MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Karnataka Districts
  • ಬೆಳಗಾವಿ ವಿಮಾನ ನಿಲ್ದಾಣ ಜುಲೈಗೆ ಪೂರ್ಣ, ನೂತನ ಟರ್ಮಿನಲ್ ಪಿಎಂ ಮೋದಿಯಿಂದ ಉದ್ಘಾಟನೆ

ಬೆಳಗಾವಿ ವಿಮಾನ ನಿಲ್ದಾಣ ಜುಲೈಗೆ ಪೂರ್ಣ, ನೂತನ ಟರ್ಮಿನಲ್ ಪಿಎಂ ಮೋದಿಯಿಂದ ಉದ್ಘಾಟನೆ

ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ನಿರ್ಮಾಣವಾಗುತ್ತಿರುವ ನೂತನ ಟರ್ಮಿನಲ್ ಕಾಮಗಾರಿಯು ಜುಲೈ ಅಂತ್ಯಕ್ಕೆ ಪೂರ್ಣಗೊಳ್ಳಲಿದೆ. ಕಮಲ ಬಸದಿ ಮಾದರಿಯಲ್ಲಿ ನಿರ್ಮಾಣವಾಗುತ್ತಿರುವ ಈ ಟರ್ಮಿನಲ್ ಅನ್ನು ಆಗಸ್ಟ್-ಸೆಪ್ಟೆಂಬರ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರಿಂದ ಉದ್ಘಾಟಿಸಲು ಯೋಜಿಸಲಾಗಿದೆ.  

2 Min read
Author : Gowthami K
Published : May 17 2026, 06:23 PM IST
Share this Photo Gallery
  • FB
  • TW
  • Linkdin
  • Whatsapp
15
ಫ್ಲೈಯರ್ ಏರ್ಪೋರ್ಟ್‌ ಟರ್ಮಿನಲ್ ಕಾಮಗಾರಿ ಜುಲೈಗೆ ಪೂರ್ಣ
Image Credit : Asianet News

ಫ್ಲೈಯರ್ ಏರ್ಪೋರ್ಟ್‌ ಟರ್ಮಿನಲ್ ಕಾಮಗಾರಿ ಜುಲೈಗೆ ಪೂರ್ಣ

ವಿಮಾನ ನಿಲ್ದಾಣದಲ್ಲಿ ನೂತನವಾಗಿ ನಿರ್ಮಿಸುತ್ತಿರುವ ಟರ್ಮಿನಲ್ ಕಾಮಗಾರಿ ಜುಲೈ ಅಂತ್ಯಕ್ಕೆ ಪೂರ್ಣಗೊಳ್ಳಲಿದ್ದು, ಆಗಸ್ಟ್‌-ಸೆಪ್ಟೆಂಬರ್ ಮಧ್ಯದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಕೇಂದ್ರ ನಾಗರಿಕರ ವಿಮಾನಯಾನ ಸಚಿವರಿಂದ ವರ್ಚ್ಯುವಲ್ ಮೂಲಕ ಉದ್ಘಾಟನೆಗೊಳಿಸಲು ಪ್ರಯತ್ನಿಸಲಾಗುವುದು ಎಂದು ಸಂಸದ ಜಗದೀಶ ಶೆಟ್ಟರ್ ಹೇಳಿದರು.

Add Asianetnews Kannada as a Preferred SourcegooglePreferred
25
ಕಮಲ ಬಸದಿ ಮಾದರಿಯಲ್ಲಿ ನೂತನ ಟರ್ಮಿನಲ್
Image Credit : Asianet News

ಕಮಲ ಬಸದಿ ಮಾದರಿಯಲ್ಲಿ ನೂತನ ಟರ್ಮಿನಲ್

ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ನಡೆಯುತ್ತಿರುವ ನೂತನ ಟರ್ಮಿನಲ್ ಕಾಮಗಾರಿ ಪರಿಶೀಲಿಸಿದ ಬಳಿಕ ವಿಮಾನ ನಿಲ್ದಾಣ ಸಲಹಾ ಸಮಿತಿ ಸದಸ್ಯರೊಂದಿಗೆ ಶನಿವಾರ ಸಭೆ ನಡೆಸಿ ಮತನಾಡಿದ ಅವರು, ನೂತನ ಟರ್ಮಿನಲ್ ಕಮಲ ಬಸದಿ ಮಾದರಿಯಲ್ಲಿ ಆಗುತ್ತಿದೆ. ಮುಖ್ಯ ರಸ್ತೆ ಚತುಷ್ಪಥ ಆಗಲಿದ್ದು ಜತೆಗೆ ಅಲ್ಲಿಂದ ತಿರುವು ಪಡೆಯುವಾಗಿನ ಪ್ರಮುಖ ರಸ್ತೆಯ ಪ್ರವೇಶ ದ್ವಾರವನ್ನೂ ಆಕರ್ಷವಾಗಿ ಮಾಡಲು ನಿರ್ಧರಿಸಿದ್ದೇವೆ. ಇದಕ್ಕೆ ಸಂಬಂಧಿಸಿ ಜಿಲ್ಲಾ ಉಸ್ತುವಾರಿ ಸಚಿವರಿಗೆ ಪ್ರಸ್ತಾವನೆ ಕಳುಹಿಸಲಾಗುವುದು ಎಂದರು.

Related Articles

Related image1
ಬೀದರ್-ಬೆಂಗಳೂರು ವಿಮಾನ ಸೇವೆ ಶೀಘ್ರವೇ ಪುನರಾರಂಭ, ಮತ್ತೆ ಜಿಲ್ಲೆಯ ಜನತೆಗೆ ಸಂತಸದ ಸುದ್ದಿ
Related image2
ಬೆಂಗಳೂರು ವಿಮಾನ ನಿಲ್ದಾಣ: 40 ಕೋಟಿ ಪ್ರಯಾಣಿಕರ ದಾಖಲೆ! ಕಾರ್ಗೊ ಸಾಗಣೆಯಲ್ಲೂ ಟಾಪ್, ಐತಿಹಾಸಿಕ ಮೈಲಿಗಲ್ಲು!
35
ಅಂತಾರಾಷ್ಟ್ರೀಯ ಮಟ್ಟಕ್ಕೆ ಏರಿಸಲು ಮನವಿ
Image Credit : Asianet News

ಅಂತಾರಾಷ್ಟ್ರೀಯ ಮಟ್ಟಕ್ಕೆ ಏರಿಸಲು ಮನವಿ

ಹುಬ್ಬಳ್ಳಿಯಲ್ಲಿ ವಿಮಾನ ನಿಲ್ದಾಣದಿಂದ ರೈಲ್ವೆ ನಿಲ್ದಾಣಕ್ಕೆ ಎಸಿ ಬಸ್ ಸೌಲಭ್ಯವಿದೆ. ಅದನ್ನು ಇಲ್ಲೂ ಕೊಡಿ ಎಂದು ವಿಮಾನ ನಿಲ್ದಾಣದ ನಿರ್ದೇಶಕಗೆ ಕೇಳಿದ್ದಾರೆ. ಅಂತಾರಾಷ್ಟ್ರೀಯ ಮಟ್ಟಕ್ಕೆ ಮೇಲ್ದರ್ಜೆಗೇರಿಸುವಿಕೆ, ಪ್ರತ್ಯೇಕ ಕಾರ್ಗೋ ಸೌಲಭ್ಯ ಒದಗಿಸುವ ಬಗ್ಗೆ ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರವೂ ಪತ್ರ ಬರೆದು ಕೇಳಿದೆ. ಈ ವಿಚಾರ ಸೇರಿದಂತೆ ಉಡಾನ್ ಯೋಜನೆ ಮರಳಿ ಆರಂಭಿಸುವಂತೆಯೂ ಪ್ರಧಾನಿಗಳ ಗಮನಕ್ಕೆ ತಂದಿದ್ದೇನೆ. ಈಗಾಗಲೇ ನನ್ನ ಮನವಿ ಮೇರೆಗೆ ಇಂಡಿಗೋದವರು ಬೆಳಗಾವಿ-ನವೀ ಮುಂಬೈಗೆ ವಿಮಾನ ಆರಂಭಿಸಿದ್ದಾರೆ.

45
ಇಂಡಿಗೋ ಸಂಸ್ಥೆ ಸಮೀಕ್ಷೆ
Image Credit : Asianet News

ಇಂಡಿಗೋ ಸಂಸ್ಥೆ ಸಮೀಕ್ಷೆ

ಮುಂಬೈಗೆ ಸ್ಟಾರ್ ಏರ್ ವಿಮಾನ ಮತ್ತೆ ಆರಂಭವಾಗಿದೆ. ಆದರೆ, ಅರ್ಧದಷ್ಟು ಮಾತ್ರ ಪ್ರಯಾಣಿಕರು ಭರ್ತಿಯಾಗುತ್ತಿದ್ದಾರೆ. ಆದರೆ, ದೆಹಲಿ, ಬೆಂಗಳೂರು ವಿಮಾನಗಳು ಶೇ.90ರಷ್ಟು ಭರ್ತಿಯಾಗುತ್ತಿವೆ. ಮುಂದೆ ಅಹಮದಾಬಾದ್, ಜೋಧಪುರ್, ಚೆನ್ನೈ ಹಾಗೂ ಪುಣೆಗೆ ಸಂಪರ್ಕಕ್ಕೆ ಬೇಡಿಕೆ ಇದ್ದು, ಇಂಡಿಗೋ ಸಂಸ್ಥೆ ಸಮೀಕ್ಷೆ ನಡೆಸುತ್ತಿದೆ. ಹುಬ್ಬಳ್ಳಿಯಲ್ಲಿ ಸೇವೆ ನೀಡುತ್ತಿರುವ ಫ್ಲೈ 91 ಸಂಸ್ಥೆಯವರಿಗೂ ಇಲ್ಲೂ ಆರಂಭಿಸಿ ಎಂದು ಪತ್ರ ಬರೆದು ಕೇಳಿಕೊಂಡಿದ್ದಾಗಿ ತಿಳಿಸಿದರು.

55
ಸುಮಾರು 15 ಎಕೆರೆ ಜಮೀನು ಅಗತ್ಯ
Image Credit : Asianet News

ಸುಮಾರು 15 ಎಕೆರೆ ಜಮೀನು ಅಗತ್ಯ

ನಿಲ್ದಾಣದ ರನ್‌ವೇ ವಿಸ್ತರಣೆ, ಪ್ಯಾರಲಲ್ ಟ್ಯಾಕ್ಸಿ ಟ್ರ್ಯಾಕ್, ಸುರಕ್ಷತಾ ವ್ಯವಸ್ಥೆಗಳ ಅಭಿವೃದ್ಧಿಗೆ ಸುಮಾರು 15 ಎಕೆರೆ ಜಮೀನು ಅಗತ್ಯವಿದೆ. ಅದು ಭಾರತೀಯ ವಾಯು ಸೇನೆ ಅಧೀನದಲ್ಲಿದ್ದು, ನಮಗೆ ಹಸ್ತಾಂತರ ವಿಳಂಬವಾಗುತ್ತಿದೆ. ಹೀಗಾಗಿ, ಕಾಮಗಾರಿ ಆರಂಭಗೊಂಡಿಲ್ಲ. ವಾಯುಸೇನೆ ಅಧಿಕಾರಿಗಳು ಪ್ರತ್ಯೇಕ ಸಭೆ ಮಾಡಿ ತಿಳಿಸುವುದಾಗಿ ಸಭೆಗೆ ಹೇಳಿದ್ದಾರೆ. ಉಳಿದಂತೆ, ನಿಲ್ದಾಣ ವಿಸ್ತರಣೆಗೆ 72 ಎಕರೆ ಜಾಗದ ಪ್ರಸ್ತಾವನೆ ಜಿಲ್ಲಾಡಳಿತದಿಂದ ಕರ್ನಾಟಕ ಸರ್ಕಾರಕ್ಕೆ ರವಾನಿಸಲಾಗಿದೆ. ಅನುಮೋದನೆಗಾಗಿ ಕಾಯುತ್ತಿದ್ದೇವೆ ಎಂದರು. ಸಲಹಾ ಸಮಿತಿ ಸದಸ್ಯರಾ ರಾಜು ದೇಸಾಯಿ, ಸ್ನೇಹಲ್ ಕೋಲೆಕಾರ, ಜಯಸಿಂಗ್‌ ರಜಪೂತ, ವಿಜಯ ಭದ್ರಾ, ರಾಹುಲ ಮುಚ್ಚಂಡಿ, ಹನುಮಂತ ಕಾಗಲಕರ, ವಿಮಾನ ನಿಲ್ದಾಣ ನಿರ್ದೇಶಕ ಎಸ್.ತ್ಯಾಗರಾಜನ್ ಸಭೆಯಲ್ಲಿ ಇದ್ದರು.

About the Author

GK
Gowthami K
ಒನ್ ಇಂಡಿಯಾ, ಡೈಲಿಹಂಟ್‌, ವಿಜಯ ಕರ್ನಾಟಕ ವೆಬ್‌, ಈಗ ಏಷ್ಯಾನೆಟ್ ಕನ್ನಡ ಸೇರಿ 10 ವರ್ಷಗಳಿಂದಲೂ ಡಿಜಿಟಲ್ ಮಾಧ್ಯಮದಲ್ಲಿದ್ದೇನೆ. ಉಜಿರೆಯ ಎಸ್‌ಡಿಎಂನಲ್ಲಿ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯಾಗಿದೆ. ಸುಳ್ಯ ತಾಲೂಕಿನ ಕುಕ್ಕುಜಡ್ಕದವಳು. ಉದ್ಯೋಗ, ರಾಜಕೀಯ, ದೇಶ-ವಿದೇಶ, ವಿಜ್ಞಾನ ಮತ್ತು ವಾಣಿಜ್ಯ, ಸಿನೆಮಾವೆಂದರೆ ಹೆಚ್ಚು ಆಸಕ್ತಿ. ಹಿನ್ನೆಲೆ ಧ್ವನಿ ನೀಡುವುದು ಹವ್ಯಾಸ.
ಬೆಳಗಾವಿ
ವಿಮಾನ ನಿಲ್ದಾಣ
ಜಗದೀಶ್ ಶೆಟ್ಟರ್
ವಿಮಾನಯಾನ ಸಂಸ್ಥೆಗಳು

Latest Videos
Recommended Stories
Recommended image1
ರಾಜ್ಯದಲ್ಲಿ ಮಳೆ ಅಬ್ಬರ: ರಾಯಚೂರಿನಲ್ಲಿ ಸಿಡಿಲು ಬಡಿದು ವ್ಯಕ್ತಿ ಸಾವು, ವಿಜಯನಗರದಲ್ಲಿ ಪಪ್ಪಾಯಿ ಬೆಳೆ ನಾಶ!
Recommended image2
ಬೆಂಗಳೂರನ್ನೇ ಬೆಚ್ಚಿಬೀಳಿಸುವ ಘಟನೆ: ಹಸುವಿನ ಮೇಲೆ ಅತ್ಯಾ*ಚಾರವೆಸಗಿ ವಿಕೃತಿ ಮೆರೆದ ಕಾಮುಕ; ಸಿಸಿಟಿವಿಯಲ್ಲಿ ಸೆರೆ!
Recommended image3
ಬೆಂಗಳೂರು ವಿಮಾನ ನಿಲ್ದಾಣ: 40 ಕೋಟಿ ಪ್ರಯಾಣಿಕರ ದಾಖಲೆ! ಕಾರ್ಗೊ ಸಾಗಣೆಯಲ್ಲೂ ಟಾಪ್, ಐತಿಹಾಸಿಕ ಮೈಲಿಗಲ್ಲು!
Related Stories
Recommended image1
ಬೀದರ್-ಬೆಂಗಳೂರು ವಿಮಾನ ಸೇವೆ ಶೀಘ್ರವೇ ಪುನರಾರಂಭ, ಮತ್ತೆ ಜಿಲ್ಲೆಯ ಜನತೆಗೆ ಸಂತಸದ ಸುದ್ದಿ
Recommended image2
ಬೆಂಗಳೂರು ವಿಮಾನ ನಿಲ್ದಾಣ: 40 ಕೋಟಿ ಪ್ರಯಾಣಿಕರ ದಾಖಲೆ! ಕಾರ್ಗೊ ಸಾಗಣೆಯಲ್ಲೂ ಟಾಪ್, ಐತಿಹಾಸಿಕ ಮೈಲಿಗಲ್ಲು!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved