ಮನೆ ಮುಂದೆಯೇ ಟ್ರೈನ್ ಪಾರ್ಕಿಂಗ್! ದೇಶದಲ್ಲೇ ಸ್ವಂತ ರೈಲ್ವೆ ಸ್ಟೇಷನ್ ಹೊಂದಿದ್ದ ಏಕೈಕ ವ್ಯಕ್ತಿ ಈತ!
ಐಷಾರಾಮಿ ಪ್ರಯಾಣಕ್ಕಾಗಿ ಕಾರು, ಬಸ್ಸು ಖರೀದಿಸುವುದನ್ನು ನೋಡಿದ್ದೇವೆ. ಇನ್ನೂ ಶ್ರೀಮಂತರಾದರೆ ಪ್ರೈವೇಟ್ ಜೆಟ್ ಖರೀದಿಸುತ್ತಾರೆ. ಆದರೆ, ಸ್ವಂತ ರೈಲು, ಅದನ್ನು ಪಾರ್ಕ್ ಮಾಡಲು ಮನೆಯಲ್ಲೇ ರೈಲ್ವೆ ನಿಲ್ದಾಣ ಹೊಂದಿದ್ದ ವ್ಯಕ್ತಿಯ ಬಗ್ಗೆ ನಿಮಗೆ ಗೊತ್ತಾ?

ಶ್ರೀಮಂತರ ಕಾರು-ಹೆಲಿಕಾಪ್ಟನ್ ಕಲೆಕ್ಷನ್ ಸಾಮಾನ್ಯ
ಶ್ರೀಮಂತರು ತಮ್ಮ ಅರಮನೆಯಂತಹ ಮನೆಯ ಮುಂದೆ ರೋಲ್ಸ್ ರಾಯ್ಸ್, ಟೆಸ್ಲಾ, ಬಿಎಂಡಬ್ಲ್ಯು ಮುಂತಾದ ದುಬಾರಿ ಕಾರುಗಳನ್ನು ನಿಲ್ಲಿಸಲು ಇಷ್ಟಪಡುತ್ತಾರೆ. ಐಷಾರಾಮಿ ಕಾರುಗಳಲ್ಲಿ ಪ್ರಯಾಣಿಸುವುದು ಮಾತ್ರವಲ್ಲ, ಅದನ್ನು ಮನೆಯ ಮುಂದೆ ನಿಲ್ಲಿಸುವುದನ್ನೂ ಅವರು ಪ್ರತಿಷ್ಠೆಯ ಸಂಕೇತವೆಂದು ಭಾವಿಸುತ್ತಾರೆ. ಕೋಟ್ಯಂತರ ರೂಪಾಯಿ ಮೌಲ್ಯದ ಇಂತಹ ಹತ್ತಾರು ಕಾರುಗಳನ್ನು ಹೊಂದಿರುವ ಸೆಲೆಬ್ರಿಟಿಗಳು ಮತ್ತು ದೊಡ್ಡ ಉದ್ಯಮಿಗಳು ಅನೇಕರಿದ್ದಾರೆ. ಅಷ್ಟೇ ಏಕೆ, ಐಷಾರಾಮಿ ಬಸ್ಸುಗಳು (ಕ್ಯಾರವಾನ್‌ಗಳು) ಮತ್ತು ಖಾಸಗಿ ಜೆಟ್‌ಗಳನ್ನು ಹೊಂದಿರುವ ಶ್ರೀಮಂತರೂ ಇದ್ದಾರೆ.

ಮನೆ ಮುಂದೆಯೇ ಐಷಾರಾಮಿ ಟ್ರೈನ್ ಪಾರ್ಕಿಂಗ್!
ಆದರೆ, ಆ ಕಾಲದಲ್ಲೇ ಒಬ್ಬ ಭಾರತೀಯ ನವಾಬ, ತನಗಾಗಿ ಒಂದು ಐಷಾರಾಮಿ ರೈಲನ್ನು ನಿರ್ವಹಿಸುತ್ತಿದ್ದ. ಅಷ್ಟೇ ಅಲ್ಲ, ಆ ರೈಲು ನೇರವಾಗಿ ತನ್ನ ಅರಮನೆಯ ಬಳಿ ನಿಲ್ಲುವಂತೆ ಮಾಡಲು ಸ್ವಂತ ರೈಲ್ವೆ ನಿಲ್ದಾಣವನ್ನೇ ನಿರ್ಮಿಸಿದ್ದ. ಹೀಗೆ ಭಾರತದಲ್ಲಿ ಸ್ವಂತ ರೈಲು ಮತ್ತು ಅದನ್ನು ನಿಲ್ಲಿಸಲು ಮನೆಯ ಬಳಿಯೇ ರೈಲ್ವೆ ನಿಲ್ದಾಣವನ್ನು ನಿರ್ಮಿಸಿಕೊಂಡಿದ್ದ ಆ ಏಕೈಕ ವ್ಯಕ್ತಿಯ ಬಗ್ಗೆ ಇಲ್ಲಿ ತಿಳಿಯೋಣ.
ಖಾಸಗಿ ರೈಲ್ವೆ ನಿಲ್ದಾಣ
ನವಾಬ್ ಫೈಜ್ ಉಲ್ಲಾ ಖಾನ್ ಅವರು 1774ರಲ್ಲಿ ಉತ್ತರ ಪ್ರದೇಶದ ರಾಂಪುರ ಸಂಸ್ಥಾನವನ್ನು ಸ್ಥಾಪಿಸಿದರು. ಬ್ರಿಟಿಷರ ಆಳ್ವಿಕೆಯಲ್ಲೂ ಈ ಸಂಸ್ಥಾನವು ಸ್ವತಂತ್ರವಾಗಿತ್ತು ಮತ್ತು ತನ್ನ ಶ್ರೀಮಂತ ಸಂಸ್ಕೃತಿ ಹಾಗೂ ಸಾಹಿತ್ಯಿಕ ವೈಭವಕ್ಕೆ ಹೆಸರುವಾಸಿಯಾಗಿತ್ತು. ಹೈದರಾಬಾದ್ ನಿಜಾಮರಂತೆಯೇ, ಈ ಸಂಸ್ಥಾನವನ್ನು ಆಳಿದ ನವಾಬರು ಕೂಡ ಅಪಾರ ಸಿರಿ ಸಂಪತ್ತನ್ನು ಹೊಂದಿದ್ದರು. ಅವರು ಅತ್ಯಂತ ವಿಲಾಸಿ ಜೀವನವನ್ನು ನಡೆಸುತ್ತಿದ್ದರು.
ಒಂಬತ್ತನೇ ನವಾಬ ಹಮೀದ್ ಅಲಿ ಖಾನ್
ಈ ರಾಂಪುರ ಸಂಸ್ಥಾನವನ್ನು ಆಳಿದ ಒಂಬತ್ತನೇ ನವಾಬ ಹಮೀದ್ ಅಲಿ ಖಾನ್ ಅವರ ಜೀವನವು ಐಷಾರಾಮಕ್ಕೆ ಮತ್ತೊಂದು ಹೆಸರಾಗಿತ್ತು. ಅವರು ಬ್ರಿಟಿಷರ ಸಹಾಯದಿಂದ ತಮ್ಮದೇ ಆದ ರೈಲ್ವೆ ನಿಲ್ದಾಣವನ್ನು ನಿರ್ಮಿಸಿಕೊಂಡರು. ಇದನ್ನು ಮುಖ್ಯ ರೈಲ್ವೆ ನಿಲ್ದಾಣಕ್ಕೆ ಸಂಪರ್ಕಿಸಲು, ತಮ್ಮ ಸ್ವಂತ ಹಣದಿಂದ 40 ಕಿಲೋಮೀಟರ್ ಉದ್ದದ ರೈಲ್ವೆ ಮಾರ್ಗವನ್ನು ಹಾಕಿಸಿದರು. ಅವರ ಅರಮನೆಯ ಬಳಿಯ ರೈಲ್ವೆ ನಿಲ್ದಾಣದಲ್ಲಿ ಯಾವಾಗಲೂ ಒಂದು ಐಷಾರಾಮಿ ರೈಲು ಸಿದ್ಧವಾಗಿರುತ್ತಿತ್ತು. ಈ ರೈಲ್ವೆ ನಿಲ್ದಾಣದ ನಿರ್ಮಾಣಕ್ಕಾಗಿಯೇ ನವಾಬ ಹಮೀದ್ ಅಲಿ ಖಾನ್ ಅಂದಿನ ಕಾಲದಲ್ಲಿ ಬರೋಬ್ಬರಿ 113 ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದ್ದರಂತೆ. ಅಂದರೆ, ಇಂದಿನ ಮೌಲ್ಯದಲ್ಲಿ ಇದು ಸಾವಿರಾರು ಕೋಟಿ ರೂಪಾಯಿ ಆಗುತ್ತದೆ. ಹೀಗೆ, ದೇಶದಲ್ಲಿ ಸ್ವಂತ ರೈಲ್ವೆ ನಿಲ್ದಾಣವನ್ನು ಹೊಂದಿದ್ದ ಏಕೈಕ ವ್ಯಕ್ತಿ ಈ ಹಮೀದ್ ಅಲಿ ಖಾನ್.
ಚಲಿಸುವ ಅರಮನೆ - ದಿ ಸಲೂನ್ ಟ್ರೈನ್
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

