Asianet Suvarna News Asianet Suvarna News

ಸಮುದ್ರದಲ್ಲಿ ಕಂದನಿಗೆ ಜನ್ಮ ನೀಡಿದ ತಾಯಿ : ವಿಡಿಯೋ ವೈರಲ್

ತಾಯಿಯೊಬ್ಬಳು ಮಗುವಿಗೆ ಸಾಗರದ ನಡುವೆ ಜನ್ಮ ನೀಡಿದ್ದಾಳೆ. ಈಕೆ ಮಗುವಿಗೆ ಸಹಜವಾಗಿ ಜನ್ಮ ನೀಡುತ್ತಿರುವ ಭಾವುಕ ಕ್ಷಣದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಲ್ಲದೇ ಈಕೆ ಗರ್ಭಾವಸ್ಥೆಯ ಉದ್ದಕ್ಕೂ ಯಾವುದೇ ಸ್ಕ್ಯಾನಿಂಗ್‌ ತಪಾಸಣೆ ನಡೆಸಿರಲಿಲ್ಲ. 

Mother gives birth to son in Pacific Ocean akb
Author
Bangalore, First Published Jun 5, 2022, 10:18 AM IST

ತಾಯಿಯೊಬ್ಬಳು ಮಗುವಿಗೆ ಸಾಗರದ ನಡುವೆ ಜನ್ಮ ನೀಡಿದ್ದಾಳೆ. ಈಕೆ ಮಗುವಿಗೆ ಸಹಜವಾಗಿ ಜನ್ಮ ನೀಡುತ್ತಿರುವ ಭಾವುಕ ಕ್ಷಣದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಲ್ಲದೇ ಈಕೆ ಗರ್ಭಾವಸ್ಥೆಯ ಉದ್ದಕ್ಕೂ ಯಾವುದೇ ಸ್ಕ್ಯಾನಿಂಗ್‌ ತಪಾಸಣೆ ನಡೆಸಿರಲಿಲ್ಲ. 

ಇತ್ತೀಚೆಗೆ ದಿನಗಳಲ್ಲಿ ಗರ್ಭಿಣಿ ಎಂದು ಗೊತ್ತಾದ ಕ್ಷಣದಿಂದಲೇ ಅನೇಕ ಆರೋಗ್ಯ ತಪಾಸಣೆಗಳು ಇಂಜೆಕ್ಷನ್‌ಗಳು, ಪ್ರತಿ ತಿಂಗಳು ಸ್ಕ್ಯಾನಿಂಗ್ ಸೇರಿದಂತೆ ಗರ್ಭವಸ್ಥೆಯ ಆರಂಭದಿಂದಲೂ ತೀವ್ರವಾದ ಆರೋಗ್ಯ ಕಾಳಜಿಯನ್ನು ಚೊಚ್ಚಲ ತಾಯಿಗೆ ಮಾಡಲಾಗುತ್ತದೆ. ಆದರೆ ಈಕೆ ಮಾತ್ರ ಗರ್ಭಾವಸ್ಥೆಯ ಸಮಯದಲ್ಲಿ ಒಮ್ಮೆಯೂ ಕೂಡ ಸ್ಕ್ಯಾನಿಂಗ್ ಮಾಡದೇ ಆರೋಗ್ಯಯುತ ಮಗುವಿಗೆ ಜನ್ಮ ನೀಡಿದ್ದಾಳೆ. ಯಾವುದೇ ವೈದ್ಯಕೀಯ ನೆರವು ಇಲ್ಲದೇ ಈಕೆ ಮಗುವಿಗೆ ಸಮುದ್ರದ ಮಧ್ಯೆ ಜನ್ಮ ನೀಡಿದ್ದು, ಇದು ಕೇಳುವುದಕ್ಕೆ ರೋಮಾಂಚನಕಾರಿಯಾಗಿದೆ. ಅಲ್ಲದೇ ಮಗುವಿಗೆ ಜನ್ಮ ನೀಡುತ್ತಿರುವ ಭಾವುಕ ಕ್ಷಣದ ವಿಡಿಯೋ ಎಲ್ಲರ ಹೃದಯವನ್ನು ತೇವಗೊಳಿಸುತ್ತಿದೆ. 

 

37 ವರ್ಷದ ಜೋಸಿ ಪ್ಯೂಕರ್ಟ್ (Josy Peukert) ಫೆಸಿಫಿಕ್ ಸಾಗರಕ್ಕೆ ಸೇರುವ ನಿಕರಾಗುವಾದ (Nicaragua) ಪ್ಲಾಯಾ ಮಜಗುವಲ್ (Playa Majagual) ತೀರದಲ್ಲಿ ತನ್ನ  ಮಗುವಿಗೆ ಜನ್ಮ ನೀಡಿದ್ದಾಳೆ. ಗರ್ಭಾವಸ್ಥೆಯ ಉದ್ದಕ್ಕೂ ಆಕೆ ಯಾವುದೇ ಸ್ಕ್ಯಾನಿಂಗ್ ಮಾಡದೇ ವೈದ್ಯರ ನೆರವನ್ನು ಪಡೆಯದೇ ಸಹಜವಾಗಿ ಮಗುವಿಗೆ ಜನ್ಮ ನೀಡಿದ್ದಾಳೆ. 

ಪತಿಯೊಂದಿಗೆ ಜಗಳ : 65 ಕಿ.ಮೀ ನಡೆದು ಬಂದು ಹೆಣ್ಣು ಮಗುವಿಗೆ ಜನ್ಮ ನೀಡಿದ ಮಹಿಳೆ

ಮಗುವಿಗೆ ಬೋಧಿ ಅಮೋರ್ ಓಷನ್ ಕಾರ್ನೆಲಿಯಸ್ ಎಂದು ಹೆಸರಿಡಲಾಗಿದ್ದು, ಫೆಬ್ರವರಿ 27 ರಂದು ಜೋಸಿ ಪ್ಯೂಕರ್ಟ್ ಈ ಮಗುವಿಗೆ ಜನ್ಮ ನೀಡಿದರು. ನಾನು ಸಮುದ್ರದಲ್ಲಿ ಮಗುವಿಗೆ ಜನ್ಮ ನೀಡುವ ಆಲೋಚನೆಯನ್ನು ಮಾಡಿದ್ದೆ. ಮತ್ತು ಆ ದಿನ ಪರಿಸ್ಥಿತಿಗಳು ಇದಕ್ಕೆ ಪೂರಕವಾಗಿದ್ದ ಕಾರಣ ಇದು ಸಾಧ್ಯವಾಯಿತು ಎಂದು ಆಕೆ ಹೇಳಿರುವುದನ್ನು ಡೈಲಿ ಮೇಲ್ ಉಲ್ಲೇಖಿಸಿದೆ.

ದಿನಗಳು ಸಮೀಪ ಬಂದಾಗ ವಾರಗಳವರೆಗೆ ನಾನು ಮಗುವಿನ ಜನನಕ್ಕಾಗಿ ಕಾದೆ ಮತ್ತು ನನಗೆ ಜನ್ಮ ನೀಡಲು ಸರಿಯಾದ ಸಮಯ ಬಂದಾಗ ಬೀಚ್ ಸುರಕ್ಷಿತ ಸ್ಥಳ ಎಂದು ನನಗೆ ತಿಳಿದಿತ್ತು ಎಂದು ಆಕೆ ಹೇಳಿದ್ದಾರೆ. ಜೋಸಿಗೆ ಹೆರಿಗೆ ಸಮಯ ಬಂದಿದೆ ಎಂದು ತಿಳಿಯುತ್ತಿದ್ದಂತೆ ಅವಳ ಇತರ ಮಕ್ಕಳು ಹಾಗೂ ಸಂಗಾತಿ ಆಕೆಯನ್ನು ಬೀಚ್‌ಗೆ ಕರೆದೊಯ್ದರು. ಜನನಕ್ಕೆ ಬೇಕಾಗುವ ಕೆಲ ಡೆಲಿವರಿ ಕಿಟ್‌ಗಳೊಂದಿಗೆ ಆಕೆಯನ್ನು ಬೀಚ್‌ಗೆ ಕರೆದೊಯ್ದಿದ್ದಾರೆ. ಈ ವಿಡಿಯೋದಲ್ಲಿ ಆಗ ತಾನೆ ಹುಟ್ಟಿದ ಕಂದನನ್ನು ತಾಯಿ ಎದೆಗವಚಿ ಹಿಡಿದುಕೊಂಡು ಭಾವುಕಳಾಗಿರುವ ದೃಶ್ಯವಿದೆ. 

ಗರ್ಭಿಣಿಯಾಗಿದ್ದಾಗಲೇ ಮತ್ತೊಮ್ಮೆ ಗರ್ಭಿಣಿಯಾದ ಮಹಿಳೆ ! ಅರೆ ಇದು ಹೇಗೆ ಸಾಧ್ಯ?

ಬೋಧಿ ಜನಿಸಿದ ನಂತರ ಆತನನನ್ನು ಟವೆಲ್‌ನಲ್ಲಿ ಸುತ್ತಿಟ್ಟು, ನಾನು ಫ್ರೆಶ್ ಆಗಲು ಮತ್ತೆ ಸಾಗರಕ್ಕೆ ಹೋದೆ. ನಂತರ ನಾನು ಡ್ರೆಸ್ ಮಾಡಿಕೊಂಡೆ ಮತ್ತು ನಾವು ಎಲ್ಲವನ್ನೂ ಪ್ಯಾಕ್ ಮಾಡಿ ಮನೆಗೆ ಬಂದೆವು. ನಂತರ ಮನೆಯಲ್ಲಿ ವಿಶ್ರಾಂತಿ ಪಡೆದ ನಾವು ಸಂಜೆ ವೇಳೆಗೆ ಬೋಧಿಯನ್ನು ತೂಕ ಮಾಡಿದಾಗ ಆತ ಸುಮಾರು 3.5 ಕೆಜಿ ಅಥವಾ 7 ಪೌಂಡ್  ತೂಗುತ್ತಿದ್ದ ಎಂದು ತಾಯಿ ಹೇಳಿದರು.

ವೈದ್ಯಕೀಯ ಮಧ್ಯಸ್ಥಿಕೆಯಿಲ್ಲದೆ  ಮಗುವನ್ನು ಏಕೆ  ಹೆರಬೇಕು ಎಂದು ಜೋಸಿ ವಿವರಿಸಿದ್ದು, ನಾನು ಒಮ್ಮೆ ಚಿಂತೆ-ಮುಕ್ತನಾಗಿರಲು ಬಯಸಿದ್ದೆ. ನನ್ನ ಮೊದಲ ಹೆರಿಗೆಯು ಕ್ಲಿನಿಕ್‌ನಲ್ಲಿ ಆಘಾತಕಾರಿಯಾಗಿತ್ತು ಮತ್ತು ನನ್ನ ಎರಡನೆಯ ಹೆರಿಗೆಯು ಮನೆಯ ಹೆರಿಗೆಯಾಗಿತ್ತು ಆದರೆ ಮೂರನೆಯ ಹೊತ್ತಿಗೆ ನನ್ನ ಮನೆಯಲ್ಲಿ ಸೂಲಗಿತ್ತಿ ಕೂಡ ಇರಲಿಲ್ಲ. ಈ ಬಾರಿ ನನಗೆ ಯಾವುದೇ ವೈದ್ಯರ ಸಂಪರ್ಕವೂ ಇರಲಿಲ್ಲ ಎಂದು ಅವರು ಹೇಳಿದರು.

ಮಗುವಿನ ಜನನದ ಬಗ್ಗೆ ನಮಗೆ ನಿಗದಿತ ದಿನಾಂಕವಿರಲಿಲ್ಲ. ನಮ್ಮ ಮಗುವು ತನ್ನ ದಾರಿಯಲ್ಲಿ ಸಾಗುತ್ತದೆ ಎಂದು ನಾವು ನಂಬಿದ್ದೇವು. ನಮ್ಮ ಜೀವನದಲ್ಲಿ ಹೊಸ ಪುಟ್ಟ ಆತ್ಮವನ್ನು ಸ್ವಾಗತಿಸಲು ನನಗೆ ಯಾವುದೇ ಭಯ ಅಥವಾ ಚಿಂತೆ ಇರಲಿಲ್ಲ, ನಾನು, ನನ್ನ ಸಂಗಾತಿ ಮತ್ತು ಸಮುದ್ರದ ಅಲೆಗಳು ಇವು ಮಾತ್ರವಿದ್ದು. ಈ ಅನುಭವ ಸುಂದರವಾಗಿತ್ತು. ನನ್ನ ಕೆಳಗಿರುವ ಮೃದುವಾದ ಮರಳು ನನಗೆ  ಸ್ವರ್ಗ ನೆನಪಿಸಿತು ಎಂದು ಸಮುದ್ರದ ಮೇಲಿನ ಹೆರಿಗೆಯ ಅನುಭವವನ್ನು ಅವರು ಹಂಚಿಕೊಂಡಿದ್ದಾರೆ. 

Follow Us:
Download App:
  • android
  • ios