World Ocean Day 2022: ಈ ದಿನವು ಯಾಕೆ ಆಚರಿಸಲಾಗುತ್ತೆ ತಿಳಿಯಿರಿ
World Ocean Day 2022: ನಮ್ಮ ಪರಿಸರ ಸಮತೋಲನದಲ್ಲಿರಲು ಸಾಗರಗಳು ಪ್ರಮುಖ ಪಾತ್ರ ವಹಿಸುತ್ತವೆ. ಅಲ್ಲದೇ ಜೀವಿಗಳಿಗೆ ನೆಲೆಯನ್ನು ಸಹ ನೀಡುತ್ತೆ. ಭೂಮಿಯ ಮೂರನೇ ಎರಡರಷ್ಟು ಭಾಗವು ಸಾಗರಗಳಿಂದ ಆವೃತವಾಗಿದೆ. ಸಾಗರಗಳು ಇದ್ದರೇನೆ ಭೂಮಿಯಲ್ಲಿ ನಾವು ನೆಲೆಸಲು ಸಾಧ್ಯವಾಗಿದೆ. ಹಾಗಾಗಿ ಸಾಗರಗಳಿಗೆ ವಿಶೇಷ ಸ್ಥಾನ ಮಾನ ನೀಡದೇ ಇದ್ದರೆ ಹೇಗೆ? ಸಾಗರದ ಅಗಾಧ ಪ್ರಾಮುಖ್ಯತೆಯಿಂದಾಗಿ ಜೂನ್ 8 ರಂದು ವಿಶ್ವ ಸಾಗರ ದಿನ ಆಚರಿಸಲಾಗುತ್ತೆ. ಇದರ ಪ್ರಮುಖ ಉದ್ದೇಶವೆಂದರೆ ಜನರಿಗೆ ಸಾಗರಗಳ ರಕ್ಷಣೆಯ ಬಗ್ಗೆ ಅರಿವು ಮೂಡಿಸುವುದು.
ಮಾನವ ಜೀವನದಲ್ಲಿ ಸಾಗರಗಳ ಪ್ರಮುಖ ಪಾತ್ರ ಏನು? ಮತ್ತು ಅವುಗಳ ಸಂರಕ್ಷಣೆ ಯಾಕೆ ಅಗತ್ಯ ಎನ್ನುವ ಬಗ್ಗೆ ಜಾಗತಿಕ ಜಾಗೃತಿ ಮೂಡಿಸಲು ಪ್ರತಿ ವರ್ಷ ಜೂನ್ 8 ರಂದು ವಿಶ್ವ ಸಾಗರ ದಿನವನ್ನು(Ocean day) ಆಚರಿಸಲಾಗುತ್ತದೆ. ಸಾಗರಗಳು ಆಹಾರ ಮತ್ತು ಔಷಧಗಳ ಪ್ರಮುಖ ಮೂಲ ಮತ್ತು ಜೀವಗೋಳದ ಅತ್ಯಂತ ಪ್ರಮುಖ ಭಾಗವಾಗಿದೆ, ಆದ್ದರಿಂದ ಅವುಗಳ ಸಂರಕ್ಷಣೆ ತುಂಬಾನೆ ಮುಖ್ಯ.
ಜಗತ್ತಿನಲ್ಲಿ ಅಭಿವೃದ್ಧಿಯ ವೇಗ ಹೆಚ್ಚಾದಂತೆ, ಸಾಗರಗಳ ಮಾಲಿನ್ಯದ (Pollution)ವೇಗವೂ ಅದೇ ವೇಗದಲ್ಲಿ ಹೆಚ್ಚಾಗುತ್ತಿದೆ. ವಿದ್ಯಾವಂತ ಜನರೇ ಹೆಚ್ಚಾಗಿ ಸಾಗರಗಳ ಮಾಲಿನ್ಯಕ್ಕೆ ಕಾರಣರಾಗುತ್ತಿದ್ದಾರೆ. ಇದನ್ನು ತಡೆಗಟ್ಟಲು, 1992 ರಲ್ಲಿ ರಿಯೊ ಡಿ ಜನೈರೊದಲ್ಲಿ ನಡೆದ 'ಪ್ಲಾನೆಟ್ ಅರ್ಥ್' ವೇದಿಕೆಯಲ್ಲಿ ಪ್ರತಿ ವರ್ಷ ವಿಶ್ವ ಸಾಗರ ದಿನವನ್ನು ಆಚರಿಸಲು ನಿರ್ಧರಿಸಲಾಯಿತು.
ನಂತರ ಕೆನಡಾದ ಅಂತರರಾಷ್ಟ್ರೀಯ ಸಾಗರ ಅಭಿವೃದ್ಧಿ ಕೇಂದ್ರ ಮತ್ತು ಓಶಿಯನ್ ಇನ್ಸ್ಟಿಟ್ಯೂಟ್ ಆಫ್ ಕೆನಡಾ ಭೂ ಶೃಂಗಸಭೆಯಲ್ಲಿ ಪ್ರಸ್ತಾಪಿಸಲಾಯಿತು. ಸಾಗರಗಳ ಮೇಲೆ ಮಾನವ ಚಟುವಟಿಕೆಗಳಿಂದ ಉಂಟಾಗುವ ಪರಿಣಾಮಗಳ ಬಗ್ಗೆ ಜನರಿಗೆ (People)ತಿಳಿಸುವುದು, ಸಾಗರಗಳ ಅಭಿವೃದ್ಧಿಗಾಗಿ ವಿಶ್ವಾದ್ಯಂತ ಕಾರ್ಯಕ್ರಮಗಳನ್ನು ನಡೆಸುವುದು ಮತ್ತು ದೇಶಾದ್ಯಂತದ ಸಾಗರಗಳ ನಿರ್ವಹಣೆಗಾಗಿ ಯೋಜನೆ ರೂಪಿಸುವುದು ಇದರ ಉದ್ದೇಶವಾಗಿತ್ತು.
ಪ್ರಪಂಚದ ವಿವಿಧೆಡೆ ಸಾಗರ ರಕ್ಷಣೆಯ ಕುರಿತು ನಡೆಯುತ್ತಿರುವ ಕಾರ್ಯಕ್ರಗಳನ್ನು ವಿಶ್ವಸಂಸ್ಥೆಯು 2008 ರಲ್ಲಿ ಅಧಿಕೃತವಾಗಿ ಗುರುತಿಸಿತು, ನಂತರ ಪ್ರತಿ ವರ್ಷ ಜೂನ್ 8 ರಂದು(June 8) ದಿ ಓಷನ್ ಪ್ರಾಜೆಕ್ಟ್ ಮತ್ತು ವರ್ಲ್ಡ್ ಓಷನ್ ನೆಟ್ವರ್ಕ್ ಸಹಯೋಗದೊಂದಿಗೆ ಈ ದಿನವನ್ನು ಅಂತರರಾಷ್ಟ್ರೀಯವಾಗಿ ಆಚರಿಸಲಾಯಿತು.
ವಿಶ್ವ ಸಾಗರ ದಿನದ ಉದ್ದೇಶ
ಜೀವವೈವಿಧ್ಯತೆ, ಆಹಾರ ಭದ್ರತೆ, ಪರಿಸರ ಸಮತೋಲನ, ಹವಾಮಾನ(Temperature) ಬದಲಾವಣೆ, ಸಮುದ್ರ ಸಂಪನ್ಮೂಲಗಳ ವಿವೇಚನಾರಹಿತ ಬಳಕೆ ಇತ್ಯಾದಿಗಳ ವಿಷಯಗಳನ್ನು ಎತ್ತಿ ತೋರಿಸುವುದು ಮತ್ತು ಸಾಗರಗಳು ಒಡ್ಡುವ ಸವಾಲುಗಳ ಬಗ್ಗೆ ಜಗತ್ತಿನಲ್ಲಿ ಜಾಗೃತಿ ಮೂಡಿಸುವುದು ಈ ದಿನವನ್ನು ಆಚರಿಸುವ ಮುಖ್ಯ ಉದ್ದೇಶವಾಗಿದೆ.
ಸಮುದ್ರಗಳು ಭೂಮಿಯ(Earth) ಮೇಲೆ ಮತ್ತು ನಮ್ಮ ಜೀವನದಲ್ಲಿ ಪ್ರಮುಖ ಸ್ಥಾನವನ್ನು ಹೊಂದಿವೆ, ಆದರೆ ಇನ್ನೂ ಸಹ ಜನ ಸಾಗರಗಳ ಸಂರಕ್ಷಣೆಯ ಬಗ್ಗೆ ಯಾವುದೇ ವಿಶೇಷ ಗಮನವನ್ನು ಹರಿಸುತ್ತಿಲ್ಲ, ಅನ್ನೋದು ಬೇಸರದ ವಿಷಯವಾಗಿದೆ. ಸಾಗರವನ್ನು ಸಂರಕ್ಷಿಸುವ ಬದಲು, ನಾವು ಅದನ್ನು ಕಲುಷಿತಗೊಳಿಸುವಲ್ಲಿ ನಿರತರಾಗಿದ್ದೇವೆ. ಹೆಚ್ಚುತ್ತಿರುವ ಮಾನವ ಚಟುವಟಿಕೆಗಳಿಂದಾಗಿ ಪ್ರಪಂಚದಾದ್ಯಂತದ ಸಾಗರಗಳು ಕಲುಷಿತಗೊಳ್ಳುತ್ತಿವೆ.
ವಿಶ್ವ ಸಾಗರ ದಿನ 2022 ರ ಥೀಮ್
ಈ ವಿಶ್ವ ಸಾಗರ ದಿನವನ್ನು ಪ್ರತಿ ವರ್ಷ ಒಂದು ಥೀಮ್ ನೊಂದಿಗೆ ಆಚರಿಸಲಾಗುತ್ತದೆ, ಆದ್ದರಿಂದ ಈ ವರ್ಷದ ವಿಶ್ವ ಸಾಗರ ದಿನದ ಥೀಮ್ - ಪುನರುಜ್ಜೀವನ: ಸಾಗರಕ್ಕಾಗಿ ಸಾಮೂಹಿಕ ಕ್ರಿಯೆ (Revitalization: Collective Action for the Ocean.)