ನೂರು, ಇನ್ನೂರು ಅಲ್ಲ…. ಭಾರತದಲ್ಲಿವೆ ಸಾವಿರಾರು ವರ್ಷಗಳಷ್ಟು ಹಳೆಯ ದೇಗುಲಗಳು
Ancient Temples: ಭಾರತವು ದೇಗುಲಗಳ ತವರೂರು, ಇಲ್ಲಿ ಯಾವುದೇ ಮೂಲೆ ಮೂಲೆಗಳನ್ನು ನೋಡಿದ್ರೂ ದೇಗುಲಗಳನ್ನು ಕಾಣಬಹುದು. ಆದರೆ ನಿಮಗೆ ಗೊತ್ತಾ ಭಾರತದಲ್ಲಿ ಆಧುನಿಕ ಜಗತ್ತಿಗೆ ಅಚ್ಚರಿಯನ್ನು ನೀಡುವ ಸಾವಿರಾರು ವರ್ಷಗಳಷ್ಟು ಹಳೆಯ ದೇಗುಲಗಳನ್ನು ಇಂದಿಗೂ ಕಾಣಬಹುದು.

ಪ್ರಾಚೀನ ದೇಗುಲಗಳು
ಭಾರತವು ಧಾರ್ಮಿಕ ನಂಬಿಕೆಗಳಿಗೆ ಹೆಸರುವಾಸಿಯಾಗಿರುವ ತಾಣವಾಗಿದೆ. ಇಲ್ಲಿ ಸಾವಿರ ವರ್ಷಗಳಿಗೂ ಹೆಚ್ಚು ಕಾಲ ಬಲಿಷ್ಠವಾಗಿ ನಿಂತಿರುವ 10 ಪ್ರಾಚೀನ ದೇವಾಲಯಗಳು ಭಕ್ತಿ, ದೈವಿಕ ಕಲಾತ್ಮಕತೆ ಮತ್ತು ಎಂಜಿನಿಯರಿಂಗ್ ಪ್ರತಿಭೆಯ ಜೀವಂತ ಸಂಕೇತಗಳಾಗಿವೆ, ಅವು ಇನ್ನೂ ಆಧುನಿಕ ಜಗತ್ತನ್ನು ವಿಸ್ಮಯಗೊಳಿಸುತ್ತವೆ.
ಕಾಶಿ ವಿಶ್ವನಾಥ ದೇವಸ್ಥಾನ
ಜ್ಯೋತಿರ್ಲಿಂಗ ಇರುವಂತಹ, ಗಂಗಾ ನದಿಯ ತಟದಲ್ಲಿ ನೆಲೆಯಾಗಿರುವ ವಿಶ್ವದ ಪ್ರಸಿದ್ಧ ಪುಣ್ಯ ಭೂಮಿ ವಾರಣಾಸಿಯಲ್ಲಿರುವ ಕಾಶಿ ವಿಶ್ವನಾಥ ದೇವಸ್ಥಾನಕ್ಕೆ 245 ವರ್ಷಗಳ ಇತಿಹಾಸವಿದೆ.
ಕೋನಾರ್ಕ್ ಸೂರ್ಯ ದೇವಸ್ಥಾನ
ಒಡಿಶಾದಲ್ಲಿರುವ ಪ್ರಸಿದ್ಧ ಕೋನಾರ್ಕ್ ಸೂರ್ಯ ದೇವಸ್ಥಾನ, 775 ವರ್ಷಗಳಷ್ಟು ಹಳೆಯ ದೇವಸ್ಥಾನ, ಇಲ್ಲಿ ಏಳು ಕುದುರೆಗಳ ರಥ, ಹಾಗೂ 24 ಗಂಟೆಗಳನ್ನು ಸೂಚಿಸುವ ಚಕ್ರಗಳನ್ನು ನೋಡಬಹುದು.
ಪುರಿ ಜಗನ್ನಾಥ್ ದೇವಸ್ಥಾನ
ಒಡಿಶಾದ ಪುರಿಯಲ್ಲಿರುವ ಇತಿಹಾಸ ಪ್ರಸಿದ್ಧ ಜಗನ್ನಾಥ ಮಂದಿರಕ್ಕೆ ಬರೋಬ್ಬರಿ 875 ವರ್ಷಗಳ ಇತಿಹಾಸ ಇದೆ. ಈ ದೇವಸ್ಥಾನ ರಥೋತ್ಸವಕ್ಕೆ ಹಾಗೂ ದೇವಸ್ಥಾನದ ಅಚ್ಚರಿಯ ಸತ್ಯಗಳಿಂದ ಜನಪ್ರಿಯತೆ ಪಡೆದಿದೆ.
ದಿಲ್ವಾರ ಜೈನ ಮಂದಿರ
ಸುಮಾರು 994 ವರ್ಷಗಳಷ್ಟು ಹಿಂದೆ ನಿರ್ಮಾಣವಾಗಿರುವ ದಿಲ್ವಾರ ಜೈನ ಮಂದಿರವನ್ನು ಮಾರ್ಬಲ್ ಕಲ್ಲುಗಳಿಂದ ನಿರ್ಮಾಣ ಮಾಡಲಾಗಿದೆ. ಈ ಮಂದಿರ ರಾಜಸ್ಥಾನದ ಮೌಂಟ್ ಅಬುವಿನಲ್ಲಿದೆ.
ಎಲ್ಲೋರದ ಕೈಲಾಸ ದೇವಸ್ಥಾನ
ಮಹಾರಾಷ್ಟ್ರದ ಎಲ್ಲೋರ ಗುಹೆಯಲ್ಲಿರುವ ಕೈಲಾಸ ದೇವಸ್ಥಾನವು 1265 ವರ್ಷಗಳ ಹಿಂದೆ ನಿರ್ಮಾಣವಾದ, ಏಕಶಿಲೆಯಲ್ಲಿ ನಿರ್ಮಿಸಿದಂತಹ ದೇಗುಲವಾಗಿದೆ.
ವಿರೂಪಾಕ್ಷ ದೇವಸ್ಥಾನ
ಹಂಪಿಯಲ್ಲಿರುವ ವಿರೂಪಾಕ್ಷ ದೇವಸ್ಥಾನಕ್ಕೆ ಬರೋಬ್ಬರಿ 1285 ವರ್ಷಗಳ ಇತಿಹಾಸ ಇದೆ. ಈ ದೇಗುಲವನ್ನು ಸುಮಾರು 13 ಶತಕಗಳಿಂದ ಪೂಜಿಸಿಕೊಂಡು ಬರಲಾಗುತ್ತಿದೆ.
ಮೀನಾಕ್ಷಿ ಅಮ್ಮನ್ ದೇವಸ್ಥಾನ
ಮಧುರೈನಲ್ಲಿರುವ ಮೀನಾಕ್ಷಿ ಅಮ್ಮನ್ ದೇವಸ್ಥಾನ ಅತ್ಯಂತ ಪ್ರಾಚೀನ ದೇವಸ್ಥಾನವಾಗಿದೆ. ಈ ದೇವಿಯ ಶಕ್ತಿಯನ್ನು ಹೊಂದಿರುವ ಈ ದೇವಸ್ಥಾನ 1475 ವರ್ಷಗಳ ಹಿಂದೆ ನಿರ್ಮಾಣವಾದಂತಹ ದೇಗುಲವಾಗಿದೆ.
ಶೋರ್ ದೇವಸ್ಥಾನ
ಇದು ಕೂಡ ಮಹಾಬಲಿಪುರಂನಲ್ಲಿ ಇರುವಂತಹ ದೇಗುಲವಾಗಿದೆ. ಈ ದೇಗುಲಕ್ಕೆ ಸುಮಾರು 1325 ವರ್ಷಗಳ ಇತಿಹಾಸ ಇದೆ. ಇದು ಸಮುದ್ರದ ತಟದಲ್ಲಿರುವ ದೇಗುಲವಾಗಿದೆ.
ಬೃಹದೇಶ್ವರ ದೇವಸ್ಥಾನ
ತಮಿಳುನಾಡಿನ ತಾಂಜಾವೂರಿನಲ್ಲಿರುವ ಬೃಹದೇಶ್ವರ ದೇವಸ್ಥಾನವನ್ನು 1015ವರ್ಷಗಳ ಹಿಂದೆ ನಿರ್ಮಾಣ ಮಾಡಲಾಗಿದೆ. ನೂರು ಅಡಿಗಳಿಗೂ ಎತ್ತರವಿರುವ ಈ ದೇಗುಲದ ಗೋಪುರದ ನೆರಳು ಭೂಮಿ ಮೇಲೆ ಬೀಳೋದೆ ಇಲ್ಲ, ಅಂತಹ ವಾಸ್ತುಶಿಲ್ಪದ ಅದ್ಭುತ ಇದಾಗಿದೆ.
ಲಿಂಗರಾಜ ದೇವಸ್ಥಾನ
ಒಡಿಶಾದ ಭುವನೇಶ್ವರದಲ್ಲಿರುವ ಲಿಂಗರಾಜ ದೇವಸ್ಥಾನಕ್ಕೆ 1000 ವರ್ಷಗಳ ಇತಿಹಾಸ ಇದೆ. ಇದು ಶಿವನಿಗೆ ಮೀಸಲಾದ ದೇವಸ್ಥಾನವಾಗಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

