ದೀಪಾವಳಿ ರಜೆ ಎಂಜಾಯ್ ಮಾಡಲು ಬೆಂಗಳೂರ ಸುತ್ತಲಿನ ಈ ತಾಣಗಳು ಬೆಸ್ಟ್
ದೀಪಾವಳಿ ರಜೆಗೆ ನೀವು ಕೂಡ ಬೆಂಗಳೂರಿನಿಂದ ಎಲ್ಲಾದ್ರೂ ಹತ್ತಿರದಲ್ಲೇ ಇರುವ ಸುಂದರವಾದ ತಾಣಗಳಿಗೆ ಹೋಗಲು ಪ್ಲ್ಯಾನ್ ಮಾಡುತ್ತಿದ್ರೆ, ಇಲ್ಲಿದೆ ನೀವು ಹೋಗಬಹುದುದಾದ ಹತ್ತು ಬೆಸ್ಟ್ ತಾಣಗಳು. ಇವು ನಿಮ್ಮ ರಜೆಯ ಆನಂದವನ್ನು ಹೆಚ್ಚಿಸೋದ್ರಲ್ಲಿ ಸಂಶಯವೇ ಇಲ್ಲ.
ಭೋಗ ನಂದೀಶ್ವರ ದೇವಸ್ಥಾನ - 50 ಕಿಮೀ (Bhoganandishwara Temple)
ಚಿಕ್ಕಬಳ್ಳಾಪುರದ ನಂದಿಬೆಟ್ಟದ ಬುಡದಲ್ಲಿರುವ ದೇಗುಲವೇ ಭೋಗ ನಂದೀಶ್ವರ ದೇವಸ್ಥಾನ. ಈ ದೇವಾಲಯ ಸಾವಿರಾರು ವರ್ಷಗಳ ಇತಿಹಾಸವನ್ನು ಹೊಂದಿದೆ. ಈ ದೇಗುಲದ ಅದ್ಭುತ ವಾಸ್ತುಶಿಲ್ಪ ಜೊತೆಗೆ ಇಲ್ಲಿ ಕಲ್ಯಾಣಿಯ ವಿಹಂಗಮ ನೋಟ ನೋಡುವುದೇ ಅದ್ಭುತ.
ಆರ್ಟ್ ಆಫ್ ಲಿವಿಂಗ್ - 25 ಕಿಮೀ (Art of Living)
ಶ್ರೀ ಶ್ರೀ ರವಿಶಂಕರ ಗುರೂಜಿಯವರ ಆರ್ಟ್ ಆಫ್ ಲಿವಿಂಗ್ ಇಂಟರ್ ನ್ಯಾಷನಲ್ ಸೆಂಟರ್ ಕನಕಪುರ ರಸ್ತೆಯಲ್ಲಿದೆ. ಶಾಂತಿ, ನೆಮ್ಮದಿ, ಸುಂದರ ವಾತಾವರಣದಲ್ಲಿ ದಿನ ಕಳೆಯಲು ಬಯಸಿದ್ರೆ ಇಲ್ಲಿಗೆ ಭೇಟಿ ನೀಡಿ.
ಮಂಚನಬೆಲೆ ಡ್ಯಾಂ - 37 ಕಿಮೀ (Manchanabele Dam)
ಈ ಸುಂದರವಾದ ಅಣೆಕಟ್ಟು ಬೆಂಗಳೂರಿನಿಂದ ಸುಮಾರು 37ಕಿಮೀ ದೂರದಲ್ಲಿದೆ. ಇಲ್ಲಿ ನೀವು ಒಂದು ದಿನ ಪೂರ್ತಿಯಾಗಿ ಎಂಜಾಯ್ ಮಾಡಬಹುದು, ಅರ್ಕಾವತಿ ನದಿಗೆ ಅಡ್ಡಲಾಗಿ ಈ ಅಣೆಕಟ್ಟನ್ನು ನಿರ್ಮಿಸಲಾಗಿದೆ. ಇದು ಟ್ರೆಕ್ಕಿಂಗ್ ಪಾಯಿಂಟ್ ಕೂಡ ಹೌದು, ಜೊತೆಗೆ ಬೋಟಿಂಗ್ (Boating), ಕಯಾಕಿಂಗ್ ಎಂಜಾಯ್ ಮಾಡಬಹುದು.
ಓಂಕಾರೇಶ್ವರ ದೇವಸ್ಥಾನ - 16 ಕಿಮೀ (Omkareshwara Temple)
ಓಂಕಾರೇಶ್ವರ ದೇವಾಸ್ಥಾನ ಶ್ರೀನಿವಾಸಪುರದಲ್ಲಿರುವ ಓಂಕಾರ ಪರ್ವತದಲ್ಲಿರುವ ಓಂಕಾರ ಆಶ್ರಮದಲ್ಲಿರುವ ದೇವಸ್ಥಾನ. ಇಲ್ಲಿ ಶಿವನನ್ನು ಪೂಜಿಸಲಾಗುತ್ತದೆ. ಇಲ್ಲಿ 12 ರೀತಿಯ ಜ್ಯೋತಿರ್ಲಿಂಗವನ್ನು ಒಂದೇ ಜಾಗದಲ್ಲಿ ಕಾಣಬಹುದು.
ಝೆನ್ ಪಾರ್ಕ್ - 9 ಕಿಮೀ (Zen Park)
ಈ ಜಪಾನೀಸ್ ಪಾರ್ಕ್ ಸಹ ಬೆಂಗಳೂರಿನಲ್ಲೇ ಇದೆ. ಮಕ್ಕಳೊಂದಿಗೆ ರಜೆ ಎಂಜಾಯ್ ಮಾಡೊದಕ್ಕೆ ಇದು ಬೆಸ್ಟ್ ಪ್ಲೇಸ್. ಇದು ನಾಗರಬಾವಿಯಲ್ಲಿದೆ. ಇಲ್ಲಿ ನೀವು ನಿಮ್ಮ ಸುಂದರ ಫೋಟೋಸ್ ಗಳನ್ನು ಕ್ಲಿಕ್ ಮಾಡಿಕೊಳ್ಳಬಹುದು. ಖಂಡಿತಾ ವಿದೇಶದಲ್ಲಿರುವಂತಹ ಅನುಭವ ತರುತ್ತೆ.
ಜನಪದ ಲೋಕ - 55 ಕಿಮೀ (Janapada Loka)
ಬೆಂಗಳೂರಿನಿಂದ ಸುಮಾರು 55 ಕಿ.ಮೀ.ದೂರದಲ್ಲಿ ಜನಪದ ಲೋಕ ಇದೆ. ಸಮೂಹ ಮಾಧ್ಯಮಗಳ ಹೆಚ್ಚಳದಿಂದ ನಶಿಸಿ ಹೋಗುತ್ತಿರುವ ಜನಪದ ಕಲೆಗಳನ್ನ ಉಳಿಸಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇದನ್ನು ನಿರ್ಮಾಣ ಮಾಡಿದೆ. ರಾಮನಗರದಲ್ಲಿರುವ ಈ ತಾಣ ನಿಜಕ್ಕೂ ಜನಪದ ಲೋಕವನ್ನೇ ತೆರೆದಿಡುತ್ತೆ.
ಮಂದಾರಗಿರಿ ಬೆಟ್ಟ - 60 ಕಿಮೀ (Mandaragiri Hill)
ಮಂದಾರಗಿರಿ ಬೆಟ್ಟ ಬೆಂಗಳೂರಿನಿಂದ ಸುಮಾರು 60 ಕಿಮೀ ದೂರದಲ್ಲಿದೆ. ಜನಜಂಗುಳಿಯಿಂದ ದೂರ ತುಮಕೂರಿನಲ್ಲಿರುವ ಸುಂದರವಾದ ಜಾಗದಲ್ಲಿರುವ ಬೆಟ್ಟ ಇದಾಗಿದೆ. ಇಲ್ಲಿ ನವಿಲಿನ ಆಕಾರದಲ್ಲಿನ ಮಂದಿರವೂ ಇದೆ, ಸುತ್ತಲು ಹಸಿರು, ನೀರು ಎಲ್ಲವನ್ನೂ ಕಾಣಬಹುದು.
ಈಶಾ ಫೌಂಡೇಶನ್ - 70 ಕಿಮೀ (Esha Foundation)
ಈಶಾ ಫೌಂಡೇಶನ್ ಬೆಂಗಳೂರಿನಿಂದ 70 ಕಿಮೀ ದೂರದ ಚಿಕ್ಕಬಳ್ಳಾಪುರದಲ್ಲಿದೆ. ಇಲ್ಲಿ ತಮಿಳುನಾಡಿಲ್ಲಿರುವಂತೆ ಶಿವನ ಯೋಗ ಭಂಗಿಯ ಬೃಹತ್ ಮೂರ್ತಿಯಿದೆ. ಶಾಂತಿಪ್ರಿಯರು ನೀವಾಗಿದ್ದರೆ ಈ ಜಾಗ ನಿಮಗೆ ಇಷ್ಟವಾಗಬಹುದು.
ರಾಮದೇವರ ಬೆಟ್ಟ - 65 ಕಿಮೀ (Ramadevara Betta)
ಬೆಂಗಳೂರಿನಿಂದ 65 ಕಿಮೀ ದೂರದಲ್ಲಿರುವ ರಾಮನಗರದಲ್ಲಿರುವ ರಾಮನನ್ನು ಪೂಜಿಸುವಂತಹ ದೇಗುಲವನ್ನು ಹೊಂದಿರುವ ಬೆಟ್ಟವಿದು. ದಕ್ಷಿಣ ಭಾರತದ ಅಯೋಧ್ಯೆ ಎಂದೇ ಜನಪ್ರಿಯತೆ ಪಡೆದ ತಾಣ ಇದಾಗಿದೆ.
ಪಿರಮಿಡ್ ವ್ಯಾಲಿ - 40 ಕಿಮೀ (Pyramid Valley)
ಪಿರಾಮಿಡ್ ವ್ಯಾಲಿ ಬೆಂಗಳೂರಿನಲ್ಲಿರುವ ಪಿರಾಮಿಡ್ ಆಕಾರದ ಒಂದು ಮೆಡಿಟೇಶನ್ ಸೆಂಟರ್. ಇದು ಬೆಟ್ಟಗುಡ್ಡಗಳು ಮತ್ತು ಹಸಿರು ಸಿರಿಗಳಿಂದ ಆವೃತವಾಗಿದೆ. ನಿಮ್ಮ ಬಗ್ಗೆ ನೀವು ಅರ್ಥಮಾಡಿಕೊಳ್ಳಲು ಈ ತಾಣ ಬೆಸ್ಟ್ ಆಗಿದೆ.