'ಗಂಡ ಎನ್ನೋ ವಸ್ತು ಇದ್ಯಲ್ಲಾ...' ಶುಭಾ ಪೂಂಜಾಗೆ ನಟಿ ಸೋನಲ್ ಮೊಂಥೆರೋ ಅತ್ತೆ ಕಿವಿ ಮಾತೇನು
ನಟಿ ಶುಭಾ ಪೂಂಜಾ ಮತ್ತು ಸುಮಂತ್ ಮಹಾಬಲ ದಂಪತಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಇದರ ನಡುವೆಯೇ, ಮಾಲತಿ ಸುಧೀರ್ ಅವರು 'ಗಂಡ ಎನ್ನೋ ವಸ್ತು' ಎಂದು ಹೇಳಿರುವ ಹಳೆಯ ವಿಡಿಯೋವೊಂದು ವೈರಲ್ ಆಗಿ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಗೆ ಕಾರಣವಾಗಿದೆ.

ಶುಭಾ ಪೂಂಜಾ ಡಿವೋರ್ಸ್ ಅರ್ಜಿ?
ಸ್ಯಾಂಡಲ್‌ವುಡ್‌ನ ಕ್ಯೂಟ್ ಕಪಲ್ ಅಂತಲೇ ಗುರುತಿಸಿಕೊಂಡಿದ್ದ ನಟಿ ಶುಭ ಪೂಂಜಾ ಮತ್ತು ಸುಮಂತ್ ಮಹಾಬಲ ಜೋಡಿ ಡಿವೋರ್ಸ್ ಪಡೆಯುತ್ತಿದ್ದಾರೆ ಎನ್ನುವ ಸುದ್ದಿ ನಿನ್ನೆಯಿಂದ ಹರಿದಾಡುತ್ತಿದ್ದು, ಇದರ ಬಗ್ಗೆ ಇನ್ನಷ್ಟೇ ಅಧಿಕೃತ ಮಾಹಿತಿ ಹೊರಬರಬೇಕಿದೆ.
ಶುಭಾ ಪೂಂಜಾರದ್ದು ಲವ್ ಮ್ಯಾರೇಜ್
ನಟಿ ಶುಭಾ ಮತ್ತು ಉದ್ಯಮಿ ಸುಮಂತ್ ಮಹಾಬಲ ಅವರದ್ದು ಲವ್ ಮ್ಯಾರೇಜ್. ಇದಾಗಲೇ ಒಟ್ಟಿಗೇ ಹಲವು ಬಾರಿ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ಹಲವು ಪ್ರದೇಶಗಳಿಗೆ ಸುತ್ತಾಡಿ ಬಂದಿದ್ದಾರೆ. ಆದರೆ ಈಗ ಏಕಾಏಕಿ ಏನಾಯ್ತು ಎನ್ನುವುದು ಅಭಿಮಾನಿಗಳಿಗೆ ತಿಳಿಯುತ್ತಿಲ್ಲ. ಆದರೆ ಡಿವೋರ್ಸ್ಗೆ ಜೋಡಿ ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದೆ ಎನ್ನುವ ಸುದ್ದಿ ಮಾತ್ರ ಹರಿದಾಡುತ್ತಿದ್ದು, ಇದು ಸುಳ್ಳಾಗಲಿ ಎನ್ನುತ್ತಿದ್ದಾರೆ ಅಭಿಮಾನಿಗಳು.
ಸೀರೆ ಅಂಗಡಿಗೆ ಮಾಲತಿ ಸುಧೀರ್- ಪೂಜಾ
ಇದರ ನಡುವೆಯೇ ಶುಭಾ ಪೂಂಜಾ (Shubha Poonja) ಅವರ ಹಳೆಯ ವಿಡಿಯೋಗಳೆಲ್ಲಾ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿವೆ. ಸೀರೆಯಂಗಡಿಯೊಂದಕ್ಕೆ ನಟಿ ಸೋನಲ್ ಮೊಂಥೆರೋ ಅತ್ತೆ ಅರ್ಥಾತ್ ನಿರ್ದೇಶಕ ತರುಣ್ ಸುಧೀರ್ ಅವರ ಅಮ್ಮ ಮಾಲತಿ ಸುಧೀರ್ ಭೇಟಿ ಕೊಟ್ಟಾಗಿನ ವಿಡಿಯೋ ಒಂದು ವೈರಲ್ ಆಗುತ್ತಿದೆ.
ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ
ಇದರಲ್ಲಿ ಹೆಂಗಸರೇ ಸೀರೆ ಖರೀದಿ ಮಾಡುವ ಬದಲು ಗಂಡ ಸೀರೆ ತಂದುಕೊಟ್ಟರೆ ಚೆನ್ನಾಗಿರುತ್ತೆ ಎನ್ನುವ ಮಾತನಾಡಿದ್ದಾರೆ ಮಾಲತಿ ಸುಧೀರ್. ಆ ಸಮಯದಲ್ಲಿ ಅವರು ಗಂಡನನ್ನು ವಸ್ತು ಎಂದು ಹೇಳಿರುವುದು ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಯಾಗುತ್ತಿದೆ.
ಶುಭಾ ಪೂಂಜಾಗೆ ಕಿವಿಮಾತು
ಅಷ್ಟಕ್ಕೂ ಸೀರೆಯನ್ನು ನಾವೇ ತೆಗೆದುಕೊಂಡರೆ ಚೆನ್ನ ಎಂದು ಶುಭಾ ಪೂಂಜಾ ಹೇಳಿದ್ರು. ಆಗ ಮಾಲತಿ ಸುಧೀರ್ ಅವರು, ಗಂಡ ಎನ್ನೋ ವಸ್ತು ಸೀರೆ ತಂದುಕೊಟ್ಟರೆ ಅದು ತುಂಬಾ ಖುಷಿಯಾಗಿರುತ್ತದೆ. ಎಲ್ಲಾ ಹೆಂಡ್ತಿಯರೂ ತಮ್ಮ ಗಂಡ ನನಗೆ ಸೀರೆ ತಂದುಕೊಟ್ಟ ಎಂದು ನಾಲ್ಕೈದು ಜನರಿಗೆ ತೋರಿಸಿ ಖುಷಿ ಪಡ್ತಾರೆ. ಆದ್ದರಿಂದ ಗಂಡ ಎನ್ನೋ ವಸ್ತುನೇ ಸೀರೆ ಗಿಫ್ಟ್ ಕೊಟ್ಟರೆ ಚೆನ್ನ ಎಂದಿದ್ದಾರೆ.
ಗಂಡ ಎನ್ನೋನು ವಸ್ತುನಾ?
ಹಾಗಿದ್ದರೆ ಗಂಡ ಎನ್ನೋನು ವಸ್ತುನಾ ಎಂದು ಹಲವರು ಕಮೆಂಟ್ನಲ್ಲಿ ಪ್ರಶ್ನೆ ಮಾಡುತ್ತಿದ್ದಾರೆ. ಗಂಡನ ಪ್ರೀತಿಯ ಬಗ್ಗೆ ಮಾಲತಿ ಸುಧೀರ್ ಮಾತನಾಡಿದರೂ, ವಸ್ತು ಎಂದು ಹೇಳಿರುವುದು ಹಲವರ ಅಸಮಾಧಾನಕ್ಕೆ ಗುರಿಯಾಗಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

