Mahabharat: ಸಾವಿನ ಹಾಸಿಗೆಯಲ್ಲಿ ಮಲಗಿ ಬದುಕಿನ ಪಾಠ ಹೇಳಿದ ಭೀಷ್ಮ

ಭೀಷ್ಮ ಪಿತಾಮಹರು ಬಾಣಗಳ ಹಾಸಿಗೆಯ ಮೇಲೆ ಮಲಗಿದ್ದಾಗ, ಸಾಯುವ ಮೊದಲು ಧರ್ಮರಾಜ ಯುಧಿಷ್ಠಿರನಿಗೆ 36 ಜೀವನ ಪಾಠಗಳನ್ನು ಹೇಳಿದ್ದರು. ಅವೇನು ನೋಡೋಣ.

The essence of life is hidden in these 36 things of Bhishma Pitamah skr

ಭೀಷ್ಮ ಪಿತಾಮಹರಿಲ್ಲದೆ ಮಹಾಭಾರತದ ಕಥೆ ಅಪೂರ್ಣ. ಮಹಾಭಾರತದ ಯೋಧರ ವಿವರಣೆ ಬಂದಾಗ, ಭೀಷ್ಮ ಪಿತಾಮಹರ ಹೆಸರನ್ನು ಬಹಳ ಗೌರವದಿಂದ ತೆಗೆದುಕೊಳ್ಳಲಾಗುತ್ತದೆ. ಭೀಷ್ಮ ಪಿತಾಮಹರು ಕೌರವ ಸೈನ್ಯದ ಬದಿಯಲ್ಲಿದ್ದರು ಮತ್ತು ಮೊದಲ ದಂಡನಾಯಕನಾಗಿದ್ದರು. ಆದರೆ ಭೀಷ್ಮ ಪಿತಾಮಹರ ವಾತ್ಸಲ್ಯವು ಪಾಂಡವರ ಕಡೆಗೆ ಇತ್ತು.
ದಂತಕಥೆಯ ಪ್ರಕಾರ, ಇಚ್ಚಾಮರಣಿಯಾಗಿದ್ದ ಭೀಷ್ಮರು ದೇಹವನ್ನು ತೊರೆಯುವ ಮೊದಲು, ಯುಧಿಷ್ಠಿರನಿಗೆ 36 ಬಹಳ ಮುಖ್ಯವಾದ ವಿಷಯಗಳನ್ನು ಹೇಳಿದ್ದಾರೆ. ಅದನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕು. ಯಾರು ಈ ವಿಷಯಗಳನ್ನು ಅನುಸರಿಸುತ್ತಾರೋ ಅವರು ಜೀವನದಲ್ಲಿ ಪ್ರತಿಯೊಂದು ಕ್ಷೇತ್ರದಲ್ಲೂ ಯಶಸ್ಸನ್ನು ಪಡೆಯುತ್ತಾರೆ. ಭೀಷ್ಮರು ಹೇಳಿದ ಆ ಜೀವನಪಾಠಗಳೇನು(Life lessons) ನೋಡೋಣ.

1. ಭವ್ಯವಾಗಿರಿ, ಆದರೆ  ಸ್ವಯಂ ವೈಭವೀಕರಣ ತಪ್ಪಿಸಿ.
2. ಪರ ಮಹಿಳೆಯರೊಂದಿಗೆ ಅತಿಯಾದ ಸಂಪರ್ಕವನ್ನು ತಪ್ಪಿಸಿ. 
3. ಯಾರ ಮೇಲೂ ದ್ವೇಷ ಇಟ್ಟುಕೊಳ್ಳಬೇಡಿ. 
4. ನಿಯಮಗಳಿಗೆ ವಿರುದ್ಧವಾಗಿ ವರ್ತಿಸುವವರೊಂದಿಗೆ ಮೃದುತ್ವ ಭಾವನೆ ಹೊಂದುವುದು ವ್ಯರ್ಥ.
5. ರಾಜನು ಕ್ರೌರ್ಯ, ಅನಗತ್ಯ ತೆರಿಗೆಗಳನ್ನು ಮಾಡದೆ ಖಜಾನೆಯನ್ನು ಹೆಚ್ಚಿಸಬೇಕು.
6. ಸಂತೋಷದ ಅನ್ವೇಷಣೆಯಲ್ಲಿ ಘನತೆಯನ್ನು ಬಿಟ್ಟು ಕೊಡಬಾರದು.

Money Dreams: ಈ ರೀತಿಯ ಕನಸು ಕೈ ತುಂಬಾ ಹಣ ಬರೋ ಮುನ್ಸೂಚನೆ!

7. ಮಾತಿನಲ್ಲಿ ಅಥವಾ ಸಂಬೋಧನೆಯಲ್ಲಿ ಯಾವುದೇ ನಮ್ರತೆಯ ಭಾವ ಇರಬಾರದು.
8. ಇತರರೊಂದಿಗೆ ನಿಮ್ಮ ನಡವಳಿಕೆಯು ಶುದ್ಧ ಮತ್ತು ಪ್ರಾಮಾಣಿಕವಾಗಿರಬೇಕು. ಅದರಲ್ಲಿ ನಮ್ರತೆ ಇರಬೇಕು. ಗಡಸುತನದ ಮಟ್ಟ ಇರಬಾರದು..
9. ರಾಜನು ಎಂದಿಗೂ ದುಷ್ಟರ ಪಕ್ಷವನ್ನು ತೆಗೆದುಕೊಳ್ಳಬಾರದು.
10. ನಿಮ್ಮ ಆತ್ಮೀಯ ಸಹೋದರರೊಂದಿಗೆ ಎಂದಿಗೂ ಜಗಳವಾಡಬೇಡಿ.
11. ದೇಶಭಕ್ತಿ ಇಲ್ಲದ ವ್ಯಕ್ತಿಯಿಂದ ಎಂದಿಗೂ ಮುಖ್ಯವಾದ ಕೆಲಸವನ್ನು ತೆಗೆದುಕೊಳ್ಳಬೇಡಿ.
12. ಯಾರಿಗೂ ನೋವಾಗದಂತೆ ನಡೆವುದೇ ಉತ್ತಮ ಸೇವೆ.
13. ರಾಜನು ತನ್ನ ಯೋಜನೆಗಳ ಬಗ್ಗೆ ಜಾಗರೂಕನಾಗಿರಬೇಕು, ದುಷ್ಟರಿಗೆ ಅದನ್ನು ಬಹಿರಂಗಪಡಿಸುವುದನ್ನು ತಪ್ಪಿಸಬೇಕು.
14. ಸಂತರನ್ನು ಗೌರವಿಸಬೇಕು, ಅವರ ಸಂಪತ್ತನ್ನು ಎಂದಿಗೂ ಕಸಿದುಕೊಳ್ಳಬಾರದು.
15. ರಾಜ ಸದಾ ಧರ್ಮವನ್ನು ಪಾಲಿಸಬೇಕು. ಕಹಿಗೆ ಅವಕಾಶ ಇರಬಾರದು.
16. ಒಬ್ಬನು ಇತರರನ್ನು ಪ್ರೀತಿಯಿಂದ ನಡೆಸಿಕೊಳ್ಳಬೇಕು, ನಂಬಿಕೆಯುಳ್ಳವನಾಗಿ ಉಳಿಯಬೇಕು.
17. ದಾನದಲ್ಲಿ ಜಾಗರೂಕರಾಗಿರಿ, ದಾನವನ್ನು ಅನರ್ಹರಿಗೆ ಎಂದಿಗೂ ನೀಡಬಾರದು.
18. ರಾಜ ದುರಾಸೆಯವರನ್ನು ತಪ್ಪಿಸಬೇಕು, ಅವರಿಗೆ ಹಣದ ಸಹಾಯ ಮಾಡಬಾರದು.
19. ಅನುಚಿತವಾಗಿ ವರ್ತಿಸುವವರನ್ನು ನಂಬಬಾರದು.
20. ರಾಜ ಯಾವಾಗಲೂ ಪರಿಶುದ್ಧನಾಗಿರಬೇಕು ಮತ್ತು ಅವನು ಯಾರನ್ನೂ ದ್ವೇಷಿಸಬಾರದು.
21. ಕೆಟ್ಟ ನಡವಳಿಕೆ ಮತ್ತು ಭ್ರಷ್ಟ ಮನಸ್ಥಿತಿ ಹೊಂದಿರುವ ಜನರಿಗೆ ಎಂದಿಗೂ ಆಶ್ರಯ ನೀಡಬೇಡಿ.
22. ರಾಜ ಯಾರನ್ನಾದರೂ ಶಿಕ್ಷಿಸುವಾಗ ಎಚ್ಚರಿಕೆ ವಹಿಸಬೇಕು. ಪರೀಕ್ಷೆಗೆ ಒಳಗಾಗದೆ ಯಾರನ್ನೂ ಶಿಕ್ಷಿಸಬಾರದು.
23. ರಾಜ ರಹಸ್ಯ ವಿಷಯಗಳನ್ನು ಅಥವಾ ಯೋಜನೆಗಳನ್ನು ಯಾರೊಂದಿಗೂ ಹಂಚಿಕೊಳ್ಳಬಾರದು.
24. ವಿದ್ವಾಂಸರು, ಜ್ಞಾನಿಗಳು, ಪ್ರಬುದ್ಧರನ್ನು ಯಾವುದೇ ಅಹಂಕಾರವಿಲ್ಲದೆ ಗೌರವಿಸಬೇಕು.
25. ಗುರುವನ್ನು ಸದಾ ಗೌರವಿಸಬೇಕು. ಗುರುವಿನ ಸೇವೆಯನ್ನೂ ಮಾಡಬೇಕು.
26. ದೇವರನ್ನು ನಿಸ್ವಾರ್ಥದಿಂದ ಪೂಜಿಸಬೇಕು. ಆಗ ಮಾತ್ರ ಪುಣ್ಯ ಲಭಿಸುತ್ತದೆ.
27. ಯಾವ ಕೆಲಸಗಳಲ್ಲಿ ಯಾರಿಗೂ ಹಾನಿಯಾಗುವುದಿಲ್ಲವೋ ಆ ಕೆಲಸಗಳಿಂದ ಹಣವನ್ನು ಪಡೆಯಬೇಕು.
28. ಯಾರನ್ನಾದರೂ ಆಕ್ರಮಣ ಮಾಡುವ ಮೊದಲು, ಅವನ ಬಗ್ಗೆ ಸಂಪೂರ್ಣ ತನಿಖೆ ಮಾಡಿ ಮತ್ತು ಮಾಹಿತಿಯನ್ನು ಕಲೆ ಹಾಕಿ. ಗೊತ್ತಿಲ್ಲದೆ ದಾಳಿ ಮಾಡಬೇಡಿ.
29. ದಕ್ಷತೆಯೇ ರಾಜನ ಗುಣ. ಆದರೆ ಅವಕಾಶಗಳನ್ನು ಸರಿಯಾಗಿ ನೋಡಿಕೊಳ್ಳಬೇಕು.
30. ಯಾರನ್ನಾದರೂ ತೊಡೆದುಹಾಕಲು ಮೃದುವಾಗಿ ಮಾತನಾಡಬಾರದು.
31. ರಾಜನು ಯಾರಿಗಾದರೂ ದಯೆ ತೋರಿದರೆ, ಅವನಲ್ಲಿ ದೋಷವನ್ನು ನೋಡಬೇಡಿ.

Surya Gochar 2022: ಸೂರ್ಯನ ಸಂಕ್ರಮಣದಿಂದ ಅಶುಭ ಯೋಗ, ಆದರೂ ಈ ಮೂರು ರಾಶಿಗಳಿಗೆ ಶುಭ ಫಲ!

32. ರಾಜ ಆದವನು ಹಿರಿಯರ ಸೇವೆಯನ್ನು ಪೂರ್ಣ ಭಕ್ತಿ ಮತ್ತು ಪ್ರೀತಿಯಿಂದ ಮಾಡಬೇಕು.
33. ಶತ್ರುಗಳನ್ನು ಕೊಂದ ನಂತರ ದುಃಖಿಸಬಾರದು.
34. ಸ್ವಭಾವವನ್ನು ನಿಯಂತ್ರಿಸಬೇಕು, ಇದ್ದಕ್ಕಿದ್ದಂತೆ ಕೋಪಗೊಳ್ಳುವುದನ್ನು ತಪ್ಪಿಸಬೇಕು.
35. ಆಹಾರದ ಬಗ್ಗೆ ಸರಿಯಾದ ಕಾಳಜಿ ವಹಿಸಬೇಕು. ಎಷ್ಟೇ ರುಚಿಯಾಗಿರಲಿ, ಆರೋಗ್ಯಕ್ಕೆ ಹಾನಿಕಾರಕವಾದ ಆಹಾರವನ್ನು ತೆಗೆದುಕೊಳ್ಳಬಾರದು.
36. ಮಹಿಳೆಯರನ್ನು ಯಾವಾಗಲೂ ಗೌರವಿಸಿ ಮತ್ತು ರಕ್ಷಿಸಿ.

Latest Videos
Follow Us:
Download App:
  • android
  • ios