MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • ಇಂಗ್ಲಿಷ್ ಮಾಧ್ಯಮಕ್ಕೆ ಸಂದರ್ಶನ ಕೊಡುತ್ತ, ಟಾಕ್ಸಿಕ್ ಸಿನಿಮಾ ಸ್ಟೋರಿ ಲೀಕ್ ಮಾಡಿದ ನಟ‌ ಯಶ್

ಇಂಗ್ಲಿಷ್ ಮಾಧ್ಯಮಕ್ಕೆ ಸಂದರ್ಶನ ಕೊಡುತ್ತ, ಟಾಕ್ಸಿಕ್ ಸಿನಿಮಾ ಸ್ಟೋರಿ ಲೀಕ್ ಮಾಡಿದ ನಟ‌ ಯಶ್

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ಸಿನಿಮಾ ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್ ಚಿತ್ರದ ಬಗ್ಗೆ ಅಭಿಮಾನಿಗಳಲ್ಲಿ ಕುತೂಹಲ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.

3 Min read
Author : Sushma Hegde
Published : Aug 02 2026, 01:36 PM IST
Share this Photo Gallery
  • FB
  • TW
  • Linkdin
  • Whatsapp
16
ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್ ಅಪ್ಸ್
Image Credit : Asianet News

ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ಸಿನಿಮಾ ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್ ಚಿತ್ರದ ಬಗ್ಗೆ ಅಭಿಮಾನಿಗಳಲ್ಲಿ ಕುತೂಹಲ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಸಿನಿಮಾ ಯಾವ ರೀತಿಯ ಕಥೆ ಹೊಂದಿದೆ? ಯಶ್ ಪಾತ್ರ ಹೇಗಿರಲಿದೆ? ಚಿತ್ರದಲ್ಲಿ ನಡೆಯುವ ಘಟನೆಗಳ ಹಿನ್ನೆಲೆ ಏನು? ಎಂಬ ಪ್ರಶ್ನೆಗಳಿಗೆ ಇದೀಗ ಒಂದೊಂದೇ ಸುಳಿವು ಸಿಗುತ್ತಿದೆ.ಇಂಗ್ಲಿಷ್ ಮಾಧ್ಯಮಕ್ಕೆ ನೀಡಿದ ಸಂದರ್ಶನವೊಂದರಲ್ಲಿ ಯಶ್ 'ಟಾಕ್ಸಿಕ್' ಚಿತ್ರದ ಕಥೆಯ ಹಿನ್ನೆಲೆಯ ಬಗ್ಗೆ ಹಲವು ಆಸಕ್ತಿದಾಯಕ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ ಎನ್ನಲಾಗಿದ್ದು, ಚಿತ್ರದ ಕಥಾಹಂದರದ ಬಗ್ಗೆ ಅಭಿಮಾನಿಗಳಿಗೆ ಒಂದಷ್ಟು ಕ್ಲೂ ಸಿಕ್ಕಂತಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ಸ್ವಾತಂತ್ರ್ಯ ಬಂದರೂ ಸಂಪೂರ್ಣ ವಿಮುಕ್ತಿ ಸಿಗದ ಕಾಲ
Image Credit : Asianet News

ಸ್ವಾತಂತ್ರ್ಯ ಬಂದರೂ ಸಂಪೂರ್ಣ ವಿಮುಕ್ತಿ ಸಿಗದ ಕಾಲ

1947ರಲ್ಲಿ ಭಾರತಕ್ಕೆ ಬ್ರಿಟಿಷರಿಂದ ಸ್ವಾತಂತ್ರ್ಯ ಸಿಕ್ಕರೂ, ಸುಂದರ ಕರಾವಳಿ ತೀರದ ಗೋವಾ ಮಾತ್ರ 1961ರವರೆಗೂ ಪೋರ್ಚುಗೀಸರ ಆಳ್ವಿಕೆಯಲ್ಲೇ ಇತ್ತು. ಪೋರ್ಚುಗೀಸರು ಮತ್ತು ಭಾರತೀಯರ ಮಿಶ್ರ ಸಂಸ್ಕೃತಿ, ಬಂದರುಗಳ ವ್ಯಾಪಾರ, ಕಳ್ಳಸಾಗಣೆ ಮತ್ತು ಅಧಿಕಾರದ ಆಟ ನಡೆಯುತ್ತಿದ್ದ ಆ ಕಾಲಘಟ್ಟವೇ 'ಟಾಕ್ಸಿಕ್' ಚಿತ್ರದ ಕಥೆಗೆ ಪ್ರಮುಖ ಹಿನ್ನೆಲೆ ಎನ್ನಲಾಗಿದೆ. ಈ ಅವಧಿಯಲ್ಲಿ ಕೇವಲ ವ್ಯಾಪಾರ ಮಾತ್ರ ನಡೆಯುತ್ತಿರಲಿಲ್ಲ. ಅಧಿಕಾರದ ದಾಹ, ಹಣದ ಮೇಲಿನ ಆಸೆ, ಬಂದರುಗಳ ಮೇಲಿನ ಹಿಡಿತ ಮತ್ತು ಗ್ಯಾಂಗ್‌ಸ್ಟರ್‌ಗಳ ಅಟ್ಟಹಾಸವೂ ತಾರಕಕ್ಕೇರಿತ್ತು. ಇಂತಹ ಪ್ರಕ್ಷುಬ್ಧ ಕಾಲಘಟ್ಟವನ್ನು ಹಿನ್ನೆಲೆಯಾಗಿಟ್ಟುಕೊಂಡು ರೂಪುಗೊಂಡಿರುವ 'ಟಾಕ್ಸಿಕ್' ಎಂದು ಇಂಗ್ಲಿಷ್ ಮಾಧ್ಯಮಕ್ಕೆ ನೀಡಿದ ಸಂದರ್ಶನವೊಂದರಲ್ಲಿ ಹೇಳಲಾಗಿದೆ ಒಂದು ವಿಶಿಷ್ಟ ಆಕ್ಷನ್ ಎಂಟರ್‌ಟೈನರ್ ಆಗಿ ಮೂಡಿಬರುತ್ತಿದೆ.

ಟಾಮಿ ಗನ್‌ಗಳ ಘರ್ಜನೆ, ಪವರ್‌ಗಾಗಿ ಮಹಾಯುದ್ಧ

1950-60ರ ದಶಕದ ವಿಂಟೇಜ್ ಕಾಲಘಟ್ಟವನ್ನು ಆಧಾರವಾಗಿಟ್ಟುಕೊಂಡಿರುವ ಈ ಸಿನಿಮಾದಲ್ಲಿ ಕಂಟ್ರಾಬ್ಯಾಂಡ್, ಬಂದರುಗಳ ಮೇಲಿನ ಹಿಡಿತ ಮತ್ತು ಗ್ಯಾಂಗ್‌ಸ್ಟರ್‌ಗಳ ನಡುವಿನ ಸಂಘರ್ಷ ಪ್ರಮುಖ ಪಾತ್ರ ವಹಿಸಲಿದೆ ಎನ್ನಲಾಗಿದೆ. ಟಾಮಿ ಗನ್‌ಗಳ ಧಡಧಡ ಸದ್ದು, ವಿಂಟೇಜ್ ಲುಕ್‌ನ ಆಕ್ಷನ್ ದೃಶ್ಯಗಳು ಹಾಗೂ ಅಧಿಕಾರಕ್ಕಾಗಿ ನಡೆಯುವ ಕಾಳಗ ಚಿತ್ರದ ಪ್ರಮುಖ ಆಕರ್ಷಣೆಗಳಾಗಲಿವೆ. ಹಣ ಮತ್ತು ಅಧಿಕಾರದ ಮೇಲಿನ ಅತಿಯಾದ ಆಸೆಯಿಂದ ಹುಟ್ಟಿಕೊಳ್ಳುವ ಕುತಂತ್ರಗಳು ಕಥೆಯನ್ನು ಮತ್ತಷ್ಟು ರೋಚಕವಾಗಿಸಲಿವೆ.

36
ಬರೀ ಆಕ್ಷನ್ ಅಲ್ಲ, ಭಾವನೆಗಳೂ ಇವೆ
Image Credit : YouTube

ಬರೀ ಆಕ್ಷನ್ ಅಲ್ಲ, ಭಾವನೆಗಳೂ ಇವೆ

ಟಾಕ್ಸಿಕ್ ಕೇವಲ ಗನ್, ಗ್ಯಾಂಗ್‌ಸ್ಟರ್ ಮತ್ತು ರಕ್ತಪಾತದ ಕಥೆಯಲ್ಲ ಎನ್ನಲಾಗಿದೆ. ಚಿತ್ರದೊಳಗೆ ಆಳವಾದ ಮಾನವೀಯ ಸಂಬಂಧಗಳಿಗೂ ಪ್ರಮುಖ ಸ್ಥಾನವಿದೆ. ಪ್ರೇಮಕಥೆ: ಬಂದೂಕುಗಳ ಸದ್ದಿನ ನಡುವೆ ಪ್ರೇಕ್ಷಕರ ಮನಸ್ಸಿಗೆ ಹತ್ತಿರವಾಗುವಂತಹ ಗಾಢವಾದ ಪ್ರೇಮಕಥೆಯೂ ಚಿತ್ರದಲ್ಲಿದೆ. ಅಣ್ಣ-ತಂಗಿಯ ಬಾಂಧವ್ಯ: ಕೌಟುಂಬಿಕ ಭಾವನೆಗಳಿಗೆ ಜೀವ ತುಂಬುವ ಅಣ್ಣ-ತಂಗಿಯ ಸಂಬಂಧ ಕಥೆಯಲ್ಲಿ ಪ್ರಮುಖ ತಿರುವು ನೀಡಲಿದೆ ಎನ್ನಲಾಗಿದೆ. ತಂದೆ-ಮಗನ ಸೇಡು: ಕುಟುಂಬಕ್ಕಾಗಿ ಹಾಗೂ ಹಿಂದಿನ ಸೇಡನ್ನು ತೀರಿಸಿಕೊಳ್ಳಲು ತಂದೆ ಮತ್ತು ಮಗನ ನಡುವೆ ನಡೆಯುವ ಸಂಘರ್ಷವೂ ಚಿತ್ರದ ಪ್ರಮುಖ ಭಾಗವಾಗಲಿದೆ. ಹೀಗಾಗಿ 'ಟಾಕ್ಸಿಕ್'ನಲ್ಲಿ ಆಕ್ಷನ್ ಮಾತ್ರವಲ್ಲದೆ ಪ್ರೀತಿ, ಕುಟುಂಬ, ಸೇಡು ಮತ್ತು ಭಾವನೆಗಳ ಸಂಪೂರ್ಣ ಪ್ಯಾಕೇಜ್ ಇರಲಿದೆ ಎಂಬ ನಿರೀಕ್ಷೆ ಅಭಿಮಾನಿಗಳಲ್ಲಿ ಮೂಡಿದೆ.

46
ಯಶ್ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರಾ
Image Credit : instagram

ಯಶ್ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರಾ

ಚಿತ್ರದ ಬಗ್ಗೆ ಲಭ್ಯವಾಗಿರುವ ಮಾಹಿತಿಯ ಪ್ರಕಾರ, ಯಶ್ ಟಾಕ್ಸಿಕ್ ಸಿನಿಮಾದಲ್ಲಿ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ಅಲ್ಲದೆ, ನಿರ್ದೇಶಕಿ ಗೀತು ಮೋಹನ್‌ದಾಸ್ ಅವರೊಂದಿಗೆ ಯಶ್ ಚಿತ್ರದ ಸಹ-ಚಿತ್ರಕಥೆ ಬರೆಯುವಲ್ಲಿಯೂ ಕೈಜೋಡಿಸಿದ್ದಾರೆ. ಚಿತ್ರದಲ್ಲಿ ಕಿಯಾರಾ ಅಡ್ವಾಣಿ, ನಯನತಾರಾ, ಹುಮಾ ಖುರೇಷಿ, ತಾರಾ ಸುತಾರಿಯಾ ಮತ್ತು ರುಕ್ಮಿಣಿ ವಸಂತ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಟಾಕ್ಸಿಕ್' ಸಿನಿಮಾವನ್ನು ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಏಕಕಾಲದಲ್ಲಿ ಚಿತ್ರೀಕರಿಸಲಾಗಿದೆ. ಹಿಂದಿ, ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ಡಬ್ ಆಗಿ ಬಿಡುಗಡೆಯಾಗುವ ಯೋಜನೆಯೂ ಇದೆ.

56
ಆಗಸ್ಟ್ 8ಕ್ಕೆ ಟಾಕ್ಸಿಕ್ ಟ್ರೈಲರ್
Image Credit : Instagram

ಆಗಸ್ಟ್ 8ಕ್ಕೆ ಟಾಕ್ಸಿಕ್ ಟ್ರೈಲರ್

ಇದೀಗ ಟಾಕ್ಸಿಕ್ ಚಿತ್ರದ ಮತ್ತೊಂದು ಬಹುಮುಖ್ಯ ಅಪ್‌ಡೇಟ್ ಹೊರಬಿದ್ದಿದೆ. ಚಿತ್ರದ ಟ್ರೈಲರ್ ಆಗಸ್ಟ್ 8, 2026ರಂದು ಬಿಡುಗಡೆಯಾಗಲಿದೆ ಎಂದು ನಿರ್ಮಾಣ ಸಂಸ್ಥೆ ಕೆವಿಎನ್ ಪ್ರೊಡಕ್ಷನ್ಸ್ ಅಧಿಕೃತವಾಗಿ ಘೋಷಿಸಿದೆ.

ಟ್ರೈಲರ್ ರಿಲೀಸ್ ಅನೌನ್ಸ್ ಮಾಡಲು ಚಿತ್ರತಂಡ ವಿಶೇಷ ಪೋಸ್ಟರ್ ಕೂಡ ಬಿಡುಗಡೆ ಮಾಡಿದೆ. ಕಪ್ಪು-ಬಿಳುಪು ಶೈಲಿಯಲ್ಲಿ ಮೂಡಿಬಂದಿರುವ ಈ ಪೋಸ್ಟರ್‌ನಲ್ಲಿ ಯಶ್ ಸಖತ್ ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದಾರೆ. ಪೋಸ್ಟರ್ ನೋಡಿದ ಅಭಿಮಾನಿಗಳು ಇದಕ್ಕೆ ಹಾಲಿವುಡ್ ಫೀಲ್ ಇದೆ ಎಂದು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಇದೀಗ ಆಗಸ್ಟ್ 8ರಂದು ಬಿಡುಗಡೆಯಾಗಲಿರುವ ಟ್ರೈಲರ್‌ಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

66
ಆಗಸ್ಟ್ 26ಕ್ಕೆ ಸಿನಿಮಾ ರಿಲೀಸ್
Image Credit : KVN Productions

ಆಗಸ್ಟ್ 26ಕ್ಕೆ ಸಿನಿಮಾ ರಿಲೀಸ್

ತಿಂಗಳುಗಟ್ಟಲೆ ಬಿಡುಗಡೆ ದಿನಾಂಕ ಬದಲಾಗುತ್ತಿದ್ದ 'ಟಾಕ್ಸಿಕ್' ಸಿನಿಮಾ ಇದೀಗ ಆಗಸ್ಟ್ 26, 2026ರಂದು ಬಿಡುಗಡೆಯಾಗಲು ಸಿದ್ಧವಾಗಿದೆ ಎಂದು ಯಶ್ ತಮ್ಮ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ. ಓಣಂ, ಈದ್, ವರಮಹಾಲಕ್ಷ್ಮಿ ಮತ್ತು ರಕ್ಷಾ ಬಂಧನದಂತಹ ಹಬ್ಬಗಳ ರಜಾ ದಿನಗಳನ್ನು ಗಮನದಲ್ಲಿಟ್ಟುಕೊಂಡು ಆಗಸ್ಟ್ 26ರ ಬುಧವಾರದಂದು ಸಿನಿಮಾ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ ಎನ್ನಲಾಗಿದೆ. ಗೀತು ಮೋಹನ್‌ದಾಸ್ ನಿರ್ದೇಶನದ ಈ ಚಿತ್ರವನ್ನು ಕೆವಿಎನ್ ಪ್ರೊಡಕ್ಷನ್ಸ್ ಮತ್ತು ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್ ನಿರ್ಮಿಸುತ್ತಿವೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SH
Sushma Hegde
ಸುವರ್ಣ ನ್ಯೂಸ್ ಸುದ್ದಿ ಮಾಧ್ಯಮದ ಡಿಜಿಟಲ್ ವಿಭಾಗದಲ್ಲಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ದೃಶ್ಯ ಮಾಧ್ಯಮ, ಡಿಜಿಟಲ್‌ ಮಾಧ್ಯಮದಲ್ಲಿ 5 ವರ್ಷ ಕೆಲಸ ಮಾಡಿದ ಅನುಭವವಿದೆ. SDM ಉಜಿರೆಯಲ್ಲಿ ಪತ್ರಿಕೋದ್ಯಮದ ಸ್ನಾತಕೋತ್ತರ ಪದವಿ. ಸುದ್ದಿಲೋಕದಲ್ಲಿ ರಾಜಕೀಯ, ದೇಶ, ಜ್ಯೋತಿಷ್ಯ, ಜೀವನಶೈಲಿ, ವಾಣಿಜ್ಯ, ಕ್ರೈಂ ಸುದ್ದಿಗಳಲ್ಲಿ ಆಸಕ್ತಿ.
ಯಶ್
ಟಾಕ್ಸಿಕ್
ಮನರಂಜನಾ ಸುದ್ದಿ
Latest Videos
Recommended Stories
Recommended image1
ಭಾರೀ ಶಾಕ್.. 50 ಕೋಟಿ ಕಡಿಮೆಗೆ ಸಿನಿಮಾ ಒಪ್ಪಿಕೊಂಡ ಸಲ್ಮಾನ್ ಖಾನ್; ಸಂಭಾವನೆ ಅಷ್ಟೊಂದು ಕಡಿಮೆ ಆಗಿದ್ಯಾಕೆ?
Recommended image2
ಕನ್ನಡದ ಖ್ಯಾತ ನಟಿಗೆ ಸಾಯಿ ಪಲ್ಲವಿಗಿಂತ ಮೊದಲು 'ಸೀತೆ' ಪಾತ್ರದ ಅವಕಾಶ ಬಂದಿತ್ತು! ಆದ್ರೆ ಏಕೆ ಆಯ್ಕೆಯಾಗಿಲ್ಲ?
Recommended image3
ಎಂಥವರನ್ನೂ ಅಳಿಸಿ ಬೇರೆ ಲೋಕಕ್ಕೆ ಕರೆದೊಯ್ಯುವ ಸಿನಿಮಾ; ಒಟಿಟಿಯಲ್ಲೂ ಕಮಾಲ್: ಯಾವ ಸಿನಿಮಾ?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved