Train Number 16553/554: ಬೆಂಗಳೂರು-ಹುಬ್ಬಳ್ಳಿ-ಮುಂಬೈ ರೈಲ್ವೆಗೆ ಸಿಕ್ತು ಚಾಲನೆ
ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಬೆಂಗಳೂರಿನಿಂದ ಹುಬ್ಬಳ್ಳಿ-ಧಾರವಾಡ-ಬೆಳಗಾವಿ ಮಾರ್ಗವಾಗಿ ಮುಂಬೈಗೆ ತೆರಳುವ ಹೊಸ ರೈಲಿಗೆ ಚಾಲನೆ ನೀಡಿದರು. ಈ ರೈಲು (16553/16554) ಸರ್ ಎಂ ವಿಶ್ವೇಶರಯ್ಯ ಟರ್ಮಿನಲ್‌ನಿಂದ ಲೋಕಮಾನ್ಯ ಟರ್ಮಿನಲ್‌ವರೆಗೆ ಸಂಚರಿಸಲಿದೆ.

Bengaluru To Mumbai
ಬೆಂಗಳೂರಿನಿಂದ ಹುಬ್ಬಳ್ಳಿ -ಧಾರವಾಡ-ಬೆಳಗಾವಿ ಮಾರ್ಗವಾಗಿ ಮುಂಬೈ ತಲುಪುವ ರೈಲಿಗೆ ಇಂದು ಕೇಂದ್ರ ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವ್ ಚಾಲನೆ ನೀಡಿದರು. ಈ ವೇಳೆ ಕೇಂದ್ರ ರಾಜ್ಯ ರೈಲ್ವೆ ಸಚಿವ ವಿ.ಸೋಮಣ್ಣ, ಸಂಸದ ತೇಜಸ್ವಿ ಸೂರ್ಯ ಉಪಸ್ಥಿತರಿದ್ದರು.

ಸರ್ ಎಂ ವಿಶ್ವೇಶರಯ್ಯ ಟರ್ಮಿನಲ್
ಹೊಸ ರೈಲು ಸಂಖ್ಯೆ 16553 ಬೆಂಗಳೂರಿನ ಸರ್ ಎಂ ವಿಶ್ವೇಶರಯ್ಯ ಟರ್ಮಿನಲ್‌ನಿಂದ ತನ್ನ ಪ್ರಯಾಣ ಆರಂಭಿಸಿ ಮುಂಬೈನ ಲೋಕಮಾನ್ಯ ಟರ್ಮಿನಲ್ ತಲುಪುವ ಮೂಲಕ ತನ್ನ ಪ್ರಯಾಣ ಕೊನೆಗೊಳಿಸುತ್ತದೆ. ರೈಲು ಸಂಖ್ಯೆ 16554 ಮುಂಬೈನ ಲೋಕಮಾನ್ಯ ಟರ್ಮಿನಲ್‌ನಿಂದ ಪ್ರಯಾಣ ಆರಂಭಗೊಂಡು ಬೆಂಗಳೂರಿನಲ್ಲಿ ಸರ್ ಎಂ ವಿಶ್ವೇಶರಯ್ಯ ಟರ್ಮಿನಲ್ ಪ್ರಯಾಣ ಕೊನೆಯಾಗುತ್ತದೆ.
ರೈಲು ಮಾರ್ಗ ಈ ರೀತಿಯಾಗಿದೆ.
ರೈಲು ಮಾರ್ಗ ಈ ರೀತಿಯಾಗಿದೆ.
ಎಸ್‌ಎಂವಿಟಿ ಬೆಂಗಳೂರು, ದಾವಣಗೆರೆ, ಎಸ್‌ಎಸ್ಎಸ್ ಹುಬ್ಬಳ್ಳಿ ಜಂಕ್ಷನ್, ಧಾರವಾಡ, ಬೆಳಗಾವಿ, ಮೀರಜ್ ಜಂಕ್ಷನ್, ಸಾಂಗ್ಲಿ, ಕರ್ಡ, ಸತಾರಾ, ಲೊನದಾ ಜಂಕ್ಷನ್, ಪುಣೆ ಜಂಕ್ಷನ್, ಲೋನಾವಾಲಾ, ಕರ್ಜತ್, ಕಲ್ಯಾಣ್, ಥಾಣೆ, ಮುಂಬೈ ಎಲ್‌ಟಟಿ
ಸೌಲಭ್ಯಗಳು
ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ಮತ್ತು ಲೋಕಮಾನ್ಯ ತಿಲಕ್ ಟರ್ಮಿನಸ್ ನಡುವಿನ ಸಂಪರ್ಕವನ್ನು ಮತ್ತಷ್ಟು ಬಲಪಡಿಸಿ, ಪ್ರಮುಖ ಅಂತರ್‌ನಗರ ರೈಲು ಸಂಪರ್ಕಕ್ಕೆ ಹೊಸ ಚೈತನ್ಯ ನೀಡುತ್ತದೆ
ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳ ನಡುವೆ ವ್ಯಾಪಾರ, ಉದ್ಯಮ ಚಟುವಟಿಕೆಗಳು ಹಾಗೂ ಪ್ರವಾಸೋದ್ಯಮ ವೃದ್ಧಿಗೆ ಉತ್ತೇಜನ ನೀಡಿ, ಆರ್ಥಿಕ ಅಭಿವೃದ್ಧಿಗೆ ನೆರವಾಗುತ್ತದೆ
ಆರಾಮದಾಯಕ ಮತ್ತು ಬಜೆಟ್ ಫ್ರೆಂಡ್ಲಿ ಪ್ರಯಾಣ
ವಿಶ್ವಾಸಾರ್ಹ ಮತ್ತು ಕೈಗೆಟುಕುವ ರೈಲು ಸಂಪರ್ಕಕ್ಕಾಗಿ ಕಾಯುತ್ತಿದ್ದ ಲಕ್ಷಾಂತರ ಪ್ರಯಾಣಿಕರು, ಉದ್ಯೋಗಸ್ಥರು ಮತ್ತು ಕುಟುಂಬಗಳಿಗೆ ಅನುಕೂಲ ಒದಗಿಸುತ್ತದೆ. ವಿಮಾನ ಹಾಗೂ ರಸ್ತೆ ಪ್ರಯಾಣಕ್ಕೆ ಹೋಲಿಸಿದರೆ, ರೈಲು ಪ್ರಯಾಣವು ಹೆಚ್ಚು ಆರಾಮದಾಯಕ, ಮಿತ ವ್ಯಯದ ಹಾಗೂ ಪರಿಸರ ಸ್ನೇಹಿ ಪ್ರಯಾಣದ ಆಯ್ಕೆಯಾಗಿದೆ
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

