- Home
- Entertainment
- Sandalwood
- ಹುಸಿಮುನಿಸು, ಪ್ರೀತಿ, ಕೋಳಿ ಜಗಳ; ಮದುವೆಯಾದ್ಮೇಲೆ ವಿಡಿಯೋ ಶೇರ್ ಮಾಡಿದ ನಟಿ ರಶ್ಮಿಕಾ ಮಂದಣ್ಣ
ಹುಸಿಮುನಿಸು, ಪ್ರೀತಿ, ಕೋಳಿ ಜಗಳ; ಮದುವೆಯಾದ್ಮೇಲೆ ವಿಡಿಯೋ ಶೇರ್ ಮಾಡಿದ ನಟಿ ರಶ್ಮಿಕಾ ಮಂದಣ್ಣ
Actress Rashmika Mandanna: ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅವರು ಮದುವೆಯಾಗಿ, ಖುಷಿ ಅಲೆಯಲ್ಲಿ ತೇಲುತ್ತಿದ್ದಾರೆ. ಕುಟುಂಬಸ್ಥರ ಸಾಕ್ಷಿಯಾಗಿ, ಸ್ನೇಹಿತರು, ಆಪ್ತರ ಮುಂದೆ ಉದಯಪುರದಲ್ಲಿ ಗ್ರ್ಯಾಂಡ್ ಆಗಿ ಮದುವೆಯಾದ ಜೋಡಿ ತಿರುಮಲ ದೇವಸ್ಥಾನಕ್ಕೆ ಭೇಟಿ ಕೊಟ್ಟಿದ್ದಾರೆ.

ಸಿಹಿ ವಿತರಣೆ ಮಾಡಿದ ಜೋಡಿ
ಇಡೀ ಭಾರತದಾದ್ಯಂತ ಅನೇಕ ನಗರಗಳಲ್ಲಿ ಅವರು ಸಿಹಿಯನ್ನು ವಿತರಿಸಿದ್ದಾರೆ. ತಿಮ್ಮಪ್ಪನ ಸನ್ನಿಧಿಯಲ್ಲಿ ಈ ಜೋಡಿ ಖುದ್ದಾಗಿ ಸಿಹಿ ವಿತರಣೆ ಮಾಡಿತ್ತು.
ವಿಶೇಷ ವಿಡಿಯೋ ರಿಲೀಸ್
ಅಂದಹಾಗೆ ಇವರಿಬ್ಬರು ಒಂದು ವಿಶೇಷ ವಿಡಿಯೋ ಹಂಚಿಕೊಂಡಿದ್ದಾರೆ. ಅಲ್ಲಿ ಇವರಿಬ್ಬರ ಹಸಿ-ಮುನಿಸು, ನಗು, ಡ್ಯಾನ್ಸ್, ಪ್ರೀತಿ ಎಲ್ಲವೂ ಇದೆ.
ಜಾಹೀರಾತಿನಲ್ಲಿ ಭಾಗಿ
ಒಂದು ಜಾಹೀರಾತಿನಲ್ಲಿ, ಇದರ ಶೂಟಿಂಗ್ ಸಮಯದಲ್ಲಿ ನಾವು ತುಂಬಾನೇ ಮೋಜು ಮಾಡಿದ್ದೇವೆ! ಸೆಟ್‌ನಲ್ಲಿ ನಾವಿಬ್ಬರೇ ಇದ್ದೆವು, ನಾವು ಒಬ್ಬರನ್ನೊಬ್ಬರು ತಮಾಷೆ ಮಾಡುತ್ತಾ ಸಮಯ ಕಳೆದಿದ್ದೇವೆ ಎಂದು ರಶ್ಮಿಕಾ ಮಂದಣ್ಣ ಅವರು ಪೋಸ್ಟ್ ಹಂಚಿಕೊಂಡಿದ್ದಾರೆ.
ಮೇಡ್ ಫಾರ್ ಈಚ್ ಅದರ್
ಬಹುಶಃ 'ಮೇಡ್ ಫಾರ್ ಈಚ್ ಅದರ್' ಎನ್ನುವುದರ ನಿಜವಾದ ಅರ್ಥ ಇದೇ ಇರಬೇಕು. ಇದು ನಮ್ಮ ನಿಜ ಜೀವನಕ್ಕಿಂತ ವಿಭಿನ್ನವಾಗಿದೆ. ಬಹುಶಃ ಅದಕ್ಕಾಗಿಯೇ ಇದು ನಮಗೆ ತುಂಬ ವಿಶೇಷ ಎಂದು ಅನಿಸಿತು ಎಂದು ರಶ್ಮಿಕಾ ಮಂದಣ್ಣ ಹೇಳಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

