- Home
- Life
- Travel
- Country Without Hospital: ಈ ದೇಶದಲ್ಲಿ ಆಸ್ಪತ್ರೆ ಯೇ ಇಲ್ವಂತೆ! ಹುಷಾರಿಲ್ಲ ಅಂದ್ರೆ ಏನ್ಮಾಡ್ತಾರೆ?
Country Without Hospital: ಈ ದೇಶದಲ್ಲಿ ಆಸ್ಪತ್ರೆ ಯೇ ಇಲ್ವಂತೆ! ಹುಷಾರಿಲ್ಲ ಅಂದ್ರೆ ಏನ್ಮಾಡ್ತಾರೆ?
ವ್ಯಾಟಿಕನ್ ಸಿಟಿ ದೇಶವು 1929 ರಲ್ಲಿ ರಚನೆಯಾಯಿತು. ದೇಶ ರಚನೆಯಾಗಿ 96 ವರ್ಷಗಳು ಕಳೆದಿವೆ, ಆದರೆ ಇಲ್ಲಿಯವರೆಗೆ ಈ ದೇಶದಲ್ಲಿ ಒಂದೇ ಒಂದು ಆಸ್ಪತ್ರೆ ಏಕೆ ಇಲ್ಲ?

ಜನರ ಆರೋಗ್ಯ ಉತ್ತಮವಾಗಿರಬೇಕು, ಆರೋಗ್ಯ ಸಮಸ್ಯೆಯಿದ್ದರೆ ಸುಧಾರಿಸಬೇಕು ಅಂದ್ರೆ ಒಂದೊಂದು ಊರಲ್ಲಿ ಒಂದೊಂದು ಆಸ್ಪತ್ರೆ ಇರಲೇಬೇಕು. ಆಸ್ಪತ್ರೆ (hospitals) ನಮ್ಮ ಊರಲ್ಲಿ ಇಲ್ಲದೇ ಇದ್ದರೆ ಸರ್ಕಾರದ ಬಗ್ಗೆ ನಾವೆಷ್ಟು ದೂರು ನೀಡುತ್ತೇವೆ ಅಲ್ವಾ?
ಆದರೆ ನಿಮಗೆ ಗೊತ್ತಾ? ಈ ಜಗತ್ತಿನಲ್ಲಿ ಆಸ್ಪತ್ರೆಯೇ ಇಲ್ಲದ ಒಂದು ದೇಶವಿದೆ! ಅನ್ನೋದು ನಿಮಗೆ ಗೊತ್ತಾ? ಹೌದು, ಅದೊಂದು ಪುಟ್ಟ ದೇಶ (smallest country), ಆದರೆ ಅಲ್ಲಿ ಆಸ್ಪತ್ರೆಗಳೇ ಇಲ್ಲ. ಆ ದೇಶ ಯಾವುದು? ಅಲ್ಲಿ ಆಸ್ಪತ್ರೆ ಯಾಕಿಲ್ಲ ಅನ್ನೊದನ್ನು ತಿಳಿಯೋಣ.
ಒಂದು ದೇಶದಲ್ಲಿ ಆಸ್ಪತ್ರೆ ಇಲ್ಲದೇ ಇದ್ದರೆ, ಅಂತಹ ಪರಿಸ್ಥಿತಿಯಲ್ಲಿ ಜನರು ತುರ್ತು ಪರಿಸ್ಥಿತಿಯಲ್ಲಿ (emergency) ಎಲ್ಲಿಗೆ ಹೋಗುತ್ತಾರೆ? ಅವರಿಗೆ ಆರೋಗ್ಯ ಸಮಸ್ಯೆ ಕಾಡಿದರೆ, ಮುಂದೆ ಏನು ಮಾಡುತ್ತಾರೆ ಎಂಬ ಪ್ರಶ್ನೆ ಉದ್ಭವಿಸುತ್ತದೆ ಅಲ್ವಾ?
ಈ ದೇಶವು 1929 ರಲ್ಲಿಯೇ ರೂಪುಗೊಂಡಿತು. ಇಂದು ದೇಶ ರಚನೆಯಾಗಿ 96 ವರ್ಷಗಳಾಗಿವೆ, ಈ ದೇಶ ರೋಮ್, ಇಟಲಿಯಿಂದ ಸುತ್ತಿವರೆದಿರುವ ದೇಶ. ಈ ದೇಶವು ಐತಿಹಾಸಿಕ ಪರಂಪರೆಯನ್ನು (historical place) ಹೊಂದಿದ್ದು, ಪ್ರತಿಯೊಂದು ಮೂಲೆ ಮೂಲೆಯಲ್ಲೂ ಇತಿಹಾಸ ಇದೆ.
ಆದರೂ ಈ ದೇಶದಲ್ಲಿ ಇಲ್ಲಿಯವರೆಗೆ ಒಂದೇ ಒಂದು ಆಸ್ಪತ್ರೆ ಏಕೆ ಇಲ್ಲ? ಅಥವಾ ಇಲ್ಲಿ ಒಂದೇ ಒಂದು ಆಸ್ಪತ್ರೆಯನ್ನು ನಿರ್ಮಿಸದಿರಲು ಕಾರಣವೇನು, ಹಾಗಾದರೆ ಈ ರಹಸ್ಯ ಏನು ಅನ್ನೋದನ್ನು ತಿಳಿದುಕೊಳ್ಳುವ ಕುತೂಹಲಕ್ಕೆ ಇಲ್ಲಿದೆ ಉತ್ತರ.
ಈ ದೇಶ ಬೇರೆ ಯಾವುದೂ ಅಲ್ಲ ಅದು ವ್ಯಾಟಿಕನ್ ಸಿಟಿ (Vatican City), ಮತ್ತು ಈ ದೇಶ ತುಂಬಾ ಚಿಕ್ಕದಾಗಿದೆ, ಇದು 121 ಎಕ್ಕರೆ ಜಾಗದಲ್ಲಿ ಹರಡಿರುವಂತಹ ದೇಶ. ಇಲ್ಲಿನ ಜನಸಂಖ್ಯೆ ಕೂಡ ಕೇವಲ 882 ಅಷ್ಟೇ. ನಮ್ಮ ಊರಿನ ಒಂದು ಹಳ್ಳಿಯಷ್ಟೇ ಪುಟ್ಟದಾದ ಜಾಗ ಇದು.
ಇದು ತುಂಬಾನೆ ಪುಟ್ಟದಾದ ದೇಶ ಆಗಿರೋದರಿಂದ ಇಲ್ಲಿನ ಜನರು ಆಸ್ಪತ್ರೆಯಿಂದ ವಿಮಾನ ನಿಲ್ದಾಣದವರೆಗೆ (Airport) ಎಲ್ಲದಕ್ಕೂ ರೋಮ್‌ಗೆ ಹೋಗುತ್ತಾರೆ. ರೋಮ್ ಈ ದೇಶದಲ್ಲಿ ಕೊಂಚವೇ ದೂರ ಇರೋದರಿಂದ ಎಲ್ಲಾದಕ್ಕೂ ಈ ದೇಶ ರೋಮ್ ನ್ನು ಅವಲಂಭಿಸಿದೆ.