MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
Bengaluru Weather Today
Kasturi Rangan Report
Karnataka Kodava Language
Wife Appreciation Day
Milk Price Hike Karnataka
Amit Shah Karnataka Visit
Karnataka Govt Social Pension
US Tariff on India
Mysuru Dasara 2026
Abhishek Sharma
Bengaluru Cantonment Railway Station
Kalyana Karnataka Development
Vande Mataram Row
Karnataka SSLC Mid-term Exam
Mangaluru Dharmasthala Railway Line
Shivamogga Mega Job Fair
Bengaluru Traffic
Mangaluru Cabinet Meeting
  • Home
  • Entertainment
  • TV Talk
  • 'ದೇವಿ'ಯಾಗಿ ಬೆಳ್ಳಿತೆರೆಗೆ ಕರ್ಣ ಸೀರಿಯಲ್​ ನಿಧಿ ಎಂಟ್ರಿ: ಸ್ಯಾಂಡಲ್​ವುಡ್​ನಲ್ಲಿ ನಟಿ ಭವ್ಯಾ ಗೌಡ ಅದೃಷ್ಟಪರೀಕ್ಷೆ

'ದೇವಿ'ಯಾಗಿ ಬೆಳ್ಳಿತೆರೆಗೆ ಕರ್ಣ ಸೀರಿಯಲ್​ ನಿಧಿ ಎಂಟ್ರಿ: ಸ್ಯಾಂಡಲ್​ವುಡ್​ನಲ್ಲಿ ನಟಿ ಭವ್ಯಾ ಗೌಡ ಅದೃಷ್ಟಪರೀಕ್ಷೆ

'ಕರ್ಣ' ಸೀರಿಯಲ್ ಮತ್ತು ಬಿಗ್‌ಬಾಸ್ ಖ್ಯಾತಿಯ ಭವ್ಯಾ ಗೌಡ ಇದೀಗ 'ದೇವಿ' ಎಂಬ ಚಿತ್ರದ ಮೂಲಕ ಬೆಳ್ಳಿತೆರೆಗೆ ಮರಳುತ್ತಿದ್ದಾರೆ. ಈ ಹಿಂದೆ 'ಲ್ಯಾಂಡ್‌ಲಾರ್ಡ್' ಚಿತ್ರದಲ್ಲಿ ನಟಿಸಿದ್ದ ಅವರು, ಈ ಹೊಸ ಸಿನಿಮಾದಲ್ಲಿ ಯುವ ರೈತ ಚೇತನ್‌ ಗೌಡ ಅವರಿಗೆ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ.

1 Min read
Author : Suchethana D
Published : Jul 09 2026, 04:20 PM IST
Share this Photo Gallery
  • FB
  • TW
  • Linkdin
  • Whatsapp
16
ಸ್ಯಾಂಡಲ್​ವುಡ್​ನಲ್ಲಿ ಭವಿಷ್ಯ
Image Credit : Instagram

ಸ್ಯಾಂಡಲ್​ವುಡ್​ನಲ್ಲಿ ಭವಿಷ್ಯ

ಕರ್ಣ ಸೀರಿಯಲ್​ (Karna Serial) ನಿಧಿಯಾಗಿ ಎಲ್ಲರ ಮೆಚ್ಚುಗೆ ಗಳಿಸ್ತಿರೋ ಬಿಗ್​ಬಾಸ್​ ಖ್ಯಾತಿಯ ಭವ್ಯಾ ಗೌಡ ಇದಾಗಲೇ ಫ್ಲವರ್​ ಬಿಜಿನೆಸ್​ ಶುರು ಮಾಡಿದ್ದಾರೆ. ಇದರ ನಡುವೆಯೇ ಇದೀಗ ಸ್ಯಾಂಡಲ್​ವುಡ್​ನಲ್ಲಿ ಮತ್ತೊಮ್ಮೆ ಭವಿಷ್ಯ ರೂಪಿಸಿಕೊಳ್ಳಲು ಸಜ್ಜಾಗಿದ್ದು, ಅಭಿಮಾನಿಗಳಿಗೆ ಭರ್ಜರಿ ಗುಡ್​ ನ್ಯೂಸ್ ಕೊಟ್ಟಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ದೇವಿ ಚಿತ್ರ
Image Credit : Instagram

ದೇವಿ ಚಿತ್ರ

ಭವ್ಯಾ ಗೌಡ ಅವರು ದೇವಿ ಎನ್ನುವ ಚಿತ್ರದ ಮೂಲಕ ಬೆಳ್ಳಿತೆರೆಗೆ ಎಂಟ್ರಿ ಕೊಡಲಿದ್ದಾರೆ. ಯುವ ರೈತ ಚೇತನ್‌ ಗೌಡ ಅವರು ನಾಯಕನಾಗಿ ಕಾಣಿಸಿಕೊಳ್ತಿದ್ದರೆ. ಭವ್ಯಾ ಗೌಡ ಹಾಗೂ ಚೇತನ್‌ ಗೌಡ ಅವರ ಈ ಹೊಸ ಜೋಡಿ ಸ್ಯಾಂಡಲ್‌ವುಡ್‌ನಲ್ಲಿ ಹೊಸ ನಿರೀಕ್ಷೆ ಮೂಡಿಸಿದೆ.

Related Articles

Related image1
ಆ ಹುಡ್ಗಿ ಮನೆ ಬಿಟ್ಟು ನಮ್​ ಮನೆಗೆ ಬಂದು ಬಿಟ್ಟಳು: ಪ್ಲೀಸ್​ ​ ಹೀಗೆಲ್ಲಾ ಮಾಡ್ಬೇಡಿ; ಕಂಪ್ಲೇಂಟ್​ ಆಗತ್ತೆ- ಭವ್ಯಾ ಗೌಡ ಮನವಿ
Related image2
2ನೇ ಬಾರಿ ಸದ್ದಿಲ್ಲದೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ 'ಕಲರ್ಸ್'​ ಸ್ವಾತಿ: ಖ್ಯಾತ ನಿರ್ದೇಶಕನ ಜೊತೆ ಮದುವೆ
36
ಲ್ಯಾಂಡ್​ಲಾರ್ಡ್​ ಚಿತ್ರದಲ್ಲಿ ನಟನೆ
Image Credit : Instagram

ಲ್ಯಾಂಡ್​ಲಾರ್ಡ್​ ಚಿತ್ರದಲ್ಲಿ ನಟನೆ

ಹಾಗೆಂದು ಭವ್ಯಾ ಗೌಡ ಅವರಿಗೆ ದೇವಿ ಮೊದಲ ಚಿತ್ರವಲ್ಲ. ಈ ಹಿಂದೆ ಲ್ಯಾಂಡ್​ಲಾರ್ಡ್ ಅನ್ನೋದು ಸಿನಿಮಾದಲ್ಲಿ ನಟಿಸಿದ್ದರು. ಇದು ಅವರ ಮೊದಲ ಸಿನಿಮಾ. ‘ಲ್ಯಾಂಡ್​ಲಾರ್ಡ್’ ಸಿನಿಮಾಗೆ ದುನಿಯಾ ವಿಜಯ್ ಅವರೇ ನಿರ್ದೇಶನ ಮಾಡಿದ್ದರು. ಇದೀಗ ದೇವಿ ಮೂಲಕ ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ ನಟಿ.

46
ಬಿಗ್​ಬಾಸ್​ ಜನಪ್ರಿಯತೆ
Image Credit : Asianet News

ಬಿಗ್​ಬಾಸ್​ ಜನಪ್ರಿಯತೆ

ಭವ್ಯಾ ಗೌಡ, ಸೀರಿಯಲ್ ಮೂಲಕವೇ ಮನೆ ಮಗಳಾದವರು. ಕಲರ್ಸ್ ಕನ್ನಡದಲ್ಲಿ ಪ್ರಸಾರ ಆಗ್ತಿದ್ದ ಗೀತಾ ಸೀರಿಯಲ್ ಮೂಲಕ ಕಿರುತೆರೆಗೆ ಪದಾರ್ಪಣೆ ಮಾಡಿದವರು ಭವ್ಯಾ ಗೌಡ. ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಆಗಿದ್ದ ಭವ್ಯಾ ಗೌಡ, ಗೀತಾ ಸೀರಿಯಲ್ ನಲ್ಲಿ ಅವಕಾಶ ಗಿಟ್ಟಿಸಿಕೊಂಡಿದ್ದರು.

56
ಅವಕಾಶಗಳ ಆಗರ
Image Credit : Instagram

ಅವಕಾಶಗಳ ಆಗರ

ಧನುಷ್ ಜೊತೆ ನಟಿಸಿ ಸೈ ಎನಿಸಿಕೊಂಡಿದ್ದ ಭವ್ಯಾ ಗೌಡ ಲಕ್ ಬದಲಿಸಿದ್ದು ಕನ್ನಡ ಬಿಗ್ ಬಾಸ್ ರಿಯಾಲಿಟಿ ಶೋ. ಸೀರಿಯಲ್ ಮುಗಿತಿದ್ದಂತೆ ಬಿಗ್ ಬಾಸ್ ಕನ್ನಡ 11ರ ರಿಯಾಲಿಟಿ ಶೋನಲ್ಲಿ ಪಾಲ್ಗೊಳ್ಳುವ ಅವಕಾಶ ಭವ್ಯಾ ಗೌಡಾಗೆ ಸಿಕ್ಕಿತ್ತು.

66
ಕರ್ಣ ಸೀರಿಯಲ್​ ಮೂಲಕ ಜನ ಮನ್ನಣೆ
Image Credit : our own

ಕರ್ಣ ಸೀರಿಯಲ್​ ಮೂಲಕ ಜನ ಮನ್ನಣೆ

ಸಿಕ್ಕ ಅವಕಾಶವನ್ನು ಅದ್ಭುತವಾಗಿ ನಿಭಾಯಿಸಿದ್ದ ಭವ್ಯಾ ಗೌಡ, ಟಾಪ್ ನಾಲ್ಕನೇ ಸ್ಥಾನ ಗಿಟ್ಟಿಸಿಕೊಳ್ಳಲು ಯಶಸರ್ವಿಯಾಗಿದ್ರು. ಸ್ವಲ್ಪದರಲ್ಲಿಯೇ ಟ್ರೋಫಿ ಕೈತಪ್ಪಿದ್ರೂ ಫ್ಯಾನ್ ಫಾಲೋವರ್ಸ್ ಸಂಖ್ಯೆ ಸಿಕ್ಕಾಪಟ್ಟೆ ಏರಿಕೆ ಆಗಿತ್ತು. ತ್ರಿವಿಕ್ರಮ್ ಹಾಗೂ ಭವ್ಯಾ ಜೋಡಿಯನ್ನು ಮೆಚ್ಚಿಕೊಂಡಿದ್ದ ಬಿಗ್ ಬಾಸ್ ವೀಕ್ಷಕರು ನಂತ್ರ ಭವ್ಯಾ ಯಾವ ಸೀರಿಯಲ್ ನಲ್ಲಿ ಕಾಣಿಸಿಕೊಳ್ತಾರೆ ಎನ್ನುವ ಕುತೂಹಲದಲ್ಲಿದ್ದರು. ಇದೀಗ ಕರ್ಣ ಸೀರಿಯಲ್​ ಮೂಲಕ ಎಲ್ಲರ ಮನಸ್ಸನ್ನು ಕದ್ದು ಬೀಗುತ್ತಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಕರ್ಣ ಧಾರಾವಾಹಿ
ಮನರಂಜನಾ ಸುದ್ದಿ
ಜೀ ಕನ್ನಡ
ಭವ್ಯಾ ಗೌಡ
ಸ್ಯಾಂಡಲ್ವುಡ್ ಫಿಲ್ಮ್
 

Latest Videos
Recommended Stories
Recommended image1
Bigg Boss ವೇದಿಕೆ ಮೇಲೆಯೇ ಸಲ್ಮಾನ್​ ಖಾನ್​ಗೆ ಹೃದಯಾಘಾತ? ವಿಡಿಯೋ ನೋಡಿ ಫ್ಯಾನ್ಸ್ ಶಾಕ್​​- ಅಸಲಿಗೆ ಆಗಿದ್ದೇನು
Recommended image2
ಮಧು ಗೌಡನ ಅನ್‌ಫಾಲೋ ಮಾಡ್ತಿರೋ ಫ್ಯಾನ್ಸ್: '9 ವರ್ಷದ ಪರಿಶ್ರಮ ಹಾಳು ಮಾಡ್ಕೋಬೇಡಿ' ಎಂದಿದ್ದೇಕೆ?
Recommended image3
Bigg Boss ವೇದಿಕೆ ಮೇಲೆ ಷರ್ಟ್​ ಬಿಚ್ಚಿ, ಮೇಕಪ್​ ಅಳಸಿದ ಸಲ್ಮಾನ್​ ಖಾನ್! ನಟ ಈ ಪರಿ ಗರಂ ಆಗಿದ್ಯಾಕೆ​
Related Stories
Recommended image1
ಆ ಹುಡ್ಗಿ ಮನೆ ಬಿಟ್ಟು ನಮ್​ ಮನೆಗೆ ಬಂದು ಬಿಟ್ಟಳು: ಪ್ಲೀಸ್​ ​ ಹೀಗೆಲ್ಲಾ ಮಾಡ್ಬೇಡಿ; ಕಂಪ್ಲೇಂಟ್​ ಆಗತ್ತೆ- ಭವ್ಯಾ ಗೌಡ ಮನವಿ
Recommended image2
2ನೇ ಬಾರಿ ಸದ್ದಿಲ್ಲದೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ 'ಕಲರ್ಸ್'​ ಸ್ವಾತಿ: ಖ್ಯಾತ ನಿರ್ದೇಶಕನ ಜೊತೆ ಮದುವೆ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved