MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • Sandalwood
  • ರಾಕಿಂಗ್ ಸ್ಟಾರ್ ಯಶ್-ನರ್ತನ್ ಹೊಸ ಸಿನಿಮಾ ಕಥೆ ಲೀಕ್! ಸೈನ್ಯ ಬಿಟ್ಟು ಪೊಲೀಸ್ ಆಗುವ ಯಶ್‌ಗೆ ತೃಪ್ತಿ ದಿಮ್ರಿ ನಾಯಕಿ!

ರಾಕಿಂಗ್ ಸ್ಟಾರ್ ಯಶ್-ನರ್ತನ್ ಹೊಸ ಸಿನಿಮಾ ಕಥೆ ಲೀಕ್! ಸೈನ್ಯ ಬಿಟ್ಟು ಪೊಲೀಸ್ ಆಗುವ ಯಶ್‌ಗೆ ತೃಪ್ತಿ ದಿಮ್ರಿ ನಾಯಕಿ!

'ಟಾಕ್ಸಿಕ್' ನಂತರ ರಾಕಿಂಗ್ ಸ್ಟಾರ್ ಯಶ್, ನಿರ್ದೇಶಕ ನರ್ತನ್ ಜೊತೆ ಕೈಜೋಡಿಸಿದ್ದಾರೆ. ಈ ಚಿತ್ರದಲ್ಲಿ ಯಶ್ ಮಾಜಿ ಸೈನಿಕನಾಗಿ, ನಂತರ 'ಮ್ಯಾಡ್ ಪೊಲೀಸ್' ಅಧಿಕಾರಿಯಾಗಿ ಕಾಣಿಸಿಕೊಳ್ಳಲಿದ್ದು, ಬಾಲಿವುಡ್‌ನ ಧರ್ಮಾ ಪ್ರೊಡಕ್ಷನ್ಸ್ ಈ ಪ್ಯಾನ್ ಇಂಡಿಯಾ ಸಿನಿಮಾವನ್ನು ನಿರ್ಮಿಸುತ್ತಿದೆ.

1 Min read
Author : Sathish Kumar KH
Published : Jun 30 2026, 05:20 PM IST
Share this Photo Gallery
  • FB
  • TW
  • Linkdin
  • Whatsapp
15
Image Credit : Facebook

ಕೆಜಿಎಫ್ ಸರಣಿಯ ಅಭೂತಪೂರ್ವ ಯಶಸ್ಸಿನ ನಂತರ ಇಡೀ ವಿಶ್ವವೇ ರಾಕಿಂಗ್ ಸ್ಟಾರ್ ಯಶ್ (Rocking Star Yash) ಅವರ ಮುಂದಿನ ಸಿನಿಮಾಗಾಗಿ ಕಾದು ಕುಳಿತಿದೆ. ಸದ್ಯ 'ಟಾಕ್ಸಿಕ್' (Toxic) ಸಿನಿಮಾದಲ್ಲಿ ಬ್ಯುಸಿಯಾಗಿರುವ ಯಶ್, ಅದರ ಬೆನ್ನಲ್ಲೇ ನಿರ್ದೇಶಕ ನರ್ತನ್ ಜೊತೆ ಕೈಜೋಡಿಸುತ್ತಿರುವುದು ಈಗ ಅಧಿಕೃತವಾಗಿದೆ. ಈ ಚಿತ್ರದ ಕುರಿತು ಈಗ ಕೆಲವು ಕುತೂಹಲಕಾರಿ ಮಾಹಿತಿಗಳು ಹೊರಬಂದಿದ್ದು, ಅಭಿಮಾನಿಗಳಲ್ಲಿ ಸಂಚಲನ ಮೂಡಿಸಿವೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
25
Image Credit : Fandango instagram

ಸೈನ್ಯ ಬಿಟ್ಟು ಪೊಲೀಸ್ ಆಗುವ ನಾಯಕನ ಕಥೆ:

ಈ ಚಿತ್ರವು ಒಬ್ಬ ಮಾಜಿ ಸೈನಿಕನ ಸುತ್ತ ಸಾಗುತ್ತದೆ ಎನ್ನಲಾಗಿದೆ. ವೈಯಕ್ತಿಕ ಕಾರಣಗಳಿಂದಾಗಿ ಸೈನ್ಯವನ್ನು ತೊರೆಯುವ ನಾಯಕ, ನಂತರ ತನ್ನ ಸ್ಥಳೀಯ ಭಾಗದಲ್ಲಿ ಪೊಲೀಸ್ ಪಡೆಗೆ ಸೇರ್ಪಡೆಗೊಳ್ಳುತ್ತಾನೆ.

Related Articles

Related image1
Yash Movies: ಟಾಕ್ಸಿಕ್ ಅಷ್ಟೇ ಅಲ್ಲ, ಯಶ್ ಕೈಯಲ್ಲಿವೆ ಇನ್ನೂ 5 ದೊಡ್ಡ ಸಿನಿಮಾಗಳು: ಲಿಸ್ಟ್ ಇಲ್ಲಿದೆ
Related image2
Radhika Pandit: ಯಶ್ ಪತ್ನಿ ಸ್ಯಾಂಡಲ್‌ವುಡ್‌ ಸಿಂಡ್ರೆಲ್ಲಾ ಬಗ್ಗೆ ನಿಮಗೆ ಈ ಆಸಕ್ತಿಕರ ಸಂಗತಿಗಳು ಗೊತ್ತಾ?
35
Image Credit : Facebook

ಅಷ್ಟೇ ಅಲ್ಲದೆ, ಈ ಚಿತ್ರದಲ್ಲಿ ಯಶ್ ಅವರು 'ಮ್ಯಾಡ್ ಪೊಲೀಸ್' (Mad Police) ಎಂಬ ಖ್ಯಾತಿಯ, ಸವಾಲುಗಳಲ್ಲಿ ಎಂದಿಗೂ ಸೋಲನ್ನೇ ಕಾಣದ ಪವರ್‌ಫುಲ್ ಅಧಿಕಾರಿಯಾಗಿ ಅಬ್ಬರಿಸಲಿದ್ದಾರೆ. ಆಕ್ಷನ್ ಮತ್ತು ಡ್ರಾಮಾ ಸಮಪಾಲು ಹೊಂದಿರುವ ಈ ಕಥೆ ಪ್ರೇಕ್ಷಕರಿಗೆ ರೋಚಕ ಅನುಭವ ನೀಡಲಿದೆ.

45
Image Credit : Facebook

ಬಾಲಿವುಡ್ ನಿರ್ಮಾಣ ಮತ್ತು ತಾರಾಬಳಗ:

ಈ ಬಹುಕೋಟಿ ವೆಚ್ಚದ ಸಿನಿಮಾವನ್ನು ಬಾಲಿವುಡ್‌ನ ಖ್ಯಾತ ನಿರ್ಮಾಣ ಸಂಸ್ಥೆ 'ಧರ್ಮಾ ಪ್ರೊಡಕ್ಷನ್ಸ್' ಮೂಲಕ ಕರಣ್ ಜೋಹರ್, ಹಿರೂ ಜೋಹರ್ ಮತ್ತು ಅಪೂರ್ವ ಮೆಹ್ತಾ ನಿರ್ಮಾಣ (Producers- Hiroo Johar, Karan Johar, Apoorva Mehta) ಮಾಡುತ್ತಿದ್ದಾರೆ. ಚಿತ್ರಕ್ಕೆ 'ಸಪ್ತ ಸಾಗರದಾಚೆ ಎಲ್ಲೋ' ಖ್ಯಾತಿಯ ಹೇಮಂತ್ ಎಂ. ರಾವ್ (Hemanth M. Rao) ಮತ್ತು ಖುದ್ದು ಯಶ್ ಅವರೇ ಕಥೆ ಬರೆಯುತ್ತಿರುವುದು ವಿಶೇಷ. ಚಿತ್ರದಲ್ಲಿ ಯಶ್ ಅವರಿಗೆ ಜೋಡಿಯಾಗಿ ಬಾಲಿವುಡ್‌ನ 'ನ್ಯಾಷನಲ್ ಕ್ರಶ್' ತೃಪ್ತಿ ದಿಮ್ರಿ (Triptii Dimri) ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.

55
Image Credit : others

ಕನ್ನಡ ಸೇರಿದಂತೆ ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಈ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾಗಲಿದೆ. ನರ್ತನ್ ಅವರ ಖಡಕ್ ನಿರ್ದೇಶನ ಮತ್ತು ಯಶ್ ಅವರ ಮ್ಯಾನರಿಸಂ ನೋಡಲು ಸಿನಿಪ್ರಿಯರು ತುದಿಗಾಲಿನಲ್ಲಿ ನಿಂತಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SK
Sathish Kumar KH
ವಿಜಯನಗರ ಜಿಲ್ಲೆ ಕಂದಗಲ್‌ಪುರ ಗ್ರಾಮದವನು ಮೂಲತಃ ಶಿಕ್ಷಕ. ಆದರೆ, ಆಕರ್ಷಿಸಿದ್ದು ಪತ್ರಿಕೋದ್ಯಮ. ಎಂಟು ವರ್ಷಗಳಿಂದ ಪ್ರಜಾವಾಣಿ, ವಿಜಯವಾಣಿ ನಂತರ ಇದೀಗ ಏಷ್ಯಾನೆಟ್ ಕನ್ನಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಕರ್ನಾಟಕ ರಾಜಕಾರಣ ನೆಚ್ಚಿನ ಕ್ಷೇತ್ರ. ಡಿಜಿಟಲ್ ಮಾಧ್ಯಮಕ್ಕನುಗುಣವಾಗಿ ಶಿಕ್ಷಣ, ಆರೋಗ್ಯ, ಸಿನಿಮಾ ಸುದ್ದಿಗಳನ್ನೂ ಬರೆಯುತ್ತೇನೆ. ಕ್ರಿಕೆಟ್, ಕೃಷಿ ಇಷ್ಟ. ಓದು ನೆಚ್ಚಿನ ಹವ್ಯಾಸ.
ಯಶ್
ಸ್ಯಾಂಡಲ್‌ವುಡ್
ಬಾಲಿವುಡ್
ಟಾಕ್ಸಿಕ್

Latest Videos
Recommended Stories
Recommended image1
Mahaan: ಹಿರಿಯ ವಕೀಲರಾಗಿ ಚಿನ್ನಾರಿ ಮುತ್ತನ ಸಿನಿಮಾಗೆ ಎಂಟ್ರಿ ಕೊಟ್ಟ ಶಿವಣ್ಣ: ಅಭಿಮಾನಿಗಳಿಗೆ ಸರ್ಪ್ರೈಸ್
Recommended image2
Toxic ಅಪ್‌ಡೇಟ್ ಕೊಟ್ಟ ರಾಕಿಂಗ್ ಸ್ಟಾರ್ ಯಶ್: ನಾಳೆ ಬೆಳಗ್ಗೆ 11:33ಕ್ಕೆ ಏನಾಗಲಿದೆ?
Recommended image3
'ಹೇಗಾದರೂ ಮಾತಾಡು ನೀ': Darshan ನೆನಪಿನಲ್ಲಿ ವಿಜಯಲಕ್ಷ್ಮಿ ಹಂಚಿಕೊಂಡ ಪೋಸ್ಟ್‌ನಲ್ಲಿ ಏನಿದೆ?
Related Stories
Recommended image1
Yash Movies: ಟಾಕ್ಸಿಕ್ ಅಷ್ಟೇ ಅಲ್ಲ, ಯಶ್ ಕೈಯಲ್ಲಿವೆ ಇನ್ನೂ 5 ದೊಡ್ಡ ಸಿನಿಮಾಗಳು: ಲಿಸ್ಟ್ ಇಲ್ಲಿದೆ
Recommended image2
Radhika Pandit: ಯಶ್ ಪತ್ನಿ ಸ್ಯಾಂಡಲ್‌ವುಡ್‌ ಸಿಂಡ್ರೆಲ್ಲಾ ಬಗ್ಗೆ ನಿಮಗೆ ಈ ಆಸಕ್ತಿಕರ ಸಂಗತಿಗಳು ಗೊತ್ತಾ?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved