ಮಳೆಗಾಲ ಮುಗಿಯೋದ್ರೊಳಗೆ ನೋಡಿ ಈ ಅದ್ಭುತ ತಾಣಗಳನ್ನ…. ಹಾಗಂತ ಪ್ರಾಣಕ್ಕೆ ರಿಸ್ಕ್ ಆಗೋ ಸಾಹಸ ಬೇಡ
ಸಖತ್ತಾಗಿ ಮಳೆಯಾಗ್ತಿದೆ, ಪ್ರಕೃತಿ ಹಚ್ಚ ಹಸುರಾಗಿದೆ, ನದಿ, ಕೊಳಗಳು ತುಂಬಿ ಹರಿಯುತ್ತಿವೆ, ಈ ಟೈಮಲ್ಲಿ ಬೆಂಗಳೂರಿಂದ ಯಾವುದಾದ್ರೂ ಸುಂದರ ಜಾಗ ನೋಡ್ಕೊಂಡು ಬರ್ಬೇಕು ಅನ್ನೋರಿಗೆ ಈ ತಾಣಗಳು ಬೆಸ್ಟ್.
ಇದು ಮಾನ್ಸೂನ್ ಸೀಸನ್ (Monsoon)… ಈ ಸೀಸನ್ ಬಂದ ಕೂಡ್ಲೇ ಜಲಪಾತ, ನದಿ, ಹೊಳೆ ನೋಡೋ ಪ್ರಕೃತಿ ಪ್ರೇಮಿಗಳ ಸಂಖ್ಯೆಯೇ ಹೆಚ್ಚಾಗುತ್ತೆ. ನೀವು ಸಹ ಮಾನ್ಸೂನ್ ಟ್ರಾವೆಲ್ ಇಷ್ಟ ಪಡೋರು ಆಗಿದ್ರೆ. ಅದ್ರಲ್ಲೂ ನೀವು ಬೆಂಗಳೂರಿನವ್ರಾಗಿದ್ದು, 100-150 ಕಿಮೀ ಒಳಗೆ ಯಾವ್ದಾದ್ರೂ ಅದ್ಭುತ ಪ್ರಕೃತಿ ಸೌಂದರ್ಯ ತುಂಬಿರೋ ಜಾಗ ನೋಡ್ಕೊಂಡು ಬರಬೇಕು ಅಂತ ನಿಮಗೆ ಅನಿಸಿದ್ರೆ ಈ ತಾಣಗಳು ನಿಮಗಾಗಿ.
ಹೊಗೇನಕಲ್ (Hogenakal) : ಹೊಗೇನಕಲ್ ನೀವು ಒಂದು ಬಾರಿಯಾದರೂ ನೋಡಲೇಬೇಕಾದ ಅದ್ಭುತವಾದ ಫಾಲ್ಸ್. ಅದ್ರಲ್ಲೂ ಮಳೆಗಾಲದಲ್ಲಿ ಇದನ್ನ ನೋಡೋದೆ ಚೆಂದ. ಬೆಂಗಳೂರಿಂದ ಸುಮಾರು 135 ಕಿ. ಮೀ ದೂರದಲ್ಲಿರುವ ಈ ತಾಣವನ್ನ ಕಾರಿನಲ್ಲಿ ರೀಚ್ ಆಗೋಕೆ 3 ಗಂಟೆ , 20 ನಿಮಿಷ ಬೇಕಾಗುತ್ತೆ. ಇಲ್ಲಿ ನೀವು ಪ್ರಕೃತಿಯನ್ನ ಎಂಜಾಯ್ ಮಾಡೊದ್ರ ಜೊತೆಗೆ ಆಯುರ್ವೇದ ಟ್ರೀಟ್ ಮೆಂಟ್, ಫಿಶಿಂಗ್, ಮೆಡಿಸಿನಲ್ ಬಾತ್ ಮಾಡಬಹುದು.
ಬಲಮುರಿ ಫಾಲ್ಸ್ (Balamuri Falls) : ಪ್ರಕೃತಿಯ ಈ ಅದ್ಭುತವನ್ನ ನೋಡದಿದ್ರೆ ಖಂಡಿತಾ ನೀವು ಏನೋ ಮಿಸ್ ಮಾಡಿಕೊಂಡಂತೆ ಅಂತಹ ಸುಂದರ ಜಾಗವಿದು. ಬೆಂಗಳೂರಿನಿಂದ 145 ಕಿ. ಮೀ ಇರೋ ಈ ತಾಣವನ್ನ ರೀಚ್ ಆಗೋಕೆ 3 ಗಂಟೆ 30 ನಿಮಿಷಗಳು ಬೇಕಾಗುತ್ತೆ. ಇಲ್ಲಿ ನೀವು ಗುಹೆ ಎಕ್ಸ್’ಪ್ಲೋರ್, ಪಿಕ್ ನಿಕಿಂಗ್, ಟ್ರೆಕ್ಕಿಂಗ್ ಮಾಡಬಹುದು.
