Jio Network ಕುದುರೆಮುಖ ಅರಣ್ಯದ ಹಳ್ಳಿಗೆ ಡಿಜಿಟಲ್ ಲೈಫ್ ಪರಿಚಯ, ಜಿಯೋ ಪ್ರಯತ್ನಕ್ಕೆ ಸ್ಥಳೀಯರ ಮೆಚ್ಚುಗೆ!
- ಅರಣ್ಯದೊಳಗೆ ನೆಲೆಸಿರುವ ಜಂಬಳೆ ಹಳ್ಳಿಗೆ ಜಿಯೋ ಡಿಜಿಟಲ್
- ಇತರ ಹಳ್ಳಿ, ಪಟ್ಟಣದ ಜೊತೆಗೆ ಜಂಬಳೆ ಸಂಪರ್ಕಿಸಿದ ಜಿಯೋ
- ಜಿಯೋ ನಡೆಗೆ ಸ್ಥಳೀಯರ ಸಂತಸ, ಹಳ್ಳಿಗೆ ಬಂತು 4ಜಿ ಸೇವೆ
ಕುದುರೆಮುಖ(ಡಿ.03): ಕರ್ನಾಟಕದ(Karnataka0 ಕುದುರೆಮುಖ ಅರಣ್ಯದೊಳಗೆ ನೆಲೆಸಿರುವ ಜಂಬಳೆ ಹಳ್ಳಿಗೆ ಜಿಯೋ (Jio) ಪರಿಚಯಿಸಲಾಗಿದೆ. ಇತರ ಭಾಗಗಳಿಗೆ ಸಂಪರ್ಕ ವಿಲ್ಲದೆ ಒಬ್ಬಂಟಿಯಾಗಿರುವ ಈ ಜಂಬಳೆ ಹಳ್ಳಿ ಹಲವು ಸೌಲಭ್ಯಗಳಿಂದ ವಂಚಿತವಾಗಿತ್ತು. ಸುಂದರ ಹಳ್ಳಿಗೆ ಜಿಯೋ ಡಿಜಿಟಲ್ ಲೈಫ್(Digital life) ಪರಚಯಿಸಿದೆ. ಜಿಯೋ ನಡೆಯಿಂದ ಹಳ್ಳಿಯ ಕುಟುಂಬ ಹಾಗೂ ಸಮುದಾಯಕ್ಕೆ ಸಂತಸ ತಂದಿದೆ.
ಜಂಬಳೆ ಹಳ್ಳಿ ಪಟ್ಟಣ ಹಾಗೂ ಇತರ ನಗರಗಳಿಂದ ಬಹುದೂರದಲ್ಲಿದೆ. ಇಲ್ಲಿಗೆ ಸರ್ಕಾರದ(Government) ಸೌಲಭ್ಯಗಳು ಸಿಗುವುದೇ ದುಸ್ತರವಾಗಿದೆ. ಸರಿಯಾದ ನೆಟ್‌ವರ್ಕ್ ಸಂಪಕ್ಕ ಇಲ್ಲದ ಕಾರಣ ಜಂಬಳೆ ಹಳ್ಳಿಯ ಹಲವು ಕುಟುಂಬಗಳಿಗೆ ಯಾವುದೇ ಸಂಪರ್ಕ ಸಾಧ್ಯವಾಗುತ್ತಿರಲಿಲ್ಲ. ಆದರೆ ಇದೀಗ ಈ ಹಳ್ಳಿಯಲ್ಲಿ 4ಜಿ ಸೇವೆ ಲಭ್ಯವಾಗುವಂತೆ ಜಿಯೋ ಮಾಡಿದೆ.
5G Launch in India: 13 ಮಹಾನಗರಗಳಲ್ಲಿ 2022ಕ್ಕೆ ಸೇವೆ ಆರಂಭ: 4Gಗಿಂತ 100 % ಹೆಚ್ಚು ವೇಗದ ಇಂಟರ್ನೆಟ್!
ನೆಟ್‍ವರ್ಕ್(Network) ಲಭ್ಯತೆಯಿಂದಾಗಿ ತಮ್ಮ ಮಕ್ಕಳು ಪ್ರತಿದಿನ 8 ಕಿಲೋಮೀಟರ್ ದೂರ ಪ್ರಯಾಣಿಸದೆಯೇ ತಮ್ಮ ಶಿಕ್ಷಣವನ್ನು ತಮ್ಮ ಹಳ್ಳಿಯಲ್ಲೇ ಮುಂದುವರಿಸಲು ಸಮರ್ಥರಾಗಿದ್ದಾರೆ. ಯುವಕರು ಸುರಕ್ಷಿತ ವಾತಾವರಣದಲ್ಲಿ ಮನೆಯಿಂದಲೇ ಕೆಲಸ ಮಾಡಲು ಸಾಧ್ಯವಿದೆ. ಇದೇ ವೇಳೆ ಪೋಷಕರು ಜಿಯೋಗೆ ತಮ್ಮ ಕೃತಜ್ಞತೆಯನ್ನು ವ್ಯಕ್ತಪಡಿಸಿದ್ದಾರೆ.
ಸಂಪರ್ಕದ ಪ್ರಯಾಣವು ಸುಲಭವಾಗಿರಲಿಲ್ಲ!
ದೂರಸಂಪರ್ಕ ಸೇವೆಗಳ ಕೊರತೆಯಿಂದಾಗಿ ಜಂಬಳೆಯ ಜನರು ಪ್ರಪಂಚದ ಮೂಲ ಸಂಪರ್ಕದಿಂದ ವಂಚಿತರಾಗಿದ್ದರು. ಜಂಬಲೆಗೆ ಸಂಪರ್ಕವನ್ನು ತರಲು ಎರಡು ಪ್ರಮುಖ ಸವಾಲುಗಳೆಂದರೆ ಕಡಿದಾದ ಗುಡ್ಡಗಾಡು, ಅರಣ್ಯದಿಂದ ಆವೃತವಾದ ಭೂಪ್ರದೇಶ ಮತ್ತು ಸುತ್ತಮುತ್ತಲಿನ ವಿದ್ಯುತ್ ಸ್ಥಾವರದಿಂದಾಗಿ ಭದ್ರತಾ ಕಾಳಜಿಗಳು.
Jio Happy New Year Offer: ₹2,545 ಪ್ರಿಪೇಯ್ಡ್ ರೀಚಾರ್ಜ್ ಮೇಲೆ 1 ತಿಂಗಳ ಎಕ್ಸ್ಟ್ರಾ ವ್ಯಾಲಿಡಿಟಿ!
ಜಂಬಳೆಗೆ ಸಂಪರ್ಕ ವ್ಯವಸ್ಥೆ ಕಲ್ಪಿಸಲು ಜಿಯೋ ಉಪಕ್ರಮವನ್ನು ತೆಗೆದುಕೊಂಡಿತು. ಆಪ್ಟಿಕಲ್ ಫೈಬರ್ ಕೇಬಲ್ (ಓಎಫ್‍ಸಿ) ಮತ್ತು ಭೂಗತ (ಯುಸಿ) ಕೇಬಲ್‍ಗಳನ್ನು ಅಳವಡಿಸಲು ಮತ್ತು ಪರಿಹಾರವನ್ನು ಗುರುತಿಸಲು ಜಿಯೋದ ನೆಟ್‍ವರ್ಕ್, ನಿರ್ಮಾಣ ಮತ್ತು ಜಿಯೋ ಸೆಂಟರ್ ತಂಡವು ಗ್ರಾಮ ಪಂಚಾಯತ್, ಜಿಲ್ಲಾ ಅರಣ್ಯ ಅಧಿಕಾರಿ (ಡಿಎಫ್‍ಒ) ಮತ್ತು ಅರಣ್ಯ ರಕ್ಷಕರೊಂದಿಗೆ ಸಹಕರಿಸಿದೆ. ಸಮೀಕ್ಷೆಯಲ್ಲಿ ಡಿಎಫ್‍ಓ ಅವರನ್ನು ಒಳಗೊಂಡಿರುವ ಜಿಯೋ ತಂಡವು ಪ್ರದರ್ಶಿಸಿದ ದೂರದೃಷ್ಟಿಯು ಅನುಮೋದನೆಗಳನ್ನು ತ್ವರಿತಗೊಳಿಸಲು ಸಹಾಯ ಮಾಡಿತು ಮತ್ತು ಯೋಜನೆಯನ್ನು 20 ದಿನಗಳಲ್ಲಿ ಕಾರ್ಯಗತಗೊಳಿಸಲಾಯಿತು.
