ಬೆಂಗಳೂರಲ್ಲಿ ಒಂದು ದಿನದ ಡೇ ಔಟ್‌ಗೆ ಬೆಸ್ಟ್ ಪ್ಲೇಸ್ ..ಮಿಸ್ ಮಾಡ್ದೆ ವಿಸಿಟ್ ಮಾಡಿ
ಆಫೀಸ್ ಕೆಲ್ಸ, ಮನೆ ಟೆನ್ಶನ್..ಎಲ್ಲಾ ಬಿಟ್ಟು ನಾಲ್ಕೈದು ದಿನ ಎಲ್ಲಾದ್ರೂ ಹೋಗಿ ಬರ್ಬೇಕು ಅಂತ ಪ್ಲಾನ್ ಮಾಡ್ತಿದ್ದೀರಾ. ಆದ್ರೆ ರಜೇನೆ ಇಲ್ವಲ್ಲಪ್ಪಾ ಅನ್ನೋ ಕೊರಗಾ> ಚಿಂತೆ ಬಿಡಿ. ಜಸ್ಟ್ ಒನ್ ಡೇಯಲ್ಲಿ ಬೆಂಗಳೂರಿನ ಈ ಸುಂದರ ಜಾಗಗಳನ್ನು ನೋಡಿ ಬರ್ಬೋದು.
ಬೆಂಗಳೂರು ಪ್ಯಾಲೇಸ್
ಬೆಂಗಳೂರು ಅರಮನೆ ಬೆಂಗಳೂರಿನ ಹಿಂದಿನ ರಾಜ ನಿವಾಸವಾಗಿತ್ತು. ಈಗ ಪ್ರವಾಸಿ ಆಕರ್ಷಣೆ ಮತ್ತು ಸಭಾಂಗಣವಾಗಿದೆ. ಬೆಂಗಳೂರಿನಲ್ಲಿ ಅಧ್ಯಯನವನ್ನು ಕೈಗೊಳ್ಳುತ್ತಿದ್ದ ಮೈಸೂರಿನ ಯುವ ಮಹಾರಾಜರಾದ, 10 ನೇ ಚಾಮರಾಜೇಂದ್ರ ಒಡೆಯರ್ ಅವರ ನಿವಾಸವಾಗಿ 1878ರಲ್ಲಿ ಬೆಂಗಳೂರು ಅರಮನೆಯನ್ನು ನಿರ್ಮಿಸಲಾಯಿತು ಎಂದು ತಿಳಿದುಬಂದಿದೆ. ಇಲ್ಲಿನ ಆರ್ಕಿಟೆಕ್ಚರ್ ವೈಭವವನ್ನು ನೋಡಲು ವಿಸಿಟ್ ಮಾಡಬಹುದು.
ಚರ್ಚ್ ಸ್ಟ್ರೀಟ್
ಬೆಂಗಳೂರಿನ ಚರ್ಚ್ ಸ್ಟ್ರೀಟ್ ನಗರದ ಅತ್ಯಂತ ಜನಪ್ರಿಯ ಹ್ಯಾಂಗ್ ಔಟ್ ತಾಣಗಳಲ್ಲಿ ಒಂದಾಗಿದೆ. ಉನ್ನತ ದರ್ಜೆಯ ಕೆಫೆಗಳು, ತಿನಿಸುಗಳು ಮತ್ತು ಬುಕ್ ಶಾಪ್‌ಗಳಿಗೆ ಫೇಮಸ್ ಆಗಿದೆ. ವಾರಾಂತ್ಯವನ್ನು ಕಳೆಯಲು ಇದು ಟ್ರೆಂಡಿ ಸ್ಥಳವಾಗಿದೆ. ಚರ್ಚ್ ಸ್ಟ್ರೀಟ್‌ನಲ್ಲಿ, ನೀವು ಬ್ಲಾಸಮ್ ಬುಕ್ ಹೌಸ್, ಕ್ವೀನ್ಸ್ ರೆಸ್ಟೋರೆಂಟ್, ಮ್ಯಾಟಿಯೊ ಕಾಫಿಯಾ, ರೂಸ್ಟರ್ ಗಿಟಾರ್‌ಗಳು ಮತ್ತು ಆನಿಮೇಷನ್ ಸೌಕ್., ಇತ್ಯಾದಿಗಳಿಗೆ ಭೇಟಿ ನೀಡಬಹುದು. MG ರೋಡ್ ಮತ್ತು ವೈಟ್‌ಫೀಲ್ಡ್ ಮೆಟ್ರೋ ನಿಲ್ದಾಣಗಳು ಚರ್ಚ್ ಸ್ಟ್ರೀಟ್‌ಗೆ ಹತ್ತಿರದ ಮೆಟ್ರೋ ನಿಲ್ದಾಣಗಳಾಗಿವೆ.
ಕಬ್ಬನ್ ಪಾರ್ಕ್
ಬೆಂಗಳೂರಿನಲ್ಲಿ ವಿಶ್ರಾಂತಿ ಪಡೆಯಲು ಮತ್ತು ನಮ್ಮನ್ನು ತಾಜಾಗೊಳಿಸಲು ಕಬ್ಬನ್ ಪಾರ್ಕ್ ಮತ್ತು ಲಾಲ್‌ಬಾಗ್ ನಗರದ ಎರಡು ಅತ್ಯುತ್ತಮ ಸ್ಥಳಗಳಾಗಿವೆ. ಒಂದು ದಿನ ರಜೆಯಿದ್ದಲ್ಲಿ ನೀವು ಆರಾಮವಾಗಿ ಕಬ್ಬನ್ ಪಾರ್ಕ್‌ಗೆ ಭೇಟಿ ನೀಡಬಹುದು. ವಿಧಾನ ಸೌಧ, ಕರ್ನಾಟಕ ಹೈಕೋರ್ಟ್, ಫ್ರೀಡಮ್ ಪಾರ್ಕ್, ಕ್ರಾಂತಿವೀರ ಒಳಾಂಗಣ ಸ್ಟೇಡಿಯಮ್ ಮತ್ತು ವಿಶ್ವೇಶ್ವರಯ್ಯ ಇಂಡಸ್ಟ್ರಿಯಲ್ ಮತ್ತು ಟೆಕ್ನಾಲಜಿಕಲ್ ಮ್ಯೂಸಿಯಮ್ ಕಬ್ಬನ್ ಪಾರ್ಕ್‌ನಿಂದ ಕೆಲವೇ ಕೆಲವು ಕಿಮೀಗಳ ಒಳಗಿವೆ.
ವಂಡರ್ ಲಾ ಪಾರ್ಕ್
ವಂಡರ್‌ಲಾವು ಒಂದು ದಿನದ ರಜೆಯನ್ನು ಕಳೆಯಲು ಉತ್ತಮ ಸ್ಥಳವಾಗಿದೆ. ಫ್ರೆಂಡ್ಸ್ ಅಥವಾ ಫ್ಯಾಮಿಲಿ ಜೊತೆ ಹೋಗಿ ನೀವಿಲ್ಲಿ ಸಮಯ ಕಳೆಯಬಹುದು. ಜಲಕ್ರೀಡೆಯನ್ನು ಇಷ್ಟಪಡುವವರಿಗರ ಒಂದು ಉತ್ತಮ ಸ್ಥಳವಾಗಿದೆ. 60ಕ್ಕೂ ಸವಾರಿಗಳನ್ನು ಒಂದೇ ತಾಣದಲ್ಲಿ ಪಡೆಯ ಬಹುದು. ಇಲ್ಲಿ ಸಾಮಾನ್ಯ ಸೀಸನ್‌ನಲ್ಲಿ ವಾರಾಂತ್ಯದಲ್ಲಿ ಹಾಗೂ ವಾರದ ನಡುವಿನ ದಿನಗಳಲ್ಲಿ ಟಿಕೇಟ್ ಬೆಲೆ ಬೇರೆ ಬೇರೆ ಇರುತ್ತದೆ.
ಬೆಂಗಳೂರು ಮತ್ಸ್ಯಾಲಯ
ಈ ಮತ್ಸ್ಯಾಲಯವು ಕಬ್ಬನ್ ಪಾರ್ಕಿನ ಬಾಲ ಭವನದ ಬಳಿ ಇದೆ ನೆಲ ಅಂತಸ್ತಿನಲ್ಲಿ ಮತ್ಸ್ಯಾಲಯದ ಕಚೇರಿ ಇದ್ದು ಮಹಡಿಯ ಮೇಲೆ ಮತ್ಸ್ಯಾಲಯವಿದೆ. ಇಲ್ಲಿ ಸಿಯಾಮೆಸ್ ಫೈಟರ್, ಕಾಟ್ಲಾ, ಫ್ರೆಶ್‌ವಾಟರ್ ಪ್ರಾನ್ಸ್, ಗೋಲ್ಡ್ ಫಿಶ್, ರೆಡ್ ಟೇಲ್ ಶಾರ್ಕ್ ಸೇರಿದಂತೆ ವಿವಿಧ ಬಗೆಯ ಅಪರೂಪದ ಮೀನುಗಳ ಸಂಗ್ರಹವಿದೆ. ಮಕ್ಕಳಿಗೆ ಹಾಗೂ ದೊಡ್ಡವರಿಗೆ ಪತ್ಯೇಕ ಪ್ರವೇಶ ದರ ಇದೆ. ಪ್ರತಿ ಸೋಮವಾರ ಮತ್ತು ಪ್ರತಿ ತಿಂಗಳ ಎರಡನೆ ಮಂಗಳವಾರ ರಜೆ ಇದೆ.
ವಿಶ್ವೇಶ್ವರಯ್ಯ ಮ್ಯೂಸಿಯಂ
ವಿಶ್ವೇಶ್ವರಯ್ಯ ಕೈಗಾರಿಕಾ ಮತ್ತು ತಾಂತ್ರಿಕ ವಸ್ತುಸಂಗ್ರಹಾಲಯ ನಗರದ ಹೃದಯ ಭಾಗದಲ್ಲಿರುವ ಕಸ್ತೂರ್‌ಬಾ ರಸ್ತೆಯಲ್ಲಿದೆ. ಮ್ಯೂಸಿಯಂನಲ್ಲಿ ಹಲವು ವಸ್ತುಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ. ಹಿರಿಯರು, ಮಕ್ಕಳು ಮನೋರಂಜನೆಯ ಮೂಲಕ ವಿಜ್ಞಾನವನ್ನು ತಿಳಿದುಕೊಳ್ಳಬಹುದು. ವಸ್ತುಸಂಗ್ರಹಾಲಯವು ಕೈಗಾರಿಕಾ ಉತ್ಪನ್ನಗಳು, ವೈಜ್ಞಾನಿಕ ಮಾದರಿಗಳು ಮತ್ತು ಎಂಜಿನ್‌ಗಳನ್ನು ಪ್ರದರ್ಶಿಸುತ್ತದೆ. ಈ ಘಟಕವನ್ನು ಸರ್ ಎಂ. ವಿಶ್ವೇಶ್ವರಯ್ಯ ಅವರ ನೆನಪಿಗಾಗಿ ಸ್ಥಾಪಿಸಲಾಗಿದೆ .