರಿಶೀಲಿಸಿ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

KN
Kannadaprabha News
1967ರ ನವೆಂಬರ್ 4ರಂದು ಆರಂಭವಾದ ಕನ್ನಡಪ್ರಭ ಕನ್ನಡ ಪತ್ರಿಕೋದ್ಯಮದಲ್ಲಿಯೇ ವಿಶೇಷ ಛಾಪು ಮೂಡಿಸಿದ ಕನ್ನಡ ದಿನ ಪತ್ರಿಕೆ. ದೇಶ, ವಿದೇಶ, ವಾಣಿಜ್ಯ, ಕ್ರೀಡೆ, ಮನೋರಂಜನೆ ಸೇರಿ ವೈವಿಧ್ಯಮಯ ಸುದ್ದಿಗಳ ಹೂರಣ ಹೊತ್ತು ತರುವ ಕನ್ನಡಪ್ರಭ, ಕನ್ನಡಿಗರ ಅಸ್ಮಿತೆಯ ಸಂಕೇತ. ಸದಾ ಕರುನಾಡು, ನುಡಿ, ಸಂಸ್ಕೃತಿ ಪರ ಧ್ವನಿ ಎತ್ತುವ ಕನ್ನಡಪ್ರಭ ದಿನ ಪತ್ರಿಕೆಯಲ್ಲಿ ಪ್ರಕಟಗೊಳ್ಳುವ ಸುದ್ದಿಗಳು ಸುವರ್ಣ ನ್ಯೂಸ್ ವೆಬ್‌ಸೈಟಲ್ಲೂ ಲಭ್ಯ.
ಭಾರತೀಯ ರೈಲ್ವೆ
ತುಮಕೂರು
ಯಶವಂತಪುರ
ಬೆಂಗಳೂರು

Latest Videos
Recommended Stories
Recommended image1
ಮನೆ ಮುಂದೆಯೇ ಟ್ರೈನ್ ಪಾರ್ಕಿಂಗ್! ದೇಶದಲ್ಲೇ ಸ್ವಂತ ರೈಲ್ವೆ ಸ್ಟೇಷನ್ ಹೊಂದಿದ್ದ ಏಕೈಕ ವ್ಯಕ್ತಿ ಈತ!
Recommended image2
ವಡೋದರಾ-ದಿಲ್ಲಿ ಇಂಡಿಗೋದಲ್ಲಿ ಏಕಾಏಕಿ ವಿದ್ಯುತ್‌ ವ್ಯತ್ಯಯ, 25 ನಿಮಿಷ ಪರದಾಡಿದ ಪ್ರಯಾಣಿಕರು
Recommended image3
Bengaluru: ವಿಜಯಪುರದಿಂದ ಮೆಜೆಸ್ಟಿಕ್‌ಗೆ ಬಿಎಂಟಿಸಿ ವೇಗದೂತ ವಾಯುವಜ್ರ ಬಸ್ ಸಂಚಾರ ಆರಂಭ
Related Stories
Recommended image1
ಯಶವಂತಪುರ -ವಿಜಯಪುರ-ಸಿಂಧನೂರು ​ರೈಲಿಗೆ ಜರ್ಮನ್ ತಂತ್ರಜ್ಞಾನ ; ಈಗ ಮತ್ತಷ್ಟು ಆರಾಮದಾಯಕ ಪ್ರಯಾಣ
Recommended image2
ಯಶವಂತಪುರ-ಗದಗ ಬೈಪಾಸ್-ವಿಜಯಪುರ ರೈಲಿಗೆ ವಿರೋಧ; 500 ರೂಪಾಯಿ ಯಾರ್ ಕೊಡ್ತಾರೆ ಸ್ವಾಮಿ?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved