MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
Ind vs SL 1st Test
KPSC Recruitment Scam
Indian Air Force
Bidadi Township Row
Bengaluru HMT Watch Sales
Karnataka Excise Department
Bengaluru Traffic Police Assault Case
Belagavi Hidakal Reservoir
Dakshina Kannada Vande Bharat Train
Muslim Faces in BJP New Team
Karnataka Food Inspection
  • Home
  • Life
  • Travel
  • ಹೊಸಪೇಟೆ ಮಾರ್ಗವಾಗಿ ಚಲಿಸುವ ಯಶವಂತಪುರ-ವಿಜಯಪುರ ರೈಲು ಪ್ರಯಾಣಿಕರಿಗೆ ಸಂತಸದ ಸುದ್ದಿ

ಹೊಸಪೇಟೆ ಮಾರ್ಗವಾಗಿ ಚಲಿಸುವ ಯಶವಂತಪುರ-ವಿಜಯಪುರ ರೈಲು ಪ್ರಯಾಣಿಕರಿಗೆ ಸಂತಸದ ಸುದ್ದಿ

ಯಶವಂತಪುರ-ವಿಜಯಪುರ ಮತ್ತು ಯಶವಂತಪುರ-ಸಿಂಧನೂರು ಎಕ್ಸ್‌ಪ್ರೆಸ್ ರೈಲುಗಳಿಗೆ ಹೆಚ್ಚುತ್ತಿರುವ ಪ್ರಯಾಣಿಕರ ದಟ್ಟಣೆ ನಿಭಾಯಿಸಲು ಹೆಚ್ಚುವರಿ ಕೋಚ್‌ಗಳನ್ನು ಅಳವಡಿಸಲಾಗುತ್ತಿದೆ. ಮೇ 8 ರಿಂದ ಜಾರಿಗೆ ಬರುವ ಈ ಸೌಲಭ್ಯದಲ್ಲಿ ಮೂರನೇ ದರ್ಜೆ ಎ.ಸಿ, ಸ್ಲೀಪರ್ ಹಾಗೂ ಸಾಮಾನ್ಯ ದರ್ಜೆಯ ಬೋಗಿಗಳು ಸೇರಲಿವೆ.

1 Min read
Author : Kannadaprabha News
Published : May 07 2026, 07:49 AM IST
Share this Photo Gallery
  • FB
  • TW
  • Linkdin
  • Whatsapp
14
ಯಶವಂತಪುರ ವಿಜಯಪುರ
Image Credit : Gemini

ಯಶವಂತಪುರ-ವಿಜಯಪುರ

ಹೊಸಪೇಟೆ ಮಾರ್ಗವಾಗಿ ವಿಜಯಪುರ ತಲುಪುವ ಎಕ್ಸ್‌ಪ್ರೆಸ್ ರೈಲು ಪ್ರಯಾಣಿಕರಿಗೆ ಸಂತಸದ ಸುದ್ದಿ ಬಂದಿದೆ. ಈ ರೈಲಿಗೆ ವಿಶೇಷ ಸೌಲಭ್ಯ ಕಲ್ಪಿಸಲಾಗಿದ್ದು, ಮೇ 8ರಿಂದಲೇ ಪ್ರಾಯೋಗಿಕವಾಗಿ ಜಾರಿಗೆ ಬರಲಿದೆ. ಹೆಚ್ಚಾಗುತ್ತಿರುವ ಸಂಚಾರ ದಟ್ಟಣೆಯಿಂದಾಗಿ ಈ ಕ್ರಮ ತೆಗೆದುಕೊಳ್ಳಲಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
24
ಗಾಡಿ ಸಂಖ್ಯೆ :16547/48
Image Credit : Gemini

ಗಾಡಿ ಸಂಖ್ಯೆ :16547/48

ಹೆಚ್ಚಾಗುತ್ತಿರುವ ಸಂಚಾರ ದಟ್ಟಣೆಯಿಂದಾಗಿ ಹೊಸಪೇಟೆ ಮಾರ್ಗವಾಗಿ ಸಂಚರಿಸುವ ಯಶವಂತಪುರ- ವಿಜಯಪುರ (ಗಾಡಿ ಸಂಖ್ಯೆ :16547/48) ಹಾಗೂ ಯಶವಂತಪುರ- ಸಿಂಧನೂರು (ಗಾಡಿ ಸಂಖ್ಯೆ:16545/46) ಈ ರೈಲುಗಳಿಗೆ ಹೆಚ್ಚುವರಿಯಾಗಿ ಮೂರನೇ ದರ್ಜೆ ಎ.ಸಿ, ಸ್ಲೀಪರ್ ಹಾಗೂ ಸಾಮಾನ್ಯ ದರ್ಜೆಯ ಕೋಚ್‌ಗಳನ್ನು ಅಳವಡಿಸಲಾಗಿದೆ.

Related Articles

Related image1
1900 ಕಿಮೀ ಪ್ರಯಾಣ, ಜಸ್ಟ್ 6 ನಿಲುಗಡೆ; ಬೆಂಗಳೂರಿನಿಂದ ಎಲ್ಲಿಗೆ ಹೋಗುತ್ತೆ ಈ ಸೂಪರ್‌ಫಾಸ್ಟ್ ರೈಲು!
Related image2
ದಕ್ಷಿಣ ಕರ್ನಾಟಕದ 5 ಜಿಲ್ಲೆಗಳಿಂದ ತಿರುಪತಿಗೆ ನೇರ ರೈಲು: ರಾಜ್ಯದ 20ಕ್ಕೂ ಹೆಚ್ಚು ನಿಲ್ದಾಣಗಳಲ್ಲಿ ನಿಲುಗಡೆ
34
ಒಟ್ಟು 10 ಬೋಗಿ ಅಳವಡಿಕೆ
Image Credit : Social Media

ಒಟ್ಟು 10 ಬೋಗಿ ಅಳವಡಿಕೆ

ಎರಡು ರೈಲುಗಳಿಗೆ ಪ್ರತ್ಯೇಕವಾಗಿ ಒಂದು ಮೂರನೇ ದರ್ಜೆ ಎಸಿ, ಮೂರು ಸ್ಲೀಪರ್ ಬೋಗಿಗಳು ಹಾಗೂ ಒಂದು ಸಾಮಾನ್ಯ ದರ್ಜೆಯ ಬೋಗಿಗಳನ್ನು ಹೀಗೆ ಎರಡು ರೈಲುಗಳಿಗೆ ಒಟ್ಟು 10 ಬೋಗಿಗಳನ್ನು ಅಳವಡಿಸಲಾಗುತ್ತದೆ. ಈ ಸೌಲಭ್ಯದಿಂದ ಮುಂಗಡವಾಗಿ ಟಿಕೆಟ್ ಕಾಯ್ದಿರಿಸುವಿಕೆಯ ಪ್ರಮಾಣ ಕಡಿಮೆಯಾಗಿ ನಿಗಧಿತ ದಿನಾಂಕದೊಳಗೆ ಬೆಂಗಳೂರಿಗೆ ಹೋಗಲು ಅನುಕೂಲವಾಗುತ್ತದೆ.

44
ಮೇ 8ರಿಂದ ಸೌಲಭ್ಯ
Image Credit : Meta AI

ಮೇ 8ರಿಂದ ಸೌಲಭ್ಯ

ಈ ಸೌಲಭ್ಯವು ಮೇ 8ರಿಂದ ಯಶವಂತಪುರದಿಂದ ಹೊರಡುವ ರೈಲುಗಳಿಂದ ಜಾರಿಗೆ ಬರಲಿದೆ. ಪ್ರಯಾಣಿಕರ ಅನುಕೂಲಕ್ಕೆ ಹೆಚ್ಚುವರಿ ಕೋಚ್‌ಗಳ ಸೌಲಭ್ಯ ಒದಗಿಸಿದ ನೈರುತ್ಯ ರೈಲ್ವೆ ವಲಯದ ಪ್ರಧಾನ ವ್ಯವಸ್ಥಾಪಕರಿಗೆ ಅಭಿನಂದನೆ ಸಲ್ಲಿಸಿರುವ ವಲಯ ರೈಲ್ವೆ ಬಳಕೆದಾರರ ಸಲಹಾ ಸಮಿತಿಯ ಹಿರಿಯ ಸದಸ್ಯ ಬಾಬುಲಾಲ್ ಜೈನ್‌ರವರು ಆದಷ್ಟು ಬೇಗನೆ ರೈಲುಗಳ ಹಳೇ ಕೋಚ್‌ಗಳನ್ನು ಬದಲಿಸಿ ಆಧುನಿಕ ಮೂಲಸೌಲಭ್ಯಗಳಿರುವ ಎಲ್.ಎಚ್.ಬಿ. ಕೋಚ್‌ಗಳಿಗೆ ಪರಿವರ್ತಿಸಬೇಕೆಂದು ಒತ್ತಾಯಿಸಿದ್ದಾರೆ ಎಂದು ವಿಜಯನಗರ ರೈಲ್ವೆ ಬಳಿಕೆದಾರರ ಸಲಹಾ ಸಮಿತಿ ಕಾರ್ಯದರ್ಶಿ ಮಹೇಶ್ ಕುಡುತಿನಿ ತಿಳಿಸಿದ್ದಾರೆ.

ಇದನ್ನೂ ಓದಿ: ಮೈಸೂರು, ಬೆಂಗಳೂರು, ಚಿತ್ರದುರ್ಗದಿಂದ ವಿಜಯಪುರಕ್ಕಿದೆ ನೇರ ರೈಲು; ಪ್ರಯಾಣಿಕರಿಗೆ ಉತ್ತಮ ಆಯ್ಕೆ

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

KN
Kannadaprabha News
1967ರ ನವೆಂಬರ್ 4ರಂದು ಆರಂಭವಾದ ಕನ್ನಡಪ್ರಭ ಕನ್ನಡ ಪತ್ರಿಕೋದ್ಯಮದಲ್ಲಿಯೇ ವಿಶೇಷ ಛಾಪು ಮೂಡಿಸಿದ ಕನ್ನಡ ದಿನ ಪತ್ರಿಕೆ. ದೇಶ, ವಿದೇಶ, ವಾಣಿಜ್ಯ, ಕ್ರೀಡೆ, ಮನೋರಂಜನೆ ಸೇರಿ ವೈವಿಧ್ಯಮಯ ಸುದ್ದಿಗಳ ಹೂರಣ ಹೊತ್ತು ತರುವ ಕನ್ನಡಪ್ರಭ, ಕನ್ನಡಿಗರ ಅಸ್ಮಿತೆಯ ಸಂಕೇತ. ಸದಾ ಕರುನಾಡು, ನುಡಿ, ಸಂಸ್ಕೃತಿ ಪರ ಧ್ವನಿ ಎತ್ತುವ ಕನ್ನಡಪ್ರಭ ದಿನ ಪತ್ರಿಕೆಯಲ್ಲಿ ಪ್ರಕಟಗೊಳ್ಳುವ ಸುದ್ದಿಗಳು ಸುವರ್ಣ ನ್ಯೂಸ್ ವೆಬ್‌ಸೈಟಲ್ಲೂ ಲಭ್ಯ.
ಭಾರತೀಯ ರೈಲ್ವೆ
ವಿಜಯಪುರ
ಬೆಂಗಳೂರು
ಪ್ರವಾಸ

Latest Videos
Recommended Stories
Recommended image1
"ಗಂಡಸರಿಲ್ಲದೆ ನಿಮಗಿದು ಸಾಧ್ಯವಿಲ್ಲ" ಎಂದವರಿಗೆ ದಿಟ್ಟ ಉತ್ತರ, ಮೈನಸ್ ಡಿಗ್ರಿ ಚಳಿ 2 ಧ್ರುವ ದಾಟಿದ ಮೊದಲ ಮಹಿಳೆ ಕಥೆ!
Recommended image2
ತಾಳಗುಪ್ಪ-ಬೆಂಗಳೂರು ಎಕ್ಸ್​ಪ್ರೆಸ್​ ಸೇರಿ ಕೆಲ ರೈಲು ಸಂಚಾರದಲ್ಲಿ ವ್ಯತ್ಯಯ- ಕೆಲವು ರದ್ದು; ಡಿಟೇಲ್ಸ್​ ಇಲ್ಲಿದೆ
Recommended image3
ಸಿದ್ಧಗಂಗಾ, ತಾಳಗುಪ್ಪ, ಯಶವಂತಪುರ ಎಕ್ಸ್‌ಪ್ರೆಸ್‌ ಅರಸೀಕೆರೆಯಲ್ಲಿ ಕೊನೆ; ರೈಲುಗಳ ಸಂಚಾರ ರದ್ದು
Related Stories
Recommended image1
1900 ಕಿಮೀ ಪ್ರಯಾಣ, ಜಸ್ಟ್ 6 ನಿಲುಗಡೆ; ಬೆಂಗಳೂರಿನಿಂದ ಎಲ್ಲಿಗೆ ಹೋಗುತ್ತೆ ಈ ಸೂಪರ್‌ಫಾಸ್ಟ್ ರೈಲು!
Recommended image2
ದಕ್ಷಿಣ ಕರ್ನಾಟಕದ 5 ಜಿಲ್ಲೆಗಳಿಂದ ತಿರುಪತಿಗೆ ನೇರ ರೈಲು: ರಾಜ್ಯದ 20ಕ್ಕೂ ಹೆಚ್ಚು ನಿಲ್ದಾಣಗಳಲ್ಲಿ ನಿಲುಗಡೆ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved