- Home
- Entertainment
- Sandalwood
- 'ಸೌಂದರ್ಯ ಸಮರ...' ಹೆಣ್ಣಿನ ಶೃಂಗಾರ ವರ್ಣಿಸಿದ Crazy Star Ravichandran ಅವರ ಟಾಪ್ ಸಾಂಗ್ಸ್!
'ಸೌಂದರ್ಯ ಸಮರ...' ಹೆಣ್ಣಿನ ಶೃಂಗಾರ ವರ್ಣಿಸಿದ Crazy Star Ravichandran ಅವರ ಟಾಪ್ ಸಾಂಗ್ಸ್!
Crazy Star Ravichandran ಕನ್ನಡ ಸಿನಿರಂಗದಲ್ಲಿ ಪ್ರೇಮ, ರೊಮ್ಯಾಂಸ್ ಮತ್ತು ಸೌಂದರ್ಯಕ್ಕೆ ಹೊಸ ಅರ್ಥ ಕೊಟ್ಟ ನಟ ಎಂದರೆ ಅದು ಕ್ರೇಜಿ ಸ್ಟಾರ್ ರವಿಚಂದ್ರನ್. ಇಂದಿಗೂ ಯೂಟ್ಯೂಬ್, ರೀಲ್ಸ್, ಗಳಲ್ಲಿ ವೈರಲ್ ಆಗುತ್ತಿರುವ ಅವರ ರೊಮ್ಯಾಂಟಿಕ್ ಹಾಡುಗಳು ಡಿಜಿಟಲ್ ಯುಗದಲ್ಲೂ ಅಷ್ಟೇ ಜನಪ್ರಿಯ.

ಬೊಂಬೆ ಬೊಂಬೆ – ಅಣ್ಣಯ್ಯ
ಮಧುರ ಮೆಲೋಡಿ, ಸಿಂಪಲ್ ಲಿರಿಕ್ಸ್… ಕುಟುಂಬ ಪ್ರೇಕ್ಷಕರಿಗೆ ತುಂಬಾ ಹತ್ತಿರವಾದ ಹಾಡು. ನಟಿ ಮಧು ಬೊಂಬೆ ಬೊಂಬೆ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ.
Kamanu Darling – ಅಣ್ಣಯ್ಯ
ಮಾಡರ್ನ್ ಟಚ್ ಇರುವ ರೊಮ್ಯಾಂಟಿಕ್ ಸಾಂಗ್. ಆ ಕಾಲದ ಯುವ ಜನತೆಗೆ ಸೂಪರ್ ಹಿಟ್. ನಟಿ ಮಧು ಕ್ರೇಜಿ ಸ್ಟಾರ್ ಜೊತೆ ಸೊಂಟ ಬಳುಕಿಸಿದ್ದಾರೆ.
ಯವ್ವೋ ಯಾಕೋ ಮೈಗೆ – ರಸಿಕ
ಯುವ ಪ್ರೇಮದ ತುಂಟತನ, ಅಲವಲವಿಕೆ ಮತ್ತು ಆಕರ್ಷಣೆಯನ್ನು ತೋರಿಸಿದ ಹಾಡು. ನಟಿ ಕುಶ್ಬೂ ಕ್ರೇಜಿ ಸ್ಟಾರ್ ಜೊತೆ ಕಾಣಿಸಿಕೊಂಡಿದ್ದಾರೆ.
Hallimestre Hallimestre ಪಾಠ ಮಾಡಿ ಬನ್ನಿ – ಹಳ್ಳಿಮೇಷ್ಟ್ರು
ರೊಮ್ಯಾಂಸ್ ಜೊತೆ ಹಾಸ್ಯ ಮಿಕ್ಸ್ ಮಾಡಿದ ವಿಭಿನ್ನ ಪ್ರಯೋಗ. ಈ ಹಾಡು ಕ್ರೇಜಿ ಸ್ಟಾರ್ ಸ್ಟೈಲ್‌ಗೆ ಟ್ರೇಡ್‌ಮಾರ್ಕ್. ಇದರಲ್ಲಿ ನಟಿ ಬಿಂದು ಹೆಜ್ಜೆ ಹಾಕಿದ್ದಾರೆ.
ಯಮ್ಮೋ ಯಮ್ಮೋ ನೋಡ್ದೆ ನೋಡ್ದೆ – ಮಲ್ಲ
ಯುವಕರಿಗೆ ಹೆಚ್ಚು ಕನೆಕ್ಟ್ ಆದ ಹಾಡು. ಮಸ್ತ್ ಬೀಟ್, ಕ್ಯೂಟ್ ರೊಮ್ಯಾಂಸ್‌ಗಾಗಿ ಪ್ರಸಿದ್ಧ. ಇದರಲ್ಲಿ ನಟಿ ಮೀನಾಕ್ಷಿ ಕಾಣಿಸಿಕೊಂಡಿದ್ದಾರೆ.
ಅಂದದ ಬೊಂಬೆಗೆ – ನೀಲಕಂಠ
ಸೌಂದರ್ಯ ವರ್ಣನೆಗೆ ಹೊಸ ಲೆವೆಲ್ ಕೊಟ್ಟ ಹಾಡು. ಇಂದಿಗೂ ಎವರ್‌ಗ್ರೀನ್ ಲವ್ ಸಾಂಗ್ ಲಿಸ್ಟ್‌ನಲ್ಲಿ ಇದೆ. ಇದರಲ್ಲಿ ನಟಿ ಭಾರತಿ ವಿಷ್ಣುವರ್ಧನ್ ನಟಿಸಿದ್ದಾರೆ.
ಅಮ್ಮಾಮ್ಮಾಮೋ – ನೀಲಕಂಠ
ಲವಲವಿಕೆಯ ಸಂಗೀತ, ನೈಸರ್ಗಿಕ ರೊಮ್ಯಾಂಸ್… ಕೇಳಿದ ತಕ್ಷಣ ಮನಸ್ಸು ಹಗುರವಾಗುವ ಹಾಡು. ಇದರಲ್ಲಿ ನಟಿ ಭಾರತಿ ವಿಷ್ಣುವರ್ಧನ್ ನಟಿಸಿದ್ದಾರೆ.
ನನ್ನವಳು.. ನನ್ನವಳು.. – ಚಿನ್ನ
ಪ್ರೇಮದ ಮೃದು ಭಾವನೆಗಳನ್ನು ಸೂಕ್ಷ್ಮವಾಗಿ ತೋರಿಸಿದ ಹಾಡು. ರವಿಚಂದ್ರನ್ ಅವರ ಸಾಫ್ಟ್ ರೊಮ್ಯಾಂಟಿಕ್ ಇಮೇಜ್‌ಗೆ ಇದು ದೊಡ್ಡ ಪ್ಲಸ್. ಇದರಲ್ಲಿ ನಟಿ ಪೂನಂ ಧಿಲ್ಲನ್ ಕಾಣಿಸಿಕೊಂಡಿದ್ದಾರೆ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.