- Home
- Entertainment
- Sandalwood
- ಪಂಚೆ,ಶಲ್ಯದಲ್ಲಿ ಕಾಣಿಸಿಕೊಂಡ ರಕ್ಷಿತ್ ಶೆಟ್ಟಿಯನ್ನು ರವಿ ಅಣ್ಣನಿಗೆ ಹೋಲಿಸಿದ ನೆಟ್ಟಿಗರು!
ಪಂಚೆ,ಶಲ್ಯದಲ್ಲಿ ಕಾಣಿಸಿಕೊಂಡ ರಕ್ಷಿತ್ ಶೆಟ್ಟಿಯನ್ನು ರವಿ ಅಣ್ಣನಿಗೆ ಹೋಲಿಸಿದ ನೆಟ್ಟಿಗರು!
Rakshit Shetty: ಹಲವಾರು ದಿನಗಳ ಬಳಿಕ ಸೋಶಿಯಲ್ ಮೀಡಿಯಾದಲ್ಲಿ ರಕ್ಷಿತ್ ಶೆಟ್ಟಿ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ಓಡಾಡುತ್ತಿವೆ. ಪಂಚ, ಶಲ್ಯ ಧರಿಸಿ ಮಿರ ಮಿರನೆ ಮಿಂಚುತ್ತಿರುವ ರಕ್ಷಿತ್ ಶೆಟ್ಟಿ ಬಗ್ಗೆ ಅಭಿಮಾನಿಗಳಲ್ಲಿ ಗುಸು ಗುಸು ಶುರುವಾಗಿದೆ. ಏನ್ ಹೇಳ್ತಿದ್ದಾರೆ ನೋಡಿ.

ರಕ್ಷಿತ್ ಶೆಟ್ಟಿ
ಚಂದನವನದ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ, ‘ಸಪ್ತ ಸಾಗರದಾಚೆ’ ಸಿನಿಮಾ ಬಳಿಕ ಸಂಪೂರ್ಣವಾಗಿ ಮರೆಯಾಗಿದ್ದರು. ತಮ್ಮ ಮುಂದಿನ ಸಿನಿಮಾ ಕಥೆ ಬರೆಯೋದ್ರಲ್ಲಿ ಬ್ಯುಸಿಯಾಗಿದ್ದರು ನಟ, ನಿರ್ದೇಶಕ, ನಿರ್ಮಾಪಕ ರಕ್ಷಿತ್ ಶೆಟ್ಟಿ. ಇದೀಗ ಜನರ ಮುಂದೆ ಕಾಣಿಸಿಕೊಂಡಿದ್ದಾರೆ.

ಪಂಚ ಶಲ್ಯದಲ್ಲಿ ಮಿಂಚಿದ ರಕ್ಷಿತ್ ಶೆಟ್ಟಿ
ರಕ್ಷಿತ್ ಶೆಟ್ಟಿ ಫೋಟೊಗಳು ಇದೀಗ ಸೋಶಿಯಲ್ ಮೀಡಿಯಾದಲ್ಲಿ ಮಿಂಚುತ್ತಿದ್ದು, ಪಂಚೆ, ಶಲ್ಯ ಧರಿಸಿ ಓಡಾಡುತ್ತಿರುವ ನಟ ರಕ್ಷಿತ್ ಶೆಟ್ಟಿಯನ್ನು ನೋಡಿ ಜನ ಗುಡ್ ನ್ಯೂಸ್ ಇದೆಯೇ ಎಂದು ಕೇಳುತ್ತಿದ್ದಾರೆ. ಆದರೆ ಈ ಫೋಟೊಗಳು ರಕ್ಷಿತ್ ಶೆಟ್ಟಿ ತಂದೆ-ತಾಯಿಯ 50ನೇ ವರ್ಷದ ವಿವಾಹ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ನಡೆದ ಪೂಜೆಗಾಗಿ ರಕ್ಷಿತ್ ಈ ರೀತಿ ತಯಾರಾಗಿದ್ದರು.
ಅಭಿಮಾನಿಗಳು ಫುಲ್ ಖುಷ್
ರಿಚರ್ಡ್ ಆಂಟನಿ ಮತ್ತು ಪುಣ್ಯಕೋಟಿ ಎರಡು ಸಿನಿಮಾಗಳನ್ನು ಮಾಡುವುದಾಗಿ ಹೇಳಿ, ಮೀಡಿಯಾದಿಂದ ಸಂಪೂರ್ಣವಾಗಿ ಕಣ್ಮರೆಯಾಗಿದ್ದ ರಕ್ಷಿತ್ ಅವರನ್ನು ನೋಡಿ ಅಭಿಮಾನಿಗಳಂತೂ ಈ ರೀತಿಯಾಗಿ ಪಂಚೆ ಶಲ್ಯದಲ್ಲಿ ನೋಡಿ ಸಖತ್ ಖುಷಿ ಪಟ್ಟಿದ್ದಾರೆ. ತುಂಬಾ ಚೆನ್ನಾಗಿ ಕಾಣಿಸ್ತಿದ್ದೀರಿ ಎಂದು ಹೇಳಿದ್ದಾರೆ.
ಸು ಫ್ರಮ್ ಸೋ ರವಿ ಅಣ್ಣನಿಗೆ ಹೋಲಿಕೆ
ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿರುವ ಫೋಟೊ ನೋಡಿ ಕೆಲವು ಅಭಿಮಾನಿಗಳು ಸು ಫ್ರಮ್ ಸೋ ಸಿನಿಮಾದ ರವಿ ಅಣ್ಣನಿಗೆ ಹೋಲಿಕೆ ಮಾಡುತ್ತಿದ್ದಾರೆ. ಟ್ರೋಲ್ ಪೇಜ್ ಗಳು ರವಿ ಅಣ್ಣ ಹಾಗೂ ರಕ್ಷಿತ್ ಶೆಟ್ಟಿ ಫೋಟೊಗಳೆಡನ್ನು ಸೇರಿಸಿ, ರಕ್ಷಿತ್ ಶೆಟ್ಟಿ ನಿಧಾನವಾಗಿ ರವಿ ಅಣ್ಣ ಆಗಿ ಬದಲಾಗುತ್ತಿದ್ದಾರೆ ಎಂದು ಹೇಳಿದ್ದಾರೆ.
ಯಾಕೆ ಹೀಗಂದ್ರು ನೆಟ್ಟಿಗರು
ಸು ಫ್ರಮ್ ಸೋ ಸಿನಿಮಾದಲ್ಲಿ ರವಿ ಅಣ್ಣ ಸದಾ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುವ ವ್ಯಕ್ತಿ, ದೇಹ ತೂಕ ಕೂಡ ತುಸು ಹೆಚ್ಚು, ಅಷ್ಟೇ ಯಾಕೆ ಮದುವೆ ಕೂಡ ಆಗಿಲ್ಲ. ಅದೇ ರೀತಿ ರಕ್ಷಿತ್ ಶೆಟ್ಟಿ ತೂಕ ಹೆಚ್ಚಿಸಿಕೊಂಡು 42 ಆದರೂ ಮದುವೆಯಾಗದೇ ಉಳಿದಿರುವುದಕ್ಕಾಗಿ ಇಬ್ಬರ ಹೋಲಿಕೆ ಮಾಡಲಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

