ಮಹಾಭಾರತಕ್ಕೆ ಸಂಬಂಧಿಸಿದ ತಾಣಗಳು ಇಂದಿಗೂ ಇಲ್ಲಿ ಅಸ್ಥಿತ್ವದಲ್ಲಿದೆ
ಮಹಾಭಾರತದ ಕಾಲದಲ್ಲಿ, ಭಗವಾನ್ ಕೃಷ್ಣನು ಅರ್ಜುನನಿಗೆ ಗೀತೆಯನ್ನು ಬೋಧಿಸಿದನು. ಅದರ ಆಲಿಸುವಿಕೆ ಮತ್ತು ಪಠಣವನ್ನು ಇಂದಿಗೂ ಬಹಳ ಭಕ್ತಿಯಿಂದ ಮಾಡಲಾಗುತ್ತೆ. ಶ್ರೀ ಕೃಷ್ಣ ಮತ್ತು ಭಗವದ್ಗೀತೆಯನ್ನು ಪೂಜಿಸುವ ಮೂಲಕ, ಭಕ್ತರ ಜೀವನದಲ್ಲಿ ಬರುವ ಎಲ್ಲಾ ತೊಂದರೆಗಳು ದೂರವಾಗುತ್ತವೆ ಮತ್ತು ಅವರ ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿ ಬರುತ್ತವೆ ಎಂದು ನಂಬಲಾಗಿದೆ.
ಕುರುಕ್ಷೇತ್ರದ ನೆಲದಲ್ಲಿ ನಡೆದ ಈ ಧಾರ್ಮಿಕ ಯುದ್ಧಕ್ಕೆ ಸಂಬಂಧಿಸಿದಂತೆ ಅನೇಕ ಕಥೆಗಳಿವೆ. ಆದರೆ ಮಹಾಭಾರತಕ್ಕೆ(Mahabharath) ಸಂಬಂಧಿಸಿದ ಕೆಲವು ಕಥೆಗಳಿವೆ ಎಂದು ನಿಮಗೆ ತಿಳಿದಿದ್ಯಾ? ಅವು ನಡೆದ ಸ್ಥಳಗಳನ್ನು ಇಂದಿಗೂ ನೋಡಬಹುದು. ಇಲ್ಲಿ ನೀವು ಎಲ್ಲಿಯೂ ಕೇಳಿರದ ಕಥೆಗಳನ್ನು ತಿಳಿಸಿದ್ದೇವೆ. ಅವುಗಳನ್ನು ತಿಳಿದುಕೊಳ್ಳುವ ಮೂಲಕ ನೀವು ಪ್ರಸ್ತುತ ಸಮಯದಲ್ಲಿ ಆ ಕಥೆ ನಡೆದ ಜಾಗವನ್ನು ಎಲ್ಲಿ ಕಾಣಬಹುದು ಅನ್ನೋದನ್ನು ನೋಡೋಣ.
ಕುರುಕ್ಷೇತ್ರದಲ್ಲಿ ಒಂದು ಪುರಾತನ ಬಾವಿ ಇದೆ.
ಕೌರವರು ಮತ್ತು ಪಾಂಡವರ ನಡುವೆ ಮಹಾಭಾರತದ ಮಹಾಯುದ್ಧವು ನಡೆದ ನಗರ ಕುರುಕ್ಷೇತ್ರ. ಹರಿಯಾಣ (Hariyana) ರಾಜ್ಯದಲ್ಲಿರುವ ಈ ನಗರದಲ್ಲಿಯೇ ಶ್ರೀಕೃಷ್ಣ ಅರ್ಜುನನಿಗೆ ಬ್ರಹ್ಮ ಜ್ಞಾನವನ್ನು ನೀಡಿದನು. ಅದನ್ನು ಇಂದು ನಾವು ಭಗವದ್ಗೀತೆ ಎಂದು ಕರೆಯುತ್ತೇವೆ.
ಪುರಾತತ್ವ ಸರ್ವೇಕ್ಷಣೆಯಲ್ಲಿ, ಬಾಣ, ಭರ್ಜಿಗಳು ಸೇರಿ ಮುಂತಾದ ವಸ್ತುಗಳನ್ನು ಒಳಗೊಂಡಂತೆ ಮಹಾಭಾರತದ ಕಾಲದ ಅನೇಕ ಅವಶೇಷಗಳು ಈ ಸ್ಥಳದಿಂದ ದೊರೆತಿವೆ. ಕುರುಕ್ಷೇತ್ರದಲ್ಲಿ ಇನ್ನೂ ಪ್ರಾಚೀನ ಬಾವಿಯೊಂದು ಅಸ್ತಿತ್ವದಲ್ಲಿದೆ, ಅಲ್ಲಿ ಕರ್ಣನು ಯುದ್ಧದ ಸಮಯದಲ್ಲಿ ಚಕ್ರವ್ಯೂಹವನ್ನು ರಚಿಸಿದನು ಮತ್ತು ಅಭಿಮನ್ಯುವನ್ನು(Abhimanyu) ಮೋಸದಿಂದ ಕೊಂದನು ಎಂದು ಹೇಳಲಾಗುತ್ತೆ.
ಖತು ಶ್ಯಾಮ್ ಭಗವಾನ್ ಕಥೆ ಮಹಾಭಾರತಕ್ಕೆ ಸಂಬಂಧಿಸಿದೆ
ಮಹಾಭಾರತದಲ್ಲಿ ಘಟೋತ್ಕಚನ ಮಗನಾದ ಬಾರ್ಬರಿಕ್ ಎಷ್ಟು ಶಕ್ತಿಶಾಲಿಯಾಗಿದ್ದನೆಂದರೆ, ಅವನು ಕೇವಲ ಮೂರು ಬಾಣಗಳೊಂದಿಗೆ ಯುದ್ಧದಲ್ಲಿ ಇಳಿದನು ಎಂದು ಹೇಳಲಾಗುತ್ತೆ. ಬಾರ್ಬರಿಕ್ ಯುದ್ಧಭೂಮಿಗೆ ಇಳಿದರೆ, ಕೆಲವೇ ನಿಮಿಷಗಳಲ್ಲಿ ಯುದ್ಧವು ಕೊನೆಗೊಳ್ಳುತ್ತೆ ಎಂದು ಶ್ರೀ ಕೃಷ್ಣನಿಗೆ ತಿಳಿದಿತ್ತು. ಹಾಗಾಗಿ, ಅವರನ್ನು ತಡೆಯಲು, ದೇವರು ಬ್ರಾಹ್ಮಣನ ವೇಷ ಧರಿಸಿ ಬಾರ್ಬರಿಕ್ ನನ್ನು ತನ್ನ ತಲೆ ದಾನ ಮಾಡಿದರೆ ಕಲಿಯುಗದಲ್ಲಿ(Kaliyuga), ಅವನನ್ನು ಶ್ಯಾಮನ ಹೆಸರಿನಲ್ಲಿ ಅಂದರೆ ಶ್ರೀ ಕೃಷ್ಣನ ಹೆಸರಿನಲ್ಲಿ ಪೂಜಿಸಲಾಗುವುದು ಎಂದು ವರ ನೀಡಿದರು.
ಆದರೆ ಬಾರ್ಬರಿಕ್ ಕೂಡ ಶ್ರೀ ಕೃಷ್ಣನ(Sri Krishna) ಮುಂದೆ ಈ ಯುದ್ಧದ ಫಲಿತಾಂಶವನ್ನು ನಾನು ನೋಡಲು ಬಯಸುತ್ತೇನೆ ಎಂದು ಹೇಳಿದನು. ನಂತರ ಕುರುಕ್ಷೇತ್ರ ಯುದ್ಧಕ್ಕೆ ಸಾಕ್ಷಿಯಾಗಲು ಬಾರ್ಬರಿಕ್ ನ ರುಂಡವನ್ನು ಯುದ್ಧ ವಲಯದಿಂದ ದೂರ ಇರಿಸಲಾಯಿತು, ಇಂದು ಅಲ್ಲಿ ಭಗವಾನ್ ಖತು ಶ್ಯಾಮ್ ಜೀ ಅವರ ದೇವಾಲಯವಿದೆ. ಈ ದೇವಾಲಯವು ರಾಜಸ್ಥಾನದ ಸಿಕಾರ್ ಜಿಲ್ಲೆಯಲ್ಲಿದೆ ಮತ್ತು ಖತು ಶ್ಯಾಮ್ ಜಿ ಅವರನ್ನು ನೋಡಲು ಲಕ್ಷಾಂತರ ಭಕ್ತರು ಇಲ್ಲಿಗೆ ಬರುತ್ತಾರೆ.
ಹನುಮಂತ(Hanuman) ಮತ್ತು ಭೀಮನ ನಡುವಿನ ಭೇಟಿಯ ಸ್ಥಳ
ಹನುಮಂತ ಮತ್ತು ಬಾಹುಬಲಿ ಭೀಮ ಪರ್ವತದ ಮೇಲೆ ಭೇಟಿಯಾದ ಕಥೆ ನಮಗೆಲ್ಲರಿಗೂ ತಿಳಿದಿದೆ. ಆಗ ಭೀಮನು ಹನುಮಂತನಿಗೆ ತನ್ನ ಬಾಲವನ್ನು ಮಾರ್ಗದಿಂದ ತೆಗೆಯುವಂತೆ ಹೇಳಿದನು. ಹನುಮಂತ ತಿರುಗಿ ಭೀಮನಿಗೆ ಬಾಲವನ್ನು ಬದಿಗಿಡಬೇಕೆಂದು ಹೇಳಿದರು. ಆದರೆ ಭೀಮನಿಗೆ ಬಾಲವನ್ನು ತೆಗೆಯಲು ಸಾಧ್ಯವಾಗಲಿಲ್ಲ.
ಉತ್ತರಾಖಂಡದ ಜೋಶಿಮಠದಿಂದ ಸುಮಾರು 25 ಕಿ.ಮೀ ದೂರದಲ್ಲಿರುವ ಹನುಮಾನ್ ಚಟ್ಟಿಯಲ್ಲಿ ಈ ಘಟನೆ ನಡೆದಿದೆ ಎಂದು ಇತಿಹಾಸಕಾರರು ಮತ್ತು ವಿದ್ವಾಂಸರು ಹೇಳುತ್ತಾರೆ. ನಂತರ ಹನುಮಂತನು ಮಹಾಭಾರತದಲ್ಲಿ ಭೀಮನಿಗೆ ವಿಜಯವನ್ನು ಆಶೀರ್ವದಿಸಿದನು ಎಂದು ಹೇಳಲಾಗುತ್ತೆ.
ಸಿಂಧೂ ಕಣಿವೆ ಬ್ರಹ್ಮಾಸ್ತ್ರದಿಂದ ನಾಶವಾಯಿತು
ವೇದಗಳಲ್ಲಿ, ಬ್ರಹ್ಮಾಸ್ತ್ರವನ್ನು ಅತ್ಯಂತ ವಿನಾಶಕಾರಿ ಆಯುಧವೆಂದು ವರ್ಣಿಸಲಾಗಿದೆ. ಆದರೆ ಮಹಾಭಾರತದಲ್ಲಿ, ಗುರು ದ್ರೋಣನ ಮಗನಾದ ಅಶ್ವತ್ಥಾಮ (Ashwathama) ಅರ್ಜುನನ ಮೇಲೆ ಬ್ರಹ್ಮಾಸ್ತ್ರ ಬಳಸಿದನು. ಆದರೆ ಈ ವಿನಾಶಕಾರಿ ಆಯುಧವನ್ನು ಹೇಗೆ ಹಿಂದಿರುಗಿಸಬೇಕೆಂದು ಅವನಿಗೆ ತಿಳಿದಿರಲಿಲ್ಲ. ಬ್ರಹ್ಮಾಸ್ತ್ರ ತನ್ನ ಮುಂದೆ ಬರುವುದನ್ನು ನೋಡಿದ ಅರ್ಜುನನು ಭಯಭೀತನಾದನು ಮತ್ತು ಶ್ರೀ ಕೃಷ್ಣನನ್ನು ಸಹಾಯ ಕೇಳಿದನು.
ನಂತರ ಶ್ರೀ ಕೃಷ್ಣ ಈ ವಿನಾಶಕಾರಿ ಆಯುಧವನ್ನು ನಿಲ್ಲಿಸಲು ತನ್ನ ಬ್ರಹ್ಮಾಸ್ತ್ರವನ್ನು ಬಳಸುವಂತೆ ಅರ್ಜುನನಿಗೆ (Arjun) ಸೂಚಿಸಿದನು. ಅದೇ ಸಮಯದಲ್ಲಿ, ನೀವು ನಿಮ್ಮ ಆತ್ಮ ಮತ್ತು ನಿಮ್ಮ ಸಹೋದರರ ಜೀವಗಳನ್ನು ರಕ್ಷಿಸಲು ಬ್ರಹ್ಮಾಸ್ತ್ರವನ್ನು ಬಳಸುತ್ತಿದ್ದೀರಿ ಎಂದು ವಿವರಿಸಿದರು. ನಂತರ ಅರ್ಜುನ ಸಹ ಈ ಆಯುಧವನ್ನು ಬಳಸಿದನು. ಈ ಆಯುಧದ ಬಳಕೆಯಿಂದಾಗಿ ಲಕ್ಷಾಂತರ ಜನರು ತಮ್ಮ ಜೀವಗಳನ್ನು ಕಳೆದುಕೊಂಡರು. ಸಿಂಧೂ ಕಣಿವೆಯ ಜನರು ಬ್ರಹ್ಮಾಸ್ತ್ರ ಬಿದ್ದ ಸ್ಥಳದಲ್ಲಿ ವಾಸಿಸುತ್ತಿದ್ದರು. ಇದು ಸಿಂಧೂ ಕಣಿವೆಯ ವಿನಾಶಕ್ಕೆ ಕಾರಣವಾಗಿತ್ತು ಎಂದು ಹೇಳಲಾಗುತ್ತೆ.