- Home
- Entertainment
- Sandalwood
- ಯಶ್ ಭೇಟಿಗೆ 1,500 ಕಿ.ಮೀ ಸೈಕಲ್ ಸವಾರಿ! ಒಡಿಶಾದಿಂದ ಬೆಂಗಳೂರಿಗೆ ಹೊರಟ 'ರಾಕಿಂಗ್ ಸ್ಟಾರ್' ಪ್ಯಾನ್ ಇಂಡಿಯಾ ಅಭಿಮಾನಿ
ಯಶ್ ಭೇಟಿಗೆ 1,500 ಕಿ.ಮೀ ಸೈಕಲ್ ಸವಾರಿ! ಒಡಿಶಾದಿಂದ ಬೆಂಗಳೂರಿಗೆ ಹೊರಟ 'ರಾಕಿಂಗ್ ಸ್ಟಾರ್' ಪ್ಯಾನ್ ಇಂಡಿಯಾ ಅಭಿಮಾನಿ
'ಟಾಕ್ಸಿಕ್' ನಟ ಯಶ್ (Rockin StarYash) ಅವರನ್ನು ನೋಡಲು ಒಡಿಶಾದ ಬೆಹರಾಂಪುರದಿಂದ (Odisha Beharampur) ಬೆಂಗಳೂರಿಗೆ (Bengaluru) 1,500 ಕಿ.ಮೀ. ಸೈಕಲ್ ಸವಾರಿ ಹೊರಟ ಅಭಿಮಾನಿ ದೀಪಕ್ ಕುಮಾರ್. ಗಾಳಿ, ಮಳೆಯ ನಡುವೆಯೂ ಈ ಸಾಹಸಕ್ಕೆ ಕೈಹಾಕಿದ್ದು, ಸುಮಾರು 10ರಿಂದ 12 ದಿನ ಸಮಯ ಬೇಕಾಗುತ್ತದೆ.

ಕನ್ನಡದ ಸ್ಟಾರ್ ನಟ ರಾಕಿಂಗ್ ಸ್ಟಾರ್ ಯಶ್ ಇದೀಗ ಪ್ಯಾನ್ ಇಂಡಿಯಾ ಮತ್ತು ಪ್ಯಾನ್ ವರ್ಲ್ಡ್ ಶಿಖರವನ್ನು ತಲುಪಿದ್ದಾರೆ. ಅವರ ಅಭಿಮಾನಿಗಳು ಕೂಡ ವಿಶ್ವ ಮಟ್ಟದಲ್ಲಿಯೇ ಹುಟ್ಟಿಕೊಂಡಿದ್ದಾರೆ. ಇಲ್ಲೊಬ್ಬ ಪ್ಯಾನ್ ಇಂಡಿಯಾ ಅಭಿಮಾನಿ ದೀಪಕ್ ಕುಮಾರ್ ಎನ್ನುವವರು ಯಶ್ ಅವರನ್ನು ನೋಡಬೇಕೆಂದು 1,500 ಕಿ.ಮೀ. ಸೈಕಲ್ ಸವಾರಿ ಮಾಡಲು ಮುಂದಾಗಿದ್ದಾನೆ.
ಹೌದು, ಕನ್ನಡ ಸಿನಿಮಾಗಳನ್ನು ಮಾಡುತ್ತಿದ್ದ ಯಶ್ ಕೆಜಿಎಫ್ ಸಿನಿಮಾದ ಮೂಲಕ ಪ್ಯಾನ್ ಇಂಡಿಯಾ ಹೀರೋ ಆಗಿದ್ದರು. ಇದೀಗ ಅವರು ಟಾಕ್ಸಿಕ್ ಸಿನಿಮಾದ ಮೂಲಕ ಪ್ಯಾನ್ ವರ್ಲ್ಸ್ ಹಂತವನ್ನ ತಲುಪಿದ್ದಾರೆ. ಜೊತೆಗೆ, ರಾಮಾಯಣದಲ್ಲಿ ಯಶ್ ಅವರ ರಾವಣನ ಲುಕ್ ಬಾಲಿವುಡ್ ಮಂದಿಯೂ ಕೂಡ ಬಾಯಿ ಮೇಲೆ ಬೆರಳಿಡುವಂತೆ ಮಾಡಿದೆ.
ಹೀಗಿರುವಾಗ ಇಲ್ಲೊಬ್ಬ ಒಡಿಶಾ ರಾಜ್ಯದ ಯಶ್ ಅಭಿಮಾನಿ (ಪ್ಯಾನ್ ಇಂಡಿಯಾ ಅಭಿಮಾನಿ) ತಮ್ಮ ಸ್ವಂತ ಊರಿನಿಂದ ಬೆಂಗಳೂರಿನವರೆಗೆ ಯಶ್ ಅವರನ್ನು ನೋಡಲು ಬರುತ್ತಿದ್ದಾನೆ. ಬರೋಬ್ಬರಿ 1,500 ಕಿ.ಮೀ. ದೂರದಿಂದ ಸೈಕಲ್ ಸವಾರಿ ಮಾಡಿಕೊಂಡು ನೋಡಬೇಕೆಂಬ ಹಂಬಲವಿಟ್ಟುಕೊಂಡು ಬರುತ್ತಿರುವುದು ಅವರ ಅಭಿಮಾನಕ್ಕೆ ಸಾಕ್ಷಿಯಾಗಿದೆ.
ಇನ್ನು ಯಶ್ ಅವರು ಸಿನಿಮಾದ ಬಿಡುಗಡೆ ಕಾರ್ಯಗಳ ನಿಮಿತ್ತ ತುಂಬಾ ಬ್ಯೂಸಿಯಾಗಿದ್ದು, ಹೆಂಡತಿ-ಮಕ್ಕಳಿಗೂ ಸಮಯ ಕೊಡಲಾಗದಷ್ಟು ಸುತ್ತಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಯಶ್ ಅವರನ್ನು ನಾನು ಭೇಟಿ ಮಾಡಲೇಬೇಕೆಂದು ಒಡಿಶಾದಿಂದ ಸೈಕಲ್ ಸವಾರಿ ಹೊರಟ ಅವರ ಅಭಿಮಾನಿಗೆ ಯಶ್ ಕೊಂಚ ಸಮಯ ಬಿಡುವು ಮಾಡಿಕೊಂಡು ಭೇಟಿಯಾಗಲೆಂದು ಹಾರೈಸೋಣ.
ಕಳೆದ ಎರಡು ದಿನಗಳ ಹಿಂದೆ ಒಡಿಶಾದ ದೀಪಕ್ ಕುಮಾರ್ ತಮ್ಮ ಗ್ರಾಮ ಬೆಹರಾಂಪುರದಿಂದ ಹೊರಟಿದ್ದು, ಇಂದು ಆಂಧ್ರ ಪ್ರದೇಶ ರಾಜ್ಯದ ಗಡಿಯನ್ನು ತಲುಪಿದ್ದಾನೆ. ಗಾಳಿ, ಮಳೆ ಹಾಗೂ ಹಲವು ಅಡ್ಡಿ-ಆತಂಕಗಳ ನಡುವೆಯೂ ಮಳೆಗಾಲದಲ್ಲಿ ಸೈಕಲ್ ಸವಾರಿ ಮಾಡಿಕೊಂಡು ಬೆಂಗಳೂರಿಗೆ ಆಗಮಿಸುತ್ತಿದ್ದಾನೆ.
ಒಡಿಶಾದಿಂದ ಬೆಂಗಳೂರಿಗೆ ಬರಲು ಸುಮಾರು 1,500 ಕಿ.ಮೀ ದೂರವಿದೆ. ಪ್ರತಿದಿನ 100ರಿಂದ 150 ಕಿ.ಮೀ.ನಂತೆ ಸೈಕಲ್ ಸವಾರಿ ಮಾಡಿದರೂ 10 ರಿಂದ 15 ದಿನಗಳು ಸಮಯ ತೆಗೆದುಕೊಳ್ಳಲಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

