- Home
- Entertainment
- ಸಾನ್ವಿ ಸುದೀಪ್ ಬಾಡಿಗಾರ್ಡ್ ಮೇಲೆ ನೆಟ್ಟಿಗರ ಕಣ್ಣು; ಯಾರೀ ವಿದೇಶಿಗ? ರಾಮ್ ಚರಣ್ ಹಾದಿಯಲ್ಲಿ ಕಿಚ್ಚನ ಪುತ್ರಿ
ಸಾನ್ವಿ ಸುದೀಪ್ ಬಾಡಿಗಾರ್ಡ್ ಮೇಲೆ ನೆಟ್ಟಿಗರ ಕಣ್ಣು; ಯಾರೀ ವಿದೇಶಿಗ? ರಾಮ್ ಚರಣ್ ಹಾದಿಯಲ್ಲಿ ಕಿಚ್ಚನ ಪುತ್ರಿ
ಗಾಯಕಿಯಾಗಿ ಗುರುತಿಸಿಕೊಂಡಿರುವ ಕಿಚ್ಚ ಸುದೀಪ್ ಪುತ್ರಿ ಸಾನ್ವಿ ಸುದೀಪ್, ಇದೀಗ ವಿದೇಶಿ ಅಂಗರಕ್ಷಕರೊಬ್ಬರ ಜೊತೆ ಕಾಣಿಸಿಕೊಂಡು ಸುದ್ದಿಯಾಗಿದ್ದಾರೆ. ಈ ಹಿಂದೆ ಸುದೀಪ್ ಜೊತೆಗೂ ಕಾಣಿಸಿಕೊಂಡಿದ್ದ ಈ ಬಾಡಿಗಾರ್ಡ್ ಯಾರು ಮತ್ತು ಸ್ವದೇಶಿ ಬದಲು ವಿದೇಶಿಗರನ್ನು ನೇಮಿಸಿಕೊಂಡಿದ್ದೇಕೆ ಎಂಬ ಚರ್ಚೆ ಶುರುವಾಗಿದೆ.

ರಾಮ್ ಚರಣ್ಗೆ ವಿದೇಶಿ ಬಾಡಿಗಾರ್ಡ್
ಟಾಲಿವುಡ್ ಸೂರಪ್ ಸ್ಟಾರ್ ರಾಮ್ ಚರಣ್ ಇತ್ತೀಚೆಗೆ ಉನ್ನತ ಮಟ್ಟದ ವಿದೇಶಿ ಭದ್ರತಾ ಸಿಬ್ಬಂದಿಯನ್ನು ನೇಮಿಸಿಕೊಳ್ಳುವ ಮೂಲಕ ಸಕತ್ ಸದ್ದು ಮಾಡಿದ್ದರು. ಅವರು ಆಗಾಗ್ಗೆ ಇಬ್ಬರು ಪ್ರಮುಖ ಅಂತರರಾಷ್ಟ್ರೀಯ ಅಂಗರಕ್ಷಕರೊಂದಿಗೆ ವಿವಿಧೆಡೆಗಳಿಗೆ ಪ್ರವಾಸ ಮಾಡುತ್ತಿದ್ದಾರೆ. ಸ್ವದೇಶಿಗರು ಎಷ್ಟೊಂದು ಬಾಡಿಗಾರ್ಡ್ಸ್ ಇರುವಾಗ, ವಿದೇಶಿಗರನ್ನು ನೇಮಿಸಿಕೊಳ್ಳೋದು ಏಕೆ ಎನ್ನುವ ಪ್ರಶ್ನೆ ಅವರಿಗೆ ಎದುರಾಗುತ್ತಲೇ ಇರುತ್ತದೆ. ಇದೀಗ ಅವರದ್ದೇ ಹಾದಿ ಹಿಡಿದಿದ್ದಾರೆ ಸುದೀಪ್ ಪುತ್ರಿ ಸಾನ್ವಿ ಸುದೀಪ್ (Sanvi Sudeep)
ಸಾನ್ವಿಗೆ ವಿದೇಶಿ ಬಾಡಿಗಾರ್ಡ್
ಗಾಯಕಿಯಾಗಿ ಫೇಮಸ್ ಆಗಿರೋ ಸಾನ್ವಿ ಸುದೀಪ್, ಅವರು ವಿದೇಶಿ ಬಾಡಿಗಾರ್ಡ್ ಜೊತೆ ಕಾಣಿಸಿಕೊಂಡಿದ್ದಾರೆ. ಈಮೊದಲು ಈ ಬಾಡಿಗಾರ್ಡ್ ಕಿಚ್ಚ ಸುದೀಪ್ ಜೊತೆಯೂ ಕಾಣಿಸಿಕೊಂಡಿದ್ದರು. ಅಳಿಯ ಸಂಚಿತ್ ಅವರ ಹೊಸ ಮ್ಯಾಂಗೋ ಪಚ್ಚ ಸಿನಿಮಾ ನೋಡಲು ಸುದೀಪ್ ಅವರು ಬಂದಾಗ, ಅವರ ಜೊತೆ ವಿದೇಶಿ ಬಾಡಿಗಾರ್ಡ್ ಒಬ್ಬರು ಕಾಣಿಸಿಕೊಂಡಿದ್ದರು.
ಬಾಡಿಗಾರ್ಡ್ ಹವಾ
ಬಳಿಕ ಸಾನ್ವಿಯ ಜೊತೆ ಈಗ ಕಾಣಿಸಿಕೊಂಡಿರುವ ಕಾರಣ, ಬಾಡಿಗಾರ್ಡ್ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಹವಾ ಸೃಷ್ಟಿಸುತ್ತಿದ್ದಾರೆ. 6.4 ಅಡಿ ಎತ್ತರದ ಈ ಗಟ್ಟಿಯಾಳು ಯಾರು, ಎಲ್ಲಿಯವರು ಎನ್ನುವ ಬಗ್ಗೆ ಸಾಕಷ್ಟು ಮಂದಿ ಕುತೂಹಲದಿಂದ ಪ್ರಶ್ನಿಸುತ್ತಿದ್ದಾರೆ.
ಸುದೀಪ್ ಪರ್ಸನಲ್ ಅಂಗರಕ್ಷಕ
ಅಷ್ಟಕ್ಕೂ ಸುದೀಪ್ ಅವರ ಜೊತೆ ಹಲವು ವರ್ಷಗಳಿಂದ ಇರುವ ಪರ್ಸನಲ್ ಬಾಡಿಗಾರ್ಡ್ ಇಲ್ಲಿಯವರೇ ಆಗಿರುವ ಕಿರಣ್. ಇವರು ಸುದೀಪ್ ಅವರ ಬಾಡಿಗಾರ್ಡ್ ಆಗಿ ಎಲ್ಲಾ ಕಡೆ ಕಾಣಿಸುತ್ತಾರೆ. ಇವರ ಜೊತೆ ಈ ವಿದೇಶಿ ಬಾಡಿಗಾರ್ಡ್ ಕಾಣಿಸಿಕೊಂಡಿದ್ದು, ಅಭಿಮಾನಿಗಳಿಂದ ಪ್ರಶ್ನೆಗಳ ಸುರಿಮಳೆಯಾಗುತ್ತಿದೆ. ಹಾಗಿದ್ದರೆ ಈ ವಿದೇಶಿಗ ಸಾನ್ವಿ ಅವರಿಗಾ ಎನ್ನುವ ಪ್ರಶ್ನೆ ಮೂಡಿಬಂದಿದೆ.
ಪೋಲ್ಯಾಂಡ್ನವರು
ಅಂದಹಾಗೆ ಈ ಬಾಡಿಗಾರ್ಡ್ ಹೆಸರು ಸೆರ್ಗಿಯಸ್ ವೊಲಾಕ್ (Sergiusz Wolak). ಇವರ ಮೂಲ ಪೋಲ್ಯಾಂಡ್. ಇವರ ವೃತ್ತಿ ಸ್ಟಂಟ್ ಆರ್ಟಿಸ್ಟ್, ಇವರು ಪರ್ಸನಲ್ ಟ್ರೈನರ್, ಫಿಟ್‌ನೆಸ್ ಚಾಂಪಿಯನ್ ಆಗಿಯೂ ಗುರುತಿಸಿಕೊಂಡಿದ್ದಾರೆ.
ಸ್ವದೇಶಿ ಬಾಡಿಗಾರ್ಡ್
ಸುದೀಪ್ ಅವರು ಕನ್ನಡದ ಪರವಾಗಿ ಮಾತನಾಡುವ ಕಾರಣ, ವಿದೇಶಿಗರ ಬದಲು ಸ್ವದೇಶಿಗರಿಗೇ ಯಾರಿಗಾದರೂ ಉದ್ಯೋಗ ಕೊಡಬಹುದಿತ್ತು. ನಮ್ಮಲ್ಲಿಯೂ ಸಾಕಷ್ಟು ಮಂದಿ ನುರಿತ ಬಾಡಿಗಾರ್ಡ್ ಇದ್ದಾರೆ ಎನ್ನುವ ಮಾತುಗಳೂ ಕೇಳಿಬರುತ್ತಿವೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

