ಬನ್ನೇರುಘಟ್ಟ ಉದ್ಯಾನವನಕ್ಕೆ ಹೊಸ ಅತಿಥಿಗಳ ಆಗಮನ: ಹೆಣ್ಣು ಮರಿಗಳಿಗೆ ಜನ್ಮ ನೀಡಿದ ಕೋಕಿಲಾ, ಕಾವೇರಿ
ಬೆಂಗಳೂರಿನ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಕೋಕಿಲಾ ಮತ್ತು ಕಾವೇರಿ ಎಂಬ ಜೀಬ್ರಾಗಳು ಮರಿಗಳಿಗೆ ಜನ್ಮ ನೀಡಿವೆ. ಈ ಮೂಲಕ ಉದ್ಯಾನವನದಲ್ಲಿ ಜೀಬ್ರಾಗಳ ಸಂಖ್ಯೆ 9ಕ್ಕೆ ಏರಿಕೆಯಾಗಿದೆ.

ಬೆಂಗಳೂರು ಹೊರವಲಯದಲ್ಲಿರುವ ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಹೊಸ ಅತಿಥಿಗಳ ಆಗಮನವಾಗಿದೆ. ನೂತನ ಅತಿಥಿಗಳ ಆಗಮನದಿಂದ ಉದ್ಯಾನವನದಲ್ಲಿ ಸಂಭ್ರಮ ಮನೆ ಮಾಡಿದೆ.
ಇದನ್ನೂ ಓದಿ: ತೋಟದಲ್ಲಿ ಕೆಲಸ ಮಾಡುವ ವೇಳೆ ಜೇನು ನೊಣಗಳ ದಾಳಿ: ಕೃಷಿಕ ಸಾವು
ಹೌದು ಇಲ್ಲಿನ ನಿವಾಸಿಗಳಾದ ಕೋಕಿಲಾ ಹಾಗೂ ಕಾವೇರಿ ಹೆಸರಿನ ಜೀಬ್ರಾಗಳು ತಲಾ ಒಂದೊಂದು ಮರಿಗಳಿಗೆ ಜನ್ಮ ನೀಡಿವೆ. ಹೀಗಾಗಿ ಉದ್ಯಾನವನದಲ್ಲಿ ಜೀಬ್ರಾಗಳ ಸಂಖ್ಯೆ 9ಕ್ಕೆ ಏರಿದೆ.
ಇದನ್ನೂ ಓದಿ: ಚೀಟಿ ಹೆಸರಲ್ಲಿ ಜನರಿಗೆ ಲಕ್ಷ ಲಕ್ಷ ರೂ. ನಾಮ ಹಾಕಿದ್ದ ಬಳ್ಳಾರಿಯ ವೆಂಕಟೇಶನ ಕಡೆಗೂ ಬಂಧಿಸಿದ ಪೊಲೀಸರು
ಇಲ್ಲಿ ಹೆಣ್ಣು ಜೀಬ್ರಾಗಳ ಸಂಖ್ಯೆಯೇ ಅಧಿಕವಾಗಿದ್ದು, ಇವುಗಳನ್ನು ಪ್ರಾಣಿ ವಿನಿಮಯ ಯೋಜನೆ ಅಡಿಯಲ್ಲಿ ಬೇರೆ ಕಡೆ ವಿನಿಮಯ ಮಾಡಿ ಬೇರೆ ಪ್ರಾಣಿಗಳನ್ನು ತರಲು ಚಿಂತನೆ ನಡೆದಿದೆ ಎಂದು ಬನ್ನೇರುಘಟ್ಟ ಜೈವಿಕ ಉದ್ಯಾನವನದ ಕಾರ್ಯನಿರ್ವಾಹಕ ನಿರ್ದೇಶಕ ಸೂರ್ಯಸೇನ್ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಕಲಬುರಗಿ: 8 ದಿನದ ಕರುವನ್ನು ತೊಟ್ಟಿಲಲ್ಲಿ ಮಲಗಿಸಿ ಅದ್ದೂರಿ ನಾಮಕರಣ: ಗೋ ಸೇವಕರಿಗೆ ಸನ್ಮಾನ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

