MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • Sandalwood
  • ನನ್ನನ್ನು ನನ್ನ ಪಾಡಿಗೆ ಬದುಕಲು ಬಿಡಿ: ಬ್ರೇಕಪ್ ಬಗ್ಗೆ ಹೇಳಿ ಕಣ್ಣೀರಿಟ್ಟ ನಟಿ ಕೃಷಿ ತಾಪಂಡ!

ನನ್ನನ್ನು ನನ್ನ ಪಾಡಿಗೆ ಬದುಕಲು ಬಿಡಿ: ಬ್ರೇಕಪ್ ಬಗ್ಗೆ ಹೇಳಿ ಕಣ್ಣೀರಿಟ್ಟ ನಟಿ ಕೃಷಿ ತಾಪಂಡ!

ನಟಿ ಹಾಗೂ ಮಾಜಿ ಬಿಗ್‌ಬಾಸ್ ಸ್ಪರ್ಧಿ ಕೃಷಿ ತಾಪಂಡ ತಮ್ಮ ವೈಯಕ್ತಿಕ ಜೀವನದ ವಿಚಾರಗಳಿಂದ ಹಲವು ಬಾರಿ ಸುದ್ದಿಯಾಗಿದ್ದರು. ಇದೀಗ ಖಾಸಗಿ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ, ತಮ್ಮ ಜೀವನದಲ್ಲಿ ನಡೆದ ಕಹಿ ಘಟನೆಗಳನ್ನು ನೆನೆದು ಕಣ್ಣೀರಿಟ್ಟಿದ್ದಾರೆ.

1 Min read
Author : Govindaraj S
Published : May 26 2026, 06:50 PM IST
Share this Photo Gallery
  • FB
  • TW
  • Linkdin
  • Whatsapp
15
ಜೀವನ ಸಂಪೂರ್ಣ ಬದಲಾಗಿದೆ
Image Credit : Youtube

ಜೀವನ ಸಂಪೂರ್ಣ ಬದಲಾಗಿದೆ

ಕಳೆದ ಕೆಲವು ತಿಂಗಳುಗಳಿಂದ ತಮ್ಮ ಖಾಸಗಿ ಬದುಕಿನ ಬಗ್ಗೆ ಹರಿದಾಡಿದ ಸುದ್ದಿಗಳು ಮತ್ತು ವೈಯಕ್ತಿಕ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬಳಿಕ, ತಮ್ಮ ಜೀವನ ಸಂಪೂರ್ಣ ಬದಲಾಗಿದೆ ಎಂದು ಕೃಷಿ ತಾಪಂಡ ಹೇಳಿದ್ದಾರೆ. ತಮ್ಮ ಹಾಗೂ ಉದ್ಯಮಿ ನಡುವಿನ ಸಂಬಂಧದ ಬಗ್ಗೆ ಮಾತನಾಡಿದ ಅವರು, ಪ್ರಾರಂಭದಲ್ಲಿ ಸಾಕಷ್ಟು ಪ್ರೀತಿ ಸಿಕ್ಕಿತ್ತು. ಆದರೆ ಸಮಯ ಕಳೆದಂತೆ ಸಂಬಂಧದಲ್ಲಿ ಅಂತರ ಹೆಚ್ಚಾಯಿತು ಎಂದು ಹೇಳಿದ್ದಾರೆ.

Add Asianetnews Kannada as a Preferred SourcegooglePreferred
25
ದೊಡ್ಡ ಮಟ್ಟದ ಭಿನ್ನಾಭಿಪ್ರಾಯ
Image Credit : Instagram

ದೊಡ್ಡ ಮಟ್ಟದ ಭಿನ್ನಾಭಿಪ್ರಾಯ

ನನಗೆ ಉಡುಗೊರೆಗಳು ಸಿಕ್ಕಿವೆ, ಹಣ ಸಿಕ್ಕಿದೆ. ಆದರೆ ಪ್ರೀತಿ ಮತ್ತು ಸಮಯ ಸಿಗಲಿಲ್ಲ. ಅದೇ ನನಗೆ ಹೆಚ್ಚು ನೋವು ಕೊಟ್ಟದ್ದು ಎಂದು ಕೃಷಿ ತಾಪಂಡ ಹೇಳಿದ್ದಾರೆ. ಸಂಬಂಧದಲ್ಲಿ ಉಂಟಾದ ಸಮಸ್ಯೆಗಳು ದೊಡ್ಡ ಮಟ್ಟದ ಭಿನ್ನಾಭಿಪ್ರಾಯಕ್ಕೆ ಕಾರಣವಾದವು. ಖಾಸಗಿ ಬದುಕಿನಲ್ಲಿ ನಡೆದ ಘಟನೆಗಳು ಸಾರ್ವಜನಿಕ ಚರ್ಚೆಯಾಗಿ ಮಾರ್ಪಟ್ಟವು ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.

Related Articles

Related image1
ದಿನಕ್ಕೆ 2 ಪಿಜ್ಜಾ, 3 ಬ್ರೌನಿ ತಿಂತಿದ್ರು ಈ ಬಾಲಿವುಡ್ ನಟಿ: ಇದ್ದಕ್ಕಿದ್ದ ಹಾಗೆ 45 ಕೆಜಿ ತೂಕ ಇಳಿಸಿದ್ದು ಹೇಗೆ?
Related image2
ಈಗಿನ ಕಾಲದಲ್ಲಿ ಹುಡುಗಿಯರೇ ಹೆಚ್ಚು ಮೋಸ ಮಾಡ್ತಿದ್ದಾರೆ: ನಟಿ ಇಂದ್ರಜಾ ಶಾಕಿಂಗ್ ಹೇಳಿಕೆ
35
ಅವಕಾಶಗಳೂ ಕಡಿಮೆಯಾದವು
Image Credit : Youtube

ಅವಕಾಶಗಳೂ ಕಡಿಮೆಯಾದವು

ನಾಲ್ಕು ಗೋಡೆಗಳ ಮಧ್ಯೆ ಉಳಿಯಬೇಕಿದ್ದ ವಿಷಯ ಬೀದಿಗೆ ಬಂತು. ಜನರು ನನ್ನ ಹಲವು ವರ್ಷದ ಪಯಣ ಮರೆತು, ಕಳೆದ ಕೆಲವು ತಿಂಗಳ ಘಟನೆಗಳಿಂದಲೇ ನನ್ನನ್ನು ಅಳೆಯುತ್ತಿದ್ದಾರೆ ಎಂದು ಕಣ್ಣೀರಿಟ್ಟಿದ್ದಾರೆ. ಈ ಘಟನೆಗಳಿಂದ ಕೆಲಸದ ಅವಕಾಶಗಳೂ ಕಡಿಮೆಯಾದವು. ಜೀವನದಲ್ಲಿ ಆರ್ಥಿಕ ಸಂಕಷ್ಟ ಎದುರಿಸಬೇಕಾಯಿತು ಎಂದು ಹೇಳಿದ ಕೃಷಿ ತಾಪಂಡ, ಕಳೆದ ಎರಡು ವರ್ಷಗಳಿಂದ ಹೊರಜಗತ್ತಿನಿಂದ ದೂರವಾಗಿದ್ದೇನೆ ಎಂದಿದ್ದಾರೆ.

45
ಐಷಾರಾಮಿ ಜೀವನ ಇಲ್ಲ
Image Credit : our own

ಐಷಾರಾಮಿ ಜೀವನ ಇಲ್ಲ

ಇದೇ ನನ್ನ ಕೊನೆಯ ಸಂದರ್ಶನ. ಇನ್ನು ಮುಂದೆ ಯಾವ ಕ್ಯಾಮೆರಾ ಮುಂದೆಯೂ ಬರಲು ಬಯಸುವುದಿಲ್ಲ. ದಯವಿಟ್ಟು ನನ್ನನ್ನು ನನ್ನ ಪಾಡಿಗೆ ಬದುಕಲು ಬಿಡಿ ಎಂದು ಭಾವುಕರಾಗಿ ಕೃಷಿ ತಾಪಂಡ ಮನವಿ ಮಾಡಿದ್ದಾರೆ. ಇನ್ನೂ ತಮ್ಮ ಹೆಸರಿನಲ್ಲಿ ದುಬಾರಿ ಆಸ್ತಿ ಅಥವಾ ಐಷಾರಾಮಿ ಜೀವನ ಇಲ್ಲ ಎಂದು ಅವರು ಸ್ಪಷ್ಟಪಡಿಸಿದರು.

55
ಬಾಡಿಗೆ ಮನೆಯಲ್ಲೇ ಇದ್ದೇನೆ
Image Credit : youtube

ಬಾಡಿಗೆ ಮನೆಯಲ್ಲೇ ಇದ್ದೇನೆ

ಉದ್ಯಮಿ, ಕಾರನ್ನು ನನ್ನ ಹೆಸರಿಗೆ ಮಾಡಿಸಿದ್ದರು. ಆದರೆ ಅದನ್ನು ನಾನು ಬಳಸಿಲ್ಲ. ಈಗಲೂ ಬಾಡಿಗೆ ಮನೆಯಲ್ಲೇ ಇದ್ದೇನೆ. ಕೊಟ್ಟಿದ್ದ ಆಭರಣಗಳನ್ನೂ ಹಿಂತಿರುಗಿಸಿದ್ದೇನೆ. ಇಂದಿಗೂ ಆ ವ್ಯಕ್ತಿಯ ಮೇಲೆ ನನಗೆ ದ್ವೇಷ ಇಲ್ಲ. ಜೀವನ ಹೀಗಾಗಿದೆ ಎಂದು ಅವರನ್ನು ದೂರುವುದಿಲ್ಲ ಎಂದು ಭಾವುಕರಾಗಿ ಕೃಷಿ ತಾಪಂಡ ಪ್ರತಿಕ್ರಿಯಿಸಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

GS
Govindaraj S
ಏಷ್ಯಾನೆಟ್ ಸುವರ್ಣ ಡಿಜಿಟಲ್ ಕನ್ನಡ ವಿಭಾಗದಲ್ಲಿ ಉಪ ಸಂಪಾದಕ. ಕಳೆದ 8 ವರ್ಷಗಳಿಂದ ಮಾಧ್ಯಮ ಪ್ರಪಂಚದಲ್ಲಿದ್ದೇನೆ. ಹುಟ್ಟಿ ಬೆಳೆದಿದ್ದು ಬೆಂಗಳೂರಿನಲ್ಲಿ. ಸ್ನಾತಕೋತ್ತರ ಪದವಿಯನ್ನು ಬೆಂಗಳೂರು ವಿಶ್ವವಿದ್ಯಾಲಯದಿಂದ ಪಡೆದಿದ್ದೇನೆ. ದೂರದರ್ಶನದಲ್ಲಿ ಇಂಟರ್ನ್‌ಶಿಪ್ ನಿರ್ವಹಣೆ. ಪ್ರಜಾವಾಣಿ ಮತ್ತು ಉದಯವಾಣಿ ಡಿಜಿಟಲ್ ವಿಭಾಗದಲ್ಲಿ ಬರಹಗಾರ ಹಾಗೂ ಕಂಟೆಂಟ್ ಡೆವಲಪರ್ ಆಗಿ ಕೆಲಸ ಮಾಡಿದ್ದೇನೆ. ಮನರಂಜನೆ ಸುದ್ದಿಗಳ ಬಗ್ಗೆ ತುಂಬಾ ಆಸಕ್ತಿ. ಸಿನಿಮಾ ವೀಕ್ಷಿಸುವುದು, ಸಂಗೀತ ಕೇಳುವುದು ಮತ್ತು ಕ್ರೀಡೆ ನೆಚ್ಚಿನ ಹವ್ಯಾಸಗಳು.
ನಟಿ
ಮನರಂಜನಾ ಸುದ್ದಿ
ಸ್ಯಾಂಡಲ್‌ವುಡ್
ವೈರಲ್ ಸುದ್ದಿ

Latest Videos
Recommended Stories
Recommended image1
ಪ್ರಶಸ್ತಿ ಸಮಾರಂಭದಲ್ಲಿ ಮಿಂಚಿದ Rukmini Vasanth… ಕರ್ನಾಟಕ ಚಿನ್ನದ ಗಣಿ ಎಂದ ಫ್ಯಾನ್ಸ್
Recommended image2
ಪುರುಷರಿಗೆ ನಾಚಿಕೆ ಆಗಬೇಕು- ಸಿಕ್ಸ್‌ ಪ್ಯಾಕ್‌ ಮಾಡಿ ತೋರಿಸಿದ ಕನ್ನಡದ ಸ್ಟಾರ್‌ ನಟನ ಮಗಳು! ಯಾರದು?
Recommended image3
ಕನ್ನಡದಲ್ಲಿ ಮಾತನಾಡಿ ಕರುನಾಡಿಗರ ಮನಗೆದ್ದ ಜಾಹ್ನವಿ ಕಪೂರ್​: ಶ್ರೀದೇವಿ ಪುತ್ರಿಗೆ ಕನ್ನಡಿಗರು ಫಿದಾ
Related Stories
Recommended image1
ದಿನಕ್ಕೆ 2 ಪಿಜ್ಜಾ, 3 ಬ್ರೌನಿ ತಿಂತಿದ್ರು ಈ ಬಾಲಿವುಡ್ ನಟಿ: ಇದ್ದಕ್ಕಿದ್ದ ಹಾಗೆ 45 ಕೆಜಿ ತೂಕ ಇಳಿಸಿದ್ದು ಹೇಗೆ?
Recommended image2
ಈಗಿನ ಕಾಲದಲ್ಲಿ ಹುಡುಗಿಯರೇ ಹೆಚ್ಚು ಮೋಸ ಮಾಡ್ತಿದ್ದಾರೆ: ನಟಿ ಇಂದ್ರಜಾ ಶಾಕಿಂಗ್ ಹೇಳಿಕೆ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved