ಕಲಬುರಗಿ: 8 ದಿನದ ಕರುವನ್ನು ತೊಟ್ಟಿಲಲ್ಲಿ ಮಲಗಿಸಿ ಅದ್ದೂರಿ ನಾಮಕರಣ: ಗೋ ಸೇವಕರಿಗೆ ಸನ್ಮಾನ
ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ನವನೀತ ಗೋ ಶಾಲೆಯಲ್ಲಿ, 8 ದಿನದ ಕರುವನ್ನು ತೊಟ್ಟಿಲಲ್ಲಿ ಮಲಗಿಸಿ, ಜೋಗುಳ ಹಾಡಿ 'ಭೀಮಾ' ಎಂದು ವಿಶಿಷ್ಟವಾಗಿ ನಾಮಕರಣ ಮಾಡಲಾಯಿತು. ಇದೇ ವೇಳೆ ಗೋಪಾಲಕರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಮಕ್ಕಳ ನಾಮಕರಣ ಅದ್ದೂರಿಯಾಗಿ ಮಾಡೋದು ಕಾಮನ್. ಆದ್ರೆ ಇಲ್ಲಿ ಕರುವನ್ನು ತೊಟ್ಟಿಲಲ್ಲಿ ಮಲಗಿಸಿ, ಜೋಗುಳ ಹಾಡಿ ನಾಮಕರಣ ಮಾಡಲಾಗಿದೆ. ಕಲಬುರಗಿ ಜಿಲ್ಲೆ ಸೇಡಂ ತಾಲೂಕಿನ ನವನೀತ ಗೋ ಶಾಲೆಯಲ್ಲಿ ಈ ಅಪರೂಪದ ಘಟನೆ ನಡೆದಿದೆ.
ಇದನ್ನೂ ಓದಿ: ಆಹಾರ ಅರಸಿ ಬಂದ ಕರಡಿ ವಿದ್ಯುತ್ ತಂತಿ ಸ್ಪರ್ಶಿಸಿ ದಾರುಣ ಸಾವು
ತೊಟ್ಟಿಲಿಗೆ ಬಲೂನ್ ಕಟ್ಟಿ ಹೂಗಳಿಂದ ಅಲಂಕರಿಸಿ ನಂತರ ಅದರಲ್ಲಿ ಕರುವನ್ನು ಮಲಗಿಸಿ ಅದ್ದೂರಿಯಾಗಿ ನಾಮಕರಣ ಶಾಸ್ತ್ರ ಮಾಡಲಾಯ್ತು. ಮಹಿಳೆಯರು 8 ದಿನದ ಕರುವಿಗೆ ಆರತಿ ಬೆಳಗಿ ಭೀಮಾ ಎಂದು ನಾಮಕರಣ ಮಾಡಿದ್ದಾರೆ.
ಇದನ್ನೂ ಓದಿ: ವಿವಿ ಪ್ಯಾಟ್ ಬಗ್ಗೆ ದೂರುವ ಕಾಂಗ್ರೆಸ್‌ನಿಂದಲೇ ಸಹಕಾರಿ ಸಂಘದ ಚುನಾವಣೆಯಲ್ಲಿ ಬ್ಯಾಲೆಟ್ ಪೇಪರ್ ಅಕ್ರಮ
8 ದಿನದ ಹಿಂದೆ ಸೇಡಂ ತಾಲೂಕಿನ ನವನೀತ ಗೋ ಶಾಲೆಯಲ್ಲಿ ಹಸುವೊಂದು ಮುದ್ದಾದ ಗಂಡು ಕರುವಿಗೆ ಜನ್ಮ ನೀಡಿತ್ತು. ಈ ಕರುವಿಗೆ ಇಂದು ನಾಮಕರಣ ಮಾಡಲಾಯ್ತು. ಇಲ್ಲಿ ಇದೇನು ಹೊಸ ಆಚರಣೆ ಅಲ್ಲ, ಪ್ರತಿ ಬಾರಿ ಇಲ್ಲಿ ಹಸುವೊಂದು ಕರು ಹಾಕಿದಾಗಲೆಲ್ಲಾ ಇಲ್ಲಿ ಕರುಗಳಿಗೆ ನಾಮಕರಣ ಮಾಡಲಾಗುತ್ತದೆ.
ಇದನ್ನೂ ಓದಿ: ದುಬೈ ವಿಮಾನ ನಿಲ್ದಾಣದ ಸಮೀಪ ಇರಾನ್ ಮತ್ತೆ ಡ್ರೋನ್ ದಾಳಿ, ಭಾರಿ ಬೆಂಕಿ: ವಿಮಾನಗಳ ಹಾರಾಟ ಸ್ಥಗಿತ
ಇದೇ ಸಮಯದಲ್ಲಿ ಗೋ ಸೇವೆ ಮಾಡುವ ಕಲಬುರಗಿ ಜಿಲ್ಲೆಯ 12 ಜನ ಗೋವುಗಳ ಸೇವಕರನ್ನು ಗುರುತಿಸಿ ಅವರಿಗೆ ಗೋಪಾಲರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸೇಡಂನ ನವನೀತ ಗೋಶಾಲಾ ಆಡಳಿತ ಮಂಡಳಿಯವರ ಈ ಕಾರ್ಯಕ್ಕೆ ಈಗ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.
ಇದನ್ನೂ ಓದಿ: ಮಗನ ಮಾನಗೇಡಿ ಕೆಲಸಕ್ಕೆ ಇಡೀ ಕುಟುಂಬಕ್ಕೆ ಬಹಿಷ್ಕಾರ: ಮನನೊಂದು ನದಿಗೆ ಹಾರಿದ ತಾಯಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

