IRCTCಯಿಂದ ಕಡಿಮೆ ಬೆಲೆಗೆ 'ಥ್ರಿಲ್ಲಿಂಗ್ ಥೈಲ್ಯಾಂಡ್' ಪ್ಯಾಕೇಜ್; ಫುಲ್ ಜಾಲಿ ಜಾಲಿ
IRCTC ಬೇಸಿಗೆ ರಜೆಗಾಗಿ ಥೈಲ್ಯಾಂಡ್‌ಗೆ ವಿಶೇಷ ಪ್ಯಾಕೇಜ್ ಘೋಷಿಸಿದೆ. ಬ್ಯಾಂಕಾಕ್ ಮತ್ತು ಪಟ್ಟಾಯ ಒಳಗೊಂಡ ಈ ಪ್ಯಾಕೇಜ್‌ನಲ್ಲಿ ವಿಮಾನ, ಹೋಟೆಲ್, ಆಹಾರ ಸೇರಿದಂತೆ ಎಲ್ಲವೂ ಸೇರಿದೆ.

ಬೇಸಿಗೆಯಲ್ಲಿ ರಜಾದಿನಗಳನ್ನು ಕಳೆಯಲು ಟೂರ್ ಪ್ಯಾಕೇಜ್ ಹುಡುಕುತ್ತಿದ್ದೀರಾ? ಹಾಗಿದ್ರೆ IRCTC ಬೇಸಿಗೆಗಾಗಿ ವಿಶೇಷ ಪ್ಯಾಕೇಜ್ ಆರಂಭಿಸಿದೆ. ಕಡಿಮೆ ಬೆಲೆಯಲ್ಲಿ ಜನರನ್ನು ಥೈಲ್ಯಾಂಡ್ ಗೆ IRCTC ಕರೆದುಕೊಂಡು ಹೋಗುತ್ತಿದೆ.
IRCTC ಘೋಷಿಸಿರುವ ಈ ಥೈಲ್ಯಾಂಡ್ ಪ್ಯಾಕೇಜ್‌ನಲ್ಲಿ ಬ್ಯಾಂಕಾಕ್ ಮತ್ತು ಪಟ್ಟಾಯದಂತಹ ನಗರಗಳಿಗೆ ಭೇಟಿ ನೀಡಲಾಗುತ್ತದೆ. ವಿಮಾನ, ಹೋಟೆಲ್, ಆಹಾರ ಸೇರಿದಂತೆ ಎಲ್ಲಾ ವೆಚ್ಚಗಳು ಈ ಪ್ಯಾಕೇಜ್‌ನಲ್ಲಿ ಸೇರ್ಪಡೆಯಾಗಿದೆ.
ಈ ಅಂತರಾಷ್ಟ್ರೀಯ ಪ್ರವಾಸಕ್ಕೆ ಐಆರ್‌ಸಿಟಿಸಿ "ಥ್ರಿಲ್ಲಿಂಗ್ ಥೈಲ್ಯಾಂಡ್" ಎಂದು ಹೆಸರಿಟ್ಟಿದೆ. 5 ಹಗಲು ಮತ್ತು 4 ರಾತ್ರಿಯ ಈ ಪ್ರವಾಸಕ್ಕೆ ತೆರಳಲು ನಿಮಗೆ ದೆಹಲಿ, ಮುಂಬೈ, ಚೆನ್ನೈ ಮತ್ತು ಕೋಲ್ಕತ್ತಾದಿಂದ ನೇರ ವಿಮಾನದ ಸೌಲಭ್ಯ ಸಿಗಲಿದೆ.
3-ಸ್ಟಾರ್ ಹೋಟೆಲ್, ಸಾರಿಗೆ ವೆಚ್ಚವೂ ಸೇರ್ಪಡೆ
ಬ್ಯಾಂಕಾಕ್ ಮತ್ತು ಪಟ್ಟಾಯದ ಪ್ರವಾಸಿ ಸ್ಥಳಗಳಾದ ಕಡಲತೀರ, ದೇವಾಲಯ, ಮಾರುಕಟ್ಟೆ ಮತ್ತು ರಾತ್ರಿ ಪ್ರದರ್ಶನಗಳನ್ನು ನೋಡಬಹುದಾಗಿದೆ. ಉಪಹಾರ ಮತ್ತು ಊಟದ ಜೊತೆ 3-ಸ್ಟಾರ್ ಹೋಟೆಲ್‌ನಲ್ಲಿ ಉಳಿದುಕೊಳ್ಳುವ ವ್ಯವಸ್ಥೆಯನ್ನು ಪ್ರವಾಸಿಗರಿಗೆ ಕಲ್ಪಿಸಿಕೊಡಲಾಗುತ್ತದೆ. ಕೆಲವು ಪ್ರದೇಶಗಳಲ್ಲಿ ಮಧ್ಯಾಹ್ನದ ಊಟವು ಸೇರಿರುತ್ತದೆ.
ಜಲ ಕ್ರೀಡೆಗಳು ಮತ್ತು ದ್ವೀಪ ಪ್ರವಾಸದಂತಹ ಕೆಲವು ಸಾಹಸ ಚಟುವಟಿಕೆಗಳು ಸಹ ಈ ಪ್ಯಾಕೇಜ್‌ನಲ್ಲಿ ಸೇರಿವೆ. ಸಾರಿಗೆಯ ವೆಚ್ಚವೂ ಈ ಪ್ಯಾಕೇಜ್‌ನಲ್ಲಿ ಸೇರ್ಪಡೆಯಾಗಿರೋದರಿಂದ ಪ್ರವಾಸದ ವೇಳೆ ಹೆಚ್ಚಿನ ಹಣದ ಅವಶ್ಯಕತೆಯೂ ಇರಲ್ಲ.
ಥೈಲ್ಯಾಂಡ್ ಪ್ರವಾಸದ ಬಜೆಟ್
ವಿಮಾನ ಟಿಕೆಟ್, ಹೋಟೆಲ್, ಆಹಾರ ಮತ್ತು ಸ್ಥಳೀಯ ಸಾರಿಗೆ ವೆಚ್ಚ ಸೇರಿಸಿದ್ರೆ ಒಬ್ಬರಿಗೆ 70 ರಿಂದ 90 ಸಾವಿರ ರೂಪಾಯಿ ಆಗುತ್ತದೆ. ಆದ್ರೆ IRCTC ಈ ಪ್ರವಾಸವನ್ನು ಕೇವಲ 47,800 ರೂಪಾಯಿಗೆ ನೀಡುತ್ತಿದೆ. IRCTC ಅಧಿಕೃತ ಸಾರಿಗೆ ಸಂಸ್ಥೆಯಾಗಿದ್ದರಿಂದ ಮೋಸ, ವಂಚನೆ ಮತ್ತು ಅಧಿಕ ಶುಲ್ಕ ವಿಧಿಸುವ ಅಪಾಯವಿರಲ್ಲ.
IRCTC ಪ್ಯಾಕೇಜ್ ಕುಟುಂಬ ಸ್ನೇಹಿ ಪ್ರವಾಸಿ ವೆಬ್‌ಸೈಟ್ ಆಗಿದೆ. IRCTC ಪ್ರವಾಸಿ ಪ್ಯಾಕೇಜ್ ಮಕ್ಕಳು ಮತ್ತು ವೃದ್ಧರು ಸಹ ಆರಾಮವಾಗಿ ಪ್ರಯಾಣಿಸಬಹುದು. ಇದಕ್ಕಾಗಿ ಎಲ್ಲಾ ವ್ಯವಸ್ಥೆಯನ್ನು ಐಆರ್‌ಸಿಟಿಟಿ ಮಾಡಿಕೊಡುತ್ತದೆ. ನೀವು ಮೊದಲ ಬಾರಿಗೆ ಅಂತರರಾಷ್ಟ್ರೀಯವಾಗಿ ಪ್ರಯಾಣಿಸುತ್ತಿದ್ದರೆ IRCTC ಪ್ರವಾಸಿ ಪ್ಯಾಕೇಜ್ ಆಯ್ಕೆ ಮಾಡಿಕೊಳ್ಳಬಹುದು.
ಬುಕ್ಕಿಂಗ್ ಹೇಗೆ?
ಪ್ರವಾಸಿಗರು ಅಧಿಕೃತ ವೆಬ್‌ಸೈಟ್ [irctctourism.com](https://www.irctctourism.com/) ಮೂಲಕ ಟಿಕೆಟ್‌ಗಳನ್ನು ಬುಕ್ ಮಾಡಿಕೊಳ್ಳಬಹುದು. irctctourism.comಗೆ ಭೇಟಿ ನೀಡಿ “ಥ್ರಿಲ್ಲಿಂಗ್ ಥೈಲ್ಯಾಂಡ್” ಪ್ಯಾಕೇಜ್ ಆಯ್ಕೆಮಾಡಿ. ನಂತರ ದಿನಾಂಕ ಆಯ್ಕೆ ಮಾಡಿಕೊಂಡು ಪಾವತಿಸಿ ಬುಕಿಂಗ್ ದೃಢೀಕರಿಸಿಕೊಳ್ಳಬಹುದು. ಇದಕ್ಕಾಗಿ ನೀವು ಪ್ರವಾಸಿ ವೀಸಾ ತೆಗೆದುಕೊಳ್ಳಬೇಕಾಗುತ್ತದೆ ಎಂಬುವುದು ನೆನಪಿರಲಿ.