- Home
- Entertainment
- Sandalwood
- Shocking Secret: ಚಂದನ್ ಶೆಟ್ಟಿ ಶಾಕಿಂಗ್ ಸೀಕ್ರೆಟ್ ಬಹಿರಂಗ.. ಈ ಆಲ್‌ರೌಂಡರ್ ಮುಂಗೈನಲ್ಲಿ ಏನಿದೆ ಗೊತ್ತಾ?!
Shocking Secret: ಚಂದನ್ ಶೆಟ್ಟಿ ಶಾಕಿಂಗ್ ಸೀಕ್ರೆಟ್ ಬಹಿರಂಗ.. ಈ ಆಲ್‌ರೌಂಡರ್ ಮುಂಗೈನಲ್ಲಿ ಏನಿದೆ ಗೊತ್ತಾ?!
ಅವರ ಎರಡು ಕೈಗಳ ಮೇಲೆ ಇಬ್ಬರು ಜಾಗತಿಕ ಮಟ್ಟದ ದಿಗ್ಗಜರ ಟ್ಯಾಟೂಗಳಿವೆ. ಈ ಟ್ಯಾಟೂಗಳು ಕೇವಲ ಸ್ಟೈಲ್‌ಗಾಗಿ ಹಾಕಿಸಿಕೊಂಡದ್ದಲ್ಲ, ಅದರ ಹಿಂದೆ ಒಂದು ಅದ್ಭುತವಾದ ಕಾರಣ ಇದೆ. ಇಷ್ಟೂ ದಿನ ಕಾಪಾಡಿಕೊಂಡಿದ್ದ ಆ ಸೀಕ್ರೆಟ್ ಏನು ನೋಡಿ..!

ರಾಪ್ ಸ್ಟಾರ್ ಚಂದನ್ ಶೆಟ್ಟಿ ಕೈಗಳ ಮೇಲೆ ಆ ಇಬ್ಬರು ದಿಗ್ಗಜರು ಯಾಕಿದ್ದಾರೆ? ಇಲ್ಲಿದೆ ಟ್ಯಾಟೂ ಹಿಂದಿನ ಅಸಲಿ 'ಸೀಕ್ರೆಟ್'!
ಕನ್ನಡದ ರಾಪ್ ಲೋಕದ ಅಧಿಪತಿ, ಮ್ಯೂಸಿಕ್ ಮಾಂತ್ರಿಕ ಚಂದನ್ ಶೆಟ್ಟಿ (Chandan Shetty)ಅಂದ ತಕ್ಷಣ ನಮಗೆ ನೆನಪಾಗೋದು ಅವರ ಸ್ಟೈಲಿಶ್ ಲುಕ್ ಮತ್ತು ಹೈ-ವೋಲ್ಟೇಜ್ ಮ್ಯೂಸಿಕ್. ಆದರೆ, ನೀವು ಎಂದಾದರೂ ಅವರ ಮುಂಗೈಗಳನ್ನು ಗಮನಿಸಿದ್ದೀರಾ?
ಅವರ ಎರಡು ಕೈಗಳ ಮೇಲೆ ಇಬ್ಬರು ಜಾಗತಿಕ ಮಟ್ಟದ ದಿಗ್ಗಜರ ಟ್ಯಾಟೂಗಳಿವೆ. ಈ ಟ್ಯಾಟೂಗಳು ಕೇವಲ ಸ್ಟೈಲ್‌ಗಾಗಿ ಹಾಕಿಸಿಕೊಂಡದ್ದಲ್ಲ, ಅದರ ಹಿಂದೆ ಒಂದು ಅದ್ಭುತವಾದ ಕಾರಣ ಮತ್ತು ಅಷ್ಟೇ ಸುಂದರವಾದ ಗೌರವವಿದೆ. ಚಂದನ್ ಶೆಟ್ಟಿ ಅವರು ಆರಾಧಿಸುವ ಆ ಇಬ್ಬರು ಮಹಾನ್ ಕಲಾವಿದರು ಯಾರು ಮತ್ತು ಅವರನ್ನೇ ಯಾಕೆ ಆಯ್ಕೆ ಮಾಡಿಕೊಂಡರು ಎಂಬ ಕುತೂಹಲಕ್ಕೆ ಇಲ್ಲಿದೆ ಉತ್ತರ!
