MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Life
  • Travel
  • ಡೇ ಆಫ್ ದಿ ಡೆಡ್: ಸತ್ತವರನ್ನು ಮೆಚ್ಚಿಸಲು ಮೇಕಪ್ ಹಾಕಿ, ನೃತ್ಯ ಮಾಡೋ ವಿಚಿತ್ರ ಹಬ್ಬ!

ಡೇ ಆಫ್ ದಿ ಡೆಡ್: ಸತ್ತವರನ್ನು ಮೆಚ್ಚಿಸಲು ಮೇಕಪ್ ಹಾಕಿ, ನೃತ್ಯ ಮಾಡೋ ವಿಚಿತ್ರ ಹಬ್ಬ!

ನಮ್ಮಲ್ಲಿ ಸತ್ತವರನ್ನು ನೆನೆಸಿಕೊಂಡು ಪಿತೃ ಪಕ್ಷ ಅಥವಾ ಮಹಾಲಯದಲ್ಲಿ ಪೂಜೆ, ಶ್ರಾದ್ಧ ಕಾರ್ಯಗಳನ್ನು ಮಾಡುತ್ತೇವೆ. ಇಂತಹುದೇ ಒಂದು ಆಚರಣೆ ವಿದೇಶದಲ್ಲೂ ಇದೆ ಅಂದ್ರೆ ನೀವು ನಂಬಲೇ ಬೇಕು. ಮೆಕ್ಸಿಕೊದಲ್ಲಿ, 'ಡೇ ಆಫ್ ದಿ ಡೆಡ್' ಹಬ್ಬವು ಅಕ್ಟೋಬರ್ ಕೊನೆಯ ವಾರದಲ್ಲಿ ಸತ್ತವರ ಗೌರವಾರ್ಥವಾಗಿ ಆಚರಿಸಲಾಗುವ ಹಬ್ಬವಾಗಿದೆ.  

2 Min read
Suvarna News
Published : Oct 07 2023, 05:46 PM IST
Share this Photo Gallery
  • FB
  • TW
  • Linkdin
  • Whatsapp
18

ಪ್ರಪಂಚದಾದ್ಯಂತ ಜನರು ವಿವಿಧ ಹಬ್ಬಗಳನ್ನು ಆಚರಿಸುತ್ತಾರೆ. ಕೆಲವು ಹಬ್ಬವನ್ನು ನಾವು ನಮ್ಮ ಪ್ರೀತಿಪಾತ್ರರೊಂದಿಗೆ ಆಚರಿಸುತ್ತೇವೆ ಮತ್ತು ಹಬ್ಬ ಅಂದ್ರೆ ಕೇವಲ ಸಂತೋಷವನ್ನು ಸೆಲೆಬ್ರೇಟ್ ಮಾಡೋದು ಎಂದು ನಾವು ಅಂದುಕೊಳ್ಳುತ್ತೇವೆ. ಆದರೆ ಈ ಹಬ್ಬವನ್ನು ವಿಚಿತ್ರ ರೀತಿಯಲ್ಲಿ ಆಚರಿಸುವ ಸ್ಥಳವಿದೆ. ಮೃತ ಸಂಬಂಧಿಕರ ನೆನಪಿಗಾಗಿ 'ಡೆಡ್ ಫೆಸ್ಟಿವಲ್ ಡೇ’ (dead festival day) ಹಬ್ಬವನ್ನು ಆಚರಿಸಲಾಗುತ್ತದೆ ಅನ್ನೋದು ಗೊತ್ತಾ? ಇದು ನಮ್ಮ ಕಡೆ ನಡೆಯುವ ಪಿತೃಪಕ್ಷದ ಹಾಗೆಯೇ, ಆದರೆ ವಿದೇಶದಲ್ಲಿ ನಡೆಯುವ ಈ ಆಚರಣೆ ವಿಚಿತ್ರವಾಗಿರುತ್ತೆ. 

28

ಡೆಡ್ ಫೆಸ್ಟಿವಲ್ ಡೇ (Day of the dead) ಮೃತ ಪ್ರೀತಿಪಾತ್ರರ ಮೇಲಿನ ಪ್ರೀತಿ ಮತ್ತು ಗೌರವವನ್ನು ಸೂಚಿಸುತ್ತದೆ. ಈ ದಿನ, ಜನರು ಸ್ಮಶಾನಕ್ಕೆ ಹೋಗಿ ಪ್ರಸಾದವನ್ನು ಅರ್ಪಿಸುತ್ತಾರೆ ಮತ್ತು ನೃತ್ಯ ಮಾಡುತ್ತಾರೆ ಮತ್ತು ವಿಶಿಷ್ಟ, ಚಿತ್ರ ವಿಚಿತ್ರ ಬಟ್ಟೆಗಳನ್ನು ಧರಿಸಿ, ಮೇಕಪ್ ಮಾಡಿಕೊಂಡು ಹಾಡುತ್ತಾರೆ. ಎಲ್ಲಿ ನಡೆಯುತ್ತೆ ಈ ಹಬ್ಬ, ಇದರ ವಿಶೇಷತೆ ಏನು ತಿಳಿಯೋಣ. 

38

ಜಗತ್ತಿನಲ್ಲಿ ಸತ್ತವರಿಗೆ ಗೌರವ ಸಲ್ಲಿಸುವುದು ಹೇಗೆ?: ನಮ್ಮ ಸಮಾಜದಲ್ಲಿ, ಮನುಷ್ಯನ ಮರಣದ ನಂತರ, (After death) ಅವನ ಆತ್ಮವು ಅಲೆದಾಡುತ್ತದೆ ಎಂದು ನಂಬಲಾಗಿದೆ. ವಿಶ್ವದ ಅನೇಕ ಭಾಗಗಳಲ್ಲಿ, ಪಿತೃ ಪಕ್ಷ, ಪಿಂಡನ್, ಶ್ರಾದ್ಧ, ಫಾತಿಹಾ ಕರ್ಣ ಮತ್ತು ಹ್ಯಾಲೋವೀನ್ ನಂತಹ ಹಬ್ಬಗಳನ್ನು ಈ ಮೃತ ಆತ್ಮಗಳಿಗೆ ಗೌರವ ಸಲ್ಲಿಸಲು ಆಚರಿಸಲಾಗುತ್ತದೆ. ಮೆಕ್ಸಿಕೊದಲ್ಲಿಯೂ, ಅಕ್ಟೋಬರ್ ಕೊನೆಯ ವಾರದಲ್ಲಿ ಇದೇ ರೀತಿಯ ಹಬ್ಬವನ್ನು ಆಚರಿಸಲಾಗುತ್ತದೆ, ಆದರೆ ಈ ಹಬ್ಬವು ಹ್ಯಾಲೋವೀನ್ ಅಥವಾ ಅನೇಕ ಸಂಸ್ಕೃತಿಗಳಿಗಿಂತ ಸಂಪೂರ್ಣವಾಗಿ ಭಿನ್ನವಾಗಿದೆ. 

48

ಡೆಡ್ ಫೆಸ್ಟಿವಲ್ ಡೇ ಸತ್ತವರ ಗೌರವಾರ್ಥವಾಗಿ ಆಚರಿಸಲಾಗುವ ಹಬ್ಬವಾಗಿದೆ. ಮೆಕ್ಸಿಕನ್ನರು ತಮ್ಮ ಮೃತ ಪ್ರೀತಿಪಾತ್ರರಿಗೆ ವಿಭಿನ್ನ ವಿಧಾನಗಳು, ಆಚರಣೆಗಳು ಮತ್ತು ಸಂಪ್ರದಾಯಗಳ ಮೂಲಕ ಪ್ರೀತಿ ಮತ್ತು ಗೌರವವನ್ನು ತೋರಿಸುವ ಹಬ್ಬ ಇದಾಗಿದೆ. ಪ್ರಾಚೀನ ನಂಬಿಕೆಗಳ ಪ್ರಕಾರ,  ಈ ಹಬ್ಬವು ಮೆಸೊಅಮೆರಿಕನ್ ನಹುವಾ ಜನರು ನಡೆಸಿದ ಸುಮಾರು 3000 ವರ್ಷಗಳಷ್ಟು ಹಿಂದಿನ ಇತಿಹಾಸವನ್ನು ಹೊಂದಿದೆ. 

58

ಆತ್ಮಗಳು ಭೂಗತ ವಿಶ್ರಾಂತಿ ಸ್ಥಳವನ್ನು ತಲುಪುತ್ತವೆ: ಅವರ ಪ್ರಕಾರ, ಸಾವನ್ನು ಜೀವನದ ಅಂತ್ಯವೆಂದು ನೋಡಲಾಗುವುದಿಲ್ಲ, ಆದರೆ ಜೀವನ ಮತ್ತು ಸಾವನ್ನು ಒಂದೇ ಚಕ್ರದ ಭಾಗವೆಂದು ಪರಿಗಣಿಸಲಾಗಿದೆ. ಮೃತರ ಆತ್ಮಗಳು ಚಿಕುನಾಮಿಕ್ಟ್ಲಾನ್ (Dead people land) ಗೆ ಪ್ರಯಾಣಿಸುತ್ತವೆ ಎಂದು ನಹುವಾ ಜನರು ನಂಬಿದ್ದರು, ನಂತರ ಅಂತಿಮ ಭೂಗತ ವಿಶ್ರಾಂತಿ ಸ್ಥಳವಾದ ಮಿಕ್ತಾಲನ್ ಗೆ ಆತ್ಮ ಸಾಗುತ್ತದೆ. ಈ ದಿನದಂದು, ಮೆಕ್ಸಿಕೊದಾದ್ಯಂತ ಜನರು ವಿಚಿತ್ರ ರೀತಿಯ ಮೇಕಪ್ ಮಾಡುತ್ತಾರೆ, ವಿಚಿತ್ರ ವೇಷಭೂಷಣಗಳನ್ನು ಧರಿಸುತ್ತಾರೆ ಮತ್ತು ಸಾಮೂಹಿಕ ಮೆರವಣಿಗೆಗಳನ್ನು ಸಹ ಆಯೋಜಿಸುತ್ತಾರೆ. 

68

ಸ್ಮಶಾನಗಳಲ್ಲಿ ಮತ್ತು ಬೀದಿಗಳಲ್ಲಿ ಯಾವ ರೀತಿಯ ವಾತಾವರಣವಿರುತ್ತೆ?: ಮೆಕ್ಸಿಕೊದಲ್ಲಿ, ಮೃತರ ಆತ್ಮಗಳನ್ನು ಸ್ವಾಗತಿಸಲು ಮನೆಗಳಲ್ಲಿ ಲಾಸ್ ಆಫ್ರೆಡಾಸ್ (offering) ಎಂದು ಕರೆಯಲ್ಪಡುವ ಬಲಿಪೀಠಗಳನ್ನು ಸ್ಥಾಪಿಸಲಾಗುತ್ತದೆ. ಮನೆಯ ಬಲಿಪೀಠಗಳನ್ನು ಮಾರಿಗೋಲ್ಡ್ (Dead people flower) ನಿಂದ ಅಲಂಕರಿಸಲಾಗುತ್ತದೆ. ಮೆಕ್ಸಿಕನ್ ನೆಚ್ಚಿನ ಭಕ್ಷ್ಯಗಳಾದ ತಮಲೆಗಳು, ಟೋರ್ಟಿಲ್ಲಾಗಳು, ಕುಂಬಳಕಾಯಿಗಳು ಮತ್ತು ಎಳ್ಳು, ಮೇಣದಬತ್ತಿಗಳು, ಧೂಪದ್ರವ್ಯ (ಕೋಪಲ್ಸ್), ಆಟಿಕೆಗಳು, ಅಲಂಕಾರಿಕ ವಸ್ತುಗಳು ಮತ್ತು ಸಾಮಾನ್ಯವಾಗಿ ಬಳಸುವ ವಸ್ತುಗಳನ್ನು ಇಲ್ಲಿ ಇಡಲಾಗುತ್ತೆ. ಕೆಲವು ಸಂದರ್ಭಗಳಲ್ಲಿ, ಆತ್ಮಗಳನ್ನು ತಮ್ಮ ಮನೆಯ ಬಲಿಪೀಠಗಳಿಗೆ ಸಾಗಿಸಲು ಹೂವಿನ ದಾರಿಯನ್ನು ಸಹ ವಿನ್ಯಾಸಗೊಳಿಸಲಾಗಿದೆ.

78

ಜನರು ಸ್ಮಶಾನಗಳಿಗೆ ಮೆರವಣಿಗೆಗೆ ಹೋಗಿ ಮೃತ ಪ್ರೀತಿಪಾತ್ರರಿಗೆ ಪ್ರಸಾದವನ್ನು ಅರ್ಪಿಸುತ್ತಾರೆ. ಇದು ಮಾತ್ರವಲ್ಲ, ಜನರು ಆತ್ಮಗಳನ್ನು ಸ್ವಾಗತಿಸಲು ಅತ್ಯಂತ ಅಲಂಕಾರಿಕ ಮತ್ತು ಸುಂದರವಾದ ಬಲಿಪೀಠಗಳನ್ನು ಸಹ ಮಾಡುತ್ತಾರೆ. 2008 ರಲ್ಲಿ, ಯುನೆಸ್ಕೋ ಈ ಹಬ್ಬವನ್ನು ಮಾನವೀಯತೆಯ ಅಮೂರ್ತ ಸಾಂಸ್ಕೃತಿಕ ಪರಂಪರೆಯ ಪಟ್ಟಿಯಲ್ಲಿ ಸೇರಿಸುವ ಮೂಲಕ, ಅದರ ಪ್ರಾಮುಖ್ಯತೆಯನ್ನು ಇನ್ನಷ್ಟು ಹೆಚ್ಚಿಸಿತು. 

88

ವಿಶ್ವಾದ್ಯಂತ ಈ ಹಬ್ಬದ ಬಗ್ಗೆ ತಿಳಿದಾಗಿನಿಂದ ಪ್ರಪಂಚದಾದ್ಯಂತದ ಪ್ರವಾಸಿಗರು ವಿಶೇಷವಾಗಿ ಈ ಉತ್ಸವದಲ್ಲಿ ಭಾಗವಹಿಸಲು ಮೆಕ್ಸಿಕೊಗೆ (Mexico) ಬರುತ್ತಾರೆ. ಸಾವಿರಾರು ವರ್ಷಗಳಷ್ಟು ಹಳೆಯದಾದ ಈ ಹಬ್ಬವನ್ನು ಸ್ಪೇನ್ ನ ಆಕ್ರಮಣಕಾರರು ಮೆಕ್ಸಿಕೊಗೆ ತಂದರು ಎಂದು ಹೇಳಲಾಗುತ್ತದೆ. ಹಿಸ್ಪಾನಿಕ್-ಪೂರ್ವ ಅವಧಿಯಲ್ಲಿ ಪ್ರಾರಂಭವಾದ ಈ ಹಬ್ಬವನ್ನು ಹಿಂದೆ ಆಲ್ ಸೋಲ್ಸ್ ಡೇ ಅಥವಾ ಆಲ್ ಸೇಂಟ್ಸ್ ಡೇ ಎಂದು ಕರೆಯಲಾಗುತ್ತಿತ್ತು.

About the Author

SN
Suvarna News
ಹಬ್ಬ
ಪ್ರವಾಸ
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved