ಹದಿಹರೆಯದವರಲ್ಲಿ ಪ್ರೀತಿಯ ಕಿಚ್ಚು ಹಚ್ಚಿ 30 ಕೋಟಿ ದೋಚಿದ 2007ರ ಕನ್ನಡ ಸಿನಿಮಾ
ಹದಿಹರೆಯದ ಪ್ರೀತಿ, ಚಂಚಲ ಮನಸ್ಸುಗಳು, ಮತ್ತು ದುರಂತ ಪ್ರೇಮಕಥೆಯೊಂದು 2007ರಲ್ಲಿ ತೆರೆಕಂಡ ಸಿನಿಮಾ ಮೂಲಕ ಬಿಚ್ಚಿಟ್ಟಿದೆ. ಚಿತ್ರದ ಕಥೆ ಕೇವಲ ಸಿನಿಮಾವಾಗಿ ಉಳಿಯದೆ, ಒಂದು ಅಲೆಯನ್ನೇ ಸೃಷ್ಟಿಸಿತು.

ಕೆಲವೊಂದು ಸಿನಿಮಾಗಳು ಕಡಿಮೆ ಸಮಯದಲ್ಲಿಯೇ ಪ್ರೇಕ್ಷಕರ ಮೇಲೆ ಪರಿಣಾಮ ಬೀರುತ್ತವೆ. ನಾವು ಸಹ ಸಿನಿಮಾದಲ್ಲಿರುವಂತೆ ಆಗಬೇಕೆಂಬ ಹುಚ್ಚು ಕನಸುಗಳು ಮೊಳಕೆಯೊಡುತ್ತವೆ. ಆದ್ರೆ ಸಿನಿಮಾ ಮತ್ತು ರಿಯಲ್ ಲೈಫ್ ಬೇರೆ ಎಂದು ತಿಳಿದುಕೊಳ್ಳುವಷ್ಟರಲ್ಲಿ ಭಾಗಶಃ ಹಾಳಾಗಿರುತ್ತದೆ. 2007ರಲ್ಲಿ ಬಿಡುಗಡೆಯಾದ ಕನ್ನಡದ ಸಿನಿಮಾ, ಹದಿಹರೆಯದರಲ್ಲಿ ಪ್ರೀತಿ ಕಿಚ್ಚು ಹಚ್ಚಿತ್ತು. ಚಿತ್ರದ ಹಾಡುಗಳು ಆ ಪ್ರೀತಿಗೆ ನೀರುಣಿಸಿದ್ದವು.
ಆಕೆ 8ನೇ ಕ್ಲಾಸ್ ಹುಡುಗಿ, ಆತ ಅನಕ್ಷರಸ್ಥ, ಜಗತ್ತಿನ ತಿಳುವಳಿಕೆ ಇಲ್ಲದೇ ಪೆದ್ದ. ತಾನಾಯ್ತು ತನ್ನ ಕೆಲಸ ಆಯ್ತು ಅಂತಿದ್ದ ಪೆದ್ದ ಮೆಕ್ಯಾನಿಕ್ ಮಾದೇಶನಿಗೆ, 8ನೇ ಕ್ಲಾಸ್ ಹುಡುಗಿಯ ಐಶ್ವರ್ಯಾಳ ಪರಿಚಯವಾಗುತ್ತಿದೆ. ಆಕೆಯದ್ದು ಚಂಚಲ ಬುದ್ದಿ, ಈತ ಪೆದ್ದ. ಇವರಿಬ್ಬರ ದುರಂತ ಪ್ರೇಮಕಥೆಯೇ ಈ ಸಿನಿಮಾ. ಈಗಾಗಲೇ ನಿಮಗೆ ನಾವು ಹೇಳುತ್ತಿರುವ ಸಿನಿಮಾ ಯಾವುದು ಅಂತ ಖಂಡಿತ ಗೊತ್ತಿರುತ್ತದೆ.
ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ಅಮೂಲ್ಯ ನಟನೆಯ 'ಚೆಲುವಿನ ಚಿತ್ತಾರ' 2007ರಲ್ಲಿ ಬಿಡುಗಡೆಯಾಗಿತ್ತು. ಮುಂಗಾರು ಮಳೆಯ ಯಶಸ್ಸಿನ ಮಳೆಯಲ್ಲಿ ನೆನೆದಿದ್ದ ಗಣೇಶ್‌ಗೆ ಚೆಲುವಿನ ಚಿತ್ತಾರ ಸ್ಟಾರ್ ಪಟ್ಟವನ್ನೀಡಿತ್ತು. ಇನ್ನ ಬಾಲ ಕಲಾವಿದೆಯಾಗಿದ್ದ ಅಮೂಲ್ಯ, ಬೆಳಗಾಗುವಷ್ಟರಲ್ಲಿ ಚಂದನವನದ ಟಾಪ್ ನಾಯಕಿಯಲ್ಲಿ ಒಬ್ಬರಾದರು.
ಕಲಾ ಸಾಮ್ರಾಟ್ ಎಸ್. ನಾರಾಯಣ್ ನಿರ್ದೇಶನದಲ್ಲಿ ಮೂಡಿ ಬಂದ ಸಿನಿಮಾ ಯುವ ಸಮುದಾಯದಲ್ಲಿ ಪ್ರೀತಿಯ ಚಿತ್ತಾರವನ್ನು ಅರಳಿಸಿತ್ತು. ವರದಿಗಳ ಪ್ರಕಾರ, ಕಡಿಮೆ ಬಜೆಟ್‌ನಲ್ಲಿ ನಿರ್ಮಾಣಗೊಂಡಿದ್ದ ಮಾದೇಶ-ಐಶ್ವರ್ಯಾಳ ಪ್ರೇಮಕಥೆ ಬಾಕ್ಸ್ ಆಫಿಸ್‌ನಲ್ಲಿ 30 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿತ್ತು.
ಚಿತ್ರದ ಡೈಲಾಗ್‌ಗಳು ಮತ್ತು ಗಣೇಶ್-ಅಮೂಲ್ಯ ನಟನೆಯ ನೋಡುಗರನ್ನು ಥಿಯೇಟರ್‌ನತ್ತು ಕರೆದುಕೊಂಡು ಬಂದಿತ್ತು. ಹೊಸತನದ ಪ್ರೇಮಕಥೆಯನ್ನು ನೀಡಿ ಎಸ್. ನಾರಾಯಣ್ ಗೆದ್ದಿದ್ದರು. ಚೆಲುವಿನ ಚಿತ್ತಾರ ಬಿಡುಗಡೆಯಾದ ಬಳಿಕ ಕಾಲೇಜ್ ಯುವತಿಯರು ಸ್ಕೂಟಿ ಓಡಿಸೋದು ಟ್ರೆಂಡ್ ಆಗಿತ್ತು.
ಚೆಲುವಿನ ಚಿತ್ತಾರ 1952ರ ತಮಿಳಿನ ಕಾದಲ್ ಸಿನಿಮಾ ರಿಮೇಕ್ ಆಗಿತ್ತು. ಆದ್ರೆ ಕನ್ನಡದ ನೇಟಿವಿಟಿಗೆ ಅಚ್ಚುಕಟ್ಟಾಗಿ ತರಲು ಎಸ್.ನಾರಾಯಣ್ ಗೆದ್ದಿದ್ದರು. ಚಿತ್ರದ ಹಾಡುಗಳು ಒಂದಕ್ಕಿಂತ ಒಂದು ಸೂಪರ್ ಹಿಟ್ ಆಗಿವೆ.
ಚಿತ್ರಮಂದಿರಗಳಲ್ಲಿ 175 ದಿನಕ್ಕೂ ಅಧಿಕ ದಿನ ಚೆಲುವಿನ ಚಿತ್ತಾರ ಪ್ರದರ್ಶನವಾಗಿತ್ತು. ಈ ಸಿನಿಮಾದ ಮೂಲಕ ಅಮೂಲ್ಯ ಎಂಬ ಪ್ರತಿಭಾನ್ವಿತ ನಟಿ ಚಂದನವನಕ್ಕೆ ಪರಿಚಯವಾದರು.