ನಟ ದರ್ಶನ್ ವಿಚಾರವಾಗಿ ಪರಪ್ಪನ ಅಗ್ರಹಾರ ಜೈಲಿನ ವಾರ್ಡನ್ ಒಬ್ಬರನ್ನು ಎತ್ತಂಗಡಿ ಮಾಡಲಾಗಿದೆ. ಸಿಸಿಟಿವಿ ಕಣ್ತಪ್ಪಿಸಿ ಪೊಲೀಸ್ ಕಾನ್ಸ್ಟೆಬಲ್ ಒಬ್ಬರು ದರ್ಶನ್‌ನನ್ನು ಭೇಟಿಯಾಗಿರುವುದು ಬೆಳಕಿಗೆ ಬಂದಿದ್ದು, ಈ ಬಗ್ಗೆ ಡಿಜಿಪಿ ಇಲಾಖಾ ತನಿಖೆಗೆ ಆದೇಶಿಸಿದ್ದಾರೆ.
ದರ್ಶನ್ ಎಲ್ಲೇ ಇದ್ದರೂ ಅಲ್ಲೊಂದು ಎಡವಟ್ಟು ನಡೆದೇ ನಡೆಯುತ್ತೆ. ಸದ್ಯ ಪರಪ್ಪನ ಅಗ್ಗಹಾರ ಜೈಲಲ್ಲಿ ದರ್ಶನ್ ವಿಚಾರಕ್ಕೆ ಮತ್ತೊಬ್ಬ ಜೈಲರ್‌ನ ಎತ್ತಂಗಡಿ ನಡೆದಿದೆ. ಅದೂ ಅಲ್ಲದೇ ಪೊಲೀಸ್ ಕಾನ್ಸ್ಟೆಬಲ್ ಒಬ್ಬ ದರ್ಶನ್‌ನನ್ನು ಸಿಸಿಟಿವಿ ಕಣ್ಣುತಪ್ಪಿಸಿ ಭೇಟಿ ಮಾಡಿರೋ ವಿಷ್ಯ ಹೊರಬಂದಿದ್ದು, ಈ ಬಗ್ಗೆ ಇಲಾಖಾ ತನಿಖೆಗೆ ಡಿಜಿಪಿ ಆದೇಶ ಕೊಟ್ಟಿದ್ದಾರೆ. ಅಷ್ಟಕ್ಕೂ ಏನಿದು ದಾಸನ ಇನ್ ಸೈಡ್ ಖಬರ್ ಈ ಸ್ಟೋರಿ ನೋಡಿ.
ದಾಸನಿಂದಾಗಿ ವಾರ್ಡನ್ ಎತ್ತಂಗಡಿ, ಡಿಜಿಪಿ ಕಿಡಿಕಿಡಿ!
ಯೆಸ್, ಈ ಹಿಂದೆ ದರ್ಶನ್ ಪರಪ್ಪನ ಅಗ್ರಹಾರದಲ್ಲಿ ರೌಡಿಗಳ ಜೊತೆ ಮೋಜು ಮಸ್ತಿ ಮಾಡಿದ್ದ ಫೋಟೋ ವೈರಲ್ ಆದಾಗ , ಆಗಿನ ಜೈಲರ್‌ನ ಅಮಾನತ್ತು ಮಾಡಲಾಗಿತ್ತು. ಮತ್ತೀಗ ಒನ್ಸ್ ಅಗೈನ್ ದಾಸನ ಕಾರಣಕ್ಕೆ ಮತ್ತೊಬ್ಬ ವಾರ್ಡನ್ ಎತ್ತಂಗಡಿ ಆಗಿದ್ದಾರೆ. ಸದ್ಯ ಪರಪ್ಪನ ಅಗ್ರಹಾರದ ವಾರ್ಡನ್ ಪ್ರಭಾಕರ್ ಚೌಹಾನ್ ಅವರನ್ನ ಚಾಮರಾಜನಗರ ಜೈಲಿಗೆ ಎತ್ತಂಗಡಿ ಮಾಡಲಾಗಿದೆ.
ಅಲ್ಲಿಗೆ ದರ್ಶನ್ ಇದ್ದ ಕಡೆ ಯಾರ್ಯಾರ ತಲೆದಂಡ ಆಗುತ್ತೋ ಗೊತ್ತಿಲ್ಲ. ಬೇಲ್ ರದ್ದಾಗಿ ದರ್ಶನ್ ಮತ್ತೆ ಅರೆಸ್ಟ್ ಆದ ಬೆನ್ನಲ್ಲೇ ದಾಸನನ್ನ ಬಳ್ಳಾರಿಗೆ ಕಳಿಸಿಬಿಡೋದಕ್ಕೆ ಪರಪ್ಪನ ಅಗ್ರಹಾರ ಜೈಲು ಅಧಿಕಾರಿಗಳು ಸಜ್ಜಾಗಿದ್ರು. ಆದ್ರೆ ಕೋರ್ಟ್ ಮೊರೆಹೋದ ದರ್ಶನ್ ಪರಪ್ಪನ ಅಗ್ರಹಾರದಲ್ಲೇ ಇರುವ ಆದೇಶ ಪಡೆದುಕೊಂಡ್ರು. ಆದ್ರೆ ದಾಸನ ಕಾರಣಕ್ಕೆ ಈಗ ಪರಪ್ಪನ ಅಗ್ರಹಾರದಲ್ಲಿ ಮತ್ತೊಂದು ತಲೆದಂಡ ಆಗಿದೆ. ಅಷ್ಟಕ್ಕೂ ಜೈಲಿನಲ್ಲಿ ನಡೆದಿದ್ದಾದ್ರೂ ಏನು ಅಂತೀರಾ..?
CCTV ಕಣ್ತಪ್ಪಿಸಿ ದರ್ಶನ್ ಬ್ಯಾರಕ್‌ಗೆ ಹೋಗಿದ್ಯಾರು..?
ಯೆಸ್, ಇತ್ತೀಚಿಗೆ ವ್ಯಕ್ತಿಯೊಬ್ಬ ಸಿಸಿಟಿವಿ ಕಣ್ತಪ್ಪಿಸಿ ದರ್ಶನ್ ಭೇಟಿ ಮಾಡಿದ್ದ ಅನ್ನೋ ವಿಚಾರ ಡಿಜಿಪಿ ಅಲೋಕ್ ಕುಮಾರ್ ಗಮನಕ್ಕೆ ಬಂದಿದೆ. ಮೊದಲೇ ಸ್ಟ್ರಿಕ್ಟ್ ಆಫೀಸರ್ ಆಗಿರೋ ಅಲೋಕ್ ಕುಮಾರ್ ಗರಂ ಆಗಿದ್ದಾರೆ. ಖುದ್ದು ದರ್ಶನ್‌ರನ್ನ ಕರೆಸಿ ವಿಚಾರಣೆ ಮಾಡಿದ್ದಾರೆ, ಆಗ ದಾಸ ಹೌದು ಖಾಕಿ ಧರಿಸಿದ್ದ ಒಬ್ರು ನನ್ನ ಬ್ಯಾರಕ್ ಗೆ ಬಂದಿದ್ರು ಅಂತ ಒಪ್ಪಿಕೊಂಡಿದ್ದಾರಂತೆ.
ಅಸಲಿಗೆ ಇತ್ತೀಚಿಗೆ ಪರಪ್ಪನ ಅಗ್ರಹಾರಕ್ಕೆ ಯಲಹಂಕ ಠಾಣೆಯ ಪೇದೆ ಗಣೇಶ್ ಭೇಟಿ ಕೊಟ್ಟಿರ್ತಾರೆ. ತಮ್ಮ ಠಾಣೆಯ ಕೈದಿಗಳನ್ನ ಪರಪ್ಪನ ಅಗ್ರಹಾರಕ್ಕೆ ಬಿಡಲು ಬಂದ ಗಣೇಶ್, ಜೈಲರ್ ಪ್ರಭಾಕರ್ ಚೌಹಾನ್ ಬಳಿ ದರ್ಶನ್‌ರನ್ನ ಭೇಟಿ ಮಾಡಿಸಿ ಅಂತ ಕೇಳಿದ್ದಾರೆ. ಆಗ ಜೈಲರ್ ಸಿಸಿಟಿವಿ ಕಣ್ತಪ್ಪಿಸಿ ದರ್ಶನ್ನ ಭೇಟಿ ಮಾಡಿಸಿದ್ದಾರೆ.
ಪೊಲೀಸನ ಕಳ್ಳಾಟ, ದಾಸನಿಗೆ ಸೀಕ್ರೆಟ್ ಸಂದೇಶ?
ಹೌದು ಯಾರೇ ಆಗಲಿ ವಿಚಾರಣಾಧೀನ ಕೈದಿಯನ್ನ ಭೇಟಿ ಮಾಡಬೇಕು ಅಂದ್ರೆ ಅದಕ್ಕೆ ಅದರದ್ದೇ ನಿಯಮ ಇವೆ. ಕಾರಾಗೃಹಕ್ಕೆ ಭೇಟಿಯ ಅವಕಾಶ ಕೇಳಿ ಅನುಮತಿ ಪಡೆದು ಭೇಟಿ ಮಾಡಬಹುದು. ಆದ್ರೆ ಹೀಗೆ ಸಿಸಿಟಿವಿ ಕಣ್ತಪ್ಪಿಸಿ ಒಬ್ಬ ಪೇದೆ, ದರ್ಶನ್ ಭೇಟಿ ಹೋಗ್ತಾನೆ ಅಂದ್ರೆ ಅದರ ಹಿಂದೆ ಏನೋ ಸೀಕ್ರೆಟ್ ಇದೆ ಅನ್ನೋ ಅನುಮಾನ ಹುಟ್ಟಿಕೊಂಡಿದೆ.
ದರ್ಶನ್ & ಕಾನ್ಸ್ಟೇಬಲ್ ಭೇಟಿ ಸುತ್ತ ಅನುಮಾನಗಳ ಹುತ್ತ!
ಹೌದು ಒಬ್ಬ ಪೊಲೀಸ್ ಕಾನ್ಸ್ಟೇಬಲ್, ಜೈಲರ್ ಬಳಿ ತನ್ನ ಪ್ರಭಾವ ಬಳಸಿ ಕದ್ದು ಮುಚ್ಚಿ ದರ್ಶನ್ ಭೇಟಿ ಮಾಡ್ತಾನೆ ಅಂದ್ರೆ ಅದರ ಹಿಂದೆ ಏನೋ ಮಸಲತ್ತು ಇರಲೇಬೇಕು. ಆತ ದರ್ಶನ್‌ಗೆ ಏನಾದ್ರೂ ತಂದುಕೊಟ್ಟಿದ್ದಾನಾ ಅನ್ನೋ ಅನುಮಾನ ಕೂಡ ಬಂದಿದ್ದು, ಆ ಬಗ್ಗೆ ಇಲಾಖಾ ತನಿಖೆ ನಡೀತಾ ಇದೆ. ಜೈಲರ್‌ನ ಎತ್ತಂಗಡಿ ಮಾಡಿದ್ದು , ಕಾನ್ಸ್ಟೇಬಲ್ ಮೇಲೂ ಕ್ರಮ ಕೈಗೊಳ್ಳೋದಕ್ಕೆ ಪೊಲೀಸ್ ಇಲಾಖೆ ಮುಂದಾಗಿದೆ.
ಅಲೋಕ್ ಕುಮಾರ್ ಜೈಲು ಡಿಜಿಪಿ ಆಗಿ ಬಂದ ಮೇಲೆ ಜೈಲು ನಿಯಮಗಳು ಸಿಕ್ಕಾಪಟ್ಟೆ ಸ್ಕ್ರಿಕ್ಟ್ ಆಗಿವೆ. ತುಂಡು-ಗುಂಡು ತರಿಸಿಕೊಂಡು ಮಜಾ ಮಾಡಿಕೊಂಡಿದ್ದ ಕೈದಿಗಳಿಗೆ ಅಲೋಕ್ ಕುಮಾರ್ ಶಾಕ್ ಕೊಟ್ಟಿದ್ದಾರೆ. ಆದ್ರೂ ಅದೆಷ್ಟೇ ಕಟ್ಟುನಿಟ್ಟು ಮಾಡಿದ್ರೂ ಕೂಡ ಇಂಥಾ ಘಟನೆ ನಡೆದಿದೆ. ಅದ್ರಲ್ಲೂ ದರ್ಶನ್ ವಿಚಾರದಲ್ಲಿ ನಡೆದಿರೋ ಈ ಪ್ರಮಾದದ ಬಗ್ಗೆ ಡಿಜಿಪಿ ಕಿಡಿಕಿಡಿ ಆಗಿದ್ದಾರೆ. ದಾಸನ ಜೈಲ್ ಕಂಬಿಯನ್ನ ಇನ್ನಷ್ಟು ಟೈಟ್ ಮಾಡೋದಕ್ಕೆ ಹೇಳಿದ್ದಾರೆ..!
ಫಿಲ್ಮ್ ಬ್ಯೂರೋ. ಏಷ್ಯಾನೆಟ್ ಸುವರ್ಣ ನ್ಯೂಸ್.