ಎಡಗೈಯಲ್ಲಿ ಹಾಸ್ಯ ಚಕ್ರವರ್ತಿ, ಬಲಗೈಯಲ್ಲಿ ಕಿಂಗ್ ಆಫ್ ಪಾಪ್!
ಚಂದನ್ ಶೆಟ್ಟಿ ಅವರ ಎಡಗೈಯ ಮುಂಗೈ ಭಾಗದಲ್ಲಿ ವಿಶ್ವವಿಖ್ಯಾತ ಹಾಸ್ಯ ನಟ ಚಾರ್ಲಿ ಚಾಪ್ಲಿನ್ ಅವರ ಟ್ಯಾಟೂ ಇದ್ದರೆ, ಬಲಗೈ ಮೇಲೆ ಪಾಪ್ ಲೋಕದ ದಂತಕಥೆ ಮೈಕಲ್ ಜಾಕ್ಸನ್ ರಾರಾಜಿಸುತ್ತಿದ್ದಾರೆ. ಒಬ್ಬರು ಮಾತಿಲ್ಲದೆ ಜಗತ್ತನ್ನೇ ನಗಿಸಿದವರು, ಇನ್ನೊಬ್ಬರು ತಮ್ಮ ಸಂಗೀತ ಮತ್ತು ನೃತ್ಯದ ಮೂಲಕ ಇಡೀ ವಿಶ್ವವನ್ನೇ ಕುಣಿಸಿದವರು.
ಮೈಕಲ್ ಜಾಕ್ಸನ್ - ಸ್ಪೂರ್ತಿಯ ಸೆಲೆ:
ಚಂದನ್ ಶೆಟ್ಟಿ ಅವರಿಗೆ ಮೈಕಲ್ ಜಾಕ್ಸನ್ ಅಂದರೆ ಎಲ್ಲಿಲ್ಲದ ಅಭಿಮಾನ. ಒಬ್ಬ ರಾಪ್ ಸಿಂಗರ್ ಆಗಿ, ಮ್ಯೂಸಿಕ್ ಕಂಪೋಸರ್ ಆಗಿ ಜಾಕ್ಸನ್ ಅವರ ಸ್ಟೇಜ್ ಪ್ರೆಸೆನ್ಸ್ ಚಂದನ್ ಅವರಿಗೆ ಸದಾ ಸ್ಫೂರ್ತಿ ನೀಡುತ್ತದೆ. ವೇದಿಕೆಯ ಮೇಲೆ ಜಾಕ್ಸನ್ ಅವರಂತೆ ಎನರ್ಜಿಟಿಕ್ ಆಗಿ ಕಾಣಿಸಿಕೊಳ್ಳಲು ಪ್ರಯತ್ನಿಸುವ ಚಂದನ್, "ಅವರಂತೆ ಡ್ಯಾನ್ಸ್ ಮಾಡುವುದು ಸುಲಭವಲ್ಲ, ಆದರೆ ಅವರ ಆ ಶಕ್ತಿಯನ್ನು ನಾನು ಸದಾ ಇಷ್ಟಪಡುತ್ತೇನೆ" ಎನ್ನುತ್ತಾರೆ.
ಚಾರ್ಲಿ ಚಾಪ್ಲಿನ್ - ಕಷ್ಟದ ನಡುವೆ ನಗು:
ಇನ್ನು ಚಾರ್ಲಿ ಚಾಪ್ಲಿನ್ ಟ್ಯಾಟೂ ಹಾಕಿಸಿಕೊಳ್ಳಲು ಒಂದು ಭಾವನಾತ್ಮಕ ಕಾರಣವಿದೆ. "ಚಾರ್ಲಿ ಚಾಪ್ಲಿನ್ ಅವರ ಜೀವನ ತುಂಬಾನೇ ಕಷ್ಟಗಳಿಂದ ಕೂಡಿತ್ತು. ಅಷ್ಟೊಂದು ನೋವಿನ ನಡುವೆಯೂ ಅವರು ಜಗತ್ತನ್ನು ನಗಿಸುವ ಕೆಲಸ ಮಾಡಿದರು. ಅಂತಹ ಛಲಗಾರ ಕಲಾವಿದನನ್ನು ನಾನು ಆರಾಧಿಸುತ್ತೇನೆ" ಎನ್ನುವುದು ಚಂದನ್ ಮಾತು. ಕಲೆ ಮತ್ತು ಜೀವನದ ಸಂಘರ್ಷವನ್ನು ಚಾಪ್ಲಿನ್ ಪ್ರತಿನಿಧಿಸುತ್ತಾರೆ ಎಂಬುದು ಅವರ ನಂಬಿಕೆ.
ಕೈ ಮುಗಿದಾಗ ಇವರಿಗೂ ನಮನ!
ಈ ಟ್ಯಾಟೂಗಳ ಪ್ಲೇಸ್‌ಮೆಂಟ್ (ಸ್ಥಳ) ಅತ್ಯಂತ ವಿಶಿಷ್ಟವಾಗಿದೆ. ಇವೆರಡನ್ನೂ ಅವರು ಹೆಬ್ಬೆರಳಿನ ಹಿಂಭಾಗದ ಮುಂಗೈ ಮೇಲೆ ಹಾಕಿಸಿಕೊಂಡಿದ್ದಾರೆ. ಇದಕ್ಕೆ ಕಾರಣವೇನು ಗೊತ್ತಾ? ಚಂದನ್ ಶೆಟ್ಟಿ ಅವರು ಪ್ರತಿದಿನ ದೇವರಿಗೆ ಕೈ ಮುಗಿದಾಗ ಅಥವಾ ಯಾರಿಗಾದರೂ ನಮಸ್ಕಾರ ಮಾಡಿದಾಗ, ಅವರ ಎರಡು ಕೈಗಳು ಒಂದಕ್ಕೊಂದು ಸೇರುತ್ತವೆ. ಆ ಸಂದರ್ಭದಲ್ಲಿ ಈ ಇಬ್ಬರು ಮಹಾನ್ ಕಲಾವಿದರಿಗೂ ತಾವು ನಮಿಸಿದಂತೆ ಆಗಲಿ ಎಂಬ ಉದ್ದೇಶದಿಂದ ಚಂದನ್ ಅಲ್ಲಿಯೇ ಟ್ಯಾಟೂ ಹಾಕಿಸಿಕೊಂಡಿದ್ದಾರಂತೆ! ಅದೆಂತಾ
ಅದ್ಭುತ ಆಲೋಚನೆ ಅಲ್ವಾ?
ಅಂತರಾಷ್ಟ್ರೀಯ ಮಟ್ಟದಲ್ಲಿ 'ಡಯಾನಾಮೈಟ್' ಸದ್ದು!
ಸದ್ಯ ಚಂದನ್ ಶೆಟ್ಟಿ ತಮ್ಮ ಹೊಸ ಅಂತರಾಷ್ಟ್ರೀಯ ರಾಪ್ ಸಾಂಗ್ 'ಡಯಾನಾಮೈಟ್' ಮೂಲಕ ಸುದ್ದಿಯಲ್ಲಿದ್ದಾರೆ. ಸಂಪೂರ್ಣವಾಗಿ ಇಂಗ್ಲಿಷ್‌ನಲ್ಲಿರುವ ಈ ಹಾಡು ಅಂತರಾಷ್ಟ್ರೀಯ ಮಟ್ಟದ ಮ್ಯೂಸಿಕ್ ವಿಡಿಯೋಗಳ ಗುಣಮಟ್ಟವನ್ನು ಹೊಂದಿದೆ. ಕನ್ನಡದ ಮಂದಿಗೆ ಸಾಹಿತ್ಯ ಪೂರ್ತಿ ಅರ್ಥವಾಗದಿದ್ದರೂ, ಅದರ ಮ್ಯೂಸಿಕ್ ಮತ್ತು ಮೇಕಿಂಗ್‌ಗೆ ಎಲ್ಲರೂ ಫಿದಾ ಆಗಿದ್ದಾರೆ.
ಒಟ್ಟಿನಲ್ಲಿ, ಕೇವಲ ಹಾಡುಗಳ ಮೂಲಕ ಮಾತ್ರವಲ್ಲ, ತಮ್ಮ ವ್ಯಕ್ತಿತ್ವ ಮತ್ತು ಈ ವಿಶೇಷ ಟ್ಯಾಟೂಗಳ ಮೂಲಕವೂ ಚಂದನ್ ಶೆಟ್ಟಿ ತಾವು ನಿಜವಾದ ಕಲಾರಾಧಕ ಎಂಬುದನ್ನು ಸಾಬೀತುಪಡಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

