MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • Travel
  • ಕುದುರೆಮುಖದ ಹಸಿರು ದ್ವಾರ ಮುಕ್ತ; ಚಾರಣಿಗರಿಗೆ ಹೊಸ ಕರೆಯೋಲೆ, ಇಂದಿನಿಂದ ಅಧಿಕೃತ ಅನುಮತಿ

ಕುದುರೆಮುಖದ ಹಸಿರು ದ್ವಾರ ಮುಕ್ತ; ಚಾರಣಿಗರಿಗೆ ಹೊಸ ಕರೆಯೋಲೆ, ಇಂದಿನಿಂದ ಅಧಿಕೃತ ಅನುಮತಿ

ಕುದುರೆಮುಖ ವನ್ಯಜೀವಿ ವಿಭಾಗದ ಪ್ರಮುಖ ಚಾರಣ ತಾಣಗಳಾದ ಕುದುರೆಮುಖ, ಗಂಗಡಿಕಲ್, ನೇತ್ರಾವತಿ ಹಾಗೂ ಕುರಿಂಜಾಲ್ ಬೆಟ್ಟಗಳಿಗೆ ಜೂ. 1ರಿಂದ ಚಾರಣಕ್ಕೆ ಅಧಿಕೃತವಾಗಿ ಅನುಮತಿ ನೀಡಲಾಗಿದೆ. ಚಾರಣಿಗರು 'ಅರಣ್ಯ ವಿಹಾರ' ವೆಬ್‌ಸೈಟ್ ಮೂಲಕ ಮುಂಗಡ ಬುಕ್ಕಿಂಗ್ ಮಾಡುವುದು ಕಡ್ಡಾಯವಾಗಿದೆ.

1 Min read
Author : Kannadaprabha News
Published : Jun 01 2026, 07:22 AM IST
Share this Photo Gallery
  • FB
  • TW
  • Linkdin
  • Whatsapp
15
 ಕುದುರೆಮುಖ ವನ್ಯಜೀವಿ ವಿಭಾಗ
Image Credit : All India Radio News @airnewsalerts

ಕುದುರೆಮುಖ ವನ್ಯಜೀವಿ ವಿಭಾಗ

ಕಾರ್ಕಳ: ಪಶ್ಚಿಮ ಘಟ್ಟಗಳ ಸೊಬಗನ್ನು ಸವಿಯಲು ಕಾತರದಿಂದ ಕಾಯುತ್ತಿದ್ದ ಚಾರಣ ಆಸಕ್ತರಿಗೆ ಸಂತಸದ ಸುದ್ದಿ. ಕುದುರೆಮುಖ ವನ್ಯಜೀವಿ ವಿಭಾಗ ವ್ಯಾಪ್ತಿಯಲ್ಲಿರುವ ಕುದುರೆಮುಖ, ಗಂಗಡಿಕಲ್, ನೇತ್ರಾವತಿ ಹಾಗೂ ಕುರಿಂಜಾಲ್ ಬೆಟ್ಟಗಳ ಚಾರಣಕ್ಕೆ ಅರಣ್ಯ ಇಲಾಖೆ ಜೂ. 1ರಿಂದ ಅಧಿಕೃತ ಅನುಮತಿ ನೀಡಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
25
ನಾಲ್ಕು ಪ್ರಮುಖ ಚಾರಣ ತಾಣ
Image Credit : All India Radio News @airnewsalerts

ನಾಲ್ಕು ಪ್ರಮುಖ ಚಾರಣ ತಾಣ

ಅರಣ್ಯ ಇಲಾಖೆ ಪ್ರಕಟಣೆ ಪ್ರಕಾರ,ಈ ನಾಲ್ಕು ಪ್ರಮುಖ ಚಾರಣ ತಾಣಗಳಿಗೆ ಭೇಟಿ ನೀಡಲು ಬಯಸುವವರು ಕಡ್ಡಾಯವಾಗಿ ‘ಅರಣ್ಯ ವಿಹಾರ’ ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿ ಮುಂಗಡ ಬುಕ್ಕಿಂಗ್ ಮಾಡಿಕೊಳ್ಳಬೇಕು. ರಾಜ್ಯ ಸರ್ಕಾರ ಜಾರಿಗೆ ತಂದಿರುವ ಹೊಸ ಪ್ರಮಾಣಿತ ಕಾರ್ಯವಿಧಾನ (ಎಸ್‌ಒಪಿ) ಅನುಸಾರ ಚಾರಣ ಚಟುವಟಿಕೆಗಳನ್ನು ನಡೆಸಲಾಗುತ್ತಿದ್ದು, ಪರಿಸರ ಸಂರಕ್ಷಣೆ ಹಾಗೂ ಚಾರಣಿಗರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ.

Related Articles

Related image1
ಕುದುರೆಮುಖ ಟೌನ್‌ಷಿಪ್‌ ಇನ್ನು ನೆನಪು ಮಾತ್ರ, ಭಾರೀ ನಿರ್ಧಾರ ಮಾಡಿದ KIOCL
Related image2
Jio Network ಕುದುರೆಮುಖ ಅರಣ್ಯದ ಹಳ್ಳಿಗೆ ಡಿಜಿಟಲ್ ಲೈಫ್ ಪರಿಚಯ, ಜಿಯೋ ಪ್ರಯತ್ನಕ್ಕೆ ಸ್ಥಳೀಯರ ಮೆಚ್ಚುಗೆ!
35
300 ಮಂದಿ ಸ್ಥಳೀಯ ಗೈಡ್‌ಗಳಿಗೆ ವಿಶೇಷ ತರಬೇತಿ
Image Credit : All India Radio News @airnewsalerts

300 ಮಂದಿ ಸ್ಥಳೀಯ ಗೈಡ್‌ಗಳಿಗೆ ವಿಶೇಷ ತರಬೇತಿ

ಕುದುರೆಮುಖ ವನ್ಯಜೀವಿ ವಿಭಾಗದ ಡಿಎಫ್‌ಒ ಶುವರಾಮ್ ಬಾಬು ಅವರು ಮಾಹಿತಿ ನೀಡಿ, ಚಾರಣಿಗರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು 300 ಮಂದಿ ಸ್ಥಳೀಯ ಗೈಡ್‌ಗಳಿಗೆ ವಿಶೇಷ ತರಬೇತಿ ನೀಡಲಾಗಿದೆ ಎಂದು ತಿಳಿಸಿದ್ದಾರೆ. ಈ ಗೈಡ್‌ಗಳಿಗೆ ವಾಕಿಟಾಕಿ, ಪ್ರಥಮ ಚಿಕಿತ್ಸಾ ಕಿಟ್, ಸುರಕ್ಷತಾ ಜಾಕೆಟ್ ಸೇರಿದಂತೆ ಅಗತ್ಯ ಸುರಕ್ಷತಾ ಪರಿಕರಗಳನ್ನು ಒದಗಿಸಲಾಗಿದೆ. ತುರ್ತು ಸಂದರ್ಭಗಳಲ್ಲಿ ತಕ್ಷಣ ನೆರವು ಒದಗಿಸುವ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ.

45
ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚನೆ
Image Credit : All India Radio News @airnewsalerts

ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚನೆ

ಚಾರಣದ ವೇಳೆ ಹಾದಿ ತಪ್ಪುವ ಸಾಧ್ಯತೆಯನ್ನು ಕಡಿಮೆಗೊಳಿಸಲು ಮಾರ್ಗದುದ್ದಕ್ಕೂ ಸೂಚನಾ ಫಲಕಗಳು, ದಿಕ್ಕು ಸೂಚಿಸುವ ಸೈನ್‌ಬೋರ್ಡ್‌ಗಳು ಹಾಗೂ ಸ್ಥಳದ ಮಾಹಿತಿ ಒಳಗೊಂಡ ಹ್ಯಾಂಡ್‌ಬುಕ್‌ಗಳನ್ನು ವ್ಯವಸ್ಥೆ ಮಾಡಲಾಗಿದೆ. ಚಾರಣಿಗರು ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಅರಣ್ಯ ಇಲಾಖೆ ಮನವಿ ಮಾಡಿದೆ.

55
ಕುದುರೆಮುಖ ವಲಯದ ಬೆಟ್ಟ
Image Credit : Social meida

ಕುದುರೆಮುಖ ವಲಯದ ಬೆಟ್ಟ

ಇದರೊಂದಿಗೆ ಇನ್ನುಳಿದ ಪ್ರಮುಖ ಚಾರಣ ತಾಣಗಳನ್ನು ಜೂ.15ರ ಬಳಿಕ ಸಾರ್ವಜನಿಕರಿಗೆ ಮುಕ್ತಗೊಳಿಸುವ ಸಾಧ್ಯತೆ ಇದೆ ಎಂದು ಇಲಾಖೆ ತಿಳಿಸಿದೆ. ಮಳೆಗಾಲದ ಆರಂಭದಲ್ಲಿ ಹಸಿರು ಹೊದಿಕೆ ತೊಟ್ಟಿರುವ ಕುದುರೆಮುಖ ವಲಯದ ಬೆಟ್ಟಗಳು ಈಗಾಗಲೇ ಪ್ರವಾಸಿಗರನ್ನು ಆಕರ್ಷಿಸುತ್ತಿದ್ದು, ಚಾರಣ ಆರಂಭವಾಗಿರುವುದು ಪ್ರಕೃತಿ ಪ್ರಿಯರಲ್ಲಿ ಹೊಸ ಉತ್ಸಾಹ ಮೂಡಿಸಿದೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

KN
Kannadaprabha News
1967ರ ನವೆಂಬರ್ 4ರಂದು ಆರಂಭವಾದ ಕನ್ನಡಪ್ರಭ ಕನ್ನಡ ಪತ್ರಿಕೋದ್ಯಮದಲ್ಲಿಯೇ ವಿಶೇಷ ಛಾಪು ಮೂಡಿಸಿದ ಕನ್ನಡ ದಿನ ಪತ್ರಿಕೆ. ದೇಶ, ವಿದೇಶ, ವಾಣಿಜ್ಯ, ಕ್ರೀಡೆ, ಮನೋರಂಜನೆ ಸೇರಿ ವೈವಿಧ್ಯಮಯ ಸುದ್ದಿಗಳ ಹೂರಣ ಹೊತ್ತು ತರುವ ಕನ್ನಡಪ್ರಭ, ಕನ್ನಡಿಗರ ಅಸ್ಮಿತೆಯ ಸಂಕೇತ. ಸದಾ ಕರುನಾಡು, ನುಡಿ, ಸಂಸ್ಕೃತಿ ಪರ ಧ್ವನಿ ಎತ್ತುವ ಕನ್ನಡಪ್ರಭ ದಿನ ಪತ್ರಿಕೆಯಲ್ಲಿ ಪ್ರಕಟಗೊಳ್ಳುವ ಸುದ್ದಿಗಳು ಸುವರ್ಣ ನ್ಯೂಸ್ ವೆಬ್‌ಸೈಟಲ್ಲೂ ಲಭ್ಯ.
ಪ್ರವಾಸ

Latest Videos
Recommended Stories
Recommended image1
Air India ಪ್ರಯಾಣಿಕರಿಗೆ ಸಿಹಿ ಸುದ್ದಿ… ಶೀಘ್ರದಲ್ಲಿ ವಿಮಾನದಲ್ಲಿ ಸಿಗಲಿಗೆ ಈ ಎಲ್ಲಾ ಸೌಲಭ್ಯ!
Recommended image2
ಬೆಂಗಳೂರಿಂದ ಒಡಿಶಾಗೆ ತೆರಳುವ ರೈಲುಗಳ ವೇಳಾಪಟ್ಟಿಯಲ್ಲಿ ಭಾರೀ ವ್ಯತ್ಯಯ! ಮುಂಗಡ ಟಿಕೆಟ್ ಕಾಯ್ದಿರಿಸಿದವರು ಚೆಕ್‌ ಮಾಡಿ
Recommended image3
ಬೆಂಗಳೂರಿನ ಪ್ರಮುಖ ಅಂಡರ್ ಬ್ರಿಡ್ಜ್ ಬಂದ್! ಪರ್ಯಾಯ ಮಾರ್ಗ ಪ್ರಕಟಿಸಿದ ಟ್ರಾಫಿಕ್ ಪೊಲೀಸ್
Related Stories
Recommended image1
ಕುದುರೆಮುಖ ಟೌನ್‌ಷಿಪ್‌ ಇನ್ನು ನೆನಪು ಮಾತ್ರ, ಭಾರೀ ನಿರ್ಧಾರ ಮಾಡಿದ KIOCL
Recommended image2
Jio Network ಕುದುರೆಮುಖ ಅರಣ್ಯದ ಹಳ್ಳಿಗೆ ಡಿಜಿಟಲ್ ಲೈಫ್ ಪರಿಚಯ, ಜಿಯೋ ಪ್ರಯತ್ನಕ್ಕೆ ಸ್ಥಳೀಯರ ಮೆಚ್ಚುಗೆ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved