- Home
- Entertainment
- Sandalwood
- 'ಮದುವೆ-ಸಂಸಾರ'ವೇ ಅಲ್ಟಿಮೇಟ್ ಅಲ್ಲ, ಖುಷಿಯಾಗಿರೋಕೆ ಆಲ್ಟರ್ನೇಟಿವ್ ಇದೆ ಅಂತಿದ್ಯಾ ನಿವೇದಿತಾ ಗೌಡ ಲೈಫ್?
'ಮದುವೆ-ಸಂಸಾರ'ವೇ ಅಲ್ಟಿಮೇಟ್ ಅಲ್ಲ, ಖುಷಿಯಾಗಿರೋಕೆ ಆಲ್ಟರ್ನೇಟಿವ್ ಇದೆ ಅಂತಿದ್ಯಾ ನಿವೇದಿತಾ ಗೌಡ ಲೈಫ್?
ಸ್ಯಾಂಡಲ್‌ವುಡ್ ನಟಿ ಹಾಗೂ ಬಿಗ್ ಬಾಸ್ ಖ್ಯಾತಿಯ ನಿವೇದಿತಾ ಗೌಡ ಅವರು ಸೋಷಿಯಲ್ ಮಿಡಿಯಾಗಳಲ್ಲಿ ತಮ್ಮ ಚೆಂದದ ಫೋಟೋಗಳನ್ನು ಪೋಸ್ಟ್ ಮಾಡುತ್ತಾರೆ. ಅದನ್ನು ನೋಡಿದರೆ, ಅವರು ಲೈಫನ್ನು ಖುಷಿಯಿಂದ ಲೀಡ್ ಮಾಡ್ತಿದಾರೆ ಎಂಬುದು ಮನದಟ್ಟಾಗುತ್ತದೆ. ಹೇಗೆ..? ಈ ಸ್ಟೋರಿ ನೋಡಿ..

ನಿವೇದಿತಾ ಗೌಡ ಅವರು ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಆಗಿರುತ್ತಾರೆ. ತಮ್ಮ ಅಂದಚೆಂದದ ಫೋಟೋಗಳನ್ನು ಪೋಸ್ಟ್ ಮಾಡುತ್ತಾರೆ. ಲೈಫ್ ಎಂಜಾಯ್ ಮಾಡುತ್ತಿದ್ದಾರೆ.
ಮೊದಲೆಲ್ಲಾ ಸೋಷಿಯಲ್ ಮೀಡಿಯಾ ರೀಲ್ಸ್‌ಗಳ ಮೂಲಕ ಸೌಂಡ್ ಮಾಡುತ್ತಿದ್ದ ನಿವೇದಿತಾ ಗೌಡ ಅವರು ಬಳಿಕ ಬಿಗ್ ಬಾಸ್ ಶೋದಲ್ಲಿ ಭಾಗಿಯಾಗಿ ಕರ್ನಾಟಕದ ತುಂಬಾ ಫೇಮಸ್ ಆದ್ರು.ನಿವೇದಿತಾ ಗೌಡ ಅವರು ಬಳಿಕ ಬಿಗ್ ಬಾಸ್ ಶೋದಲ್ಲಿ ಭಾಗಿಯಾಗಿ ಕರ್ನಾಟಕದ ತುಂಬಾ ಫೇಮಸ್ ಆದ್ರು.
ಬಿಗ್ ಬಾಸ್ ಶೋದಲ್ಲಿ ಪರಿಚಯ, ಸ್ನೇಹ, ಪ್ರೇಮದ ಬಳಿಕ ನಟ, ಗಾಯಕ ಚಂದನ್ ಶೆಟ್ಟಿ ಅವರೊಂದಿಗೆ ಮದುವೆಯೂ ಆಯ್ತು. ಅದರೆ, ಈ ಮದುವೆ ತುಂಬಾ ಕಾಲ ಬಾಳದೇ ಡಿವೋರ್ಸ್ ಕೂಡ ಆಯ್ತು.
ಆದರೆ ಚಂದನ್ ಶೆಟ್ಟಿ-ನಿವೇದಿತಾ ಗೌಡ ಇಬ್ಬರೂ ಮೀಡಿಯಾ-ಸೋಷಿಯಲ್ ಮೀಡಿಯಾಗಳಲ್ಲಿ ಪರಸ್ಪರ ಬ್ಲೇಮ್ ಗೇಮ್ ಮಾಡಿಕೊಳ್ಳದೇ ಡೀಸೆಂಟ್ ಆಗಿ ಡಿವೋರ್ಸ್ ಮಾಡಿಕೊಂಡು ಸಮಾಜಕ್ಕೆ ಉತ್ತಮ ಸಂದೇಶ ಕೊಟ್ಟರು.
ಡಿವೋರ್ಸ್ ಅಂದರೆ ಹಾದಿಬೀದಿ ಜಗಳ ಮಾಡಿಕೊಳ್ಳಲೇ ಬೇಕು ಎಂಬಂತಿದ್ದ ಘಟನೆಯನ್ನು ‘ಆಗಿದ್ದು ಆಗಿಹೋಯ್ತು, ಇನ್ಮುಂದೆ ನಮ್ಮಿಬ್ಬರ ದಾರಿ ಬೇರೆಬೇರೆ’ ಎಂದು ಖುಷಿಯಿಂದಲೇ ಬೇರೆಬೇರೆ ಆಗಿ ‘ಹೀಗೂ ಡಿವೋರ್ಸ್ ಮಾಡಿಕೊಳ್ಳಬಹುದು’ ಎಂಬುದನ್ನು ಇಂದಿನ ಸಮಾಜಕ್ಕೆ ಮನದಟ್ಟು ಮಾಡಿಕೊಟ್ಟಿದ್ದಾರೆ ಎನ್ನಬಹುದು.
ಡಿವೋರ್ಸ್ ಬಳಿಕ ಕೂಡ ಅಷ್ಟೇ.. ಅತ್ತ ಚಂದನ್ ಶೆಟ್ಟಿಯವರು ತಮ್ಮ ಕೆಲಸಗಳಲ್ಲಿ ಬ್ಯುಸಿ ಆದರೆ, ಇತ್ತ ನಿವೇದಿತಾ ಅವರೂ ಕೂಡ ತಮ್ಮ ಪಾಲಿಗೆ ಬಂದ ಸಿನಿಮಾದಲ್ಲಿ ನಟಿಸುತ್ತ ನಟನೆ ವೃತ್ತಿ ಮುಂದುವರೆಸಿದರು. ಕಳೆದಹೋದ ಕ್ಷಣಗಳ ಕುರಿತು ಕೊರಗುತ್ತ ಇಬ್ಬರೂ ಕುಳಿತುಕೊಳ್ಳಲಿಲ್ಲ, ಚಿಂತೆ ಮಾಡುತ್ತ ಟೈಂ ವೇಸ್ಟ್ ಮಾಡಲಿಲ್ಲ.
ಮದುವೆ ಎಂಬುದೇ ಮುಖ್ಯ ಅಲ್ಲ.. ಸಂಸಾರದಲ್ಲಿ ಸರಿಗಮ ಇಲ್ಲದಿದ್ದರೆ ಅಥವಾ ಹೊಂದಾಣಿಕೆ ಕೊರತೆಯಾದರೆ, ಆಗಿರುವ ಮದುವೆಯಿಂದ ವಾದ-ವಿವಾದ, ಗಲಾಟೆ ಇಲ್ಲದೇಯೂ ಹೊರಗೆ ಬಂದು ಚೆನ್ನಾಗಿ ಜೀವನ ನಡೆಸಬಹುದು ಎಂಬುದನ್ನು ನಿವೇದಿತಾ ಗೌಡ ತೋರಿಸಿಕೊಟ್ಟಿದ್ದಾರೆ ಎನ್ನಬಹುದು!
ಹೊಂದಾಣಿಕೆ ಇಲ್ಲದ ಸಂಸಾರದಲ್ಲಿ ಇದ್ದು, ಆಕಸ್ಮಿಕವೋ ಅಥವಾ ಅನಿವಾರ್ಯತೆಗೋ ಎಂಬಂತೆ ಕೊ*ಲೆ ಮಾಡುವುದಕ್ಕಿಂತ, ಕೊ*ಲೆ ಆಗುವುದಕ್ಕಿಂತ, ಆಗಿರುವ ದುಃಖ-ನೋವನ್ನೆಲ್ಲಾ ನುಂಗಿಕೊಂಡು, ಬಾಳೋದಕ್ಕಿಂತ ಖುಷಿಯಾಗಿರೋದೇ ಇಂಪಾರ್ಟೆಂಟ್ ಅಂದುಕೊಂಡು ಲೈಫ್ ಲೀಡ್ ಮಾಡಬಹುದು ಅನ್ನೋ ಮೆಸೇಜ್ ಕೊಟ್ರಾ ನಿವೇದಿತಾ ಗೌಡ?
ಈಗಲೂ ಅಷ್ಟೇ, ಇಬ್ಬರೂ ತಮ್ಮತಮ್ಮ ಜೀವನವನ್ನು ಖುಷಿಯಾಗಿ ಕಳೆಯುತ್ತಿದ್ದಾರೆ. ನಿವೇದಿತಾ ಅವರು ಪೋಸ್ಟ್ ಮಾಡುವ ಪ್ರತಿಯೊಂದು ಫೋಟೋ ಕೂಡ ಖುಷಿಯ ಕತೆಯನ್ನೇ ಹೇಳುತ್ತವೆ ಎನ್ನಬಹುದೇ?!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

