ಬೆಂಗಳೂರಿನಲ್ಲಿರೋ ಬೈಕರ್ಸ್’ಗೆ ಟ್ರಾವೆಲ್ ಮಾಡೋದಕ್ಕೆ ಬೆಸ್ಟ್ ತಾಣಗಳಿವು
ನೀವು ಬೆಂಗಳೂರಿನಲ್ಲಿರುವ ಸಾಹಸಿ ಬೈಕ್ ರೈಡರ್ ಗಳೇ? ಹಾಗಿದ್ರೆ ನಿಮ್ಮ ಮುಂದಿನ ಪ್ರಯಾಣಕ್ಕೆ ಈ ತಾಣಗಳನ್ನು ಆಯ್ಕೆ ಮಾಡಿ.

ನೀವು ಬೈಕ್ ರೈಡರ್ (bike riders) ಆಗಿದ್ರೆ… ಅದ್ರಲ್ಲೂ ಬೆಂಗಳೂರಿನಲ್ಲಿ ನೀವು ವಾಸವಾಗಿದ್ರೆ? ಮುಂದಿನ ಬೈಕ್ ರೈಡ್ ಗೆ ಯಾವ ತಾಣವನ್ನು ಆಯ್ಕೆ ಮಾಡೋದು ಎನ್ನುವ ಯೋಚನೆ ನಿಮಗಿದ್ದರೆ. ನೀವು ಖಂಡಿತವಾಗಿಯೂ ಈ ಸುಂದರ ತಾಣಗಳನ್ನು ಆಯ್ಕೆ ಮಾಡಬಹುದು.
ನಂದಿ ಬೆಟ್ಟ (61 ಕಿ.ಮೀ) - ಬೆಂಗಳೂರಿನಲ್ಲಿ ಇದ್ದ ಮೇಲೆ ನಂದಿ ಹಿಲ್ಸ್ ಗೆ (Nandi Hills) ಹೋಗದೇ ಇದ್ದರೆ ಹೇಗೆ ಅಲ್ವಾ? ಇದು ನೀವು ಭೇಟಿ ನೀಡಲೇಬೇಕಾದ ತುಂಬಾನೆ ಸುಂದರವಾದ ಸ್ಥಳವಾಗಿದೆ.
ಮಂಚಿನಬೆಲೆ ಅಣೆಕಟ್ಟು (35 ಕಿ.ಮೀ) - ಪ್ರಶಾಂತವಾದ ಸುಂದರವಾದ ತಾಣಗಳು ಮತ್ತು ಪಿಕ್ನಿಕ್ ಮಾಡೋದಕ್ಕೆ ಇದು ಬೆಸ್ಟ್ ತಾಣ. ಬೆಂಗಳೂರಿಗೆ ಹತ್ತಿರ ಇರೋ ಈ ತಾಣಕ್ಕೆ ನೀವು ಬೈಕ್ ರೈಡ್ ಮಾಡ್ಕೊಂಡು ಹೋಗಬಹುದು.
ಗುಡಿಬಂಡೆ ಕೋಟೆ (100 ಕಿ.ಮೀ) - ಅದ್ಭುತವಾದ ಪ್ರಕೃತಿ ಸೌಂದರ್ಯ ಇರುವಂತಹ ತಾಣ ಗುಡಿಬಂಡೆ ಕೋಟೆ. ಇದು ಐತಿಹಾಸಿಕ ಕ್ಷಣಗಳನ್ನು ಸಹ ನೆನಪಿಸುವಂತಹ ಸುಂದರವಾದ ತಾಣ ಇದು.
ಮೇಕೆದಾಟು (Mekedatu) (100 ಕಿ.ಮೀ) - ಕಿರಿದಾದ ಕಮರಿಯ ಮೂಲಕ ಹರಿಯುವ ಕಾವೇರಿ ನದಿಯ ರೋಮಾಂಚಕ ದೃಶ್ಯವನ್ನು ಅನುಭವಿಸಬೇಕು ಅಂದ್ರೆ ಮೇಕೆದಾಟುವಿಗೆ ನೀವು ಬೈಕ್ ರೈಡ್ ಮಾಡಿ.
ಬೆಟ್ಟಮುಗಿಲಲಂ (93 ಕಿ.ಮೀ) - ಕಿರಿದಾದ ಓಣಿಗಳು, ಸರೋವರಗಳು ಮತ್ತು ಹಚ್ಚ ಹಸಿರಿನ ಕೃಷಿಭೂಮಿಗಳ ಮೂಲಕ ಹಾದು ಹೋಗುವುದು ನಿಜವಾಗಿಯೂ ಸುಂದರವಾದ ಜರ್ನಿಯಾಗಿರುತ್ತೆ.
ಸಂಗಮ (96 ಕಿ.ಮೀ) - ರಾಗಿಹಳ್ಳಿ ಅರಣ್ಯ ರಸ್ತೆಯ ಮೂಲಕ ಶಾಂತ ವಾತಾವರಣ ಮತ್ತು ಸುಂದರವಾದ ತಾಣ ಇದು. ಇಲ್ಲಿ ನೀವು ಶಾಂತಯುತ ಪ್ರದೇಶದಲ್ಲಿ ಎಂಜಾಯ್ ಮಾಡಬಹುದು.
ಭೀಮೇಶ್ವರಿ (Bheemeshwari)(100 ಕಿ.ಮೀ) - ಕಾವೇರಿ ನದಿಯುದ್ದಕ್ಕೂ ಇರುವ ರಮಣೀಯ ಮಾರ್ಗಗಳು, ಸುತ್ತಲೂ ಹಚ್ಚ ಹಸಿರಿನ ಕಾಡುಗಳು. ಇವುಗಳ ಮಧ್ಯೆ ಬೈಕ್ ರೈಡ್ ಮಾಡೋದೇ ಮಜಾ.
ಕಬಿನಿ (215 ಕಿ.ಮೀ) - ಹಚ್ಚ ಹಸಿರಿನ ಪ್ರದೇಶ ಮತ್ತು ಸುಗಮ ರಸ್ತೆಗಳು, ಸುಂದರ ಪ್ರಕೃತಿ ಎಲ್ಲವೂ ಬೈಕ್ ಸವಾರರು ಮತ್ತು ವನ್ಯಜೀವಿ ಪ್ರಿಯರಿಗೆ ಸ್ವರ್ಗವೇ ಸರಿ.
Hill Stations
ಯೆಳಗಿರಿ ಬೆಟ್ಟಗಳು (157 ಕಿ.ಮೀ) - 14 ಹೇರ್ ಪಿನ್ ತಿರುವುಗಳು ನಿಮ್ಮನ್ನು ಈ ಪ್ರಶಾಂತ ಗಿರಿಧಾಮಕ್ಕೆ ಕರೆದೊಯ್ಯುತ್ತವೆ. ಈ ತಾಣಕ್ಕೆ ಬೈಕ್ ರೈಡ್ ಮಾಡ್ಕೊಂಡು ಹೋಗಲು ಮರಿಬೇಡಿ.
ಸಕಲೇಶಪುರ (225 ಕಿ.ಮೀ) - ಸುಂದರವಾದ ಪ್ರಕೃತಿ ಸೌಂದರ್ಯಕ್ಕೆ ಹೆಸರುವಾಸಿಯಾಗಿರುವ ತಾಣ ಇದು. ಇಲ್ಲಿ ನೀವು ಬೆಟ್ಟಗುಡ್ಡ, ಪ್ರಶಾಂತವಾದ ವಾತಾರವರಣದಲ್ಲಿ ಎಂಜಾಯ್ ಮಾಡಬಹುದು.