- Home
- Entertainment
- Sandalwood
- ದರ್ಶನ್ ಬಂಧನಕ್ಕೆ 2 ವರ್ಷ: ಸೆಂಟ್ರಲ್ ಜೈಲಿನ ಬಿಗ್ ಬ್ರೇಕಿಂಗ್! ಪವಿತ್ರಾ ಗೌಡ ಆತ್ಮಚರಿತ್ರೆ ಆರಂಭ-ಮುಂದೇನು
ದರ್ಶನ್ ಬಂಧನಕ್ಕೆ 2 ವರ್ಷ: ಸೆಂಟ್ರಲ್ ಜೈಲಿನ ಬಿಗ್ ಬ್ರೇಕಿಂಗ್! ಪವಿತ್ರಾ ಗೌಡ ಆತ್ಮಚರಿತ್ರೆ ಆರಂಭ-ಮುಂದೇನು
ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲುಪಾಲಾಗಿರುವ ಆರೋಪಿ-1 ಪವಿತ್ರಾ ಗೌಡ, ಪರಪ್ಪನ ಅಗ್ರಹಾರ ಜೈಲಿನಲ್ಲಿ ಆತ್ಮಚರಿತ್ರೆ ಬರೆಯುತ್ತಿದ್ದಾರೆ ಎನ್ನಲಾಗಿದೆ. ಈ ಆತ್ಮಕಥೆಯಲ್ಲಿ ಅವರು ದರ್ಶನ್ ಜೊತೆಗಿನ ಸಂಬಂಧ ಮತ್ತು ಪ್ರಕರಣದ ಹಿಂದಿನ ಸತ್ಯವನ್ನು ಬಹಿರಂಗಪಡಿಸುತ್ತಾರೆಯೇ ಎಂಬ ಕುತೂಹಲ ಕಾಡುತ್ತಿದೆ.

ಬಂಧನಕ್ಕೆ ಎರಡು ವರ್ಷ
ರೇಣುಕಾಸ್ವಾಮಿ ಕೇಸ್ನಲ್ಲಿ ದರ್ಶನ್ ಮತ್ತು ಪವಿತ್ರಾ ಗೌಡ ಸೇರಿದಂತೆ ಕೆಲವರು ಬಂಧಿಯಾಗಿದ್ದಾರೆ. ಇವರಿಬ್ಬರೂ ಬಂಧಿಯಾಗಿ ಇಂದು ಅರ್ಥಾತ್ ಜೂನ್ 11ಕ್ಕೆ ಸರಿಯಾಗಿ ಎರಡು ವರ್ಷ ಕಳೆದಿದೆ. ಈ ಕೇಸ್ನಲ್ಲಿ ಐವರು ಆರೋಪಿಗಳಿಗೆ ಜಾಮೀನು ಸಿಕ್ಕಿದೆ. ದರ್ಶನ್ ಅವರಿಗೆ ಇನ್ನೊಂದು ವರ್ಷ ಜಾಮೀನು ಸಿಗದ ರೀತಿಯಲ್ಲಿ ಸುಪ್ರೀಂಕೋರ್ಟ್ ಆದೇಶಿಸಿದ್ದು, ಅಷ್ಟರಲ್ಲಿಯೇ ಕೇಸಿನ ತೀರ್ಪು ಹೊರಬೀಳಬೇಕಿದೆ. ತಮ್ಮ ನೆಚ್ಚಿನ ನಾಯಕ ಯಾವಾಗ ಹೊರಕ್ಕೆ ಬರ್ತಾರೆ ಎಂದು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.
ಜಾಮೀನು ನಕಾರ
ಸುಪ್ರೀಂಕೋರ್ಟ್ ಜಾಮೀನು ನಿರಾಕರಿಸಿದ ಬೆನ್ನಲ್ಲೇ ದರ್ಶನ್ ಅವರು ಜೈಲಿನಲ್ಲಿ ಪುಸ್ತಕಗಳನ್ನು ಓದುತ್ತಿರುವುದಾಗಿ ವರದಿಯಾಗಿದೆ. ಆದರೆ ಇದರ ನಡುವೆಯೇ ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿರುವ ಸೆಂಟ್ರಲ್ ಜೈಲಿನ ಇನ್ನೊಂದು ದೊಡ್ಡ ಬ್ರೇಕಿಂಗ್ ಸುದ್ದಿ ಬರುತ್ತಿದೆ. ಅದೇನೆಂದರೆ, ಪವಿತ್ರಾ ಗೌಡ (Pavitra Gowda) ಅವರು ಆತ್ಮಚರಿತ್ರೆಯನ್ನು ಬರೆಯುತ್ತಿದ್ದಾರಂತೆ!
ಪವಿತ್ರಾ ಗೌಡ ಆತ್ಮಚರಿತ್ರೆ?
ಜೈಲಾಧಿಕಾರಿಗಳಿಂದ ಪ್ರತಿದಿನ ಬರೆಯಲು ಪೇಪರ್ ಪಡೆದುಕೊಂಡು ಆತ್ಮಚರಿತ್ರೆ ಬರೆಯಲು ಶುರು ಮಾಡಿದ್ದಾರೆ ಎನ್ನಲಾಗಿದೆ. ಇತ್ತೀಚೆಗೆ ನಡೆದ ವಿಶ್ವ ಯೋಗ ದಿನಾಚರಣೆಯ ಅಭ್ಯಾಸಕ್ಕೂ ಬಾರದೆ, ಕಳೆದ ಒಂದು ತಿಂಗಳಿನಿಂದ ಪವಿತ್ರಾ ಗೌಡ ಕೇವಲ ಆತ್ಮಚರಿತ್ರೆ ಬರೆಯುವುದರಲ್ಲೇ ಮಗ್ನರಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಅಷ್ಟಕ್ಕೂ ರೇಣುಕಾಸ್ವಾಮಿ ಪ್ರಕರಣದಲ್ಲಿ ಪವಿತ್ರಾ ಗೌಡ ಅವರು ಆರೋಪಿ ನಂಬರ್ 1 ಆಗಿದ್ದಾರೆ. ಇವರ ಮಾತಿನ ಮೇರೆಗೇ ಕೊಲೆ ನಡೆದಿದೆ ಎನ್ನುವ ಕಾರಣದಿಂದಾಗಿ ಇವರನ್ನು ಎ-1 ಮಾಡಲಾಗಿದೆ. ಸದ್ಯ ಅವರಿಗೂ ಜಾಮೀನು ಸಿಗುವುದಿಲ್ಲ. ಆದ್ದರಿಂದ ಇಂಥದ್ದೊಂದು ಮಹತ್ವದ ನಿರ್ಧಾರ ಅವರು ತೆಗೆದುಕೊಂಡಿದ್ದಾರೆ ಎನ್ನಲಾಗುತ್ತಿದೆ.
ಸತ್ಯ ಬರೆಯುವ ಧೈರ್ಯ ಇದ್ಯಾ?
ಇದೀಗ ಭಾರಿ ಕುತೂಹಲಕ್ಕೆ ಕಾರಣವಾಗಿದೆ. ಆತ್ಮಚರಿತ್ರೆ ಎಂದ್ರೆ ಅದರಲ್ಲಿ ಯಾವುದೇ ತಪ್ಪು, ಸುಳ್ಳು ಇರಬಾರದು.ಎಲ್ಲಾ ವಿಷಯಗಳನ್ನು ನೇರಾನೇರ ಬರೆಯಲೇಬೇಕು. ಹೀಗೆ ಬರೆದದ್ದೇ ಆದರೆ ಪವಿತ್ರಾ ಗೌಡ ಏನೇನು ಬರೆಯಬಹುದು ಎನ್ನುವ ಬಗ್ಗೆ ಭಾರಿ ಚರ್ಚೆಶುರುವಾಗಿದೆ.
ದರ್ಶನ್ ಒಪ್ಪಿಗೆ ಕೊಡ್ತಾರಾ?
ಅವರ ಬದುಕಿನಲ್ಲಿ ಬಹುದೊಡ್ಡ ಪಾಲು ದರ್ಶನ್ ಜೊತೆಗಿನ ಒಡನಾಟದ್ದೇ ಇದೆ. ಬಳಿಕ ರೇಣುಕಾಸ್ವಾಮಿ ಎಂಟ್ರಿ, ಅಲ್ಲಿಂದ ಆಗಿದ್ದೇನು, ನಿಜಕ್ಕೂ ಅಂದು ನಡೆದದ್ದೇನು ಎಲ್ಲವನ್ನೂ ಧೈರ್ಯ ಮಾಡಿ ಬರೆಯುತ್ತಾರಾ ಪವಿತ್ರಾ ಗೌಡ ಎನ್ನುವ ಪ್ರಶ್ನೆ ಎಲ್ಲರಲ್ಲಿಯೂ ಹುಟ್ಟಿಕೊಂಡಿದೆ. ಇದ್ದದ್ದು ಇದ್ದ ಹಾಗೆ ಬರೆಯದೇ ಹೋದರೆ ಅದು ನಿಜವಾದ ಆತ್ಮಚರಿತ್ರೆ ಎನ್ನಿಸಲ್ಲ.ಹಾಗಿದ್ರೆ ಎಲ್ಲವನ್ನೂ ನಿಜವಾಗಿ ಬರೆಯಲು ದರ್ಶನ್ ಅವರು ಅನುಮತಿ ಕೊಡುತ್ತಾರಾ ಎನ್ನುವ ಅತಿ ದೊಡ್ಡ ಪ್ರಶ್ನೆ ಅವರ ಅಭಿಮಾನಿಗಳನ್ನು ಕಾಡುತ್ತಿದ್ದು, ಇದು ಆತಂಕವನ್ನೂ ಸೃಷ್ಟಿಸುತ್ತಿದೆ.
ಕೋರ್ಟ್ನಲ್ಲಿ ಇನ್ನೂ ವಿಚಾರಣೆ ಆಗಿಲ್ಲ
ಕೋರ್ಟ್ನಲ್ಲಿ ಇನ್ನೂ ಅಂತಿಮ ವಿಚಾರಣೆ ಆಗಬೇಕಿದೆ. ತೀರ್ಪು ಹೊರಕ್ಕೆ ಬರಬೇಕಿದೆ. ಅದಕ್ಕೂ ಮುನ್ನವೇ ಎಲ್ಲ ಸತ್ಯವನ್ನೂ ಆತ್ಮಚರಿತ್ರೆಯಲ್ಲಿ ಬರೆಯುವುದು ಸುಲಭದ ಮಾತಲ್ಲ. ಅದಕ್ಕಾಗಿಯೇ ಅವರು ಈ ಧೈರ್ಯ ಮಾಡಿರುವ ಹಿಂದಿನ ಉದ್ದೇಶ ಏನಿರಬಹುದು ಎನ್ನುವ ಪ್ರಶ್ನೆ ಕಾಡುತ್ತಿದೆ. ಅಷ್ಟಕ್ಕೂ ಕೆಲ ತಿಂಗಳುಗಳಿಂದ ದರ್ಶನ್ ಹಾಗೂ ಪವಿತ್ರಾ ಗೌಡ ನಡುವಿನ ಗೆಳೆತನದಲ್ಲಿ ಬಿರುಕು ಮೂಡಿದೆ ಎಂದೇ ಹೇಳಲಾಗುತ್ತಿದೆ. ಇಂಥ ಸಂದರ್ಭದಲ್ಲಿ ಎಲ್ಲವನ್ನೂ ಹೇಳ್ತಾರಾ ಪವಿತ್ರಾ ಗೌಡ ಎಂದು ಸದ್ಯ ಕಾಲವೇ ಉತ್ತರ ಕೊಡಬೇಕಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

