- Home
- Entertainment
- Sandalwood
- ‘ಸು ಫ್ರಮ್ ಸೋ’ ರವಿಯಣ್ಣನಿಗೆ ನಾಯಕಿಯಾದ ಸೋನಾಲ್: ‘ಶ್ರೀರಾಮಚಂದ್ರ’ ಕುತೂಹಲವೇ ಬೇರೆ!
‘ಸು ಫ್ರಮ್ ಸೋ’ ರವಿಯಣ್ಣನಿಗೆ ನಾಯಕಿಯಾದ ಸೋನಾಲ್: ‘ಶ್ರೀರಾಮಚಂದ್ರ’ ಕುತೂಹಲವೇ ಬೇರೆ!
‘ಸು ಫ್ರಮ್ ಸೋ’ ಚಿತ್ರದ ರವಿಯಣ್ಣ ಪಾತ್ರದ ಮೂಲಕ ಜನಪ್ರಿಯತೆ ಗಳಿಸಿರುವ ಶನೀಲ್ ಗೌತಮ್ ನಾಯಕನಾಗಿ ನಟಿಸುತ್ತಿರುವ ‘ಶ್ರೀರಾಮಚಂದ್ರ’ ಕನ್ನಡ ಸಿನಿಮಾಗೆ ನಟಿ ಸೋನಾಲ್ ಮಾಂತೆರೋ ಸೇರ್ಪಡೆಯಾಗಿದ್ದಾರೆ.

ಸೋನಾಲ್ ಎಂಟ್ರಿ
‘ಸು ಫ್ರಮ್ ಸೋ’ ಚಿತ್ರದ ಮೂಲಕ ರವಿಯಣ್ಣನಾಗಿ ಗಮನ ಸೆಳೆದಿದ್ದ ಶನೀಲ್ ಗೌತಮ್ ಈಗ ನಾಯಕನಾಗಿ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದಾರೆ. ಅವರ ಅಭಿನಯದ ‘ಶ್ರೀರಾಮಚಂದ್ರ’ ಸಿನಿಮಾಗೆ ಇದೀಗ ನಟಿ ಸೋನಾಲ್ ಮಾಂತೆರೋ ಎಂಟ್ರಿ ಕೊಟ್ಟಿದ್ದಾರೆ. ಈಗಾಗಲೇ ಸೋನಾಲ್ ಅವರ ಪಾತ್ರದ ಚಿತ್ರೀಕರಣವೂ ಪೂರ್ಣಗೊಂಡಿದ್ದು, ಚಿತ್ರದಲ್ಲಿ ಅವರು ಯಾವ ರೀತಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಕುತೂಹಲ ಸಿನಿಪ್ರಿಯರಲ್ಲಿ ಮೂಡಿದೆ. ಆದರೆ, ಸದ್ಯಕ್ಕೆ ಚಿತ್ರತಂಡ ಅವರ ಪಾತ್ರದ ಗುಟ್ಟನ್ನು ಬಿಟ್ಟುಕೊಟ್ಟಿಲ್ಲ.
ಕುಟುಂಬದ ಸುತ್ತ ನಡೆಯುವ ಘಟನೆಗಳು
ಚಂದ್ರಮೋಹನ್ ನಿರ್ದೇಶನದ ಈ ಚಿತ್ರಕ್ಕೆ ಬಿ.ಕೆ. ಗಂಗಾಧರ್ ಬಂಡವಾಳ ಹೂಡಿದ್ದು, ಉದಯ್ ಕೆ. ಮೆಹ್ತಾ ಕಥೆ ಬರೆದಿದ್ದಾರೆ. ಹೆಸರೇ ಸೂಚಿಸುವಂತೆ ಕೇವಲ ಪ್ರೇಮಕಥೆ ಅಥವಾ ಆ್ಯಕ್ಷನ್ಗೆ ಸೀಮಿತವಾಗದೆ, ಕುಟುಂಬದ ಸುತ್ತ ನಡೆಯುವ ಮಜವಾದ ಘಟನೆಗಳು, ಸಂಬಂಧಗಳ ತಾಕಲಾಟ ಮತ್ತು ಭಾವನೆಗಳ ಬೆಸುಗೆಗೆ ಚಿತ್ರದಲ್ಲಿ ಹೆಚ್ಚಿನ ಆದ್ಯತೆ ನೀಡಲಾಗಿದೆ.
ಹೊಟ್ಟೆ ಹುಣ್ಣಾಗಿಸುವ ಹಾಸ್ಯ
ಅಣ್ಣ-ತಂಗಿಯರ ನಡುವಿನ ಸಣ್ಣಪುಟ್ಟ ಜಗಳಗಳು, ಭಿನ್ನಾಭಿಪ್ರಾಯಗಳು, ಕೌಟುಂಬಿಕ ಸಂಘರ್ಷಗಳು, ಭಾವನಾತ್ಮಕ ಸನ್ನಿವೇಶಗಳ ಜೊತೆಗೆ ಹೊಟ್ಟೆ ಹುಣ್ಣಾಗಿಸುವ ಹಾಸ್ಯವೂ ಚಿತ್ರದಲ್ಲಿರಲಿದೆಯಂತೆ. ಹೀಗಾಗಿ ‘ಶ್ರೀರಾಮಚಂದ್ರ’ ಅಪ್ಪಟ ಫ್ಯಾಮಿಲಿ ಎಂಟರ್ಟೈನರ್ ಆಗಿ ಮೂಡಿಬರುವ ನಿರೀಕ್ಷೆಯಿದೆ.
ಸೋನಾಲ್ ಪಾತ್ರವೇನು?
ಚಿತ್ರದಲ್ಲಿ ಪ್ರವೀಣ್, ಪ್ರಕಾಶ್ ತುಮ್ಮಿನಾಡು, ದೀಪಕ್ ರೈ ಪಣಾಜೆ ಸೇರಿದಂತೆ ಹಲವು ಕಲಾವಿದರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ‘ಸು ಫ್ರಮ್ ಸೋ’ ಮೂಲಕ ಪ್ರೇಕ್ಷಕರ ಮನಗೆದ್ದ ರವಿಯಣ್ಣನನ್ನು ಈ ಬಾರಿ ನಾಯಕನಾಗಿ ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ. ಅದರಲ್ಲೂ ಸೋನಾಲ್ ಮಾಂತೆರೋ ಅವರ ಪಾತ್ರದ ಬಗ್ಗೆ ಚಿತ್ರತಂಡ ಯಾವಾಗ ಸುಳಿವು ನೀಡಲಿದೆ ಎಂಬುದೇ ಈಗಿನ ಕುತೂಹಲ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.