4ಜಿ ಡೇಟಾ ಡೌನ್‌ಲೋಡ್ ವೇಗದಲ್ಲಿ ಜಿಯೋಗೆ ಮೊದಲ ಸ್ಥಾನ
ರಿಲಯನ್ಸ್ ಜಿಯೋ ಪ್ರತಿ ಸೆಕೆಂಡ್‌ಗೆ ಸರಾಸರಿ 21.9 ಮೆಗಾಬೈಟ್ (ಎಂಬಿಪಿಎಸ್) ಡೌನ್‌ಲೋಡ್ ವೇಗದೊಂದಿಗೆ 4ಜಿ ವಿಭಾಗದಲ್ಲಿ ಅಕ್ಟೋಬರ್ ತಿಂಗಳಲ್ಲಿಯೂ ಮೊದಲ ಸ್ಥಾನದಲ್ಲಿದಲ್ಲಿ ಮುಂದುವರಿದಿದೆ ಎಂದು ಟ್ರಾಯ್ ತಿಳಿಸಿದೆ. ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಬಿಡುಗಡೆ ಮಾಡಿರುವ ವರದಿ ಪ್ರಕಾರ, ಅಕ್ಟೋಬರ್ ತಿಂಗಳಲ್ಲಿ ರಿಲಯನ್ಸ್ ಜಿಯೋ ತನ್ನ 4ಜಿ ನೆಟ್‌ವರ್ಕ್ ವೇಗವನ್ನು ಜೂನ್ ತಿಂಗಳಲ್ಲಿ ದಾಖಲಾಗಿದ್ದಂತೆ 21.9 ಎಂಬಿಪಿಎಸ್‌ಗೆ ಮತ್ತೆ ಹೆಚ್ಚಿಸಿಕೊಂಡಿದೆ. ಅದರ ಪ್ರತಿಸ್ಪರ್ಧಿ ಕಂಪೆನಿಗಳಾದ ಭಾರತಿ ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾ ಲಿಮಿಟೆಡ್ (ವಿಐಎಲ್) ಕೂಡ ತಮ್ಮ ಡೇಟಾ ಡೌನ್‌ಲೋಡ್ ವೇಗದಲ್ಲಿ ಹೆಚ್ಚಳ ಕಂಡುಕೊಂಡಿವೆ. ಏರ್‌ಟೆಲ್ 4ಜಿ ಡೇಟಾ ಡೌನ್‌ಲೋಡ್ ವೇಗವು ಅಕ್ಟೋಬರ್ ತಿಂಗಳಲ್ಲಿ 13.2 ಎಂಬಿಪಿಎಸ್‌ಗೆ ಏರಿಕೆಯಾಗಿದೆ. ಜೂನ್ ತಿಂಗಳಲ್ಲಿ ಇದರ ಸರಾಸರಿ ಡೌನ್‌ಲೋಡ್ ವೇಗ 5 ಎಂಬಿಪಿಎಸ್ ಇತ್ತು. ಹಾಗೆಯೇ ವಿಐಎಲ್ ಕೂಡ ಡೌನ್‌ಲೋಡ್ ವೇಗವನ್ನು 6.5 ಎಂಬಿಪಿಎಸ್ ವೇಗದಿಂದ 15.6 ಎಂಬಿಪಿಎಸ್‌ಗೆ ಹೆಚ್ಚಿಸಿಕೊಂಡಿದೆ.
ರಿಲಯನ್ಸ್ ಜಿಯೋಗೆ A ರೇಟಿಂಗ್
ಪರಿಸರಕ್ಕೆ ಹಾನಿ ಮಾಡದೆ, ಪರಿಸರಕ್ಕೆ ಪೂರಕವಾಗಿರುವ ಕಂಪನಿಗಳ ಪೈಕಿ ಜಿಯೋ ಭಾರತದಲ್ಲಿ ಎ ದರ್ಜೆ ಪಡೆದುಕೊಂಡಿದೆ. ಸಿಡಿಪಿಯ (ಕಾರ್ಬನ್ ಡಿಸ್ಕ್ಲೋಷರ್ ಪ್ರಾಜೆಕ್ಟ್) 2021ನೇ ಸಾಲಿನಲ್ಲಿ ಜಿಯೋ ಈ ಸ್ಥಾನ ಪಡೆದುಕೊಂಡಿದೆ.