ಶಿವನಸಮುದ್ರ (Shivanasamudra) : ಇದು ನಮ್ಮ ರಾಜ್ಯದ ಅತ್ಯಂತ ಸುಂದರ ಜಲಪಾತಗಳಲ್ಲಿ ಒಂದಾಗಿದೆ. ಬೆಂಗಳೂರಿನಿಂದ 140 ಕಿಮೀ ಇದೆ, ಅಂದ್ರೆ ಸುಮಾರು 3 ಗಂಟೆ 15 ನಿಮಿಷಗಳ ಜರ್ನಿ. ಇಲ್ಲಿ ನೀವು ಬೋಟ್ ರೈಟ್, ನೇಚರ್ ವಾಕ್ ಕೂಡ ಮಾಡಬಹುದು.
ಕೈಗಲ್ ಫಾಲ್ಸ್ (Kaigal Falls): ಇದು ಬೆಂಗಳೂರಿನಿಂದ 120 ಕಿಮೀ ಇದೆ, ಆಂಧ್ರಪ್ರದೇಶದ ಚಿತ್ತೂರಿನಲ್ಲಿದೆ ಈ ಫಾಲ್ಸ್. ಕಾರಲ್ಲಾದ್ರೆ ಸುಮಾರು 3 ಗಂಟೆ ಬೇಕಾಗುತ್ತೆ. ಈ ಸುಂದರ ತಾಣದಲ್ಲಿ ನೀವು ಟ್ರೆಕ್ಕಿಂಗ್, ಕ್ಯಾಂಪಿಗ್ ಕೂಡ ಮಾಡಬಹುದು ಜೊತೆಗೆ, ಪಕ್ಷಿ ವೀಕ್ಷಣೆಗೂ ಈ ತಾಣ ಬೆಸ್ಟ್.
ಚುಂಚಿ ಫಾಲ್ಸ್ (Chinchi Falls): ಇದು ಬೆಂಗಳೂರಿನಿಂದ ಕೇವಲ 90 ಕಿಮೀ ಅಷ್ಟೇ ದೂರದಲ್ಲಿ ಮಾದರಹಳ್ಳಿ ಇದೆ. ಕಾರಲ್ಲಿ ಹೋಗೋದಾದ್ರೆ 2 ಗಂಟೆ 15 ನಿಮಿಷ ತೆಗೆದುಕೊಳ್ಳುತ್ತೆ. ಇಲ್ಲಿ ಪ್ರಕೃತಿ ಸೌಂದರ್ಯವನ್ನು ಸವಿಯೋದಕ್ಕೆ ಟ್ರೆಕ್ಕಿಂಗ್, ಪಿಕ್ ನಿಕ್ ಮಾಡ್ಬೋದು, ಜೊತೆಗೆ ಪಕ್ಷಿ ವೀಕ್ಷಣೆ ಕೂಡ ಮಾಡಬಹುದು.
ಮಾನ್ಸೂನ್ ಟ್ರಾವೆಲ್ ಮಾಡೋಕೆ ನೀವು ರೆಡಿಯಾಗಿದ್ರೆ ಈವಾಗ್ಲೇ ನಿಮ್ಮ ಬ್ಯಾಗ್ ಪ್ಯಾಕ್ ಮಾಡಿ, ನಿಮ್ಮ ಕ್ಯಾಮೆರಾವನ್ನು ಹಿಡಿದುಕೊಳ್ಳಿ ಮತ್ತು ಕರ್ನಾಟಕದ ಗ್ರಾಮೀಣ ಪ್ರದೇಶದ ಹಚ್ಚ ಹಸಿರಿನಿಂದ ತುಂಬಿದ ಸುಂದರ ತಾಣಗಳನ್ನ ನೋಡೋಕೆ ರೆಡಿಯಾಗಿ. ರೆಡಿಯಾಗೋ ಮುನ್ನ ಆ ತಾಣದಲ್ಲಿ ಹವಾಮಾನ ಹೇಗಿದೆ? ಪರಿಸ್ಥಿತಿ ಹೇಗಿದೆ ಅನ್ನೋದನ್ನ ಮೊದಲೇ ತಿಳಿದುಕೊಳ್ಳಲು ಮರಿಬೇಡಿ. ನಿಮ್ಮ ಜೀವಕ್ಕೆ ರಿಸ್ಕ್ ಆಗುವಂತಹ ಯಾವುದೇ ಅಪಾಯವನ್ನ ಎಳೆದುಕೊಳ್ಳದೇ ಆರಾಮವಾಗಿ ಪ್ರಕೃತಿಯನ್ನ ಎಂಜಾಯ್ ಮಾಡಿ.