ಅಪ್ಪನ ಜೊತೆಗಿನ ಬಾಲ್ಯದ ಮಧುರ ನೆನಪುಗಳನ್ನು ಬಿಚ್ಚಿಟ್ಟ ಸುದೀಪ್ ಪುತ್ರಿ ಸಾನ್ವಿ
ಸುದೀಪ್ ಪುತ್ರಿ ಸಾನ್ವಿ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ತಂದೆಯ ಜೊತೆಗಿನ ವಿಶೇಷವಾದ ಸುಂದರ ನೆನಪುಗಳನ್ನು ಬಿಚ್ಚಿಟ್ಟಿದ್ದಾರೆ. ಸುದೀಪ್ ಜೊತೆಗೆ ಮುದ್ದಾಗಿ ಆಡಿದ, ತರಲೆ ಮಾಡಿದ ಮಧುರ ಕ್ಷಣಗಳನ್ನು ಸಾನ್ವಿ ಮೆಲುಕು ಹಾಕಿದ್ದು, ಸದ್ಯ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.

ಸಾನ್ವಿ ಸುದೀಪ್
ಕಿಚ್ಚ ಸುದೀಪ್ ಪುತ್ರಿ ಸಾನ್ವಿ ಸೋಶಿಯಲ್ ಮೀಡೀಯಾದಲ್ಲಿ ಆಕ್ಟೀವ್ ಆಗಿರುತ್ತಾರೆ. ಇದೀಗ ಸಾನ್ವಿ ತಮ್ಮ ತಂದೆ ಕಿಚ್ಚನ ಜೊತೆಗೆ ಬಾಲ್ಯದಲ್ಲಿ ಮಾಡಿದ ತುಂಟಾಟ, ಆಟಗಳನ್ನು ನೆನಪಿಸಿಕೊಂಡು ಮುದ್ದಾದ ಒಂದಷ್ಟು ಫೋಟೊಗಳನ್ನು ಹಂಚಿಕೊಂಡಿದ್ದು, ಸದ್ಯ ಈ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸೌಂಡ್ ಮಾಡುತ್ತಿವೆ.
Replaying memories
ಸಾನ್ವಿ ಇನ್ನೂ ಪುಟ್ಟ ಹುಡುಗಿಯಾಗಿರುವಾಗ ಅಪ್ಪ ಕಿಚ್ಚ ಸುದೀಪ್ ಜೊತೆಗೆ ಸೆಲ್ಫಿ ತೆಗೆದುಕೊಂಡಿರುವ, ಇಬ್ಬರು ಫನ್ನಿ ಫೇಸ್ ಮಾಡಿರುವ, ಅಪ್ಪ-ಅಮ್ಮನ ಜೊತೆಗಿನ ಮುದ್ದಾದ ಫ್ಯಾಮಿಲಿ ಫೋಟೊ, ನೀರಿನ ಗುಳ್ಳೆ ಜೊತೆ ಆಡುತ್ತಿರುವ ಫೋಟೊ ಹಂಚಿಕೊಂಡು Replaying memories ಎಂದು ಕ್ಯಾಪ್ಶನ್ ಕೊಟ್ಟಿದ್ದಾರೆ.
ವೈರಲ್ ಆಗ್ತಿದೆ ಫೋಟೊಗಳು
ಇದೀಗ ಸಾನ್ವಿಯ ಮುದ್ದಾದ ಬಾಲ್ಯದ ಫೋಟೊಗಳು ಸೋಶಿಯಲ್ ಮಿಡಿಯಾದಲ್ಲಿ ಸದ್ದು ಮಾಡುತ್ತಿವೆ. ಕಿಚ್ಚ ಸುದೀಪ್ ಅಭಿಮಾನಿಗಳು, ತಮ್ಮ ಫೇವರಿಟ್ ನಟ ಅಪ್ಪನಾಗಿ ಮಗಳ ಜೊತೆ ಯಾವ ರೀತಿ ಬಾಂಧವ್ಯ ಹೊಂದಿದ್ದರು ಅನ್ನೋದನ್ನು ನೋಡಿ ಸಂಭ್ರಮಿಸುತ್ತಿದ್ದಾರೆ.
ಗಾಯಕಿಯಾಗಿರುವ ಸಾನ್ವಿ
ಸಾನ್ವಿ ಸುದೀಪ್ ಅವರು ನಟನೆಗೆ ಬರಲಿದ್ದಾರೆ ಎನ್ನಲಾಗಿತ್ತು, ನಟನೆಯ ಒಂದಷ್ಟು ತುಣುಕುಗಳು ಸಹ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು. ಆದರೆ ಸಾನ್ವಿ ಗಾಯಕಿಯಾಗಿ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಈಗಾಗಲೇ ತಮಿಳು ಸೇರಿ ಕನ್ನಡದ ಹಲವು ಸಿನಿಮಾಗಳಿಗೆ ಸಾನ್ವಿ ಹಾಡು ಹಾಡಿದ್ದಾರೆ.
ಮಸ್ತ್ ಮಲೈಕಾ ಸೂಪರ್ ಹಿಟ್
ಕಿಚ್ಚ ಸುದೀಪ್ ಅಭಿನಯದ ಮಾರ್ಕ್ ಸಿನಿಮಾದ ನಿಶ್ವಿಕಾ ನಾಯ್ಡು ಹೆಜ್ಜೆ ಹಾಕಿರುವ ಮಸ್ತ್ ಮಲೈಕಾ ಹಾಡು ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಈ ಡ್ಯಾನ್ಸ್ ಆಂಥಮ್ ನ್ನು 50 ಮಿಲಿಯನ್ ಜನ ವೀಕ್ಷಿಸುವ ಮೂಲಕ ದಾಖಲೆ ನಿರ್ಮಾಣವಾಗಿತ್ತು. ಅಷ್ಟೇ ಅಲ್ಲ ಈ ಹಾಡಿಗಾಗಿ ಸಾನ್ವಿ ಸುದೀಪ್ ಗೆ ಈ ಬಾರಿಗೆ ಚಂದನವನ ಕ್ರಿಟಿಕ್ಸ್ ಅವಾರ್ಡ್ ಕೂಡ ಲಭ್ಯವಾಗಿತ್ತು.
ಸಾನ್ವಿ ಹಾಡಿರುವ ಹಾಡುಗಳು
ಸಾನ್ವಿ ಸುದೀಪ್ ಮಸ್ತ್ ಮಲಿಕಾ ಹಾಡು ಮಾತ್ರವಲ್ಲ, ಇನ್ನಷ್ಟೇ ಬಿಡುಗಡೆಯಾಗಲಿರುವ ಮ್ಯಾಂಗೋ ಪಚ್ಚ ಸಿನಿಮಾದ ಅರಗಿಣಿ ಹಾಡು, ಜಿಮ್ಮಿ ಸಿನಿಮಾದ ಹಾಡು, ತೆಲುಗಿನಲ್ಲಿ ನಾಣಿ ಅಭಿನಯದ ಹಿಟ್ 3 ಸಿನಿಮಾದ ಹಾಡನ್ನೂ ಕೂಡ ಸಾನ್ವಿ ಸುದೀಪ್ ಹಾಡಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

