ಪ್ರಯಾಣಿಕರಿಗೆ ಗುಡ್‌ನ್ಯೂಸ್ ನೀಡಿದ ಭಾರತೀಯ ರೈಲ್ವೆ: ಸ್ಲೀಪರ್ ದರದಲ್ಲಿ ಥರ್ಡ್ ಎಸಿ ಪ್ರಯಾಣ
ಭಾರತೀಯ ರೈಲ್ವೆ ಹೊಸ ನೀತಿಯನ್ನು ಜಾರಿಗೆ ತಂದಿದ್ದು, ರೈಲು ಹೊರಡುವ 4 ಗಂಟೆಗಳ ಮೊದಲು ಎಲ್ಲಾ ಖಾಲಿ AC ಸೀಟುಗಳನ್ನು ಭರ್ತಿ ಮಾಡಲು ಸೂಚಿಸಿದೆ. ಸ್ಲೀಪರ್ ದರದಲ್ಲಿ ಥರ್ಡ್ AC ಪ್ರಯಾಣ ಮಾಡಲು ಇದು ಅವಕಾಶ ನೀಡುತ್ತದೆ.

ಭಾರತೀಯ ರೈಲ್ವೆ ತನ್ನ ಪ್ರಮುಖ ನೀತಿಯಲ್ಲಿ ಬದಲಾವಣೆ ತಂದಿದೆ. ರೈಲು ಹೊರಡುವ 4 ಗಂಟೆಯ ಮುನ್ನ ಎಸಿ ಕೋಚ್‌ಗಳಲ್ಲಿರುವ ಎಲ್ಲಾ ಖಾಲಿ ಸೀಟ್‌ಗಳನ್ನು ಭರ್ತಿಯಾಗುವಂತೆ ನೋಡಿಕೊಳ್ಳುವಂತೆ ಸೂಚನೆ ನೀಡಿದೆ. ಈ ನಿಯಮದಿಂದ ಪ್ರಯಾಣಿಕರಿಗೆ ಸ್ಲೀಪರ್ ದರದಲ್ಲಿ ಥರ್ಡ್ ಎಸಿ ಪ್ರಯಾಣ ಮಾಡಬಹುದು.
ರೈಲು ಟಿಕೆಟ್ ಬುಕ್ಕಿಂಗ್ ವೇಳೆ ಆಟೋ ಅಪ್‌ಗ್ರೇಡ್ ಕ್ಲಿಕ್ ಮಾಡುವ ಪ್ರಯಾಣಿಕರಿಗೆ ಎಸಿ ಕೋಚ್ ಪ್ರಯಾಣದ ಸೌಲಭ್ಯ ಸಿಗಲಿದೆ. ಎಸಿ ಕೋಚ್‌ನಲ್ಲಿರುವ ಆಸನಗಳನ್ನು "ಆಟೋ ಅಪ್‌ಗ್ರೇಡ್" ಸೌಲಭ್ಯದ ಮೂಲಕ ಸ್ಲೀಪರ್ ಕ್ಲಾಸ್ (SL) ಮತ್ತು ಸೆಕೆಂಡ್ ಸಿಟ್ಟಿಂಗ್ (2S) ನಂತಹ ಕೆಳ ದರ್ಜೆಯ ದೃಢೀಕೃತ ಟಿಕೆಟ್‌ಗಳನ್ನು ಎಸಿ ಕೋಚ್‌ಗೆ ತರಲಾಗುತ್ತದೆ.
ಟಿಕೆಟ್‌ಗಳ ಆಟೋ ಅಪ್‌ಗ್ರೇಡ್
ರೈಲು ತನ್ನ ಮೂಲ ಅಥವಾ ಆರಂಭದ ನಿಲ್ದಾಣದಿಂದ ಹೊರಡುವ 4 ಗಂಟೆಗಳ ಮುನ್ನ ಚಾರ್ಟ್ ಸಿದ್ಧಪಡಿಸುವ ಸಮಯದಲ್ಲಿ ಆಟೋ ಅಪ್‌ಗ್ರೇಡ್ ಮಾಡಬೇಕು. ಖಾಲಿಯಿರೋ ಪ್ರಥಮ ದರ್ಜೆಗಳಿಗೆ ಕೆಳಗಿನ/ಕೆಳ ದರ್ಜೆಯ ಪ್ರಯಾಣಿಕರನ್ನು ತರಬೇಕು ಎಂದು ಸೂಚನೆ ನೀಡಲಾಗಿದೆ. ಈ ಮೂಲಕ ಚೇರ್ ಕಾರ್ (CC), ಥರ್ಡ್ AC (3A), ಸೆಕೆಂಡ್ AC (2A), ಮತ್ತು ಫಸ್ಟ್ AC (1A) ನಂತಹ AC ಕೋಚ್‌ಗಳ ಕರೆಂಟ್ ಬುಕಿಂಗ್ ಸೌಲಭ್ಯ ರದ್ದುಗೊಳಿಸುವ ಕುರಿತು ಭಾರತೀಯ ರೈಲ್ವೆ ಚಿಂತನೆ ನಡೆಸುತ್ತಿದೆ. ಇನ್ನುಳಿದ ಸ್ಲೀಪರ್ ಮತ್ತು 2S ಗಳಿಗೆ ಕರೆಂಟ್ ಬುಕಿಂಗ್ ಸೌಲಭ್ಯ ಇರಲಿದೆ.
ಚಾರ್ಟ್ ಸಿದ್ಧಪಡಿಸಿದ ನಂತರ ಖಾಲಿ ಉಳಿದ ಸೀಟ್‌ಗಳನ್ನು ಕಾಯ್ದಿರಿಸಲು ಅಂದ್ರೆ ರೈಲು ಹೊರಡುವ ಅರ್ಧ ಗಂಟೆ (30 ನಿಮಿಷ) ಮೊದಲು ಕರೆಂಟ್ ಬುಕಿಂಗ್ ಆಯ್ಕೆಯನ್ನು ಪ್ರಯಾಣಿಕರಿಗೆ ನೀಡಲಾಗುತ್ತದೆ. ಇದೀಗ ಎಸಿ ಕೋಚ್‌ಗಳಿಗೆ ಕರೆಂಟ್ ಬುಕಿಂಗ್ ರದ್ದುಗೊಳಿಸಲು ಭಾರತೀಯ ರೈಲ್ವೆ ಮುಂದಾಗಿದೆ ಎಂದು ವರದಿಯಾಗಿದೆ.
ಆಟೋ ಅಪ್‌ಗ್ರೇಡ್ ಮೂಲಕ ಎಸಿ ಕೋಚ್ ಸೀಟ್ ಭರ್ತಿ ಆಗೋದರಿಂದ ಸ್ಲೀಪರ್ ಕೋಚ್‌ಗಳಲ್ಲಿರುವ ವೇಟಿಂಗ್ ಮತ್ತು ಆರ್‌ಎಸಿ ಟಿಕೆಟ್‌ಗಳು ಕನ್ಫರ್ಮ್ ಆಗುತ್ತವೆ. ಇದರಿಂದ ರೈಲಿನ ಎಲ್ಲಾ ಕೋಚ್‌ಗಳು ಭರ್ತಿಯಾಗಲಿದೆ.
ಯಾವ ರೀತಿ ಅಪ್‌ಗ್ರೇಡ್?
ಭಾರತೀಯ ರೈಲ್ವೆ 2006ರಲ್ಲಿ ಆಟೋ ಅಪ್‌ಗ್ರೇಡ್ ಸೌಲಭ್ಯ ಆರಂಭಿಸುತ್ತದೆ. ಟಿಕೆಟ್‌ನ್ನು SL ನಿಂದ 3A ಗೆ ಮತ್ತು 3A ನಿಂದ 2A ಗೆ ಆಟೋ ಅಪ್‌ಗ್ರೇಡ್ ಮಾಡಲಾಗುತ್ತದೆ. ಸಾಮಾನ್ಯವಾಗಿ ಎಸಿ ಕೋಚ್‌ಗಳು ಭರ್ತಿಯಾಗುತ್ತವೆ. ಸಾಮಾನ್ಯ ದಿನಗಳಲ್ಲಿ ಮಾತ್ರ ಎಸಿ ಕೋಚ್‌ಗಳು ಖಾಲಿಯಾಗಿರುತ್ತವೆ. ಈ ಸಂದರ್ಭದಲ್ಲಿ AC ಅಲ್ಲದ ಟಿಕೆಟ್‌ಗಳನ್ನು ಹೊಂದಿರುವ ಪ್ರಯಾಣಿಕರು ಅಪ್‌ಗ್ರೇಡ್ ಮಾಡಲಾಗುತ್ತದೆ.