- Home
- Entertainment
- Sandalwood
- B Saroja Devi Movies: ‘ಅಭಿನಯ ಶಾರದೆ’ ಸರೋಜಾದೇವಿ ನಟಿಸಿರುವ ನೀವು ನೋಡಲೇಬೇಕಾದ ಅತ್ಯಧ್ಬುತ ಸಿನಿಮಾಗಳು
B Saroja Devi Movies: ‘ಅಭಿನಯ ಶಾರದೆ’ ಸರೋಜಾದೇವಿ ನಟಿಸಿರುವ ನೀವು ನೋಡಲೇಬೇಕಾದ ಅತ್ಯಧ್ಬುತ ಸಿನಿಮಾಗಳು
ಚಂದನವನದಲ್ಲಿ ಅಭಿನಯ ಶಾರದೇ ಎಂದೇ ಖ್ಯಾತಿ ಪಡೆದ ನಟಿ ಬಿ ಸರೋಜಾದೇವಿ ಅಭಿನಯದ ಬ್ಲಾಕ್ ಬಸ್ಟರ್ ಸಿನಿಮಾಗಳ ಲಿಸ್ಟ್ ಇಲ್ಲಿದೆ.

ನಟಿ ಬಿ. ಸರೋಜದೇವಿ 1955ರಲ್ಲಿ ಮಹಾಕವಿ ಕಾಳಿದಾಸ ಸಿನಿಮಾ ಮೂಲಕ ನಟನೆಗೆ ಎಂಟ್ರಿ ಕೊಟ್ಟು, ಬಳಿಕ ಕನ್ನಡ, ತಮಿಳು, ತೆಲುಗು ಹಾಗೂ ಹಿಂದಿ ಸೇರಿ ಸುಮಾರು 200 ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇಲ್ಲಿದೆ ನೋಡಿ, ನೀವು ನೋಡಲೇಬೇಕಾದ ಸರೋಜಾದೇವಿ ಅಭಿನಾಯದ ಬ್ಲಾಕ್ ಬಸ್ಟರ್ ಸಿನಿಮಾಗಳ ಲಿಸ್ಟ್.
ಭಾಗ್ಯವಂತರು
ಭಾಗ್ಯವಂತರು ಡಾ. ರಾಜ್ (Dr. Rajakumar) ಮತ್ತು ಸರೋಜಾದೇವಿ ಜೋಡಿಯ ಸೂಪರ್ ಹಿಟ್ ಸಿನಿಮಾ. ಈ ಸಿನಿಮಾದ ಕಥೆ ಹಾಡುಗಳು ಒಂದು ಕಾಲದಲ್ಲಿ ಭಾರಿ ಸದ್ದು ಮಾಡಿತ್ತು. ಭಾಗ್ಯವಂತರು ನಾವು ಭಾಗ್ಯವಂತರು, ನಿನ್ನ ನನ್ನ ಮನವು ಸೇರಿದೆ, ನಿನ್ನ ಸ್ನೇಹಕೆ ನಾ ಸೋತು ಹೋದೆನು ಇವೆಲ್ಲವೂ ಭಾಗ್ಯವಂತರು ಸಿನಿಮಾದ ಹಾಡುಗಳು.
ಬಬ್ರುವಾಹನ
ಬಬ್ರುವಾಹನ (Babruvahana) ಸಿನಿಮಾದಲ್ಲೂ ಡಾ. ರಾಜ್ ಗೆ ಜೋಡಿಯಾಗಿ ಪವರ್ ಫುಲ್ ಪಾತ್ರದಲ್ಲಿ ನಟಿಸುವ ಮೂಲಕ ಜನಮನ ಗೆದ್ದಿದ್ದರು. ಈ ಸಿನಿಮಾದಲ್ಲಿ ಬಬ್ರುವಾಹನನ ತಾಯಿ ಚಿತ್ರಾಂಗಧೆಯಾಗಿ ನಟಿಸಿದ್ದರು.
ನ್ಯಾಯವೇ ದೇವರು
ಇದು ಡಾ. ರಾಜ್ ಸರೋಜಾ ದೇವಿ ಜೋಡಿಯ ಹಿಟ್ ಚಲನ ಚಿತ್ರ (Superhit film). ಆಕಾಶವೇ ಬೀಳಲಿ ಮೇಲೆ ನಾನೆಂದು ನಿಮ್ಮವನೆ ಇದೇ ಸಿನಿಮಾದ ಹಾಡು.
ಮಲ್ಲಮ್ಮನ ಪವಾಡ
ಈ ಚಿತ್ರದಲ್ಲಿ ಸರೋಜದೇವಿ ಮಲ್ಲಮ್ಮನ ಪಾತ್ರದಲ್ಲಿ ನಟಿಸಿದ್ದಾರೆ. ಡಾ. ರಾಜ್ ನಾಯಕನಾಗಿ ನಟಿಸಿದ್ದು. ಮಲತಾಯಿಯ ದುಷ್ಟತನದ ಮಧ್ಯೆ ಬೆಳೆಯುವ ನಾಯಕನಿಗೆ ಮಲ್ಲಮ್ಮ ವಿದ್ಯಾಭ್ಯಾಸ ನೀಡಿ, ಹೇಗೆ ಉತ್ತಮ ಮನುಷ್ಯನನ್ನಾಗಿ ಮಾಡುತ್ತಾಳೆ ಅನ್ನೋದು ಕಥೆ.
ಅಮರಶಿಲ್ಪಿ ಜಕಣಾಚಾರಿ
ಇದು ಕನ್ನಡದ ಸೂಪರ್ ಹಿಟ್ ಚಿತ್ರ. ಈ ಸಿನಿಮಾದಲ್ಲಿ ಕಲ್ಯಾಣ್ ಕುಮಾರ್ ಅಮರಶಿಲ್ಪಿ ಜಕಣಾಚಾರಿಯಾಗಿ (Amarashilpi Jakanachari) ನಟಿಸಿದ್ದರು. ಸರೋಜಾ ದೇವಿ ಮಂಜರಿಯ ಪಾತ್ರದಲ್ಲಿ ಮಿಂಚಿದ್ದರು.
ವಿಜಯನಗರದ ವೀರಪುತ್ರ
ಆರ್ . ನಾಗೇಂದ್ರ ರಾವ್ ನಿರ್ದೇಶಿಸಿ, ನಿರ್ಮಾಣ ಮಾಡಿರುವ ವಿಜಯನಗರದ ವೀರಪುತ್ರ ಸಿನಿಮಾದಲ್ಲಿ ಸರೋಜ ದೇವಿಯವರು ಸುದರ್ಶನ್, ಕಲ್ಯಾಣ್ ಕುಮಾರ್, ಉದಯ್ ಕುಮಾರ್ ಜೊತೆ ನಟಿಸಿದ್ದರು.
ಕಿತ್ತೂರು ಚೆನ್ನಮ್ಮ
ಬಿ. ಆರ್ ಪಂತುಲು ನಿರ್ದೇಶನದಲ್ಲಿ ಕಿತ್ತೂರು ಚೆನ್ನಮ್ಮ (Kittooru Chennamma) ಸಿನಿಮಾದಲ್ಲಿ ನಟಿ ಸರೋಜ ದೇವಿ ಕಿತ್ತೂರಿನ ರಾಣಿ ಚೆನ್ನಮ್ಮನಾಗಿ ಅದ್ಭುತವಾಗಿ ನಟಿಸಿದ್ದರು. ಈ ಚಿತ್ರದಲ್ಲಿ ರಾಜಕುಮಾರ್ ಅವರು ಕೂಡ ರಾಜ ಮಲ್ಲಸರ್ಜನಾಗಿ ನಟಿಸಿದ್ದರು.
ಭೂಕೈಲಾಸ
ಕೆ. ಶಂಕರ್ ನಿರ್ದೇಶನದ ಈ ಭೂ ಕೈಲಾಸ ಸಿನಿಮಾದಲ್ಲಿ ಡಾ. ರಾಜಕುಮಾರ್ ರಾವಣನಾಗಿ ನಟಿಸಿದ್ದರು. ಈ ಸೂಪರ್ ಹಿಟ್ ಸಿನಿಮಾದಲ್ಲಿ ಸರೋಜಾ ದೇವಿ ಪಾರ್ವತಿಯಾಗಿ ನಟಿಸಿದ್ದರು.
ಅಣ್ಣ ತಂಗಿ
ಡಾ. ರಾಜಕುಮಾರ್ ಜೊತೆ ಸರೋಜಾದೇವಿ ನಟಿಸಿದ್ದರು. ಈ ಸಿನಿಮಾ ನಿರ್ದೇಶಕರು ಸಹ ಕೆ. ಆರ್ . ಸೀತಾರಾಮ ಶಾಸ್ತ್ರಿ. ಇದು ಅಣ್ಣ ತಂಗಿಯ ಬಾಂಧವ್ಯದ ಕಥೆ ಸಾರುವ ಸಿನಿಮಾವಾಗಿತ್ತು.
ಮಹಾಕವಿ ಕಾಳಿದಾಸ
ಕೆ. ಆರ್ . ಸೀತಾರಾಮ ಶಾಸ್ತ್ರಿ ನಿರ್ದೇಶನದ ಮಹಾಕವಿ ಕಾಳಿದಾಸ (Mahakavi Kalidasa) ಸಿನಿಮಾ 1955ರಲ್ಲಿ ಬಿಡುಗಡೆಯಾಗಿತ್ತು. ಹೊನ್ನಪ್ಪ ಭಾಗವತರ್ ಕಾಳಿದಾಸನಾಗಿ ನಟಿಸಿದರೆ, ಮೊದಲ ಸಿನಿಮಾದಲ್ಲಿ ಸರೋಜಾದೇವಿ ವಿದ್ಯಾಧರೆಯಾಗಿ ನಟಿಸಿದ್ದರು.