MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • Relationship
  • ಇತಿಹಾಸದ ಪುಟ ಸೇರುತ್ತಾ ಭಾರತದ ವೈವಾಹಿಕ ಪದ್ಧತಿ? ಚೀನಾ, ಅಮೆರಿಕದಂತೆ ಮದುವೆ ಇರಲ್ಲ; ಸರ್ವೇಯಿಂದ ಬಯಲು

ಇತಿಹಾಸದ ಪುಟ ಸೇರುತ್ತಾ ಭಾರತದ ವೈವಾಹಿಕ ಪದ್ಧತಿ? ಚೀನಾ, ಅಮೆರಿಕದಂತೆ ಮದುವೆ ಇರಲ್ಲ; ಸರ್ವೇಯಿಂದ ಬಯಲು

Future Of Marriage: ಒಂದು ಕಡೆ ಮದುವೆ ಆಗೋಕೆ ಹೆಣ್ಣು ಸಿಗ್ತಿಲ್ಲ. ಮತ್ತೊಂದು ಕಡೆ ಮದುವೆಯಾದವ್ರಲ್ಲಿ ಒಂದಲ್ಲ ಒಂದು ಸಮಸ್ಯೆಗಳು. ಗಂಡ, ಹೆಂಡತಿಯನ್ನು ಕೊಲೆ ಮಾಡಿಸೋದು, ಹೆಂಡತಿ ಗಂಡನನ್ನು ಕೊಲೆ ಮಾಡಿಸೋದು ಈಗ ಸಾಮಾನ್ಯ ಆಗಿದೆ. ಆದರೆ ಭಾರತದಲ್ಲಿ 2047ರ ವೇಳೆಗೆ ಮದುವೆ ವ್ಯವಸ್ಥೆ ಇರೋದಿಲ್ವಂತೆ.

2 Min read
Author : Padmashree Bhat
Published : Jun 30 2026, 05:23 PM IST
Share this Photo Gallery
  • FB
  • TW
  • Linkdin
  • Whatsapp
16
ಮದುವೆ ಬಗ್ಗೆ ಟೆನ್ಶನ್‌ ಬೇಡ
Image Credit : Asianet News

ಮದುವೆ ಬಗ್ಗೆ ಟೆನ್ಶನ್‌ ಬೇಡ

ರಾಜ್‌ ಶಮಾನಿ ಅವರು ಲೇಖಕ ಸಂದೀಪ್‌ ದಾಸ್‌ ಜೊತೆ ಸಂದರ್ಶನ ಮಾಡಿದ್ದು, ಆ ವೇಳೆ ಮದುವೆ ವ್ಯವಸ್ಥೆ ಇರೋದಿಲ್ಲ ಎಂದು ಹೇಳಿದ್ದಾರೆ. ಸಂದೀಪ್‌ ದಾಸ್‌ ಅವರು Founder & Managing Director of Building Leaders for Tomorrow ಫೌಂಡರ್‌ ಕೂಡ ಹೌದು.

ಹೆಣ್ಣು ಮಗು ಹುಟ್ಟಿದಕೂಡಲೇ ಮದುವೆ ಯೋಚನೆ ಬರುತ್ತದೆ. ಇನ್ನೊಂದು ಕಡೆ ಗಂಡು ಮಕ್ಕಳಿಗೆ ಶಿಕ್ಷಣ ಸಿಕ್ಕಿ, ಕೆಲಸ ಸಿಕ್ಕಿದಂತೆಯೇ ಮದುವೆ ಬಗ್ಗೆ ಯೋಚನೆ ಮಾಡಲಾಗುತ್ತದೆ. ಆದರೆ ಮುಂಬರುವ ವರ್ಷಗಳಲ್ಲಿ ಮದುವೆ ವಿಷಯ ಬರೋದಿಲ್ಲ. ಇಂದು ಭಾರತದಲ್ಲಿ 95% ವಯಸ್ಕರು ಮದುವೆಯಾಗಿದ್ದರೆ, ಆ ಸಂಖ್ಯೆ ಮುಂದೆ ಕೇವಲ 10 ರಿಂದ 15% ಕ್ಕೆ ಕುಸಿಯುತ್ತದೆ ಎನ್ನಲಾಗಿದೆ. ಅಮೆರಿಕ ಮತ್ತು ಚೀನಾದಂತೆ ಇಲ್ಲೂ ಆಗುವುದು ಎನ್ನಲಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ಅಮೆರಿಕ, ಚೀನಾದಲ್ಲಿ ಪರಿಸ್ಥಿತಿ ಹೇಗಿದೆ?
Image Credit : Getty

ಅಮೆರಿಕ, ಚೀನಾದಲ್ಲಿ ಪರಿಸ್ಥಿತಿ ಹೇಗಿದೆ?

ಅಮೆರಿಕದ ಪರಿಸ್ಥಿತಿ

2019 ರಲ್ಲಿ 'ಮೋರ್ಗನ್ ಸ್ಟಾನ್ಲಿ' ಮಾಡಿದ ಸಂಶೋಧನೆಯ ಪ್ರಕಾರ, 2030ರ ವೇಳೆಗೆ ಅಮೆರಿಕದ 45% ಮಹಿಳೆಯರು ಮದುವೆ ಆಗದೆ ಹಾಗೆ ಇರುತ್ತಾರೆ. ಹುಡುಗಿಯರು ಮದುವೆಯಾಗಿಲ್ಲ ಅಂದ್ರೆ, ಸಹಜವಾಗಿ ಹುಡುಗರೂ ಮದುವೆಯಾಗುವುದಿಲ್ಲ.

ಚೀನಾದ ಪರಿಸ್ಥಿತಿ

ಚೀನಾದಲ್ಲಿ ಮದುವೆ ಮಾರುಕಟ್ಟೆ ಡೌನ್‌ ಆಗಿದೆ. ಇತ್ತೀಚಿನ ವರದಿಯಂತೆ, ಚೀನಾದಲ್ಲಿ ಮದುವೆಗಳ ಸಂಖ್ಯೆ 1980ರ ನಂತರ ಕಡಿಮೆ ಆಗುತ್ತದೆ. ಚೀನಾದಲ್ಲಿ ವಾರ್ಷಿಕವಾಗಿ 28 ಲಕ್ಷ ಡಿವೋರ್ಸ್‌ ಆಗುತ್ತಿದೆ. ಡಿವೋರ್ಸ್‌ ಆಗಬಾರದು ಎಂದು 12 ರಿಂದ 18 ತಿಂಗಳ 'ಕೂಲಿಂಗ್ ಆಫ್ ಪೀರಿಯಡ್' ಕೊಡುವುದು. ಮದುವೆ ಆಗುವಾಗ ಎಷ್ಟು ಹಣ ತಂದಿದ್ದರೋ ಅಷ್ಟೇ ಹಣ ಕೊಡಬೇಕು. ಅದನ್ನು ಬಿಟ್ಟು ಬೇರೆ ಜೀವನಾಂಶ ಇಲ್ಲಿ ಇಲ್ಲ.

Related Articles

Related image1
ಶಿವರಾಜ್​ ಕುಮಾರ್​ ಜೊತೆ ಮದುವೆ ಆಸೆ: ಫೇಕ್​ ನ್ಯೂಸ್​ ಹಾಕಿದವನ ಚಳಿ ಬಿಡಿಸಿದ ನಟಿ ಸುಧಾರಾಣಿ
Related image2
Breakup: 'ಮಸ್ತ್ ಮಸ್ತ್ ಹುಡುಗಿ' ರವೀನಾ-ಅಕ್ಷಯ್ ಎಂಗೇಜ್‌ಮೆಂಟ್ ಆಗಿದ್ದರೂ ಮದುವೆ ಮುರಿದುಬಿದ್ದಿದ್ದು ಯಾಕೆ?
36
ಮದುವೆಗಳು ಮುರಿಯಲು ಪ್ರಮುಖ 5 ಕಾರಣಗಳು
Image Credit : Facebook

ಮದುವೆಗಳು ಮುರಿಯಲು ಪ್ರಮುಖ 5 ಕಾರಣಗಳು

ಸ್ವಾತಂತ್ರ್ಯ (Independence)

ಪಿತೃಪ್ರಧಾನ ವ್ಯವಸ್ಥೆ (Patriarchy)

ಕೃತಕ ಬುದ್ಧಿಮತ್ತೆ (AI)

ಸೋಷಿಯಲ್ ಮೀಡಿಯಾ (Social Media)

ಭ್ರಮೆ (Delusion)

ಭಾರತದಲ್ಲಿ 30 ವರ್ಷ ದಾಟಿದರೂ ಕೂಡ, ಯಶಸ್ವಿ, ಸುಂದರ ಮಹಿಳೆಯರು ಮದುವೆಯಾಗದೆ ಒಂಟಿಯಾಗಿ ಉಳಿಯುತ್ತಿದ್ದಾರೆ. ಸ್ವಂತ 'ಆಯ್ಕೆ'ಯಿಂದ ಈ ನಿರ್ಧಾರಗಳನ್ನು ತಗೊಳ್ಳುತ್ತಿದ್ದಾರೆ.

46
ಭಾರತೀಯ ಸಂಶೋಧನೆಗಳು ಏನು ಹೇಳುತ್ತವೆ?
Image Credit : Getty

ಭಾರತೀಯ ಸಂಶೋಧನೆಗಳು ಏನು ಹೇಳುತ್ತವೆ?

  • ಯೂಗೋವ್ ಸರ್ವೆ 2023 ಪ್ರಕಾರ 40% ನಗರವಾಸಿ ಭಾರತೀಯರು "ನಮ್ಮ ಜೀವನದಲ್ಲಿ ಮದುವೆ ಮುಖ್ಯವೇ ಅಲ್ಲ" ಎಂದು ಹೇಳಿದ್ದಾರೆ.
  • ಇಂಡಿಯಾ ಲೆಂಡ್ಸ್ ಸರ್ವೆ: 67% ಯುವಕ-ಯುವತಿಯರು ಹಣಕಾಸಿನ ಸ್ಥಿರತೆ ನಮ್ಮ ಮೊದಲ ಆಯ್ಕೆ ಎಂದು ಹೇಳಿದ್ದಾರೆ, ಮದುವೆ ಆಮೇಲೆ ನೋಡಿಕೊಳ್ಳಬಹುದು ಎನ್ನುತ್ತಾರೆ.
  • ರೆಂಟ್ ಎ ಬಾಯ್‌ಫ್ರೆಂಡ್ (Rent a Boyfriend): ಫಂಕ್ಷನ್‌ಗಳಿಗೆ ಹೋದಾಗ "ಯಾವಾಗ ಮದುವೆ?" ಎಂದು ಕೇಳುವವರ ಕಿರಿಕಿರಿ ತಪ್ಪಿಸಲು ಜಪಾನ್‌ನಲ್ಲಿ ಬಾಯ್‌ಫ್ರೆಂಡ್ ಅನ್ನು ಬಾಡಿಗೆಗೆ ಪಡೆಯುವ ಬಿಸಿನೆಸ್ ಇದೆ. ಈಗ ಮುಂಬೈ, ಬೆಂಗಳೂರಿನಲ್ಲೂ ಇಂತಹ ಸ್ಟಾರ್ಟ್‌ಅಪ್‌ಗಳು ಶುರುವಾಗಿವೆ!
56
ಯಶಸ್ವಿ ಮಹಿಳೆಯರನ್ನು ಸಮಾಜ ಒಪ್ಪಿಕೊಳ್ಳುತ್ತಿಲ್ಲವೇ?
Image Credit : Facebook

ಯಶಸ್ವಿ ಮಹಿಳೆಯರನ್ನು ಸಮಾಜ ಒಪ್ಪಿಕೊಳ್ಳುತ್ತಿಲ್ಲವೇ?

ಭಾರತೀಯ ಸಮಾಜದಲ್ಲಿ ಒಳ್ಳೆಯ ಸಂಬಳ ಇರುವ ಮಹಿಳೆಯರನ್ನು ಸುಲಭವಾಗಿ ಯಾರೂ ಇಷ್ಟಪಡುವುದಿಲ್ಲ.

ಪುರುಷರು ಸೌಂದರ್ಯ, ಶಾಂತಿ ಬಯಸಿದರೆ, ಮಹಿಳೆಯರು ಸಂಪನ್ಮೂಲ ಮತ್ತು ಭದ್ರತೆ ಬಯಸುತ್ತಾರೆ. ಹೆಚ್ಚು ಗಳಿಸುವ ಮಹಿಳೆ ತನಗಿಂತ ಹೆಚ್ಚು ಸಂಬಳ ಇರುವ ಪುರುಷನನ್ನೇ ಹುಡುಕುತ್ತಾಳೆ. ಆದರೆ 60-70 ಲಕ್ಷ ರೂ. ಗಳಿಸುವ ಪುರುಷನಿಗೆ ಅವಳ ಹಣ ಮುಖ್ಯವಾಗಿರುವುದಿಲ್ಲ, ಅವನಿಗೆ ಸೌಂದರ್ಯ, ಹೊಂದಾಣಿಕೆಯ ಗುಣ ಮುಖ್ಯವಾಗಿರುತ್ತದೆ. ಇದರಿಂದಾಗಿ ಸ್ವತಂತ್ರ ಮಹಿಳೆಯರು ತನಗಿಂತ ಕೆಳಗಿನವರನ್ನೂ ಮದುವೆಯಾಗದೆ, ಮೇಲಿನವರಿಗೂ ಒಪ್ಪಿಗೆಯಾಗದೆ ಸಿಂಗಲ್ ಆಗಿ ಉಳಿಯುತ್ತಿದ್ದಾರೆ.

66
ಕಂಗನಾ ರಣಾವತ್‌ ಅಂದು ಇದೇ ಮಾತು ಹೇಳಿದ್ರು
Image Credit : Kangana Ranaut Instagram

ಕಂಗನಾ ರಣಾವತ್‌ ಅಂದು ಇದೇ ಮಾತು ಹೇಳಿದ್ರು

ನಟಿ ಕಂಗನಾ ರಣಾವತ್ ಕೂಡ ಒಂದು ಪಾಡ್‌ಕಾಸ್ಟ್‌ ನಲ್ಲಿ "ಯಾವ ಸಂಬಂಧದಲ್ಲಿ ಹೆಣ್ಣು ಹೆಚ್ಚು ಶಕ್ತಿಶಾಲಿ ಮತ್ತು ಶ್ರೀಮಂತಳಾಗಿರುತ್ತಾಳೋ, ಆ ಸಂಬಂಧ ಹೆಚ್ಚು ದಿನ ಉಳಿಯುವುದಿಲ್ಲ" ಎಂದು ಹೇಳಿದ್ದಾರೆ.

ತಿಂಗಳಿಗೆ 20,000 ಗಳಿಸುವ ಹುಡುಗಿಗೂ ಕೂಡ 1 ಕೋಟಿ ರೂ. ಪ್ಯಾಕೇಜ್ ಇರುವ, 6 ಅಡಿ ಎತ್ತರವಿರುವ ಹುಡುಗನೇ ಬೇಕು ಎಂಬ ಡಿಮ್ಯಾಂಡ್‌ ಇದೆ. ಇಂದಿನ ತಲೆಮಾರು ಡೇಟಿಂಗ್ ಅಥವಾ ಮದುವೆಗೆ ಮುನ್ನವೇ "ಇದು ವರ್ಕೌಟ್ ಆಗಲ್ಲ, ಅವನು ನನಗೆ ಮೋಸ ಮಾಡ್ತಾನೆ, ಅವಳು ನನ್ನನ್ನು ನಿಯಂತ್ರಿಸ್ತಾಳೆ" ಎಂದು ನೆಗೆಟಿವ್ ಆಗಿ ಯೋಚಿಸಲು ಶುರು ಮಾಡುತ್ತಾರೆ. ಸಂಬಂಧವನ್ನು ಉಳಿಸಿಕೊಳ್ಳಲು ಪ್ರಯತ್ನಿಸುವ ಬದಲು, ಅದರಲ್ಲಿ ತಪ್ಪುಗಳನ್ನು ಹುಡುಕಲು ಆರಂಭಿಸುತ್ತಾರೆ. ಈ ಎಲ್ಲಾ ಕಾರಣಗಳಿಂದಾಗಿ ಮದುವೆ ವ್ಯವಸ್ಥೆ ಭಾರತದಲ್ಲೂ ತೀವ್ರ ಬಿಕ್ಕಟ್ಟನ್ನು ಎದುರಿಸುತ್ತಿದೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

PB
Padmashree Bhat
ಪದ್ಮಶ್ರೀ ಭಟ್. ವಿಜಯವಾಣಿ, ಒನ್ ಇಂಡಿಯಾ, ವಿಜಯ ಕರ್ನಾಟಕ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, ಒಟ್ಟು ಎಂಟು ವರ್ಷಗಳಿಗೂ ಅಧಿಕ ವೃತ್ತಿಜೀವನದ ಅನುಭವವಿದೆ.‌ ಸಿನಿಮಾ, ಟಿವಿ ಕ್ಷೇತ್ರದಲ್ಲಿ ಆಸಕ್ತಿ ಇದ್ದು, ಈಗಾಗಲೇ ಸಾಕಷ್ಟು ಸುಪ್ರಸಿದ್ಧ ತಾರೆಯರ, ಸಾಧಕರ ಸಂದರ್ಶನ ಮಾಡಿರುವೆ. ಅಷ್ಟೇ ಅಲ್ಲದೆ ಬ್ಯೂಟಿ, ಆರೋಗ್ಯ, ಧಾರ್ಮಿಕ ವಿಷಯಗಳನ್ನು ಬರೆಯೋದು ನಂಗಿಷ್ಟ. ಪುಸ್ತಕ ಓದುವುದು, ಇನ್ನುಳಿದಂತೆ ಇತರರ ಸಂದರ್ಶನ ಕೇಳೋದು, ಪ್ರವಾಸ ನನ್ನ ಹವ್ಯಾಸಗಳಲ್ಲೊಂದು. ಉತ್ತರ ಕನ್ನಡದ ಸಿರಸಿಯವಳು.
ಮದುವೆ
ಮದುವೆ
ಸಂಬಂಧಗಳು
ವಿಚ್ಛೇದನ
ಭಾರತ ಸುದ್ದಿ

Latest Videos
Recommended Stories
Recommended image1
ಪ್ರೀತಿಯಲ್ಲಿ ಬೀಳಿಸಿ ಕೋಟ್ಯಧಿಪತಿಯ ಮತಾಂತರ? ಹಿಂದೂ ಧರ್ಮಕ್ಕೆ ವಾಪಸಾದವನ ಡೈರಿಯಲ್ಲಿ ಸ್ಫೋಟಕ ಬರಹ
Recommended image2
ಸೋನು ಗೌಡ ಹುಟ್ಟುಹಬ್ಬ: ನಟಿಗೆ ವಯಸ್ಸೆಷ್ಟು? ಗೆಳೆಯನ ನೆನೆದು ಬಿಕ್ಕಿ ಬಿಕ್ಕಿ ಅತ್ತ ಸೋನು ಹೇಳಿದ್ದೇನು
Recommended image3
Bigg Boss Winner​ ಡಿವೋರ್ಸ್​ ಅಸಲಿಯತ್ತು ಕೊನೆಗೂ ರಿವೀಲ್​: ಮಗು ಬಗ್ಗೆ ಪತ್ನಿಯ ಶಾಕಿಂಗ್​ ಸ್ಟೇಟ್​ಮೆಂಟ್​
Related Stories
Recommended image1
ಶಿವರಾಜ್​ ಕುಮಾರ್​ ಜೊತೆ ಮದುವೆ ಆಸೆ: ಫೇಕ್​ ನ್ಯೂಸ್​ ಹಾಕಿದವನ ಚಳಿ ಬಿಡಿಸಿದ ನಟಿ ಸುಧಾರಾಣಿ
Recommended image2
Breakup: 'ಮಸ್ತ್ ಮಸ್ತ್ ಹುಡುಗಿ' ರವೀನಾ-ಅಕ್ಷಯ್ ಎಂಗೇಜ್‌ಮೆಂಟ್ ಆಗಿದ್ದರೂ ಮದುವೆ ಮುರಿದುಬಿದ್ದಿದ್ದು ಯಾಕೆ?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved