MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • Sandalwood
  • ಮಗಳು ಸಾನ್ವಿಗೆ 'ಮಹೀಂದ್ರಾ BE 6' ಕಾರು ಗಿಫ್ಟ್ ನೀಡಿದ ಸುದೀಪ್: 'ಜೆನ್-ಜಿ' ಮೆಚ್ಚುವ ಈ ಕಾರಿನ ಫೀಚರ್ಸ್ ಇಲ್ಲಿದೆ!

ಮಗಳು ಸಾನ್ವಿಗೆ 'ಮಹೀಂದ್ರಾ BE 6' ಕಾರು ಗಿಫ್ಟ್ ನೀಡಿದ ಸುದೀಪ್: 'ಜೆನ್-ಜಿ' ಮೆಚ್ಚುವ ಈ ಕಾರಿನ ಫೀಚರ್ಸ್ ಇಲ್ಲಿದೆ!

ನಟ ಕಿಚ್ಚ ಸುದೀಪ್ ತಮ್ಮ ಪ್ರೀತಿಯ ಮಗಳು ಸಾನ್ವಿಗೆ ಮಹೀಂದ್ರಾ ಕಂಪನಿಯ ನೂತನ 'ಬಿಇ 6' ಎಲೆಕ್ಟ್ರಿಕ್ ಕಾರನ್ನು ಸರ್ಪ್ರೈಸ್ ಗಿಫ್ಟ್ ಆಗಿ ನೀಡಿದ್ದಾರೆ. ಮಗಳಿಗೆ ರಫ್ ಲುಕ್ ಇರುವ ಕಾರುಗಳೆಂದರೆ ಇಷ್ಟ ಮತ್ತು 'ಜೆನ್‌-ಜಿ' ಪೀಳಿಗೆಗೆ ಸರಿಹೊಂದುವ ಕಾರಣ ಈ ಕಾರು ಕೊಟ್ಟಿರುವುದಾಗಿ ಸುದೀಪ್ ತಿಳಿಸಿದ್ದಾರೆ.

2 Min read
Author : Sathish Kumar KH| Kannada Prabha
Published : Jul 27 2026, 07:47 AM IST
Share this Photo Gallery
  • FB
  • TW
  • Linkdin
  • Whatsapp
15
ಮಗಳಿಗೆ ಹೊಸ ಕಾರು ಗಿಫ್ಟ್ ಕೊಟ್ಟ ಕಿಚ್ಚ ಸುದೀಪ
Image Credit : Instagram

ಮಗಳಿಗೆ ಹೊಸ ಕಾರು ಗಿಫ್ಟ್ ಕೊಟ್ಟ ಕಿಚ್ಚ ಸುದೀಪ

ಸ್ಯಾಂಡಲ್‌ವುಡ್‌ನ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌ ಅವರು ಸದಾ ತಮ್ಮ ವಿಭಿನ್ನ ಶೈಲಿ ಹಾಗೂ ಕುಟುಂಬದ ಮೇಲಿರುವ ಪ್ರೀತಿಯಿಂದ ಅಭಿಮಾನಿಗಳ ಮನ ಗೆಲ್ಲುತ್ತಾರೆ. ಇದೀಗ ಸುದೀಪ್ ತಮ್ಮ ಪ್ರೀತಿಯ ಮಗಳು ಸಾನ್ವಿ ಸುದೀಪ್‌ಗೆ ಸರ್ಪ್ರೈಸ್ ಗಿಫ್ಟ್ ಒಂದನ್ನು ನೀಡುವ ಮೂಲಕ ಮತ್ತೆ ಸುದ್ದಿಯಲ್ಲಿದ್ದಾರೆ. ಕಳೆದ ವಾರ ತಾವೇ ಸ್ವತಃ ಖರೀದಿಸಿದ್ದ ಮಹೀಂದ್ರಾ ಕಂಪನಿಯ ನೂತನ 'ಬಿಇ 6e' (Mahindra BE 6e) ಐಷಾರಾಮಿ ಎಲೆಕ್ಟ್ರಿಕ್‌ ಕಾರನ್ನು ಕಿಚ್ಚ ಸುದೀಪ್ ತಮ್ಮ ಮಗಳಿಗೆ ಉಡುಗೊರೆಯಾಗಿ ನೀಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
25
ಮಗಳಿಗೆ ಈ ಕಾರನ್ನೇ ಗಿಫ್ಟ್ ನೀಡಲು ಕಾರಣವೇನು?
Image Credit : Instagram

ಮಗಳಿಗೆ ಈ ಕಾರನ್ನೇ ಗಿಫ್ಟ್ ನೀಡಲು ಕಾರಣವೇನು?

ಈ ಕುರಿತು ಮಾತನಾಡಿರುವ ನಟ ಸುದೀಪ್, 'ಮಗಳಿಗೆ ಒಂದು ಅತ್ಯುತ್ತಮ ಗಿಫ್ಟ್‌ ನೀಡಬೇಕು ಎಂಬ ಆಸೆ ಯೋಚನೆ ನನ್ನಲ್ಲಿ ಹಲವು ದಿನಗಳಿಂದ ಇತ್ತು. ಅವಳಿಗೆ ನನ್ನಂತೆಯೇ ರಸ್ಟಿಕ್‌ ಹಾಗೂ ರಫ್‌ ರುಕ್‌ ಇರುವ ಕಾರುಗಳೆಂದರೆ ಬಹಳ ಇಷ್ಟ. 

ಇತ್ತೀಚೆಗೆ ಈ ಮಹೀಂದ್ರಾ BE 6e ಕಾರು ನನ್ನ ಕಣ್ಣಿಗೆ ಬಿತ್ತು. ಇದರ ಡಿಸೈನ್‌, ಸೊಗಸಾದ ಬಣ್ಣ, ಒಳಾಂಗಣದ ಕಂಫರ್ಟ್‌ ಮತ್ತು ಆಕರ್ಷಕ ಲೈಟಿಂಗ್ ಸಿಸ್ಟಮ್ ನನಗೂ ತುಂಬಾ ಇಷ್ಟವಾಯಿತು. ಮುಖ್ಯವಾಗಿ ಇಂದಿನ 'ಜೆನ್‌-ಜಿ' (Gen-Z) ಯುವ ಪೀಳಿಗೆಗೆ ಇಷ್ಟವಾಗುವಂತೆ ಈ ಕಾರಿನ ಪ್ರತಿಯೊಂದು ವಿನ್ಯಾಸವೂ ಇದೆ. ಹಾಗಾಗಿ ಇದನ್ನೇ ಮಗಳಿಗೆ ಕೊಡಿಸಲು ನಿರ್ಧರಿಸಿದೆ' ಎಂದು ತಿಳಿಸಿದ್ದಾರೆ.

Related Articles

Related image1
ಕಿಚ್ಚ ಸುದೀಪ್‌ರ 'ಮ್ಯಾಕ್ಸ್‌' ಕಲೆಕ್ಷನ್ ಎಷ್ಟು? ಗಾಯಕಿಯಾಗಿ ಸಾನ್ವಿ ಸಕ್ಸಸ್; ಇಲ್ಲಿದೆ ಸಂಪೂರ್ಣ ವರದಿ
Related image2
ಅಪ್ಪನ ಜೊತೆಗಿನ ಬಾಲ್ಯದ ಮಧುರ ನೆನಪುಗಳನ್ನು ಬಿಚ್ಚಿಟ್ಟ ಸುದೀಪ್ ಪುತ್ರಿ ಸಾನ್ವಿ
35
ಮಹೀಂದ್ರಾ BE 6e ಕಾರಿನ ಪ್ರಮುಖ ಆಕರ್ಷಣೆಗಳು
Image Credit : Instagram

ಮಹೀಂದ್ರಾ BE 6e ಕಾರಿನ ಪ್ರಮುಖ ಆಕರ್ಷಣೆಗಳು

ಅಭಿನಯ ಚಕ್ರವರ್ತಿ ಸುದೀಪ್ ಮನಸ್ಸನ್ನು ಕೊಂದ ಈ ಮಹೀಂದ್ರಾ BE 6e ಎಲೆಕ್ಟ್ರಿಕ್ ಕಾರು ಭಾರತೀಯ ಇವಿ ಮಾರುಕಟ್ಟೆಯಲ್ಲಿ ಭಾರೀ ಸದ್ದು ಮಾಡುತ್ತಿದೆ. ಇದರ ಪ್ರಮುಖ ವೈಶಿಷ್ಟ್ಯಗಳು ಹೀಗಿವೆ:

ಆಕರ್ಷಕ ಮತ್ತು ವಿಶಿಷ್ಟ ವಿನ್ಯಾಸ: ಇದು ಅತ್ಯಂತ ಸ್ಪೋರ್ಟಿ 'ಕೂಪ್' ಶೈಲಿಯ ಬಾಡಿಯನ್ನು ಹೊಂದಿದ್ದು, ಶಾರ್ಪ್ ಸಿ-ಆಕಾರದ ಎಲ್‌ಇಡಿ ಡಿಆರ್‌ಎಲ್‌ಗಳು, ಇಲ್ಯುಮಿನೇಟೆಡ್ ಮಹೀಂದ್ರಾ ಲೋಗೋ ಮತ್ತು ರಸ್ತೆಯಲ್ಲಿ ಸುಲಭವಾಗಿ ಸಾಗಲು ಸಹಾಯ ಮಾಡುವ ಏರೋಡೈನಾಮಿಕ್ ವಿನ್ಯಾಸವನ್ನು ಹೊಂದಿದೆ.

45
ಕಾರಿನ ವಿಶೇಷತೆಗಳು
Image Credit : Instagram

ಕಾರಿನ ವಿಶೇಷತೆಗಳು

ದೀರ್ಘ ರೇಂಜ್ ಮತ್ತು ಬಲವಾದ ಬ್ಯಾಟರಿ: ಈ ಕಾರಿನಲ್ಲಿ 59 kWh ಹಾಗೂ 79 kWh ಸಾಮರ್ಥ್ಯದ ಎರಡು ಬಲವಾದ ಬ್ಯಾಟರಿ ಆಯ್ಕೆಗಳಿವೆ. ಪೂರ್ಣ ಚಾರ್ಜ್ ಮಾಡಿದರೆ ಕಾರಿನ ಮಾಡೆಲ್‌ಗೆ ಅನುಗುಣವಾಗಿ 557 ಕಿ.ಮೀ ನಿಂದ 682 ಕಿ.ಮೀ ವರೆಗೆ ಸುಲಭವಾಗಿ ಪ್ರಯಾಣಿಸಬಹುದು.

ಅತಿ ವೇಗದ ಫಾಸ್ಟ್ ಚಾರ್ಜಿಂಗ್: ಪ್ರಯಾಣದ ವೇಳೆ ಚಾರ್ಜಿಂಗ್ ಚಿಂತೆ ಇರಬಾರದು ಎಂದು 175 kW DC ಫಾಸ್ಟ್ ಚಾರ್ಜಿಂಗ್ ಬೆಂಬಲ ನೀಡಲಾಗಿದೆ. ಇದರಿಂದ ಕೇವಲ 20 ನಿಮಿಷಗಳಲ್ಲಿ ಶೇ.20 ರಿಂದ 80 ರಷ್ಟು ಚಾರ್ಜ್ ಮಾಡಿಕೊಳ್ಳಬಹುದು. ಜೊತೆಗೆ, ಕೇವಲ 6.7 ಸೆಕೆಂಡುಗಳಲ್ಲಿ 0 ಯಿಂದ 100 ಕಿ.ಮೀ ವೇಗ ಪಡೆದುಕೊಳ್ಳುವ ಶಕ್ತಿ ಇದರಲ್ಲಿದೆ.

55
ಸುರಕ್ಷತೆಗೂ ಬೆಸ್ಟ್
Image Credit : Instagram

ಸುರಕ್ಷತೆಗೂ ಬೆಸ್ಟ್

ಹೈಟೆಕ್ ಮತ್ತು ಐಷಾರಾಮಿ ಒಳಾಂಗಣ: ಕಾರಿನ ಕ್ಯಾಬಿನ್ ಒಳಗಡೆ ಅವಳಿ 12.3-ಇಂಚಿನ ಟಚ್‌ಸ್ಕ್ರೀನ್ ಡಿಸ್‌ಪ್ಲೇಗಳು, ಹೆಡ್ಸ್‌-ಅಪ್ ಡಿಸ್ಪ್ಲೇ (HUD), ವಿಶಾಲವಾದ ಪನೋರಮಿಕ್ ಗ್ಲಾಸ್ ರೂಫ್, ಹರ್ಮನ್ ಕಾರ್ಡನ್ ಆಡಿಯೋ ಸಿಸ್ಟಮ್ ಮತ್ತು 'MAIA' AI ತಂತ್ರಜ್ಞಾನವನ್ನು ಅಳವಡಿಸಲಾಗಿದೆ.

