ಬೆಂಗಳೂರಿನಾದ್ಯಂತ ಸಂಜೆ ಗುಡುಗು ಸಹಿತ ಮಳೆಯಾಗಿದೆ. ಇಂದು ರಾತ್ರಿಯಿಡೀ ಭಾರೀ ಮಳೆಯಾಗುವ ಸಾಧ್ಯತೆ ಕುರಿತು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ದಕ್ಷಿಣದದ ಹಲವು ನಗರಗಲ್ಲಿ ಹೆಚ್ಚು ಮಳೆಯಾಗುತ್ತಿದೆ. ಜೆಪಿ ನಗರದಲ್ಲಿ ಮಳೆ ನೀರು ನಿಂತು ವಾಹನ ಸವಾರರು ಪರದಾಡಿದ ಘಟನೆ ನಡೆದಿದೆ.

Bengaluru rain forecast: ಬೆಂಗಳೂರಿನ ವಾತಾವರಣ ಊಹೆಗೆ ನಿಲುಕದಂತೆ ಕ್ಷಣ ಕ್ಷಣಕ್ಕೂ ಬದಲಾಗುತ್ತಿದೆ. ಬೆಳಗ್ಗೆ ಎಳೆಬಿಸಿಲು, ಮಧ್ಯಾಹ್ನ ಆಗುತ್ತಲೇ ಬೇಸಿಗೆ ನೆನಪಿಸುವ ಉರಿಬಿಸಿಲು ಮಧ್ಯಾಹ್ನ ಬೆವರುತ್ತಲೇ ಸಂಜೆ ವೇಳೆಗೆ ದುತ್ತನೇ ಬರೋ ಮಳೆ ಮೋಡ, ಮಿಂಚು..!

ಹೌದು ಇಂದು ಕೂಡ ಮಧ್ಯಾಹ್ನದವರೆಗೆ ಬಿಸಿಲಿದ್ದು ಸಂಜೆ ಬೆಂಗಳೂರು ನಗರಾದ್ಯಂತ ಗುಡುಗು ಸಹಿತ ಮಳೆಯಾಗಿದ್ದು ಇನ್ನು ಮುಂದುವರಿದಿದೆ. ಬೆಂಗಲೂರಿನ ಮಳೆಯಿಂದಾಗ ಹಲವು ನಗರಗಳಲ್ಲಿ ವಾಹನ ಸವಾರರು ಪರದಾಡಿದ್ದಾರೆ.

ದಕ್ಷಿಣ ಭಾರತದಾದ್ಯಂತ ಭಾರೀ ಮಳೆ ಸಾಧ್ಯತೆ

ಬೆಂಗಳೂರು ಸೇರಿದಂತೆ ದಕ್ಷಿಣ ಭಾರತದ ಹಲವು ನಗರಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇಂದು ಸಂಜೆ ಸುರಿದ ಮಳೆಗೆ ಬೆಂಗಳೂರಿನ ಹಲವು ನಗರಗಳಲ್ಲಿ ರಸ್ತೆ ಮೇಲೆ ನೀರು ನಿಂತು ವಾಹನ ಸವಾರರು ಪರದಾಡುವಂತಾಯ್ತು. ಅರ್ಧಕ್ಕೆ ನಿಂತಿರುವ ಒಳಚರಂಡಿ ಕಾಮಗಾರಿಗಳು, ರಸ್ತೆ ಕಾಮಗಾರಿಯಿಂದಾಗಿ ಇನ್ನಷ್ಟು ಅಸ್ತವ್ಯವಸ್ತಗೊಳಿಸುವಂತಾಯ್ತು.

ಹವಾಮಾನ ಬದಲಾವಣೆಯಿಂದ ಸೃಷ್ಟಿಯಾಗಿರುವ ವಾತಾವರಣ ಬೆಂಗಳೂರಿಗೆ ಮಾತ್ರ ಸೀಮಿತವಾಗಿಲ್ಲ. ಮೈಸೂರು, ಚೆನ್ನೈ ಕೊಯಮತ್ತೂರು, ಕೊಚ್ಚಿ ಮತ್ತು ತಿರುವನಂತಪುರಂ ಸೇರಿದಂತೆ ದಕ್ಷಿಣ ಭಾರತದ ಹಲವು ನಗರಗಳಲ್ಲಿ ವ್ಯಾಪಾಕ ಮಳೆಯಾಗುವ ಸಾಧ್ಯತೆಯಿದೆ.…