ಉನ್ನತ ಮಟ್ಟದ ಸುರಕ್ಷತೆ: ಸುರಕ್ಷತೆಗೆ ಮೊದಲ ಆದ್ಯತೆ ನೀಡಲಾಗಿದ್ದು, ಲೆವೆಲ್-2 ADAS (ಸುಧಾರಿತ ಚಾಲಕ ಸಹಾಯ ವ್ಯವಸ್ಥೆ), 6 ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC) ಮತ್ತು 360-ಡಿಗ್ರಿ ಕ್ಯಾಮೆರಾವನ್ನು ನೀಡಲಾಗಿದೆ.

ನೆಚ್ಚಿನ ನಟ ಸುದೀಪ್ ತಮ್ಮ ಮಗಳಿಗೆ ಇಂತಹ ಹೈಟೆಕ್ ಮತ್ತು ರಫ್ ಅಂಡ್ ಟಫ್ ಇವಿ ಕಾರನ್ನು ಗಿಫ್ಟ್ ನೀಡಿರುವುದು ಸೋಶಿಯಲ್ ಮೀಡಿಯಾದಲ್ಲಿ ಸದ್ಯ ಭಾರೀ ಟ್ರೆಂಡ್ ಆಗುತ್ತಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SK
Sathish Kumar KH
ವಿಜಯನಗರ ಜಿಲ್ಲೆ ಕಂದಗಲ್‌ಪುರ ಗ್ರಾಮದವನು ಮೂಲತಃ ಶಿಕ್ಷಕ. ಆದರೆ, ಆಕರ್ಷಿಸಿದ್ದು ಪತ್ರಿಕೋದ್ಯಮ. ಎಂಟು ವರ್ಷಗಳಿಂದ ಪ್ರಜಾವಾಣಿ, ವಿಜಯವಾಣಿ ನಂತರ ಇದೀಗ ಏಷ್ಯಾನೆಟ್ ಕನ್ನಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಕರ್ನಾಟಕ ರಾಜಕಾರಣ ನೆಚ್ಚಿನ ಕ್ಷೇತ್ರ. ಡಿಜಿಟಲ್ ಮಾಧ್ಯಮಕ್ಕನುಗುಣವಾಗಿ ಶಿಕ್ಷಣ, ಆರೋಗ್ಯ, ಸಿನಿಮಾ ಸುದ್ದಿಗಳನ್ನೂ ಬರೆಯುತ್ತೇನೆ. ಕ್ರಿಕೆಟ್, ಕೃಷಿ ಇಷ್ಟ. ಓದು ನೆಚ್ಚಿನ ಹವ್ಯಾಸ.
ಕಿಚ್ಚ ಸುದೀಪ್
ಕಾರುಗಳು
ಸ್ಯಾಂಡಲ್‌ವುಡ್

Latest Videos
Recommended Stories
Recommended image1
ಎಲ್ಲಾ ಹೀರೋಗಳು ಯಶ್ ಆಗಲು ಹೋಗಬಾರದು: ನಿರ್ಮಾಪಕ ಉದಯ್ ಕೆ. ಮೆಹ್ತಾ ಹೇಳಿದ್ದೇನು?
Recommended image2
ಪತಿ ಜೊತೆ ಪ್ರಿಯಾಂಕಾ ಉಪೇಂದ್ರ ರಾಜಕೀಯಕ್ಕೆ ಎಂಟ್ರಿ? ಈ ಬಗ್ಗೆ ಖುದ್ದು ನಟಿ ಹೇಳಿದ್ದೇನು
Recommended image3
ಅಪ್ಪು ಸರ್ ಹೇಳಿದ ಆ ಒಂದು ಮಾತು ಇಂದಿಗೂ ನೆನಪಿದೆ: ನಟ ರಾವ್ ರಮೇಶ್ ಭಾವುಕ ಕಥೆಯೇನು?
Related Stories
Recommended image1
ಕಿಚ್ಚ ಸುದೀಪ್‌ರ 'ಮ್ಯಾಕ್ಸ್‌' ಕಲೆಕ್ಷನ್ ಎಷ್ಟು? ಗಾಯಕಿಯಾಗಿ ಸಾನ್ವಿ ಸಕ್ಸಸ್; ಇಲ್ಲಿದೆ ಸಂಪೂರ್ಣ ವರದಿ
Recommended image2
ಅಪ್ಪನ ಜೊತೆಗಿನ ಬಾಲ್ಯದ ಮಧುರ ನೆನಪುಗಳನ್ನು ಬಿಚ್ಚಿಟ್ಟ ಸುದೀಪ್ ಪುತ್ರಿ ಸಾನ್ವಿ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved